ಮೊಘಲ್ ಚಕ್ರವರ್ತಿ ಶಹಜಹಾನ್ ಮತ್ತು ಮುಮ್ತಾಜ್‌ಳ ಸಮಾಧಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾಜ್ ಮಹಲ್ ಒಳಗೆ ಪ್ರವಾಸಿಗರಿಗೆ ಪ್ರವೇಶವಿಲ್ಲದ ಸ್ಥಳದಲ್ಲಿರುವ ಈ ಸಮಾಧಿಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಈ ವಿಡಿಯೋ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ ಮತ್ತು ಚರ್ಚೆಗೆ ಗ್ರಾಸವಾಗಿದೆ.

ನವದೆಹಲಿ (ಆ.21): ಉತ್ತರ ಭಾರತವನ್ನಾಳಿದ ಮೊಘಲರ ಚಕ್ರವರ್ತಿ ಶಹಜಹಾನ್ ತನ್ನ ಹೆಂಡತಿ ಮುಮಸ್ತಾಜ್ ಮೇಲಿನ ಪ್ರೀತಿ ಸಂಕೇತವಾಗಿ ಗೋರಿ ಕಟ್ಟಿಸಿದ ಸ್ಥಳವೇ ಈ ತಾಜ್ ಮಹಲ್. ಆದರೆ, ಈ ತಾಜ್‌ಮಹಲ್ ಅನ್ನು ಪ್ರೀತಿ ಸಂಕೇತವಾಗಿ ನೋಡಲಾಗುತ್ತದೆಯೇ ಹೊರತು ಅದರೊಳಗೆ ಮುಮ್ತಾಜ್‌ಳ ಸಮಾಧಿ ಎಲ್ಲಿದೆ ಎಂಬುದು ಯಾರೂ ನೋಡಿರಲಿಕ್ಕಿಲ್ಲ. ಇದೀಗ ಮುಮ್ತಾಜ್ ಮತ್ತು ಶಹಜಹಾನ್‌ರ ಇಬ್ಬರ ಸಮಾಧಿಯನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ವಿಶ್ವದ 7 ಅಧ್ಬುತ ಸ್ಮಾರಕಗಳಲ್ಲಿ ಒಂದಾಗಿರುವ ತಾಜ್ ಒಳಗಿನ ಸಮಾಧಿಯ ವಿಡಿಯೋ ಇದೀಗ ವೈರಲ್ ಆಗಿದೆ.

ಒಂದು ಕಾಲದಲ್ಲಿ ಉತ್ತರ ಭಾರತವನ್ನು ಆಳಿದ ಮೊಘಲ್ ಚಕ್ರವರ್ತಿ ಶಾಹಜಹಾನ್ ಮತ್ತು ಅವರ ಪ್ರೀತಿಯ ಪತ್ನಿ ಮುಮ್ತಾಜ್ ಅವರನ್ನು ಯಾರಿಗೂ ಗೊತ್ತಿಲ್ಲದವರಿಲ್ಲ, ಅವರ ಪ್ರೀತಿಯ ಬಗ್ಗೆ. ಆ ಪ್ರೀತಿಯ ಶಾಶ್ವತ ಸ್ಮಾರಕವೇ ತಾಜ್ ಮಹಲ್. ಉತ್ತರ ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗರು ಆಗ್ರಾದಲ್ಲಿ ಹರಿಯುವ ಯಮುನಾ ನದಿಯ ದಡದಲ್ಲಿರುವ ತಾಜ್ ಮಹಲ್ ನೋಡದೆ ಹಿಂತಿರುಗುವುದಿಲ್ಲ. ಆದರೆ, ತಾಜ್ ಮಹಲ್‌ಗೆ ಹೋದರೂ ನಿಮಗೆ ಆ ಪ್ರೇಮಿಗಳ ಸಮಾಧಿ ನೋಡಲು ಸಾಧ್ಯವಿಲ್ಲ. ಇನ್ನು ಸಮಾಧಿಯನ್ನು ಮಾಡಲಾಗಿರುವ ಸ್ಥಳಕ್ಕೆ ಹೋಗುವ ದಾರಿಯಲ್ಲಿ ಪ್ರವಾಸಿಗರಿಗೆ ಪ್ರವೇಶವಿಲ್ಲ. ಅಲ್ಲಿಂದ ಬೇರೆ ಕಡೆಗೆ ಕಳಿಸಲಾಗುತ್ತದೆ.

ಎರಡು ದಿನಗಳ ಹಿಂದೆ ದಿನ್ಭಾರ್ ಭಾರತ್ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾದ ಒಂದು ವಿಡಿಯೋ ಈ ಪ್ರೇಮಿಗಳ ಸಮಾಧಿಗಳನ್ನು ಜಗತ್ತಿಗೆ ತೋರಿಸಿಕೊಟ್ಟಿತು. ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಒಳಗೆ ಪ್ರವಾಸಿಗರಿಗೆ ಪ್ರವೇಶವಿಲ್ಲದ ದಾರಿಯಲ್ಲಿ ಯಾರೂ ನೋಡದಂತೆ ಒಬ್ಬ ಪ್ರವಾಸಿ ಹೋಗಿ ವಿಡಿಯೋ ಚಿತ್ರೀಕರಿಸಿದ್ದಾರೆ. ಕೆಳಗೆ ಮೆಟ್ಟಿಲುಗಳಿಳಿದು ಹೋಗುವ ಕಾರಿಡಾರ್‌ನಲ್ಲಿ ಸ್ವಲ್ಪ ದೂರ ಮುಂದೆ ಹೋದರೆ ಒಂದು ಸಣ್ಣ ಕೋಣೆಗೆ ಬಂದು ನಿಲ್ಲುತ್ತದೆ. ಅಲ್ಲಿ ಒಂದು ದೊಡ್ಡ ಸಮಾಧಿ ಮತ್ತು ಹತ್ತಿರದಲ್ಲಿ ಒಂದು ಸಣ್ಣ ಸಮಾಧಿ ಕಾಣಬಹುದು. ಅದೇ ಶಾಹಜಹಾನ್ ಚಕ್ರವರ್ತಿ ಮತ್ತು ಅವರ ಪ್ರೀತಿಯ ಪತ್ನಿ ಮುಮ್ತಾಜ್ ಅವರ ಸಮಾಧಿ. ಜಗತ್ತು ಇದುವರೆಗೆ ನೋಡಿರದ ಐತಿಹಾಸಿಕ ಸಮಾಧಿಗಳು.

View post on Instagram

ವಿಡಿಯೋ ತುಂಬಾ ಬೇಗ ವೈರಲ್ ಆಯಿತು. ಒಂದು ಕೋಟಿ ಇಪ್ಪತ್ತೆಂಟು ಲಕ್ಷ ಜನ ಈಗಾಗಲೇ ವಿಡಿಯೋ ನೋಡಿದ್ದಾರೆ. 1994-95ರ ಸುಮಾರಿಗೆ ನಾನು ತಾಜ್ ಮಹಲ್‌ಗೆ ಭೇಟಿ ನೀಡಿದ್ದೆ ಮತ್ತು ಆ ಸಮಯದಲ್ಲಿ ಈ ಸಮಾಧಿಗಳು ಸಾರ್ವಜನಿಕರಿಗೆ ತೆರೆದಿರುತ್ತಿದ್ದವು ಎಂದು ಒಬ್ಬ ವೀಕ್ಷಕ ಬರೆದಿದ್ದಾರೆ. ಕೆಲವರು ಧಾರ್ಮಿಕ ಉಲ್ಲೇಖಗಳೊಂದಿಗೆ ಬಂದರೆ, ಇನ್ನು ಕೆಲವರು ಇತಿಹಾಸವನ್ನು ತಿರುಚಬಾರದು, ಅದು ಸೌಂದರ್ಯದ ಸಂಕೇತ ಎಂದು ನೆನಪಿಸಿದರು. ವಾರ್ಷಿಕವಾಗಿ 3.29 ದಶಲಕ್ಷಕ್ಕೂ ಹೆಚ್ಚು ಭಾರತೀಯ ಪ್ರವಾಸಿಗರು ತಾಜ್ ಮಹಲ್ ನೋಡಲು ಬರುತ್ತಾರೆ. 7-8 ದಶಲಕ್ಷ ವಿದೇಶಿ ಪ್ರವಾಸಿಗರು ಸಹ ಪ್ರತಿ ವರ್ಷ ಇಲ್ಲಿಗೆ ಬರುತ್ತಾರೆ.