ರಾಜಸ್ಥಾನದ ಗ್ರಾಮವೊಂದು ಇದೀಗ ಡೈನೋಸರ್ ಕಾಲದ ಪಳೆಯುಳಿಕೆ ಪತ್ತೆಯಾಗುವ ಮೂಲಕ ಭಾರತದಲ್ಲಿನ ಪ್ರಾಣಿ ಸಂಕುಲದ ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದೆ. ಡೈನೋಸರ್ ಪ್ರಾಣಿಗೆ ಹೋಲುವ ದೈತ್ಯ ಗಾತ್ರದ ಮೂಳೆ ಇಲ್ಲಿ ಪತ್ತೆಯಾಗಿದೆ. 

ಜೈಸಲ್ಮೇರ್ (ಆ.21) ಭಾರತದಲ್ಲಿ ಡೈನೋಸರ್ ಇತ್ತಾ? ಹೌದು ಎನ್ನುತ್ತಿದೆ ಇತ್ತೀಚಿನ ಸ್ಫೋಟಕ ಪಳೆಯುಳಿಕೆ. ರಾಜಸ್ಥಾನದ ಮೆಘಾ ಗ್ರಾಮದಲ್ಲಿ ಡೈನೋಸರ್ ಹೋಲುವ ಪ್ರಾಣಿ ಮೂಳೆಗಳು ಪತ್ತೆಯಾಗಿದೆ. ಬೆನ್ನು ಮೂಳೆ ಇದಾಗಿದ್ದು, ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ಮೂಳೆ ಬಳಿ ಉತ್ಖನನ ಕಾರ್ಯ ಆರಂಭಿಸಿದೆ. ಪ್ರಾಥಮಿಕ ಮಾಹಿತಿ ಮೂಲಕ ಡೈನೋಸಾರ್ ಕಾಲದ ಮೂಳೆ ಇದಾಗಿದೆ ಎಂದು ಅಂದಾಜಿಸಲಾಗಿದೆ. ಮೂಳೆ ಡೈನೋಸಾರ್ ಪ್ರಾಣಿಗೆ ಹೋಲಿಕೆ ಇದೆ. ಸ್ಥಳೀಯರು ಕೆರೆ ಬಳಿ ಕಾಮಗಾರಿ ಕೆಲಸ ಮಾಡುತ್ತಿದ್ದ ವೇಳೆ ಈ ಮೂಳೆ ಪತ್ತೆಯಾಗಿದೆ. ಕೆರೆ ಬಳಿ ಈ ಮೂಳೆ ಪತ್ತೆಯಾಗಿರುವ ಕಾರಣ ಇದೀಗ ಕುತೂಹಲ ಹೆಚ್ಚಾಗಿದೆ. ಹಲವು ಸಾಮ್ಯತೆ, ಹೋಲಿಕೆಗಳು ಜಗತ್ತಿನ ಪ್ರಾಣಿ ಸಂಕುಲ, ಉಗಮ, ನಾಶದ ಕುರಿತು ಹಲವು ಮಾಹಿತಿಗಳು ಬಯಲಾಗುವ ಸಾಧ್ಯತೆ ಇದೆ.

ಸ್ಥಳೀಯರು ಕಾಮಾಗಾರಿಯಲ್ಲಿ ತೊಡಗಿದ್ದ ವೇಳೆ ವಿಚಿತ್ರ ಆಕೃತಿಯೊಂದು ಕಾರ್ಮಿಕರ ಗಮನಸೆಳೆದಿದೆ. ಹತ್ತಿರದಿಂದ ಪರಿಶೀಲಿಸಿದ್ದಾರೆ. ಈ ವೇಳೆ ಇದೂ ಪ್ರಾಣಿಯ ಮೂಳೆ ರೀತಿಯಲ್ಲಿರುವುದು ಪತ್ತೆಯಾಗಿದೆ. ಕುತೂಹಲ ಕಾರಣದಿಂದ ಹಲವು ಸ್ಥಳೀಯರು ಸ್ಥಳಕ್ಕೆ ಜಮಾಯಿಸಿದ್ದಾರೆ. ಇದು ಡೈನೋಸರ್ ಮೂಳೆ ಎಂದಿದ್ದಾರೆ. ಹೀಗಾಗಿ ಸ್ಥಳೀಯರ ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ತಿಳಿದು ತಹಶಿಲ್ದಾರ್ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕ ಬೇಟಿ ನೀಡಿ ಪರಿಶೀಲನೆ ನಡೆಸಿದೆ.

Scroll to load tweet…

ಭಾರತೀಯ ಪುರಾತತ್ವ ಇಲಾಖೆಗೆ ಮಾಹಿತಿ

ಡೈನೋಸರ್ ಮೂಳೆ ಪತ್ತೆಯಾದ ಬೆನ್ನಲ್ಲೇ ಅಧಿಕಾರಿಗ ತಂಡ ಭೇಟಿ ಪರಿಶೀಲನೆ ನಡೆಸಿದೆ. ಬಳಿಕ ಭಾರತೀಯ ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದೆ. ಇದರ ಜೊತೆಗೆ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಂಶೋಧಕರಿಗೂ ಮಾಹಿತಿ ನೀಡಲಾಗಿದೆ. ಜಿಯೋಲಾಜಿಕಲ್ ವಿಭಾಗದ ನಾರಾಯಣ ದಾಸ್ ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಸ್ಥಳದಲ್ಲಿ ಉತ್ಖನನ ಕಾರ್ಯ ನಡೆಸಿದ್ದಾರೆ. ಇದು ಮೇಲ್ನೋಟಕ್ಕೆ ಡೈನೋಸರ್ ಮೂಳೆ ರೀತಿ ಕಾಣುತ್ತಿದೆ. ಮುಂದಿನ ಸಂಶೋಧನೆ, ವಿಧಿ ವಿಜ್ಞಾನ ಪ್ರಯೋಗಾಲದಲ್ಲಿನ ಪರೀಕ್ಷೆ ಬಳಿಕ ಸ್ಪಷ್ಟವಾಗಲಿದೆ ಎಂದಿದ್ದಾರೆ.

ಭಾರತದಲ್ಲಿ ಡೈನೋಸರ್ ಇದ್ದ ಕುರಿತು ಈ ರೀತಿಯ ಕುರುಹು ಪತ್ತೆಯಾಗಿರಲಿಲ್ಲ. ಇದೀಗ ಸ್ಪಷ್ಟ ಕುರುಹ ಪತ್ತೆಯಾಗಿದೆ. ಇದೀಗ ಈ ಮೂಳೆಗಳು ಯಾವ ಪ್ರಾಣಿಯದ್ದು, ಇದರ ವರ್ಷ, ಎಷ್ಟು ವರ್ಷ ಹಳೇ ಮೂಳೆ ಅನ್ನೋದು ಪ್ರಯೋಗಾಲದ ಪರೀಕ್ಷೆಯಲ್ಲಿ ಬಯಲಾಗಲಿದೆ. ಇದು ಡೈನೋಸರ್ ಕಾಲದ ಪ್ರಾಣಿ ಮೂಳೆ ಎಂದು ಖಚಿತವಾದರೆ, ಭಾರತದ ಭೌಗೋಳಿಕ ಪ್ರದೇಶ, ಪ್ರಾಣಿ ಸಂಕುಲ, ಸಸ್ಯ ಸಂಕುಲದ ಇತಿಹಾಸ ಮತ್ತಷ್ಟು ಗಟ್ಟಿಗೊಳ್ಳಲಿದೆ.