ಬೆಂಗಳೂರು (ಆ.21): ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ 2025-26ನೇ ಸಾಲಿನ ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿ ನೀಡಲಾಗಿರುವ ₹42 ಸಾವಿರ ಕೋಟಿ ಅನುದಾನ ಪೈಕಿ 'ಪಂಚ ಗ್ಯಾರಂಟಿ ಯೋಜನೆ'ಗಳಿಗೆ ₹13 ಸಾವಿರ ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ| ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ. ಇದಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದು, ದಲಿತರ ಮೀಸಲು ಹಣ ಅನ್ಯ ಕಾರಣಕ್ಕೆ ಏಕೆ ಬಳಕೆ ಏಕೆ ಎಂದಿದ್ದಾರೆ.ಅದರೊಂದಿಗೆ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್
12:00 AM (IST) Aug 22
11:35 PM (IST) Aug 21
ರಾಜ್ಯ ವಿಧಾನಸಭೆಯಲ್ಲಿ ಕ್ಲಸ್ಟರ್ ವಿಶ್ವವಿದ್ಯಾಲಯಗಳ ಉಪಕುಲಪತಿ ನೇಮಕಾತಿ ವಿಳಂಬ ಕುರಿತು ಚರ್ಚೆ ನಡೆಯಿತು. ಅಶ್ವಥನಾರಾಯಣ್ ಅವರು ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದರು. ಸಚಿವ ಬೈರತಿ ಸುರೇಶ್ ಸ್ಪಷ್ಟನೆ ನೀಡಿ, ವಿವಿಗಳ ಹಿತಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
10:34 PM (IST) Aug 21
10:14 PM (IST) Aug 21
ಚಿನ್ನಸ್ವಾಮಿ ದುರಂತದ ಬಳಿಕ ರಾಜ್ಯ ಸರ್ಕಾರ ಇದೀಗ 2ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ಮಾಡಿದೆ. ತುಮಕೂರಿನಲ್ಲಿ ನಿರ್ಮಾಣವಾಗುತ್ತಿರುವ ಈ ಕ್ರೀಡಾಂಗಣ 60 ಸಾವಿರ ಸಾಮರ್ಥ್ಯ ಹೊಂದಿದ್ದು, 42 ಏಕರೆಯಲ್ಲಿ ತಲೆ ಎತ್ತಲಿದೆ.
09:32 PM (IST) Aug 21
ಪ್ರವಾಸದ ನಡುವೆ ಗೆಳೆಯ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ. ಗೆಳತಿಗೆ ಒಂದು ಕ್ಷಣ ಅಚ್ಚರಿಯಾಗಿದೆ. ಜೊತೆಗೆ ಭಾವುಕಳಾಗಿದ್ದಾಳೆ. ಗೆಳತಿ ಯೆಸ್ ಹೇಳುತ್ತಿದ್ದಂತೆ ಹಿಂಭಾಗದ ಪರ್ವತ ಶ್ರೇಣಿಯಿಂದ ಜ್ವಾಲಾಮುಖಿ ಸ್ಫೋಟಗೊಂಡ ಘಟನೆ ನಡೆದಿದೆ.
08:39 PM (IST) Aug 21
ಬೀಜ ನಾಟಿ ಮಾಡುವಾಗ ಸುಮಾರು 12 ಇಂಚು ಅಂತರ ಇರಲಿ. 2-3 ದಿನಗಳಲ್ಲಿ ಮೊಳಕೆಯೊಡೆಯುತ್ತದೆ, 5-6 ವಾರಗಳಲ್ಲಿ ಹೂ ಬಿಡಲು ಶುರುವಾಗುತ್ತದೆ.
08:37 PM (IST) Aug 21
ರಾಜಸ್ಥಾನದ ಗ್ರಾಮವೊಂದು ಇದೀಗ ಡೈನೋಸರ್ ಕಾಲದ ಪಳೆಯುಳಿಕೆ ಪತ್ತೆಯಾಗುವ ಮೂಲಕ ಭಾರತದಲ್ಲಿನ ಪ್ರಾಣಿ ಸಂಕುಲದ ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದೆ. ಡೈನೋಸರ್ ಪ್ರಾಣಿಗೆ ಹೋಲುವ ದೈತ್ಯ ಗಾತ್ರದ ಮೂಳೆ ಇಲ್ಲಿ ಪತ್ತೆಯಾಗಿದೆ.
08:34 PM (IST) Aug 21
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ಇಸ್ಪೀಟ್ ಆಟದ ಕಥೆಯನ್ನು ಹೇಳಿದರು. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಸ್ಪೀಟ್ ಆಟದಿಂದ ತಪ್ಪಿಸಿಕೊಂಡರೆ, ಪರಮೇಶ್ವರ್ ಸಿಕ್ಕಿಬಿದ್ದರು ಎಂದರು.
08:10 PM (IST) Aug 21
ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ಆರೋಪದಲ್ಲಿ ಮಹೇಶ್ ಶೆಟ್ಟಿ ತಿಮ್ಮರೋಡಿಯನ್ನು ಬಂಧಿಸಿರುವುದಕ್ಕೆ ಪ್ರತಿಭಟನಾಕಾರರು ಸ್ವಾಗತ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪುನೀತ್ ಕೆರೆಹಳ್ಳಿಯವರನ್ನು ಕೊಡಗಿನಿಂದ ಹೊರಗೆ ಕಳುಹಿಸಿ ನೊಟೀಸ್ ಜಾರಿ ಮಾಡಲಾಗಿದೆ.
08:00 PM (IST) Aug 21
ಚಿತ್ರದುರ್ಗದಲ್ಲಿ ನಡೆದ 19 ವರ್ಷದ ವಿದ್ಯಾರ್ಥಿನಿ ವರ್ಷಿತಾ ಕೊಲೆ ಪ್ರಕರಣದ ಆರೋಪಿ ಚೇತನ್‌ನನ್ನು ಪೊಲೀಸರು ಬಂಧಿಸಿದ್ದಾರೆ. 3ನೇ ಸ್ಟೇಜ್ ಕ್ಯಾನ್ಸರ್ ಪೇಷಂಟ್‌ನ ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.
07:52 PM (IST) Aug 21
07:52 PM (IST) Aug 21
ಜಿಯೋ ಧಮಾಕ ಆಫರ್ ನೀಡಿದೆ. ಕೇವಲ 349 ರೂ ರೀಚಾರ್ಜ್ ಮಾಡಿದರೆ ಸಾಕು, ಬರೋಬ್ಬರಿ 2,600 ರೂಪಾಯಿ ಪ್ರಯೋಜನ ನೀಡಿದೆ. 5ಜಿ ಡೇಟಾ, ಜಿಯೋ ಹಾಟ್‌ಸ್ಟಾರ್, ಹೋಮ್ ವೈಫೈ, ಕ್ಲೌಡ್ ಸ್ಟೋರೇಜ್ ಸೇರಿಂತೆ ಹತ್ತು ಹಲವು ಉಚಿತ ಆಫರ್ ನೀಡಿದೆ.
07:43 PM (IST) Aug 21
ಮಹೇಶ್ ಶೆಟ್ಟಿ ತಿಮರೋಡಿ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆಗಸ್ಟ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಕೀಲರು ಜಾಮೀನು ದೊರೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
07:40 PM (IST) Aug 21
ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರು ಸಂದರ್ಶನವೊಂದರಲ್ಲಿ ಸಿನಿಮಾ ಮತ್ತು ನಟಿಯರ ಬಗ್ಗೆ ನೆಗೆಟಿವ್ ಕಮೆಂಟ್‌ಗಳನ್ನು ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
07:29 PM (IST) Aug 21
ಸೂರ್ಯನ ಕುರಿತು ಅಧ್ಯಯನಕ್ಕೆ ಇಸ್ರೋ ಆದಿತ್ಯ ನೌಕೆ ಉಡಾವಣೆ ಮಾಡಿದೆ. ಇತ್ತ ನಾಸಾ ಕಳೆದ 7 ದಶಕಗಳಿಂದ ಅಧ್ಯಯನ, ಸಂಶೋಧನೆ ನಡೆಸಿ ಇದೀಗ ಸೌರ ಜ್ವಾಲೆ ಹಾಗೂ ಸ್ಫೋಟದ ರಹಸ್ಯ ಬಿಚ್ಚಿಟ್ಟಿದೆ.
07:22 PM (IST) Aug 21
06:57 PM (IST) Aug 21
06:33 PM (IST) Aug 21
06:33 PM (IST) Aug 21
Congress Leader Vinay kumar Sorake: ಧರ್ಮಸ್ಥಳ ಪ್ರಕರಣದಲ್ಲಿ ಕಾಣದ ಕೈಯೊಂದು ಒಂದು ಕಡೆ ಚಿವುಟುವುದು, ಮತ್ತೊಂದು ಕಡೆ ತೂಗುವ ಕೆಲಸ ಮಾಡುತ್ತಿದ್ದಾರೆ ಎಂದು ವಿನಯ್ ಕುಮಾರ್ ಸೊರಕೆ ಗಂಭೀರ ಆರೋಪ ಮಾಡಿದ್ದಾರೆ.
06:28 PM (IST) Aug 21
ದೇವರ ಸ್ಥಳದಿಂದ ಕೊನೆಯ ಪತ್ರ ಬಂದಿತ್ತು. ಬಳಿಕ ತಾಯಿ ಬಗ್ಗೆ ಸುಳಿವಿಲ್ಲ. ಇಷ್ಟು ವರ್ಷವಾದರೂ ತಾಯಿಯ ಮೃತದೇಹವೂ ಪತ್ತೆಯಾಗಿಲ್ಲ ಎಂದು ಪುತ್ರಿ ಪೂಜಾ ಬೇಡಿ ನೋವು ತೋಡಿಕೊಂಡಿದ್ದಾರೆ. ಪೂಜಾ ಬೇಡಿಗೆ ಏನಾಗಿತ್ತು? ಕೊನೆಯ ಪತ್ರದಲ್ಲಿ ಏನಿತ್ತು?
06:27 PM (IST) Aug 21
06:23 PM (IST) Aug 21
06:22 PM (IST) Aug 21
Global Kannadiga Mahabala Ramm: ಗ್ಲೋಬಲ್ ಕನ್ನಡಿಗ ಅಲಿಯಾಸ್ ರಾಮ್ ಅವರು ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಿಂದ ಬಚಾವ್ ಆಗಿದ್ದಾರೆ. ಈ ಬಗ್ಗೆ ಅವರು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
05:54 PM (IST) Aug 21
05:27 PM (IST) Aug 21
ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತಕ ಬುದ್ಧಿಮತ್ತೆ (AI) ಮೂಲಕ ಸುಳ್ಳು ವಿಡಿಯೋ ಮಾಡಿ ಒಂದಷ್ಟು ಅಭಿಮಾನಿಗಳನ್ನು ಪಡೆದಿದ್ದ ಯುಟ್ಯೂಬರ್ ಸಮೀರ್ ಎಂಡಿ ಬಂಧನದ ಭೀತಿಯಿಂದ ನಾಪತ್ತೆಯಾಗಿದ್ದಾರೆ. ಇದರ ಬೆನ್ನಲ್ಲೇ ಇವರ ಇತಿಹಾಸ ಬಯಲಾಗಿದೆ.
05:06 PM (IST) Aug 21
05:04 PM (IST) Aug 21
05:00 PM (IST) Aug 21
ಧರ್ಮಸ್ಥಳ ವಿರುದ್ದ ಅಪಪ್ರಚಾರ ಮಾಡಿದ ಆರೋಪಡಿ ಯೂಟ್ಯೂಬರ್ ಸಮೀರ್ ಎಂಡಿ ಬಂಧನ ಭೀತಿಯಿಂದ ಪಾರಾಗಿದ್ದಾರೆ. ಮಂಗಳೂರು ಕೋರ್ಟ್ ಸಮೀರ್ ಎಂಡಿಗೆ ನಿರೀಕ್ಷಾ ಜಾಮೀನು ಮಂಜೂರು ಮಾಡಿದೆ.
04:54 PM (IST) Aug 21
ತಿಮರೋಡಿ ಬಂಧನವಾಗಿದ್ದು, ಮಟ್ಟಣ್ಣನನ್ನೂ ಬಂಧಿಸಬೇಕೆಂದು ಮಾಜಿ ಸಚಿವ ಅಭಯ್ ಚಂದ್ರ ಜೈನ್ ಒತ್ತಾಯಿಸಿದ್ದಾರೆ. ಮುಸುಕುಧಾರಿಯೂ ಸೇರಿ ಮೂವರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಿ ತಪ್ಪಿಸ್ಥರಿಗೆ ಶಿಕ್ಷಿಸಬೇಕು ಎಂದರು.
04:16 PM (IST) Aug 21
ಹೆಲಿನಾ ಮತ್ತು ಧ್ರುವಾಸ್ತ್ರ ಕ್ಷಿಪಣಿಗಳು ಭಾರತೀಯ ಸೇನೆಯ ಆಧುನಿಕ ಮುಖ. ಈ 'ಫೈರ್ ಆ್ಯಂಡ್ ಫರ್ಗೆಟ್' ತಂತ್ರಜ್ಞಾನ ಶತ್ರು ಟ್ಯಾಂಕ್‌ಗಳನ್ನು ಮೇಲಿನಿಂದ ನಾಶಪಡಿಸುವ ಸಾಮರ್ಥ್ಯ ಹೊಂದಿದೆ. 7 ಕಿಲೋಮೀಟರ್ ದೂರದಿಂದಲೇ ಶತ್ರು ಟ್ಯಾಂಕ್‌ಗಳನ್ನು ನಾಶಪಡಿಸಬಲ್ಲ ದೇಶೀಯ ನಿರ್ಮಾಣದ ಕ್ಷಿಪಣಿ
04:14 PM (IST) Aug 21
ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ ಆರೋಪ ಎದುರಿಸುತ್ತಿರುವ ಸಮೀರ್ ಎಂಡಿ ಸಮೀರ್ ಬಂಧನ ಭೀತಿ ಎದುರಿಸುತ್ತಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ಎಸ್ಕೇಪ್ ಆಗಿರುವ ಸಮೀರ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.
03:55 PM (IST) Aug 21
ಮುಡಾ ಭೂ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಕಟ ತಂದಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇದೀಗ ಧರ್ಮಸ್ಥಳದ ಪ್ರಕರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಂದು ಮೊದಲ ಬಾರಿಗೆ ಧರ್ಮಸ್ಥಳಕ್ಕೆ ಹೋಗಿ ನಾಲ್ವರ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಿ, ಬಂಧನ ಮಾಡುವಂತೆ ಲಿಖಿತ ದೂರು ದಾಖಲಿಸಿದ್ದಾರೆ.
03:45 PM (IST) Aug 21
ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ ಗಂಭೀರ ಆರೋಪ ಎದುರಿಸುತ್ತಿರುವ ಯೂಟ್ಯೂಬರ್ ಸಮೀರ್ ಬಂಧನ ಭೀತಿ ಬೆನ್ನಲ್ಲೇ ನಾಪತ್ತೆಯಾಗಿದ್ದಾನೆ. ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಮನೆ ತಡಕಾಡಿದ ಪೊಲೀಸರು ಇದೀಗ ಮೊಬೈಲ್ ನೆಟ್‌ವರ್ಕ್ ಆಧಾರದಲ್ಲಿ ಹುಡುಕಾಟ ಆರಂಭಿಸಿದ್ದಾರೆ.
03:19 PM (IST) Aug 21
03:14 PM (IST) Aug 21
ಕಾಂಗ್ರೆಸ್ ಶಾಸಕ ಮೂರು ವರ್ಷಗಳಿಂದ ಸತತವಾಗಿ ಖ್ಯಾತ ನಟಿಗೆ ಅಶ್ಲೀಲ ಸಂದೇಶ, ಹೊಟೆಲ್‌ಗೆ ಬರುವಂತೆ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಸ್ವತಃ ನಟಿ ಈ ಕುರಿತು ಹಲವು ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಕೋಲಾಹಲದ ನಡುವೆ ಕಾಂಗ್ರೆಸ್ ಶಾಸಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ.
03:08 PM (IST) Aug 21
ಐಸಿಸಿ ಮಹಿಳಾ ವಿಶ್ವಕಪ್ ಸೆಪ್ಟೆಂಬರ್ 30 ರಿಂದ ಆರಂಭವಾಗಲಿದೆ. ಭಾರತೀಯ ಮಹಿಳಾ ತಂಡದ 15 ಸದಸ್ಯರ ಪಟ್ಟಿ ಪ್ರಕಟವಾಗಿದೆ. ಈ ತಂಡದಲ್ಲಿ ಸ್ಥಾನ ಪಡೆದ ಐದು ಯುವ ಆಟಗಾರ್ತಿಯರ ಬಗ್ಗೆ ತಿಳಿದುಕೊಳ್ಳೋಣ.
03:01 PM (IST) Aug 21
ಧರ್ಮಸ್ಥಳದ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐ ವಿಡಿಯೋ ವಿವಾದದಲ್ಲಿ ಯೂಟ್ಯೂಬರ್ ಸಮೀರ್ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಸಾಕ್ಷಿದಾರರ ಬಗ್ಗೆ ತಪ್ಪು ಮಾಹಿತಿಗಳನ್ನು ಸೇರಿಸಿ ಯೂಟ್ಯೂಬ್‌ನಲ್ಲಿ ಪ್ರಕಟಿಸಿದ ಆರೋಪದ ಮೇಲೆ ಬಂಧನಕ್ಕೊಳಪಟ್ಟಿದ್ದಾರೆ.
02:59 PM (IST) Aug 21
02:41 PM (IST) Aug 21
ಧರ್ಮಸ್ಥಳ ಪ್ರಕರಣದ ಮುಸುಕುಧಾರಿಯ ನಿಜಬದುಕು ಆತನ ಮೊದಲ ಪತ್ನಿಯಿಂದ ಬಯಲಾಗಿದೆ. ಮೋಸಗಾರ, ಸುಳ್ಳುಗಾರ ಎಂದು ಆರೋಪಿಸಿ, ಆತನ ಹಿಂದಿನ ಜೀವನದ ಆಘಾತಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಧರ್ಮಸ್ಥಳದಲ್ಲಿ ಕಸ ಗುಡಿಸುತ್ತಿದ್ದ, ಎರಡನೇ ಪತ್ನಿಯ ಒತ್ತಡದಿಂದ ಹೀಗೆ ಮಾಡುತ್ತಿದ್ದಾನೆ ಎಂದಿದ್ದಾರೆ.
01:25 PM (IST) Aug 21
ಜಾಮೀನು ರಹಿತ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾರೆಂಟ್ ಹಾಗೂ ನೋಟಿಸ್‌ಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ತಿಮರೋಡಿ ಪುನರಾವರ್ತಿತ ಆರೋಪಿಯೂ ಹೌದು ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.