LIVE NOW
Published : Jan 06, 2026, 06:54 AM ISTUpdated : Jan 07, 2026, 12:17 AM IST

Karnataka News Live: ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ - ಭಕ್ತರ ನಿಯಂತ್ರಣಕ್ಕೆ ಖುದ್ದು ಫೀಲ್ಡ್‌ಗಿಳಿದ ಎಸ್ಪಿ; ಚೇರ್ ಮೇಲೆಯೇ ಸಾಗಿತು ಕಚೇರಿ ಕೆಲಸ!

ಸಾರಾಂಶ

ಬಳ್ಳಾರಿ: ಜನವರಿ 1ರ ರಾತ್ರಿ ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ಬಹಿರಂಗವಾಗಿದ್ದು, ಅಂದು ಗಲಾಟೆ ನಡೆಯಲು ಜನಾರ್ದನ ರೆಡ್ಡಿಯವರ ಬೆಂಬಲಿಗರೇ ಕಾರಣ ಎಂಬ ಸಂಗತಿ ಬಯಲಾಗಿದೆ ಎಂದು ತಿಳಿದು ಬಂದಿದೆ.

ಬ್ಯಾನರ್ ತೆರವು ಖಂಡಿಸಿ ಜನಾರ್ದನ ರೆಡ್ಡಿ ಮನೆಯ ಮುಂದೆ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರು. ಆ ವೇಳೆ, ಪ್ರತಿಭಟನೆಗೆ ಕುಳಿತವರ ಮೇಲೆ ಮೊದಲು ದಾಳಿ ಮಾಡಿದ್ದು ಜನಾರ್ದನ ರೆಡ್ಡಿ ಕಡೆಯವರು ಎಂಬ ಸಂಗತಿ ಬಯಲಾಗಿದೆ.

ಈ ಮಧ್ಯೆ, ಜನಾರ್ದನ ರೆಡ್ಡಿ ನಿವಾಸದಲ್ಲಿ ರಾಶಿ ರಾಶಿ ದೊಣ್ಣೆಗಳನ್ನು ಇಟ್ಟಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬ್ಯಾನರ್ ಗಲಾಟೆ ವೇಳೆ ನಡೆದ ಗುಂಪು ಘರ್ಷಣೆ ಒಂದೇ ಕಡೆಯಿಂದ ನಡೆದಿಲ್ಲ. ಎರಡೂ ಕಡೆಯಿಂದ ಆಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ವಿಶ್ಲೇಷಿಸುತ್ತಿದ್ದಾರೆ.

12:17 AM (IST) Jan 07

ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ - ಭಕ್ತರ ನಿಯಂತ್ರಣಕ್ಕೆ ಖುದ್ದು ಫೀಲ್ಡ್‌ಗಿಳಿದ ಎಸ್ಪಿ; ಚೇರ್ ಮೇಲೆಯೇ ಸಾಗಿತು ಕಚೇರಿ ಕೆಲಸ!

ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯ ದಾಸೋಹದಲ್ಲಿ ಭಾರಿ ಜನಸಂದಣಿಯಿಂದ ನೂಕುನುಗ್ಗಲು ಉಂಟಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಕುರ್ಚಿಯ ಮೇಲೆ ನಿಂತು ಜನರನ್ನು ನಿಯಂತ್ರಿಸಿದರು. ಅಲ್ಲೇ ಕಚೇರಿ ಕಡತಗಳಿಗೆ ಸಹಿ ಹಾಕಿ ಕರ್ತವ್ಯನಿಷ್ಠೆ ಮೆರೆದರು.

Read Full Story

11:06 PM (IST) Jan 06

ಧಾರವಾಡದಲ್ಲಿ ಶಾರ್ಟ್ ಸರ್ಕ್ಯೂಟ್ ಅನಾಹುತ; 20 ಎಕರೆ ಕಬ್ಬು ಬೆಳೆ ಭಸ್ಮ!

ಧಾರವಾಡ ಜಿಲ್ಲೆಯ ರಾಮಾಪುರ-ವೀರಾಪುರ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ 20 ಎಕರೆ ಕಬ್ಬಿನ ಹೊಲಕ್ಕೆ ಬೆಂಕಿ ತಗುಲಿದೆ. ಈ ಘಟನೆಯಲ್ಲಿ ರೈತ ಬಸಪ್ಪ ಜಿರಿಗವಾಡ ಅವರಿಗೆ ಸೇರಿದ ಅಂದಾಜು 30 ಲಕ್ಷ ರೂಪಾಯಿ ಮೌಲ್ಯದ ಬೆಳೆ ಸಂಪೂರ್ಣ ನಾಶವಾಗಿದೆ. 

Read Full Story

10:49 PM (IST) Jan 06

ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ - ನಾಲ್ವರು ಕಾರ್ಮಿಕರ ದುರಂತ ಸಾವು!

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಬಳಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬುಲೆರೋ ವಾಹನ ಮರಕ್ಕೆ ಡಿಕ್ಕಿಯಾಗಿ ನಾಲ್ವರು ದಾರುಣವಾಗಿ ಮೃತಪಟ್ಟಿದ್ದಾರೆ.  ಈ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story

09:56 PM (IST) Jan 06

ಉತ್ತರಕನ್ನಡ - ಪ್ರೇಮ ವೈಫಲ್ಯಕ್ಕೆ ಬಲಿಯಾದ ಯುವ ಅರ್ಚಕ - ಪ್ರೀತಿಸಿ ಮದುವೆಗೆ ಒಲ್ಲೆ ಎಂದಳಾ ಪ್ರೇಯಸಿ?

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ, ಪ್ರೇಮ ವೈಫಲ್ಯದಿಂದ ಮನನೊಂದು 24 ವರ್ಷದ ಪವನ್ ಭಟ್ ಎಂಬ ಯುವ ಅರ್ಚಕ ನೇಣಿಗೆ ಶರಣಾಗಿದ್ದಾನೆ. ತಾನು ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story

09:22 PM (IST) Jan 06

ಇನ್ಮುಂದೆ ಬೆಂಗಳೂರಿನ ಈ ರಸ್ತೆಗಳಲ್ಲಿ ಫ್ರೀಯಾಗಿ ಬೈಕ್‌-ಕಾರ್‌ ಪಾರ್ಕ್‌ ಮಾಡೋವಂತಿಲ್ಲ, ಬರಲಿದೆ ಪೇ & ಪಾರ್ಕ್‌ ವ್ಯವಸ್ಥೆ!

Bangalore Pay & Park: Fees Set for 35 Major Roads Including CBD ಬೆಂಗಳೂರು ನಗರ ಕೇಂದ್ರ ನಿಗಮವು ಈ ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕವನ್ನು ಪಡೆಯಲು ಮೂರು ವರ್ಷಗಳ ಅವಧಿಗೆ ಖಾಸಗಿ ನಿರ್ವಾಹಕರನ್ನು ತೊಡಗಿಸಿಕೊಳ್ಳಲು ಪ್ರಸ್ತಾಪಿಸಿದೆ, ಇದನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಬಹುದು.

 

Read Full Story

08:31 PM (IST) Jan 06

Tumakuru Tragedy - ಆ ಪುಟ್ಟ ಮಕ್ಕಳ ತಪ್ಪೇನಿತ್ತು? ಮಾನಸಿಕ ಖಿನ್ನತೆಗೆ ಬಲಿಯಾಯ್ತಾ ಸುಂದರ ಸಂಸಾರ?

ತುಮಕೂರು ಸಮೀಪದ ಸಿಂಗನಹಳ್ಳಿ ಕಾಲೋನಿಯಲ್ಲಿ ತಾಯಿಯೊಬ್ಬಳು ತನ್ನ ಐದು ವರ್ಷದ ಅವಳಿ ಮಕ್ಕಳೊಂದಿಗೆ ನೀರಿನ ಸಂಪ್‌ಗೆ ಹಾರಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಖಿನ್ನತೆಯಿಂದ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು, ಕ್ಯಾತಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read Full Story

08:12 PM (IST) Jan 06

ಎಷ್ಟು ವರ್ಷದ ಮಕ್ಕಳ ಮುಂದೆ ಬಟ್ಟೆ ಬದಲಿಸ್ಬಹುದು, ಸ್ನಾನ ಮಾಡ್ಬಹುದು? ಪಾಲಕರು ತಿಳಿಯಬೇಕು ಈ ಸತ್ಯ

ಮಕ್ಕಳು ಎಷ್ಟೇ ದೊಡ್ಡವರಾದ್ರೂ ಪಾಲಕರಿಗೆ ಮಕ್ಕಳೇ. ಆದ್ರೆ ಪಾಲಕರು ಮಾಡುವ ಕೆಲ್ಸ ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿರುತ್ತೆ. ಮಕ್ಕಳ ಭವಿಷ್ಯ ಚೆನ್ನಾಗಿರ್ಬೇಕೆಂದ್ರೆ ಸಣ್ಣಪುಟ್ಟ ವಿಷ್ಯ ಕೂಡ ಪಾಲಕರಿಗೆ ಗೊತ್ತಿರಬೇಕು.

Read Full Story

08:01 PM (IST) Jan 06

ಹೂಳಲು ತೆಗೆದಿದ್ದ ಗುಂಡಿ ಮುಚ್ಚಿ, ಮೃತದೇಹ ಸುಟ್ಟಿದ್ದೇಕೆ? ಸಾಕ್ಷಿ ನಾಶದ ಆರೋಪಕ್ಕೆ ಸಿಕ್ಕಿತು ಬಿಗ್ ಟ್ವಿಸ್ಟ್!

ಬಳ್ಳಾರಿ ಗಲಾಟೆ ಪ್ರಕರಣ ಮೃತಪಟ್ಟ ರಾಜಶೇಖರ್  ಮೃತದೇಹ ಸಾಕ್ಷಿ ನಾಶಪಡಿಸಲು ಸಂಪ್ರದಾಯ ಮೀರಿ ದಹನ ಮಾಡಲಾಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದ್ದಾರೆ. ಮೃತದೇಹದಲ್ಲಿ ಬುಲೆಟ್‌ಗಳಿದ್ದು, ಎಎಸ್‌ಪಿ ರವಿಕುಮಾರ್ ನೇತೃತ್ವದಲ್ಲಿ ಈ ಕೃತ್ಯ ನಡೆದಿದೆ ಎಂದು ದೂರಿದ್ದು, ಪ್ರಕರಣದ ಸಿಬಿಐ ತನಿಖೆಗೆ ಆಗ್ರಹ.

Read Full Story

07:46 PM (IST) Jan 06

ರಾಜಕೀಯಕ್ಕೆ ಸುಮಲತಾ ರೀ-ಎಂಟ್ರಿ, ಮತ್ತೆ ಸ್ವತಂತ್ರವಾಗಿ ಸ್ಫರ್ಧೆ, ದೇವೇಗೌಡ ನಮ್ಮ ತ್ಯಾಗ ಮರೆತಿದ್ದಾರೆ, ಮಾಜಿ ಸಚಿವ ನಾರಾಯಣ ಕಿಡಿ

ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರು ಮುಂದಿನ ಚುನಾವಣೆಯಲ್ಲಿ ಸಕ್ರಿಯ ರಾಜಕೀಯಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದು, ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಇದೇ ವೇಳೆ, ಜೆಡಿಎಸ್ ವಿರುದ್ಧ ಅಸಮಾಧಾನ ಹೊರಹಾಕಿದ ನಾರಾಯಣ ಗೌಡರು ಮಂಡ್ಯದಲ್ಲಿ ಬಿಜೆಪಿ ಬಲವರ್ಧನೆಗೆ ಶಪಥಗೈದಿದ್ದಾರೆ.

Read Full Story

07:24 PM (IST) Jan 06

ಎಲ್ಲಾ ಸ್ಟಾರ್​ ನಟರಿಗೂ ಕೈಕೊಟ್ಟ Rukmini Vasanth ಯಶ್​ಗಾಗಿ ಕಾಯ್ತಿದ್ದಾರಾ? ಏನಿದು ಗುಸುಗುಸು ಸುದ್ದಿ?

'ಕಾಂತಾರ' ಯಶಸ್ಸಿನ ನಂತರ ನಟಿ ರುಕ್ಮಿಣಿ ವಸಂತ್ ಅವರ ಬೇಡಿಕೆ ಹೆಚ್ಚಾಗಿದೆ. ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಿರುವ ಇವರು, ತಮ್ಮ ಹಿಂದಿನ ಸಿನಿಮಾಗಳಲ್ಲಿ ನಾಯಕರಿಗೆ ದಕ್ಕದ ಕಾರಣ, 'ಟಾಕ್ಸಿಕ್' ಚಿತ್ರದಲ್ಲಾದರೂ ಯಶ್‌ಗೆ ಸಿಗುತ್ತಾರೆಯೇ ಎಂಬ ಚರ್ಚೆ ಅಭಿಮಾನಿಗಳಲ್ಲಿ ಶುರುವಾಗಿದೆ.
Read Full Story

07:10 PM (IST) Jan 06

ಸೋಡಾ ಬಾಟಲಿಯಲ್ಲಿ ಪೆಟ್ರೋಲ್, ಗನ್ ಮ್ಯಾನ್ ಪೈರಿಂಗ್" - ಬಳ್ಳಾರಿಯಲ್ಲಿ ನಡೆದಿದ್ದು ಪಕ್ಕಾ ಫಿಲ್ಮ್ ಸ್ಟೈಲ್‌ನಲ್ಲಿ ರೆಡ್ಡಿ ಮರ್ಡರ್ ಪ್ಲಾನ್?

ಬಳ್ಳಾರಿಯ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಶ್ರೀರಾಮುಲು ಮತ್ತು ಶಾಸಕ ಜನಾರ್ದನ ರೆಡ್ಡಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಶಾಸಕ ಭರತ್ ರೆಡ್ಡಿ ಅವರು ಜನಾರ್ದನ ರೆಡ್ಡಿ ಅವರನ್ನು ಮುಗಿಸಲು ಪೂರ್ವನಿಯೋಜಿತ ಸಂಚು ರೂಪಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ

Read Full Story

07:06 PM (IST) Jan 06

ಬಳ್ಳಾರಿ ಗಲಾಟೆಯಲ್ಲಿ ಮೃತಪಟ್ಟ ರಾಜಶೇಖರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಿದ್ದಕ್ಕೆ ಸಚಿವ ಜಮೀರ್ ವಿರುದ್ಧ ದೂರು

ಬಳ್ಳಾರಿಯ ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ರಾಜಶೇಖರ ರೆಡ್ಡಿ ಕುಟುಂಬಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ₹25 ಲಕ್ಷ ನಗದು ಪರಿಹಾರ ನೀಡಿದ್ದರು. ಈ ದೊಡ್ಡ ಮೊತ್ತದ ನಗದು ವ್ಯವಹಾರವು ಆರ್‌ಬಿಐ ನಿಯಮಗಳ ಉಲ್ಲಂಘನೆ ಎಂದು ಆರೋಪಿಸಿ, ಸಚಿವರ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ದಾಖಲಾಗಿದೆ.
Read Full Story

06:53 PM (IST) Jan 06

ಕೃಷ್ಣಾ ನದಿ ಹಿಪ್ಪರಗಿ ಬ್ಯಾರೇಜ್ ಗೇಟ್ ಕಟ್ - ಸ್ಥಳಕ್ಕೆ ಆರ್.ಬಿ. ತಿಮ್ಮಾಪುರ ಭೇಟಿ, ನದಿಪಾತ್ರದಲ್ಲಿ ಆತಂಕ!

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಬಳಿಯ ಹಿಪ್ಪರಗಿ ಬ್ಯಾರೇಜ್‌ನ 22ನೇ ಗೇಟ್ ನೀರಿನ ಒತ್ತಡಕ್ಕೆ ಮುರಿದುಬಿದ್ದಿದೆ. ಈ ಘಟನೆಯಿಂದಾಗಿ ಅಪಾರ ಪ್ರಮಾಣದ ನೀರು ಕೃಷ್ಣಾ ನದಿಗೆ ಪೋಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯಕ್ಕೆ ಸೂಚನೆ ನೀಡಿದ್ದಾರೆ.
Read Full Story

06:23 PM (IST) Jan 06

ಹಾಸನ ಯುವತಿ ದುರಂತ ಅಂತ್ಯ; ಪ್ರಿಯಕರನ ಮನೆಗೆ ಬಂದ 6ನೇ ದಿನವೇ ಜೀವಬಿಟ್ಟ ಇನ್‌ಸ್ಟಾಗ್ರಾಮ್ ಪ್ರೇಯಸಿ!

ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿ 6 ವರ್ಷಗಳ ಕಾಲ ಪ್ರೀತಿಸಿದರೂ, ಇಬ್ಬರೂ ಒಟ್ಟಾಗಿ 6 ದಿನವೂ ಇರಲು ಸಾಧ್ಯವಾಗಲಿಲ್ಲ. ಬೆಂಗಳೂರಿನಲ್ಲಿದ್ದ ಪ್ರೇಮಿ ರಾಘವೇಂದ್ರನ ಮನೆಗೆ ಹಾಸನದಿಂದ ಬಂದಿದ್ದ ಯುವತಿ ನಿಖಿತಾ, ಪ್ರೇಮಿಯ ಮನೆಯಲ್ಲಿಯೇ ಉಸಿರು ಚೆಲ್ಲಿದ್ದಾಳೆ.

Read Full Story

06:18 PM (IST) Jan 06

ಬಾಂಬ್ ಬೆದರಿಕೆ ಇ-ಮೇಲ್ ಬಂದು 15 ದಿನವಾಗಿತ್ತು! ಈಗ ಎಚ್ಚೆತ್ತುಕೊಂಡರೇ ಅಧಿಕಾರಿಗಳು?

ಕಲಬುರಗಿ ಜಿಲ್ಲೆಯ ಸೇಡಂ ತಹಶೀಲ್ದಾರ್ ಕಚೇರಿಗೆ ಅನಾಮಧೇಯ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ. ಆತಂಕ ಸೃಷ್ಟಿಯಾಗಿತ್ತು. ತಕ್ಷಣ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಭೇಟಿ ನೀಡಿ ತಪಾಸಣೆ ನಡೆಸಿದಾಗ, ಇದು ಹುಸಿ ಬೆದರಿಕೆ ಎಂಬುದು ದೃಢಪಟ್ಟಿದೆ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Read Full Story

06:16 PM (IST) Jan 06

WFH ನಿಯಮ ಬದಲಿಸಿದ ವಿಪ್ರೋ, ಕನಿಷ್ಠ 6 ಗಂಟೆ ಕಚೇರಿಯಲ್ಲಿ ಕೆಲಸ ಮಾಡುವಂತೆ ಟೆಕ್ಕಿಗಳಿಗೆ ಸೂಚನೆ!

ಐಟಿ ದೈತ್ಯ ವಿಪ್ರೋ ತನ್ನ ಹೈಬ್ರಿಡ್ ಕೆಲಸದ ನೀತಿಯನ್ನು ಕಠಿಣಗೊಳಿಸಿದೆ. ಹೊಸ ನಿಯಮದ ಪ್ರಕಾರ, ಉದ್ಯೋಗಿಗಳು ವಾರದಲ್ಲಿ ಮೂರು ದಿನ ಕಚೇರಿಗೆ ಹಾಜರಾಗಬೇಕು ಮತ್ತು ಆ ದಿನಗಳಲ್ಲಿ ಕನಿಷ್ಠ ಆರು ಗಂಟೆಗಳ ಕಾಲ ಕಚೇರಿಯಲ್ಲಿಯೇ ಇರಬೇಕು. 

Read Full Story

06:13 PM (IST) Jan 06

ಸಿಎಂ ಸಿದ್ದರಾಮಯ್ಯ ದಾಖಲೆಗೆ ಮೈಸೂರು ಸಂಸದ ಕಿಡಿ, ಕಾಗೆ ಮೇಲೆ ಕಪ್ಪು ಚುಕ್ಕೆ ಲೆಕ್ಕ ಹಾಕಲು ಆಗುತ್ತಾ? ಯದುವೀರ್ ಪ್ರಶ್ನೆ

ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ, ಮೈಸೂರು ವಿಮಾನ ನಿಲ್ದಾಣ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದ್ದಾರೆ.  

Read Full Story

05:35 PM (IST) Jan 06

Wife Swapping - ಒಂದೇ ಒಂದು ರಾತ್ರಿಗೆ ಹೆಂಡತಿ ವಿನಿಮಯ ಮಾಡಿಕೊಳ್ತಿರೋ ದಂಪತಿಗಳು! ಕಾರಣವೇನು?

Wife Swapping:ಇತ್ತೀಚೆಗೆ ಎಷ್ಟೋ ಜೋಡಿಗಳ ದಾಂಪತ್ಯ ಅಥವಾ ಸಂಸಾರ ಎನ್ನೋದು ಒಂದು ದಿನ ಕೂಡ ಬಾಳಿಕೆ ಬರುತ್ತಿಲ್ಲ. ಯಾವುದೋ ಕಾರಣಕ್ಕೆ ಡಿವೋರ್ಸ್‌ ಪಡೆಯುತ್ತಾರೆ, ಅಕ್ರಮ ಸಂಬಂಧ ಕೂಡ ಹೆಚ್ಚಾಗುತ್ತಿದೆ. ಇದರ ಮಧ್ಯೆ ಈಗ ಭಾರತದಲ್ಲಿ 'ವೈಫ್ ಸ್ವಾಪಿಂಗ್' ಅಥವಾ ಹೆಂಡತಿ ವಿನಿಮಯ ಹೆಚ್ಚಾಗ್ತಿದೆ. ಕಾರಣ ಏನು?

 

Read Full Story

05:19 PM (IST) Jan 06

ಶ್ರೀರಾಮುಲು ಬರದಿದ್ರೆ ರೆಡ್ಡಿ ಕಥೆ ಅಂದೇ ಮುಗಿಯುತ್ತಿತ್ತು! - ಬಳ್ಳಾರಿ ಗಲಾಟೆಗೆ ರೇಣುಕಾಚಾರ್ಯ ಬಿಗ್ ಟ್ವಿಸ್ಟ್!

ಬಳ್ಳಾರಿ ಗಲಾಟೆ ವಿಚಾರವಾಗಿ ಮಾತನಾಡಿದ ಎಂಪಿ ರೇಣುಕಾಚಾರ್ಯ, ಇದು ಜನಾರ್ದನ ರೆಡ್ಡಿ ಅವರನ್ನು ಹತ್ಯೆ ಮಾಡಲು ಕಾಂಗ್ರೆಸ್ ಸರ್ಕಾರ ರೂಪಿಸಿದ ಸಂಚು ಎಂದು ಆರೋಪಿಸಿದ್ದಾರೆ. ಶಾಸಕ ಭರತ್ ರೆಡ್ಡಿ ಅವರೇ ಈ ಗಲಾಟೆಗೆ ಮತ್ತು ರಾಜಶೇಖರ್ ಸಾವಿಗೆ ನೇರ ಕಾರಣ ಎಂದು ವಾಗ್ದಾಳಿ ನಡೆಸಿದರು.

Read Full Story

05:17 PM (IST) Jan 06

ಇನ್‌ಸ್ಟಾದಲ್ಲಿ 2K ಫಾಲೋವರ್ಸ್, ಬೆಂಗಳೂರು ಉದ್ಯೋಗಿಗೆ ಅಚ್ಚರಿ ಪಾರ್ಟಿ ಆಯೋಜಿಸಿದ ಬಾಸ್

ಇನ್‌ಸ್ಟಾದಲ್ಲಿ 2K ಫಾಲೋವರ್ಸ್, ಬೆಂಗಳೂರು ಮಹಿಳಾ ಉದ್ಯೋಗಿಗೆ ಅಚ್ಚರಿ ಪಾರ್ಟಿ ಆಯೋಜಿಸಿದ ಬಾಸ್, ಬಾಸ್ ಕಿರಿಕಿರಿ ಕುರಿತು ಸದಾ ಸುದ್ದಿಯಾಗುತ್ತದೆ. ಆದರೆ ಇಲ್ಲೊಬ್ಬ ಬಾಸ್ ಎಲ್ಲಾ ಉದ್ಯೋಗಿಳ ಮೋಟಿವೇಟರ್.

Read Full Story

05:17 PM (IST) Jan 06

ವಿಜಯನಗರ - ಹೊಸಪೇಟೆಯಲ್ಲಿ ವಿವಾಹಿತ ಮಹಿಳೆಯ ಕತ್ತು ಕೊಯ್ದು ಭೀಕರ ಕೊಲೆ, ಮಹಡಿ ಮೇಲೆ ಹೆಣವಾದ್ಲು ಒಂಟಿ ಹೆಣ್ಣು

ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ, ಗಂಡನಿಂದ ದೂರವಿದ್ದ ಮೂರು ಮಕ್ಕಳ ತಾಯಿ ಉಮಾ (28) ಎಂಬುವವರನ್ನು ಮನೆಯ ಮೇಲ್ಮಹಡಿಯಲ್ಲಿ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ.

Read Full Story

04:48 PM (IST) Jan 06

ಹರೆಯದ ಹುಡುಗಿಗೆ ಪ್ರೀತಿ ಮಾಡೋದಾಗಿ ಕಿರುಕುಳ; ಬಾಯ್‌ಫ್ರೆಂಡ್ ಹುಚ್ಚಾಟಕ್ಕೆ ಜೀವಬಿಟ್ಟ ಅಪ್ರಾಪ್ತ ಬಾಲಕಿ!

ಬೆಂಗಳೂರು ಉತ್ತರ ತಾಲ್ಲೂಕಿನ ಅಂಚೇಪಾಳ್ಯದಲ್ಲಿ, ಪ್ರೀತಿಯ ಹೆಸರಿನಲ್ಲಿ ಯುವಕನೊಬ್ಬ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು 17 ವರ್ಷದ ಬಾಲಕಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿಗೆ ಯುವಕನೇ ಕಾರಣ ಎಂದು ಪೋಷಕರು ಆರೋಪಿಸಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read Full Story

04:46 PM (IST) Jan 06

ಬಳ್ಳಾರಿ ಗಲಾಟೆ ಬಗ್ಗೆ ಡಿಕೆಶಿ ಬಿಚ್ಚಿಟ್ಟ ಸ್ಫೋಟಕ ಮಾಹಿತಿ - ಶ್ರೀರಾಮುಲು ಮಾಡಿದ ಆ ಒಂದು ಫೋನ್ ಕಾಲ್ ಅಸಲಿಯತ್ತೇನು?

ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ನಡೆಯನ್ನು ಖಂಡಿಸಿದ್ದಾರೆ. ಕೊಲೆ ಸಂಚಿನ ಆರೋಪವನ್ನ ತಳ್ಳಿಹಾಕಿರುವ ಅವರು, ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು

Read Full Story

04:33 PM (IST) Jan 06

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ದುಷ್ಕರ್ಮಿಗಳಿಂದ ಚಾಕು ಇರಿತ, ಐಸಿಯುಗೆ ದಾಖಲು

ಬೆಳಗಾವಿಯಲ್ಲಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರ ಕಾರು ಚಾಲಕ ಬಸವಂತ ಕಡೋಲ್ಕರ್ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Read Full Story

04:29 PM (IST) Jan 06

ಹೆಣ್ಣಿಗೆ ಹೆಣ್ಣೇ ಶತ್ರು; ಚಿತ್ರರಂಗದಲ್ಲಿ ನಟಿಯರ ಜಡೆ ಜಗಳ; ವಿವಾದ ಹುಟ್ಟಿಸಿದ ರಾಶಿಫಲ!

Actress Raasi News: ಚಿತ್ರರಂಗದಲ್ಲೀಗ ಇಬ್ಬರು ನಟಿಯರು ಜಗಳ ಆಡಿಕೊಂಡಿದ್ದಾರೆ. ರಿಯಾಲಿಟಿ ಶೋನಲ್ಲಿ ನಟಿ ಬಗ್ಗೆ ಮಾಡಿದ ಕಾಮೆಂಟ್‌ನಿಂದ ಜಡೆ ಜಗಳ ಆಗಿದೆ. ಹಾಗಾದರೆ ಏನಾಯ್ತು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

 

Read Full Story

04:11 PM (IST) Jan 06

ಲವ್ ಮಾಡ್ತಿದ್ದರೂ ಮದುವೆ ಮಾಡಿಕೊಳ್ಳದ ಬಾಯ್‌ಫ್ರೆಂಡ್ ಮನೆಗೆ ಹೋಗಿ ಪ್ರಾಣಬಿಟ್ಟ ಹಾಸನ ಯುವತಿ ನಿಖಿತಾ!

ಹಾಸನದ ಯುವತಿ ನಿಖಿತಾ, ಬೆಂಗಳೂರಿನ ಪಿಲ್ಲಹಳ್ಳಿಯಲ್ಲಿದ್ದ ಪ್ರಿಯಕರನ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಮದುವೆಗೆ ಒತ್ತಾಯಿಸಿದ್ದಕ್ಕೆ ಪ್ರಿಯಕರನೇ ಕೊಲೆ ಮಾಡಿದ್ದಾನೆಂದು ಪೋಷಕರು ಆರೋಪಿಸಿದ್ದು, ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story

03:53 PM (IST) Jan 06

ಹೈಕೋರ್ಟ್ ಪೀಠ ಸೇರಿ ರಾಜ್ಯಾದ್ಯಂತ ನ್ಯಾಯಾಲಯಗಳಿಗೆ ಸರಣಿ ಬಾಂಬ್ ಬೆದರಿಕೆ - ಬಿಗುವಿನ ವಾತಾವರಣ, ಕೋರ್ಟ್ ಕಲಾಪಗಳು ಸ್ಥಗಿತ

ಕರ್ನಾಟಕದ ಬಾಗಲಕೋಟೆ, ಮೈಸೂರು, ಗದಗ, ಧಾರವಾಡ ಹಾಗೂ ಹಾಸನ ಸೇರಿದಂತೆ పలు ಜಿಲ್ಲೆಗಳ ನ್ಯಾಯಾಲಯಗಳಿಗೆ ಇ-ಮೇಲ್ ಮತ್ತು ಕರೆಗಳ ಮೂಲಕ ಸರಣಿ ಬಾಂಬ್ ಬೆದರಿಕೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ, ಭದ್ರತಾ ಕ್ರಮವಾಗಿ ಎಲ್ಲಾ ನ್ಯಾಯಾಲಯಗಳ ಕಲಾಪಗಳನ್ನು ಸ್ಥಗಿತಗೊಳಿಸಿ,  ತಪಾಸಣೆ ನಡೆಸಲಾಗಿದೆ.

Read Full Story

02:57 PM (IST) Jan 06

ಮೆಟ್ರೋ ರೈಲಿನಲ್ಲೂ 'ಯಶ್' ಹವಾ - ಅಪಾಯಕಾರಿ ಕಟೌಟ್ ಬಿಟ್ಟು ಮೆಟ್ರೋ ರೈಲನ್ನೇ 'ಬರ್ತ್‌ಡೇ ಬ್ಯಾನರ್' ಮಾಡಿದ ಫ್ಯಾನ್ಸ್!

ನಟ ಯಶ್ ಜನ್ಮದಿನದ ಅಂಗವಾಗಿ, ಬೆಂಗಳೂರಿನ 'ನಮ್ಮ ಮೆಟ್ರೋ' ರೈಲಿನ ಮೇಲೆ ಅವರ ಬೃಹತ್ ಚಿತ್ರವಿರುವ ಜಾಹೀರಾತನ್ನು ಅಳವಡಿಸಿ ವಿನೂತನವಾಗಿ ಶುಭ ಕೋರಲಾಗಿದೆ. ಅಭಿಮಾನಿಗಳು ಈ ಪ್ರಚಾರ ಕೈಗೊಂಡಿರಬಹುದೆಂದು ಚರ್ಚೆಯಾಗುತ್ತಿದೆ. ಯಶ್ ಚಿತ್ರ ಹೊತ್ತ ಮೆಟ್ರೋ ಸಂಚರಿಸುವ ವಿಡಿಯೋಗಳು ವೈರಲ್ ಆಗಿದೆ.

Read Full Story

02:53 PM (IST) Jan 06

ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಆದಾಯ ರಿವೀಲ್, ರಾಜ್ಯದಲ್ಲಿ 4ನೇ ಸ್ಥಾನ, ಕುಕ್ಕೆಗೆ ಮೊದಲ ಸ್ಥಾನ

2024-25ನೇ ಸಾಲಿನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು 36.24 ಕೋಟಿ ರೂ. ಆದಾಯ ಗಳಿಸಿ, ರಾಜ್ಯದ ಮುಜರಾಯಿ ದೇವಾಲಯಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆದಾಯದಲ್ಲಿ ಮೂರೂವರೆ ಕೋಟಿ ರೂ. ಹೆಚ್ಚಳವಾಗಿವೆ.

Read Full Story

02:53 PM (IST) Jan 06

BBK 12 - ಬಿಗ್‌ಬಾಸ್ ಕೊಟ್ಟ ಟ್ವಿಸ್ಟ್‌ಗೆ ಮನೆ ಮಂದಿಯೆಲ್ಲಾ ಕಂಗಾಲು! ಹೋಗಲಾರೆ, ಬಿಡಲಾರೆ ಧರ್ಮ ಸಂಕಷ್ಟದಲ್ಲಿ ಮೂವರು!

ನಾಮಿನೇಷನ್ ಬಳಿಕ ಕಿತ್ತಾಡಿಕೊಂಡಿದ್ದ ಸ್ಪರ್ಧಿಗಳಿಗೆ ಬಿಗ್‌ಬಾಸ್ ಹೊಸ ಟ್ವಿಸ್ಟ್ ನೀಡಿದ್ದಾರೆ. ಇಬ್ಬರು ಮಹಿಳೆ ಮತ್ತು ಓರ್ವ ಪುರುಷನಿರುವ ತಂಡಗಳನ್ನು ರಚಿಸುವಂತೆ ಸೂಚಿಸಿದ್ದು, ಇದು ಮನೆಯಲ್ಲಿ ಹೊಸ ಜಗಳ ಮತ್ತು ಸಮೀಕರಣಗಳಿಗೆ ಕಾರಣವಾಗಿದೆ. ರಘು ತಂಡಕ್ಕೆ ಯಾರು ಸೇರಬೇಕು ಎಂಬ ಗೊಂದಲ ತಾರಕಕ್ಕೇರಿದೆ.

Read Full Story

01:14 PM (IST) Jan 06

Annayya Serial - ಏಕಕಾಲಕ್ಕೆ ಎರಡು ಸತ್ಯ ಸ್ಫೋಟ; ಬದ್ಮಾಷ್‌ಗೆ ಕೊನೆಗೂ ಧರ್ಮದೇಟು ಕೊಟ್ಟ ರಾಣಿ!

Annayya Kannada Serial Episode: ಅಣ್ಣಯ್ಯ ಧಾರಾವಾಹಿಯಲ್ಲಿ ಜಿಮ್‌ ಸೀನ ಹಾಗೂ ಮನು ಗೌಡ್ರ ಅಸಲಿಯತ್ತು ಏನು ಎಂದು ಇನ್ನೂ ಶಿವುಗೆ ಗೊತ್ತಾಗಿರಲಿಲ್ಲ. ಈಗ ಈ ಧಾರಾವಾಹಿಯಲ್ಲಿ ಸತ್ಯ ಸ್ಫೋಟವಾಗಿದೆ. ಹೀಗಾಗಿ ಮುಂದೆ ಏನಾಗಲಿದೆ ಎಂಬ ಕುತೂಹಲ ಶುರುವಾಗಿದೆ.

 

Read Full Story

01:10 PM (IST) Jan 06

BBK 12 - ಬಿಗ್‌ಬಾಸ್‌ನಲ್ಲಿ ಟಾಸ್ಕ್‌ ಅಬ್ಬರ; ಗಿಲ್ಲಿಯನ್ನು ಹಿಂದಿಕ್ಕಿ ಮುಂದೆ ಹೊರಟ ಕಾವ್ಯಾ ಶೈವ?

ಬಿಗ್‌ಬಾಸ್ ಸೀಸನ್ 12ರ ಫಿನಾಲೆ ಟಿಕೆಟ್‌ಗಾಗಿ ನಡೆದ ಮೊದಲ ಟಾಸ್ಕ್‌ನಲ್ಲಿ ಧ್ರುವಂತ್, ಗಿಲ್ಲಿ ನಟರನ್ನು ಸೋಲಿಸಿದ್ದಾರೆ. ಇದಾದ ನಂತರದ ಟಾಸ್ಕ್‌ನಲ್ಲಿ ಕಾವ್ಯಾ ಶೈವ ಗೆಲುವು ಸಾಧಿಸಿದ್ದು, ಇಷ್ಟು ದಿನ ತನ್ನ ಗೆಲುವಿಗೆ ಕಾರಣ ಎನ್ನಲಾಗಿದ್ದ ಗಿಲ್ಲಿಯನ್ನೇ ಹಿಂದಿಕ್ಕಿ ಅಚ್ಚರಿ ಮೂಡಿಸಿದ್ದಾರೆ.
Read Full Story

12:51 PM (IST) Jan 06

ಬೆಂಗಳೂರಿನಿಂದ ಸ್ಪ್ಲೆಂಡರ್ ಬೈಕ್ ಕದ್ದು ತೆಲುಗು ಸಿನಿಮಾ ಪುಷ್ಪ ಶೂಟಿಂಗ್ ಪ್ರದೇಶಕ್ಕೆ ಮಾರಾಟ ಮಾಡಿದ್ದ ಆರೋಪಿಗಳು ಅರೆಸ್ಟ್

ಬೆಂಗಳೂರಿನಲ್ಲಿ 60 ಸ್ಪ್ಲೆಂಡರ್ ಬೈಕ್‌ಗಳನ್ನು ಕದ್ದಿದ್ದ ನಾಲ್ವರು ಖತರ್ನಾಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ನಕಲಿ ಕೀ ಬಳಸಿ ಬೈಕ್ ಕದ್ದು, ತಮಿಳುನಾಡಿನ ಬೆಟ್ಟ ಪ್ರದೇಶಗಳಲ್ಲಿ ಹಾಗೂ 'ಪುಷ್ಪ' ಸಿನಿಮಾ ಶೂಟಿಂಗ್ ನಡೆದ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದರು.   

Read Full Story

12:50 PM (IST) Jan 06

ಕೊಗೀಲು ಅಕ್ರಮ ಮನೆಗಳ ತೆರವು ಪ್ರಕರಣ; 262 ಅರ್ಜಿಗಳ ಪೈಕಿ, 37 ಮಂದಿ ಮಾತ್ರ ಮನೆ ಪಡೆಯಲು ಅರ್ಹರು!

ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಅಕ್ರಮ ನಿವಾಸಿಗಳ ತೆರವು ಪ್ರಕರಣದಲ್ಲಿ, ಪುನರ್ವಸತಿಗಾಗಿ ಅರ್ಜಿ ಸಲ್ಲಿಸಿದ್ದ 262 ಕುಟುಂಬಗಳ ಪೈಕಿ ಕೇವಲ 37 ಮಾತ್ರ ಅರ್ಹರೆಂದು ತಿಳಿದುಬಂದಿದೆ. 5 ವರ್ಷಗಳ ನಿರಂತರ ವಾಸದ ದಾಖಲೆಗಳನ್ನು ಹೊಂದಿದವರನ್ನು ಮಾತ್ರ ಪರಿಗಣಿಸಲಾಗಿದೆ.

Read Full Story

12:44 PM (IST) Jan 06

BBK 12 ಟ್ರೋಫಿ ಹೊಡೆಯೋ ಟೈಮ್‌ನಲ್ಲಿ ಗಿಲ್ಲಿ ನಟ ಅಂಥ ಪದ ಬಳಸೋದು? ಛೇ.. ನಿರೀಕ್ಷೆ ಮಾಡಿರಲಿಲ್ಲ..!

Bigg Boss Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಮಧ್ಯೆ ಮತ್ತೆ ಒಂದಿಷ್ಟು ಜಗಳಗಳು ಆಗಿವೆ. ಈ ಮಧ್ಯೆ ಗಿಲ್ಲಿ ನಟ ಅವರು ಬಳಸಿದ ಪದ ಅನೇಕರಿಗೆ ಇಷ್ಟವಾಗಿಲ್ಲ. ಗಿಲ್ಲಿ ನಟ ಹೀಗೆ ಮಾಡುತ್ತಾರೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ.

 

Read Full Story

12:04 PM (IST) Jan 06

Bigg Boss ಸ್ಪಂದನಾ ಸೋಮಣ್ಣ ಬಾಯ್​ಫ್ರೆಂಡ್​ ಯಾರು? ಮದುವೆ ಬಗ್ಗೂ ಕೊಟ್ಟರು ಬಿಗ್​ ಅಪ್​ಡೇಟ್​!

ಬಿಗ್​ಬಾಸ್​ ಫಿನಾಲೆಗೆ ಕೆಲವೇ ದಿನಗಳಿರುವಾಗ ಸ್ಪಂದನಾ ಸೋಮಣ್ಣ ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಹೊರಬಂದ ನಂತರ, ಅವರು ತಮ್ಮ ಬಾಯ್‌ಫ್ರೆಂಡ್ ಮತ್ತು ಮದುವೆಯ ಕುರಿತ ಪ್ರಶ್ನೆಗಳಿಗೆ ಜಾಣ್ಮೆಯಿಂದ ಉತ್ತರಿಸಿ, ಸದ್ಯಕ್ಕೆ ಜನರ ಪ್ರೀತಿಯನ್ನು ಆನಂದಿಸುವುದಾಗಿ ಹೇಳಿದ್ದಾರೆ.
Read Full Story

11:54 AM (IST) Jan 06

ದೀರ್ಘಾವಧಿ ಸಿಎಂ ಬೆನ್ನಲ್ಲೇ, ಪೂರ್ಣಾವಧಿ ಸಿಎಂ ಆಸೆ ಬಿಚ್ಚಿಟ್ಟ ಸಿದ್ದರಾಮಯ್ಯ! ಹೈಕಮಾಂಡ್ ಮೇಲೆ ಹೆಚ್ಚಿದ ವಿಶ್ವಾಸ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ಣಾವಧಿ ಸಿಎಂ ಆಗುವ ಬಗ್ಗೆ ಪರಿಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದು, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿದ್ದಾರೆ. ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ್ದು ಜನರ ಆಶೀರ್ವಾದದಿಂದ ಎಂದ ಅವರು, ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ ಎಂದರು.

Read Full Story

11:53 AM (IST) Jan 06

ಸೌಜನ್ಯ ಪ್ರಕರಣ ಮರುತನಿಖೆಗೆ ಕೋರಿ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾರ್ಚ್ 23ಕ್ಕೆ ಮುಂದೂಡಿದ ಸುಪ್ರೀಂ

ಧರ್ಮಸ್ಥಳದ ಸೌಜನ್ಯ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಕೋರಿ ತಾಯಿ ಕುಸುಮಾವತಿ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಈ ಮೇಲ್ಮನವಿಯ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಮಾರ್ಚ್ 23ಕ್ಕೆ ಮುಂದೂಡಿದೆ.

Read Full Story

11:37 AM (IST) Jan 06

ಮದುವೆ ದಿನ ವಿಶೇಷ ಚೇತನ ತಂಗಿ ಊಟ ಮಾಡಿಸಿದ ಖ್ಯಾತ ನಟಿ; ನೋಡುತ್ತ ಕೂತ ಗಂಡ; Video Viral

Actress Marriage: ಮದುವೆ ಆಗುವ ಹುಡುಗಿ-ಹುಡುಗಿ ಅಂದು ಯಾವಾಗಲೂ ಸುಮಧುರ ಕ್ಷಣಗಳನ್ನು ಕಳೆಯಲು ಬಯಸುತ್ತಾರೆ. ಸಂಗೀತದಲ್ಲೋ, ಊಟ ಮಾಡುವಾಗಲೂ ಕೂಡ ಪರಸ್ಪರ ಒಬ್ಬರಿಗೆ ಒಬ್ಬರು ಟೈಮ್‌ ಕೊಡುತ್ತಾರೆ. ನಟಿ ಪಾರ್ವತಿ ಅವರು ಮದುವೆ ವೇಳೆ ವಿಶೇಷಚೇತನ ತಂಗಿಗೆ ಊಟ ಮಾಡಿಸಿರುವ ವಿಡಿಯೋ ವೈರಲ್‌ ಆಗ್ತಿದೆ.

 

Read Full Story

11:17 AM (IST) Jan 06

ಮನೆಗೆಲಸದವರಿಂದ ₹1.37 ಕೋಟಿ ಚಿನ್ನಾಭರಣ ಕಳ್ಳತನ; ನಂಬಿಕಸ್ಥರಿಂದಲೇ 900 ಗ್ರಾಂ ಬಂಗಾರ ದರೋಡೆ!

ಸದಾಶಿವನಗರದಲ್ಲಿ, ಮಾಲೀಕರು ಪ್ರವಾಸಕ್ಕೆ ತೆರಳಿದ್ದಾಗ ಮನೆಗೆಲಸದ ದಂಪತಿ 1.37 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಕಳುವಾಗಿದ್ದ ಸಂಪೂರ್ಣ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
Read Full Story

More Trending News