Bigg Boss Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಮಧ್ಯೆ ಮತ್ತೆ ಒಂದಿಷ್ಟು ಜಗಳಗಳು ಆಗಿವೆ. ಈ ಮಧ್ಯೆ ಗಿಲ್ಲಿ ನಟ ಅವರು ಬಳಸಿದ ಪದ ಅನೇಕರಿಗೆ ಇಷ್ಟವಾಗಿಲ್ಲ. ಗಿಲ್ಲಿ ನಟ ಹೀಗೆ ಮಾಡುತ್ತಾರೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ( Gilli Nata ) ಹಾಗೂ ಅಶ್ವಿನಿ ಗೌಡ ( Ashwini Gowda ) ಅವರು ಹಾವು ಮುಂಗುಸಿ ಇದ್ದಂತೆ. ಆರಂಭದಿಂದ ಇಲ್ಲಿಯವರೆಗೆ ಇವರಿಬ್ಬರೂ ನಿತ್ಯವೂ ಜಗಳ ಆಡುತ್ತಿದ್ದಾರೆ. 100ನೇ ಎಪಿಸೋಡ್ ದಿನ ನಾಮಿನೇಶನ್ ಟಾಸ್ಕ್ ವೇಳೆ ಅಶ್ವಿನಿ ಗೌಡ ಅವರು ಗಿಲ್ಲಿ ನಟನನ್ನು ನಾಮಿನೇಟ್ ಮಾಡಿದರೆ, ಗಿಲ್ಲಿ ನಟ ಅವರು ಅಶ್ವಿನಿ ಗೌಡ ಅವರನ್ನು ನಾಮಿನೇಟ್ ಮಾಡಿದ್ದಾರೆ. ಆ ವೇಳೆ ಗಿಲ್ಲಿ ನಟ ಅವರು ಬಳಸಿದ ಪದ ಸರಿಯೇ?
ಗಿಲ್ಲಿ ನಟ ಹೇಳಿದ್ದೇನು?
ಗಿಲ್ಲಿ ನಟ ಅವರು ಮೊದಲು ಅಶ್ವಿನಿ ಗೌಡ ಅವರನ್ನು ನಾಮಿನೇಟ್ ಮಾಡುತ್ತಾರೆ. ಆಗ ಗಿಲ್ಲಿ ನಟ ಅವರು, “ಬಾತ್‌ರೂಮ್ ವಿಚಾರಕ್ಕೆ ಜಗಳ ಆಯ್ತು. ವಿಟಿ ಹಾಕಿದಮೇಲೆ ಸತ್ಯ ಏನು ಎಂದು ಗೊತ್ತಾಯ್ತು. ರಾಶಿಕಾ ಶೆಟ್ಟಿ ವಿಚಾರ ಬಂದಾಗ ರಘು ತೊಡೆ ಬೇಕು ಅಂತಾರೆ. ಧ್ರುವಂತ್ ಹೆಗಲು ಬೇಕು ಅಂತ ರಾಶಿಕಾ ಹೇಳಿದಳು. ಅದಿಕ್ಕೆ ನಾನು ಹೇಳಿದೆ ಎಂದು ಅಶ್ವಿನಿ ಮೇಡಂ ಹೇಳಿದರು. ಅಶ್ವಿನಿ ಅವರು ಮಾತನ್ನು ಟ್ವಿಸ್ಟ್ ಮಾಡುತ್ತಾರೆ. ತಪ್ಪನ್ನು ಸರಿ ಮಾಡೋದು, ಸರಿಯನ್ನು ತಪ್ಪು ಮಾಡೋದು ಮಾಡಬೇಡಿ. ಅವರು ಕೊಚ್ಚೆಗೆ ಬೀಳ್ತಾರೆ ಅಂತ ನೀವು ಯಾಕೆ ಕೊಚ್ಚೆಗೆ ಬೀಳ್ತೀರಿ” ಎಂದು ಹೇಳಿದ್ದಾರೆ.
ಉಚ್ಚೆ ಎಂದಿದ್ದು ಸರಿಯೇ?
ಅಶ್ವಿನಿ ಗೌಡ ಅವರು, ಗಿಲ್ಲಿ ನಟನನ್ನು ಕೊಚ್ಚೆ ಎಂದು ಹೇಳಿದ್ದಾರೆ. ಆಗ ಗಿಲ್ಲಿ ನಟ ಅವರು ಉಚ್ಚೆ ಎಂದು ಹೇಳಿದ್ದಾರೆ. ಗಿಲ್ಲಿ ನಟ ಅವರು ಉಚ್ಚೆ ಎಂದು ಹೇಳಿದ್ದು, ಅನೇಕ ವೀಕ್ಷಕರಿಗೆ ಇಷ್ಟ ಆಗಿಲ್ಲ. ಇಷ್ಟುದಿನಗಳ ಕಾಲ ಚೆನ್ನಾಗಿ ಆಡಿಕೊಂಡು ಬರುತ್ತಿರುವ ಗಿಲ್ಲಿ ನಟ ಅವರು ಹೀಗೆ ಮಾತನಾಡಿರೋದು ಸರಿಯಲ್ಲ, ನಾವು ಅವರಿಂದ ಇದನ್ನೆಲ್ಲ ನಿರೀಕ್ಷೆ ಮಾಡಿರಲಿಲ್ಲ. ನಿಮಗೆ ಮಾನ ಮರ್ಯಾದೆ ಎಲ್ಲವನ್ನು ಬಿಟ್ಟು, ನಾನು ಏನು ಬೇಕಿದ್ರೂ ಹೇಳಿಸಿಕೊಳ್ತಿದೀನಿ ಅಂತ ನಿಂತಿದೀರಾ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅಶ್ವಿನಿ ಗೌಡ ಹೇಳಿದ್ದೇನು?
“ಸ್ವಯಂ ಘೋಷಿತ ಬಿಗ್ ಬಾಸ್ ಕನ್ನಡ ಸೀಸನ್ 12 ರ ಮನೆಯ ವಿನ್ನರ್ ಗಿಲ್ಲಿ ಅವರನ್ನು ನಾಮಿನೇಟ್ ಮಾಡ್ತಿದೀನಿ. ಟಾಯ್ಲೆಟ್‌ಗೆ ಹೋದಾಗ ನೀರು ಹಾಕೋದಲ್ಲ, ತಿಂದ ತಟ್ಟೆಯನ್ನು ತೊಳೆಯೋದಿಲ್ಲ, ಹಲ್ಲುಜ್ಜಲ್ಲ. ನೀನು ಮಾತನಾಡುವ ಮಾತುಗಳು ನಿನ್ನ ವ್ಯಕ್ತಿತ್ವವನ್ನು ತೋರಿಸುತ್ತವೆ. ಅಧಿಕಾರ ಸಿಕ್ಕಾಗ ಅದನ್ನು ಮನುಷ್ಯ ದುರುಪಯೋಗ ಮಾಡಬಾರದು. ನಿನ್ನನ್ನು ಫುಟ್‌ಬಾಲ್ ಥರ ಒದೆಯೋ ದಿನ ಬರುತ್ತದೆ. ನಂದೇ ಸರ್ವಾಧಿಕಾರ ಎನ್ನೋ ಥರ ಅಂದುಕೊಂಡಿದ್ದೀಯಾ. ಹೋದ ವಾರ ನಿನ್ನ ಟೈಮ್, ಈ ವಾರ ನನ್ನ ಟೈಮ್” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ನೀವು ಕ್ಯಾಪ್ಟನ್ ಆಗಿಲ್ಲ, ಕ್ಯಾಪ್ಟನ್ ಆಗೋ ಯೋಗ್ಯತೆ ಇಲ್ಲ ಎಂದು ಗಿಲ್ಲಿ ನಟ ಅವರು ಅಶ್ವಿನಿ ಗೌಡಗೆ ಹೇಳಿದ್ದಾರೆ.
ನಾಮಿನೇಶನ್ ಟಾಸ್ಕ್ ಮುಗಿದಮೇಲೂ ರಾಶಿಕಾ ಶೆಟ್ಟಿ, ಗಿಲ್ಲಿ ನಟ, ಕಾವ್ಯ ಶೈವ ಅವರು ಅಶ್ವಿನಿ ಗೌಡ ವಿರುದ್ಧ ಮಾತನಾಡಿದ್ದಾರೆ.


