- Home
- Entertainment
- TV Talk
- Bigg Boss ಸ್ಪಂದನಾ ಸೋಮಣ್ಣ ಬಾಯ್‌ಫ್ರೆಂಡ್ ಯಾರು? ಮದುವೆ ಬಗ್ಗೆಯೂ ಕೊಟ್ಟರು ಬಿಗ್ ಅಪ್ಡೇಟ್!
Bigg Boss ಸ್ಪಂದನಾ ಸೋಮಣ್ಣ ಬಾಯ್‌ಫ್ರೆಂಡ್ ಯಾರು? ಮದುವೆ ಬಗ್ಗೆಯೂ ಕೊಟ್ಟರು ಬಿಗ್ ಅಪ್ಡೇಟ್!
ಬಿಗ್ಬಾಸ್ ಫಿನಾಲೆಗೆ ಕೆಲವೇ ದಿನಗಳಿರುವಾಗ ಸ್ಪಂದನಾ ಸೋಮಣ್ಣ ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಹೊರಬಂದ ನಂತರ, ಅವರು ತಮ್ಮ ಬಾಯ್‌ಫ್ರೆಂಡ್ ಮತ್ತು ಮದುವೆಯ ಕುರಿತ ಪ್ರಶ್ನೆಗಳಿಗೆ ಜಾಣ್ಮೆಯಿಂದ ಉತ್ತರಿಸಿ, ಸದ್ಯಕ್ಕೆ ಜನರ ಪ್ರೀತಿಯನ್ನು ಆನಂದಿಸುವುದಾಗಿ ಹೇಳಿದ್ದಾರೆ.

ಎಲಿಮಿನೇಷನ್ ಶಾಕ್
ಸ್ಪಂದನಾ ಸೋಮಣ್ಣ (Bigg Boss Spandana Somanna) ಅವರು ಎಲಿಮಿನೇಟ್ ಆಗಿ ಹೊರಕ್ಕೆ ಬಂದಿದ್ದಾರೆ. ಫಿನಾಲೆಗೆ ಇನ್ನು ಕೆಲವೇ ದಿನಗಳು ಇರುವಾಗಲೇ ಬಿಗ್ಬಾಸ್ ಅವರಿಗೆ ಎಲಿಮಿನೇಷನ್ ಶಾಕ್ ಕೊಟ್ಟಿದೆ.
ಫ್ಯಾನ್ಸ್ ಸಂಖ್ಯೆ ಹೆಚ್ಚಳ
ಕನ್ನಡ ಮತ್ತು ತೆಲುಗು ಚಿತ್ರರಂಗದಿಂದ ಸ್ಪಂದನಾ ಇದಾಗಲೇ ಫೇಮಸ್ ಆಗಿದ್ದರೂ, ಬಿಗ್ಬಾಸ್ನಿಂದ ಹೊರಬಂದ ಮೇಲೆ ಸಹಜವಾಗಿ ಅವರ ಅಭಿಮಾನಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿದ್ದು, ಇನ್ನೂ ಸ್ವಲ್ಪ ದಿನ ಮಾಧ್ಯಮಗಳಲ್ಲಿ ಹೈಲೈಟ್ ಆಗುತ್ತಿರುತ್ತಾರೆ.
ಬಿಗ್ಬಾಸ್ ಜರ್ನಿ
ಇದೇ ವೇಳೆ ಸ್ಪಂದನಾ ಸೋಮಣ್ಣ ಅವರು ತಮ್ಮ ಬಿಗ್ಬಾಸ್ ಜರ್ನಿ ಹಾಗೂ ವೈಯಕ್ತಿಕ ವಿಷಯಗಳ ಬಗ್ಗೆ ಕೆಲವು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಬಾಯ್‌ಫ್ರೆಂಡ್- ಮದ್ವೆ ಬಗ್ಗೆ
ಸ್ಪಂದನಾ ಸೋಮಣ್ಣ ಅವರ ಬಾಯ್‌ಫ್ರೆಂಡ್ ಮತ್ತು ಮದುವೆಯ ಬಗ್ಗೆಯೂ ಕೆಲವೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರೋದು ಇದೆ. ಅದೇ ಕಾರಣಕ್ಕೆ ಅವರಿಗೆ ಈ ವಿಷಯಗಳ ಬಗ್ಗೆ ಪ್ರಶ್ನಿಸಲಾಗಿದೆ.
ಜಾಣ್ಮೆಯಿಂದ ಸ್ಪಂದನಾ ಉತ್ತರ
ಅದಕ್ಕೆ ಜಾಣ್ಮೆಯಿಂದ ಉತ್ತರ ಕೊಟ್ಟಿದ್ದಾರೆ ಸ್ಪಂದನಾ. ನಿಮಗೆ ಬಾಯ್‌ಫ್ರೆಂಡ್ ಇದ್ದಾರಾ ಎಂಬ ಪ್ರಶ್ನೆಗೆ, ನೇರವಾಗಿ ಏನನ್ನೂ ಹೇಳದ ಸ್ಪಂದನಾ, ನನಗೆ ಬಾಯ್‌ಫ್ರೆಂಡ್ ಇದ್ದಾರೋ, ಇಲ್ಲವೋ ಎಂದು ನೀವೇ ಗೆಸ್ ಮಾಡ್ತಾ ಇರಿ. ಇದೇ ಬೆಸ್ಟ್. ಈ ವಿಷಯದ ಬಗ್ಗೆ ಆಗಾಗ್ಗೆ ಮಾತನಾಡ್ತಾ ಇದ್ದರೆ ನನಗೂ ಖುಷಿ ಎಂದಿದ್ದಾರೆ!
ಮದುವೆಯ ಬಗ್ಗೆ ಹೇಳಿದ್ದೇನು?
ಇದೇ ವೇಳೆ ಮದುವೆಯ ಬಗ್ಗೆ ಕೇಳಿದ ಪ್ರಶ್ನೆಗೆ ಸ್ಪಂದನಾ, ಮದುವೆಯ ಬಗ್ಗೆ ಈಗಲೇ ಏನೂ ಹೇಳುವುದಿಲ್ಲ. ಬಿಗ್ಬಾಸ್ನಂಥ ಪ್ಲಾಟ್ಫಾರ್ಮ್ ಈಗ ಸಿಕ್ಕಿದೆ. ಜನರ ಪ್ರೀತಿ ಸಿಕ್ಕಿದೆ. ಅದನ್ನು ಎಂಜಾಯ್ ಮಾಡಿ, ಆಮೇಲೆ ಮದುವೆಯ ಬಗ್ಗೆ ಯೋಚನೆ ಮಾಡುತ್ತೇನೆ ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

