ಬೆಂಗಳೂರು (ನ.12): ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿದ ವಿಡಿಯೋ ವಿಚಾರದಲ್ಲಿ ಷಡ್ಯಂತ್ರ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಕೇಸ್‌ನಲ್ಲಿ ನಮ್ಮನ್ನು ಸಿಲುಕಿಸಲು ಕೈದಿಗಳ ಕೈಗೆ ಮೊಬೈಲ್ ನೀಡಲಾಗಿದೆ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧಪಟ್ಟ ವರದಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಆರೋಪಿಗಳು ನಾವು ಮೊಬೈಲ್ ಬಳಸಿಲ್ಲ ಎಂದು ಹೇಳಿದ್ದರೆ, ವಿಕೃತಕಾಮಿ ಉಮೇಶ್ ರೆಡ್ಡಿ ತಾನು ಮೊಬೈಲ್ ಬಳಕೆ ಮಾಡಿದ್ದು ನಿಜ ಎಂದು ಹೇಳಿದ್ದಾರೆ.ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್

12:18 AM (IST) Nov 13
Affordable Cars Under Rs 5 Lakh in India: ತಿಂಗಳಿಗೆ ₹30,000 ಸಂಬಳವಿದ್ದರೂ, ಸ್ಮಾರ್ಟ್ ಆರ್ಥಿಕ ಯೋಜನೆ ಮತ್ತು ಸಾಲದ ಸೌಲಭ್ಯಗಳ ಮೂಲಕ ಹೊಸ ಕಾರು ಖರೀದಿಸುವುದು ಸಾಧ್ಯ. ಈ ಲೇಖನವು 2025ರಲ್ಲಿ ಲಭ್ಯವಿರುವ ₹5 ಲಕ್ಷದೊಳಗಿನ ಕಾರುಗಳ ಮಾಹಿತಿ ನೀಡಲಾಗಿದೆ.
11:38 PM (IST) Nov 12
ಭಟ್ಕಳದಲ್ಲಿ 'ಗ್ಲೋಬಲ್ ಎಂಟರ್ ಪ್ರೈಸಸ್' ಹೆಸರಿನಲ್ಲಿ ಡಿಸ್ಕೌಂಟ್ ಆಫರ್ ನೀಡಿ 300ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂಪಾಯಿ ಮುಂಗಡ ಹಣ ಪಡೆದು ವಂಚಿಸಿದ್ದ ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಭಟ್ಕಳ ಶಹರ ಠಾಣೆ ಪೊಲೀಸರು ಒಂದು ವಾರದೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
11:12 PM (IST) Nov 12
Palakkad Man Brutally Attacked Over iPhone Loan Default: ಮೊಬೈಲ್ ಫೋನ್ ಲೋನ್ ಕಂತು ಕಟ್ಟಿಲ್ಲ ಅಂತ ಪಾಲಕ್ಕಾಡ್ ಮೂಲದ ಯುವಕನಿಗೆ ಖಾಸಗಿ ಫೈನಾನ್ಸ್ ಕಂಪನಿ ಉದ್ಯೋಗಿ ಮನಬಂದಂತೆ ಥಳಿಸಿದ್ದಾನೆ. ಹಲ್ಲೆಯಿಂದ ಯುವಕನ ತಲೆಬುರುಡೆ ಮತ್ತು ದವಡೆಗೆ ಗಂಭೀರ ಗಾಯಗಳಾಗಿವೆ.
10:51 PM (IST) Nov 12
ಸಾವಿರಾರು ಕೋಟಿ ಮೌಲ್ಯದ 10 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಸತ್ವ ಗ್ರೂಪ್‌ನ ಅಶ್ವಿನ್ ಸಂಚೆಟಿಯನ್ನು ಅವಲಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 1978ರಲ್ಲಿ ಜಮೀನು ಖರೀದಿಸಿದ್ದ ಮೂಲ ಮಾಲೀಕರಾದ ರಾಧ ಎಂಬುವವರು ಇತ್ತೀಚೆಗೆ ಪರಿಶೀಲಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ.
09:45 PM (IST) Nov 12
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ)ಯಲ್ಲಿ ವಿದ್ಯಾರ್ಥಿಗಳ ವಿದೇಶ ಪ್ರಯಾಣದ ಹಣದಲ್ಲಿ 1.9 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು, ನಕಲಿ ದಾಖಲೆ ಸೃಷ್ಟಿಸಿ ಹೇಗೆ ವಂಚಿಸುತ್ತಿದ್ದರು ಗೊತ್ತೇ?
08:18 PM (IST) Nov 12
ದೆಹಲಿ ಸ್ಫೋಟದಲ್ಲಿ ಐ20 ಜೊತೆ ಮತ್ತೊಂದು ಕೆಂಪು ಕಾರು, ಶಂಕಿತ ಉಗ್ರ ಡಾ.ಉಮರ್ ಇಕೋ ಸ್ಪೋರ್ಟ್ ಪತ್ತೆ ಮಾಡಲಾಗಿದೆ. ಸ್ಫೋಟ ಪ್ರಕರಣದಲ್ಲಿ ರೆಡ್ ಇಕೋ ಸ್ಪೋರ್ಟ್ ಪ್ರಮುಖ ಪಾತ್ರವಹಿಸಿರುವ ಕುರಿತು ಪೊಲೀಸರು ಕೆಲ ದಾಖಲೆ ಸಂಗ್ರಹಿಸಿದ್ದಾರೆ.
07:54 PM (IST) Nov 12
ದೆಹಲಿಯ ಚಾಂದನಿ ಚೌಕ್‌ನಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ 13 ಮಂದಿ ಮೃತಪಟ್ಟಿದ್ದು, ಇದೊಂದು ಗುಪ್ತಚರ ಮತ್ತು ಭದ್ರತಾ ವೈಫಲ್ಯ ಎಂದು ಕಾಂಗ್ರೆಸ್ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಖಂಡಿಸಿದ್ದಾರೆ. ಈ ಕೃತ್ಯವು 'ಆಪರೇಷನ್ ಸಿಂದೂರ್'ಗೆ ಭಯೋತ್ಪಾದಕರು ನೀಡಿದ ಉತ್ತರವಾಗಿರಬಹುದು ಎಂದಿದ್ದಾರೆ.
07:42 PM (IST) Nov 12
ಮದುವೆ ಕಾರ್ಯಕ್ರಮದಲ್ಲಿ ಉದ್ಯಮಿ ಕಿರಣ್ ಮಜುಂದಾರ್ ಜೊತೆ ಸುಧಮೂರ್ತಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಡೋಲು ನಾದಕ್ಕೆ ಆಪ್ತರ ಜೊತೆ ಸೇರಿ ಇಬ್ಬರು ಶ್ರೀಮಂತ ಉದ್ಯಮಿಗಳು ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ.
07:23 PM (IST) Nov 12
ಚಾಮರಾಜನಗರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ ದೈತ್ಯ ಹುಲಿಯನ್ನು ತುಂಡರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಂಗನದೊಡ್ಡಿ ಗೋವಿಂದ 'ಮರಿ ವೀರಪ್ಪನ್' ಎಂದು ಕುಖ್ಯಾತಿ ಪಡೆದಿದ್ದಾನೆ. ವೀರಪ್ಪನ್‌ನಂತೆಯೇ ದೊಡ್ಡ ಕಾಡುಗಳ್ಳನಾಗಿ ಬೆಳೆಯುವ ಮುನ್ನ ಈತನನ್ನು ಬಂಧಿಸಲು ಅರಣ್ಯ ಇಲಾಖೆ ಬಲೆ ಬೀಸಿದೆ.
07:05 PM (IST) Nov 12
ಗೃಹ ಸಚಿವ ಪರಮೇಶ್ವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೊಟ್ಯಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಂಧನವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
07:01 PM (IST) Nov 12
06:29 PM (IST) Nov 12
ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ಅವರು, ಕಾಂಗ್ರೆಸ್‌ನ ಹಿಂದಿನ ಆಡಳಿತದಲ್ಲಿ ಭಯೋತ್ಪಾದನೆಗೆ ಆಶ್ರಯ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ. ಯುಪಿಎ ಅವಧಿಗಿಂತ ಮೋದಿ ಸರ್ಕಾರದ ಅವಧಿಯಲ್ಲಿ ಭಯೋತ್ಪಾದಕ ಕೃತ್ಯಗಳು 70% ಕಡಿಮೆಯಾಗಿವೆ ಎಂದು ಅಂಕಿ-ಅಂಶ ಸಮೇತ ವಾಗ್ದಾಳಿ ನಡೆಸಿದರು.
06:15 PM (IST) Nov 12
ಮಡಿಕೇರಿ ಜೂನಿಯರ್ ಕಾಲೇಜು ವಿದ್ಯಾರ್ಥಿಗಳಿಬ್ಬರು ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಸಾವು , ಇಬ್ಬರು ವಿದ್ಯಾರ್ಥಿಗು ಈಜಲು ತೆರಳಿದಾಗ ಈ ಘಟನೆ ನಡೆದಿದೆ. ಆಳ ಹಿನ್ನೀರಿನಲ್ಲಿ ಈಜುವ ಸಾಹಸ ಮಾಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.
05:59 PM (IST) Nov 12
ಬಿಗ್ಬಾಸ್ನಲ್ಲಿ ವೀಕ್ಷಕರ ಮನಗೆದ್ದಿರುವ ಗಿಲ್ಲಿ ನಟ, ಟಾಸ್ಕ್ಗಳಲ್ಲಿ ಸತತವಾಗಿ ಸೋಲುತ್ತಿದ್ದಾರೆ. ಈ ಸರಣಿ ಸೋಲಿನಿಂದಾಗಿ ತಾವೇ ತಂಡಕ್ಕೆ ಸಮಸ್ಯೆಯಾಗುತ್ತಿದ್ದಾರೆಯೇ ಎಂದು ಅವರು ಪ್ರಶ್ನಿಸುತ್ತಿದ್ದು, ಸಹ ಸ್ಪರ್ಧಿ ಅಭಿಷೇಕ್ ಶ್ರೀಕಾಂತ್ ಬೇರೆಯದ್ದೇ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಏನದು?
05:11 PM (IST) Nov 12
ಎಚ್ಚರ, ಡೇಟಿಂಗ್ ಆ್ಯಪ್‌ನಲ್ಲಿ ಸಿಗ್ತಾಳೆ ಲಾಡ್ಜ್‌ವರೆಗೂ ಬರ್ತಾಳೆ, ಬೆಂಗಳೂರು ಮಾಯಗಾತಿಗೆ ಪೊಲೀಸ್ ಸರ್ಚ್ ಮಾಡುತ್ತಿದ್ದಾರೆ. ಯುವತಿಯ ಜೊತೆ ಲಾಡ್ಜ್‌ಗ ಹೋಗಿದ್ದು ಮಾತ್ರ ಗೊತ್ತು, ಬೆಳಗ್ಗೆ ಎದ್ದಾಗ, ಹಣ ಚಿನ್ನ ಯಾವೂದು ಇಲ್ಲ. ಮಾಯಗಾತಿ ವಿರುದ್ದ ದೂರು ದಾಖಲಾಗಿದೆ.
05:11 PM (IST) Nov 12
04:55 PM (IST) Nov 12
Wife kills husband in Nanjangud: ನಂಜನಗೂಡು ಪತ್ನಿಯ ಅಕ್ರಮ ಸಂಬಂಧವನ್ನು ವಿರೋಧಿಸಿದ್ದಕ್ಕೆ, ಪತಿಯನ್ನೇ ದೊಣ್ಣೆಯಿಂದ ಹೊಡೆದು ಕೊಲೆ.. ಕೊಲೆಯನ್ನು ಆತ್ಮ೧ಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪತ್ನಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
04:37 PM (IST) Nov 12
ಸೂರ್ಯನಿಂದ ಸಿಡಿದ ವರ್ಷದ ಅತ್ಯಂತ ಶಕ್ತಿಶಾಲಿ X5.1 ಸೌರ ಜ್ವಾಲೆಯು ಭೂಮಿಯನ್ನು ತಲುಪಿದ್ದು, ಯುರೋಪ್ ಮತ್ತು ಆಫ್ರಿಕಾದಲ್ಲಿ ರೇಡಿಯೋ ಸಂವಹನವನ್ನು ಸ್ಥಗಿತಗೊಳಿಸಿದೆ. ಈ ಘಟನೆಯು G4 ಮಟ್ಟದ ಸೌರ ಬಿರುಗಾಳಿ ಮತ್ತು ವ್ಯಾಪಕ ಅರೋರಾಗಳ ಸಾಧ್ಯತೆಯನ್ನು ಹೆಚ್ಚಿಸಿದೆ. ಈ ಜ್ವಾಲೆಯು ಉಪಗ್ರಹ, ಜಿಪಿಎಸ್ ಪರಿಣಾಮ.
04:13 PM (IST) Nov 12
ಅಂದರಿಕೆ ಮಂಚೋಡು...ವೇದಿಕೆ ಮೇಲೆ ತೆಲುಗು ಗಾದೆ ಹೇಳಿ ಎಲ್ಲರ ಅಚ್ಚರಿಗೊಳಿಸಿದ ಸಿಎಂ ಸಿದ್ದರಾಮಯ್ಯ, ಕುರುಬ ಸಂಘ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಪರಿಸ್ಥಿತಿಗೆ ತಕ್ಕಂತೆ ತೆಲುಗು ಗಾದೆಯೊಂದನ್ನು ಹೇಳಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
03:43 PM (IST) Nov 12
ನನ್ ಹೆಂಡ್ತಿಗೂ ಫ್ರೀ, ರೇವಣ್ಣ ಹೆಂಡ್ತಿಗೂ ಫ್ರಿ ಎಂದು ವೇದಿಕೆ ಮೇಲೆ ಮುಜುಗರಕ್ಕೀಡಾದ ಸಿದ್ದರಾಮಯ್ಯ, ಭಾಷಣದ ವೇಳೆ ಸಿದ್ದರಾಮ್ಯ ಆಡಿದ ಮಾತಿನಿಂದ ಮುಜುಗುರದ ಸನ್ನಿವೇಶ ಎದುರಾಗಿದೆ. ಮುಖಂಡರ ಸೂಚನೆ ಬಳಿಕ ಸಿದ್ದರಾಮಯ್ಯ ಮಾತು ಬದಲಿಸಿದ ಘಟನೆ ನಡೆದಿದೆ.
03:40 PM (IST) Nov 12
ನಟ ಉಪೇಂದ್ರ ಮತ್ತು ಪ್ರಿಯಾಂಕ ಅವರ ಮೊಬೈಲ್ ಹ್ಯಾಕ್ ಮಾಡಿ ಲಕ್ಷಾಂತರ ರೂಪಾಯಿ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದಾಶಿವನಗರ ಪೊಲೀಸರು ಬಿಹಾರ ಮೂಲದ ಆರೋಪಿ ವಿಕಾಸ್ ಕುಮಾರ್‌ನನ್ನು ಬಂಧಿಸಿದ್ದಾರೆ..
03:16 PM (IST) Nov 12
Minister Zameer Ahmed Khan Questions Delhi Blast Timing ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರ್ ಬಾಂಬ್ ಸ್ಫೋಟದ ಸಮಯದ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನೆ ಎತ್ತಿದ್ದಾರೆ. ಬಿಹಾರ ಚುನಾವಣೆಗೆ ಒಂದು ದಿನ ಮುಂಚಿತವಾಗಿ ಈ ಘಟನೆ ನಡೆದಿದೆ ಎಂದಿದ್ದಾರೆ.
03:12 PM (IST) Nov 12
ಹರ್ಯಾಣದಲ್ಲಿ ಹೇಳಿದ್ದು ಕಾಂಗ್ರೆಸ್ ಬಂದಿದ್ದು ಬಿಜೆಪಿ, ಈಗ ಬಿಹಾರದಲ್ಲಿ ನೋಡಿ ಎಂದ ಖರ್ಗೆ, ಎಕ್ಸಿಟ್ ಪೋಲ್ ಬಿಹಾರದಲ್ಲಿ ಬಿಜೆಪಿಗೆ ಗೆಲುವು ಎಂದಿದೆ. ಆದರೆ ಈ ಬಾರಿ ಕಾಂಗ್ರೆಸ್ ಬಿಹಾರದಲ್ಲಿ ಗೆಲುವು ಸಾಧಿಸಲಿದೆ ಎಂದು ಖರ್ಗೆ ಭವಿಷ್ಯ ನುಡಿದಿದ್ದಾರೆ.
01:59 PM (IST) Nov 12
ನಾಯಕಿ ರಾಶಿ ಮತ್ತು ಶ್ರೀಕಾಂತ್ ಜೊತೆ ಸಿನಿಮಾ ಮಾಡಿ ವಿವಾದಕ್ಕೆ ಸಿಲುಕಿದ್ದ ನಿರ್ದೇಶಕನಿಗೆ ಮೆಗಾಸ್ಟಾರ್ ಚಿರಂಜೀವಿ ಪಾರ್ಟಿ ಕೊಟ್ಟಿದ್ದರು. ಆ ಸಿನಿಮಾ ಯಾವುದು? ಆ ವಿವಾದವೇನು? ಈ ಬಗ್ಗೆ ಇಲ್ಲಿದೆ ಮಾಹಿತಿ.
01:40 PM (IST) Nov 12
2016ರ 'ತಿಥಿ' ಚಿತ್ರದ ಗಡ್ಡಪ್ಪ ಪಾತ್ರದಿಂದ ಪ್ರಸಿದ್ಧರಾಗಿದ್ದ ಹಿರಿಯ ನಟ ಚನ್ನೇಗೌಡ (89) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಮಂಡ್ಯ ಜಿಲ್ಲೆಯ ತಮ್ಮ ಸ್ವಗ್ರಾಮ ನೊದೆಕೊಪ್ಪಲಿನಲ್ಲಿ ಕೊನೆಯುಸಿರೆಳೆದರು.
01:26 PM (IST) Nov 12
ಜಿಎಸ್‌ಟಿ ಎಂದರೆ ಘೋಸ್ಟ್ ಇನ್ ಟ್ರಬಲ್ ಅಂತ. ಆದರೆ ಈಗ ಸಿನಿಮಾ ಬಿಡುಗಡೆ ಸಮಯದಲ್ಲಿ ಇದನ್ನು ಈಗ ಸ್ವಲ್ಪ ಬದಲಾವಣೆ ಮಾಡಿ ‘ಗೋ ಸೀ ಇನ್ ಥಿಯೇಟರ್’ ಎಂದು ನಟ ಸೃಜನ್ ಲೋಕೇಶ್ ಹೇಳಿದರು.
01:12 PM (IST) Nov 12
ಸಿಎಂ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ದೆಹಲಿ ಬಾಂಬ್ ಸ್ಫೋಟದ ಹಿಂದೆ ಬಿಹಾರ ಚುನಾವಣೆ ಗೆಲ್ಲುವ ರಾಜಕೀಯ ಉದ್ದೇಶವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
01:05 PM (IST) Nov 12
12:55 PM (IST) Nov 12
ವಿಶ್ವದ ಅತ್ಯಂತ ದುಬಾರಿ ಹಸು ಎಂಬ ಹೆಗ್ಗಳಿಕೆಗೆ ನೆಲೋರ್ ತಳಿಯ ವಿಯಾಟಿನಾ-19 ಪಾತ್ರವಾಗಿದೆ. ಈ ಹಸುವನ್ನು 40 ಕೋಟಿ ರೂಪಾಯಿಗೆ ಹರಾಜು ಮಾಡಲಾಗಿದೆ. 1100 ಕೆಜಿಗಿಂತ ಹೆಚ್ಚು ತೂಕವಿರುವ ಈ ಹಸುವಿನ ವಿಶೇಷತೆಗಳೇನು ಎಂದು ತಿಳಿಯೋಣ.
12:34 PM (IST) Nov 12
12:31 PM (IST) Nov 12
ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನಲ್ಲಿ ಕೈಗಾರಿಕಾ ಇಲಾಖೆಯ ಮೂಲಕ ಆಕರ್ಷಕ ಮತ್ತು ಸುಸಜ್ಜಿತ ಕಲಾಲೋಕ ಮಳಿಗೆಯನ್ನು ಸ್ಥಾಪಿಸಲಾಗಿದೆ. ಸಿದ್ದರಾಮಯ್ಯ ಅವರು ಚಿತ್ರಕಲಾ ರಚನೆ ಮತ್ತು ಘಂಟಾ ನಾದದ ಮೂಲಕ ಉದ್ಘಾಟಿಸಿದರು.
12:20 PM (IST) Nov 12
ಪ್ರತಿಷ್ಠಿತ ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್ (ನಾರಾಯಣ ಹೆಲ್ತ್ ಇನ್ಶೂರೆನ್ಸ್) ಸಂಸ್ಥೆಯು ಇದೀಗ 'ಆರ್ಯ ಹೆಲ್ತ್ ಇನ್ಶೂರೆನ್ಸ್' ಎಂಬ ವಿನೂತನ ರಿಟೇಲ್ ಹೆಲ್ತ್ ಇನ್ಶೂರೆನ್ಸ್ ಉತ್ಪನ್ನವನ್ನು ಬಿಡುಗಡೆ ಮಾಡಿದೆ.
12:01 PM (IST) Nov 12
ಏಕದಿನ ಪಂದ್ಯಗಳಲ್ಲಿ ಮುಂದುವರಿಯಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ದೇಶೀಯ ಕ್ರಿಕೆಟ್ ಆಡಬೇಕೆಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಮುಂಬರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವಂತೆ ಇಬ್ಬರಿಗೂ ಸೂಚಿಸಲಾಗಿದ್ದು, ರೋಹಿತ್ ಶರ್ಮಾ ತಮ್ಮ ಲಭ್ಯತೆಯನ್ನು ಖಚಿತಪಡಿಸಿದ್ದಾರೆ.
11:54 AM (IST) Nov 12
ಅಮೃತಧಾರೆ ಸೀರಿಯಲ್ ರೋಚಕ ಹಂತ ತಲುಪಿದ್ದು, ಮಲ್ಲಿ ಡಿವೋರ್ಸ್ ಪೇಪರ್ ಮೂಲಕ ಜೈದೇವ್‌ಗೆ ಶಾಕ್ ನೀಡಿದ್ದಾಳೆ. ಇನ್ನೊಂದೆಡೆ, ಅನಾರೋಗ್ಯದಿಂದ ಬಳಲುತ್ತಿರುವ ಗೌತಮ್‌ನ ಆರೈಕೆ ಮಾಡುತ್ತಿರುವ ಭೂಮಿಕಾಳನ್ನು ನೋಡಿ, ಇವರಿಬ್ಬರು ಒಂದಾಗುವ ಸೂಚನೆ ಸಿಕ್ಕಿದೆ. ಸೀರಿಯಲ್ ಮುಕ್ತಾಯ ಆಗ್ತಿದೆಯಾ?
11:45 AM (IST) Nov 12
ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಭಯೋತ್ಪಾದಕ ಮೊಬೈಲ್ ಬಳಸಿದ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕು. ಈ ಬಗ್ಗೆ ಹೆಚ್ಚು ತನಿಖೆ ಮಾಡಿದರೆ ಹೊಸ ವಿಚಾರಗಳು ಗೊತ್ತಾಗುತ್ತದೆ ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.
11:14 AM (IST) Nov 12
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡಿದ ಪ್ರಕರಣ ಹಿನ್ನೆಲೆಯಲ್ಲಿ ಕಾರಾಗೃಹದ ಮುಖ್ಯ ಅಧೀಕ್ಷಕ ಸ್ಥಾನಕ್ಕೆ ಐಪಿಎಸ್ ಅಧಿಕಾರಿ ಅಂಶುಕುಮಾರ್ ಅವರನ್ನು ಸರ್ಕಾರ ನೇಮಿಸಿತ್ತು.
11:06 AM (IST) Nov 12
ಹಾಸನಾಂಬೆ ದೇವಾಲಯ ಉತ್ಸವ ಮಾದರಿಯಲ್ಲಿ ಈ ಬಾರಿ ದೊಡ್ಡ ಬಸವಣ್ಣ ಹಾಗೂ ದೊಡ್ಡಗಣಪತಿ ದೇವಾಲಯ ಅಲಂಕಾರ ಮಾಡುತ್ತಿದ್ದು, ವಿಜೃಂಭಣೆಯಿಂದ ನ.17ರಿಂದ 21ರವರೆಗೆ ಐತಿಹಾಸಿಕ ಕಡಲೆಕಾಯಿ ಪರಿಷೆ ಆಚರಿಸಲು ನಿರ್ಧರಿಸಲಾಗಿದೆ.
11:01 AM (IST) Nov 12
ಕರ್ನಾಟಕದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಪೆಟ್ರೋಲ್, ಡೀಸೆಲ್ ಮತ್ತು ಎಥೆನಾಲ್ ಮೇಲೆ 1 ರೂ. ಸೆಸ್ ವಿಧಿಸಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
10:46 AM (IST) Nov 12
ತಾಯಿ ಮತ್ತು ಹೆಂಡತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮಗನೇ ತಂದೆಯನ್ನು ಕೊಲೆ ಮಾಡಿದ ಘಟನೆ ತಾಲೂಕಿನ ಮಾಲವಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಶಿವಲಿಂಗಪ್ಪ(60) ಕೊಲೆಯಾದವ.
10:25 AM (IST) Nov 12