ತಿಮರೋಡಿ ಬಂಧನವಾಗಿದ್ದು, ಮಟ್ಟಣ್ಣನನ್ನೂ ಬಂಧಿಸಬೇಕೆಂದು ಮಾಜಿ ಸಚಿವ ಅಭಯ್ ಚಂದ್ರ ಜೈನ್ ಒತ್ತಾಯಿಸಿದ್ದಾರೆ. ಮುಸುಕುಧಾರಿಯೂ ಸೇರಿ ಮೂವರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಿ ತಪ್ಪಿಸ್ಥರಿಗೆ ಶಿಕ್ಷಿಸಬೇಕು ಎಂದರು.
Dharmasthala Case updates: ತಿಮರೋಡಿಯ ಬಂಧನ ಆಗಿದೆ. ಆದರೆ ಇನ್ನೊಬ್ಬ ಇದ್ದಾನೆ. ಮಟ್ಟಣ್ಣನವರ್ ಅನ್ನುವವನು ಇದ್ದಾನೆ ಅವನೂ ಕೂಡ ಅರೆಸ್ಟ್ ಆಗಬೇಕು ಎಂದು ಮಾಜಿ ಸಚಿವ ಅಭಯ್ ಚಂದ್ರ ಜೈನ್ ಕಿಡಿಕಾರಿದರು.
ಇಂದು ಧರ್ಮಸ್ಥಳ ಪ್ರಕರಣ ಸಂಬಂಧ ಏಷ್ಯಾನೆಟ್ ಸುವರ್ಣನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಮಟ್ಟಣ್ಣ ಅಲ್ಲದೇ ಇನ್ನೊಬ್ಬ ಮುಸುಕುಧಾರಿ ಇದ್ದಾನೆ. ಒಟ್ಟು ಈ ಮೂರು ಜನರನ್ನು ಮಂಪರು ಪರೀಕ್ಷೆ ಮಾಡಬೇಕು. ತಪ್ಪಿತಸ್ಥರು, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿದ್ದು ಸಾಬೀತು ಆದರೆ ಸರ್ಕಾರ ಶಿಕ್ಷೆ ಕೊಡುವ ಕೆಲಸ ಮಾಡಬೇಕು ಎಂದರು.
ನಮ್ಮ ಮುಖ್ಯಮಂತ್ರಿಗಳು ಎಸ್‌ಐಟಿಗೆ ಫ್ರಿಹ್ಯಾಂಡ್ ಕೊಟ್ಟು ಸತ್ಯ ಹೊರಗೆ ತರುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಅವ್ರು ಸಮಯ ಪ್ರಜ್ಞೆ ಉಪಯೋಗಿಸಿ ಎಸ್‌ಐಟಿ ಕೊಟ್ಟರು. ಈ ರಾಜ್ಯದ ಜನರ ಭಾವನೆಗೆ ಮುಖ್ಯಮಂತ್ರಿಗಳು ಸರಿಯಾಗಿ ಸ್ಪಂದನೆ ಮಾಡಿದ್ದಾರೆ. ವಿಪಕ್ಷಗಳು ಇದರ ಲಾಭ ಪಡೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳಿಗೆ ಧರ್ಮಸ್ಥಳದ ಬಗ್ಗೆ ಅಭಿಮಾನ ಇದೆ ಎಂದರು.
ತಿಮ್ಮರೋಡಿ ಬಂಧನ ಆಗುವಾಗಗ ಜೈ ಭಾರತ್ ಮಾತಾ ಕಿ ಜೈ ಬಿಜೆಪಿ ಅಂತಿದ್ರು. ಅವನು ಗಿರೀಶ್ ಮಟ್ಟಣ್ಣನವರ್ ದಕ್ಷಿಣ ಕನ್ನಡ ಜಿಲ್ಲೆಯವನಲ್ಲ. ನಾನು ಶಾಸಕನಾಗಿ ವಿಧಾನಸಭೆಯಲ್ಲಿ ಇರುವಾಗ ವಿಧಾನಸಭೆಗೆ ಬಾಂಬ್ ಇಡುವ ಕೆಲಸ ಮಾಡಿದ್ದಾನೆ. ಅಂತಹ ಕೆಟ್ಟ ವ್ಯಕ್ತಿ ಅವನು. ವಿಧಾನಸೌಧದಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದಿದ್ರೆ 10-20 ಜನರಿಗೆ ತೊಂದರೆ ಆಗ್ತಾ ಇತ್ತು. ಮೊದಲು ಅವನನ್ನು ಬಂಧಿಸಿ ಜೈಲಿಗೆ ಕಳಿಸುವ ಕೆಲಸ ಆಗಲಿ. ಇಂತ ಕೆಟ್ಟ ವ್ಯಕ್ತಿ ವೀರೇಂದ್ರ ಹೆಗ್ಗಡೆಯವರ ಮೇಲೆ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾನೆ. ಸಮೀರ್ ಮಾತ್ರವಲ್ಲ ತುಂಬಾ ಜನ ಯೂಟ್ಯೂಬರ್‌ಗಳಿದ್ದಾರೆ. ಯಾರಾರು ಇದರಲ್ಲಿ ಭಾಗಿಯಾಗಿದ್ದಾರೋ ಅವರೆಲ್ಲರನ್ನ ಒಬ್ಬೊಬ್ಬರನ್ನ ಜೈಲಿಗೆ ಕಳಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತೆ. ಆ ಮೂಲಕ ಧರ್ಮಸ್ಥಳಕ್ಕೆ ಅಂಟಿರುವ ಕಳಂಕವನ್ನು ತೆಗೆಯುವ ಕೆಲಸ ನಮ್ಮ ಸರ್ಕಾರ ಮಾಡುತ್ತೆ ಎಂದು ಭರವಸೆ ನೀಡಿದರು.
