ಪ್ರತಿಷ್ಠಿತ ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್ (ನಾರಾಯಣ ಹೆಲ್ತ್ ಇನ್ಶೂರೆನ್ಸ್) ಸಂಸ್ಥೆಯು ಇದೀಗ 'ಆರ್ಯ ಹೆಲ್ತ್ ಇನ್ಶೂರೆನ್ಸ್' ಎಂಬ ವಿನೂತನ ರಿಟೇಲ್ ಹೆಲ್ತ್ ಇನ್ಶೂರೆನ್ಸ್ ಉತ್ಪನ್ನವನ್ನು ಬಿಡುಗಡೆ ಮಾಡಿದೆ.

ಬೆಂಗಳೂರು (ನ.12): ಪ್ರತಿಷ್ಠಿತ ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್ (ನಾರಾಯಣ ಹೆಲ್ತ್ ಇನ್ಶೂರೆನ್ಸ್) ಸಂಸ್ಥೆಯು ಇದೀಗ 'ಆರ್ಯ ಹೆಲ್ತ್ ಇನ್ಶೂರೆನ್ಸ್' ಎಂಬ ವಿನೂತನ ರಿಟೇಲ್ ಹೆಲ್ತ್ ಇನ್ಶೂರೆನ್ಸ್ ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಸಂಸ್ಥೆಯು ಈ ಉತ್ಪನ್ನದ ಮೂಲಕ ಜಿ.ಎಸ್.ಟಿ ರಿಯಾಯಿತಿಯ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ಒದಗಿಸುತ್ತಿದ್ದು, ಕೈಗೆಟಕುವ ಬೆಲೆಯಲ್ಲಿ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶ ಹೊಂದಿದೆ. ಗ್ರಾಹಕರು ದೇಶಾದ್ಯಂತ ಇರುವ ನಾರಾಯಣ ಹಾಸ್ಟಿಟಲ್ ಗಳಲ್ಲಿ ಇದನ್ನು ಬಳಸಿಕೊಂಡು ವೈದ್ಯಕೀಯ ಸೇವೆ ಪಡೆಯಬಹುದು.

ಈ ಉತ್ಪನ್ನದಲ್ಲಿ ಆರ್ಯ ಮತ್ತು ಆರ್ಯ + ಎಂಬ ಎರಡು ಯೋಜನೆಗಳು ಲಭ್ಯವಿದೆ. ಈ ಮೂಲಕ ತುಂಬಾ ಆಸ್ಪತ್ರೆ ಆಯ್ಕೆಗಳು ಲಭ್ಯವಿರುವ ನೆಟ್‌ ವರ್ಕ್ ಹಾಸ್ಪಿಟಲ್ ಕವರೇಜ್‌ ಸೌಲಭ್ಯ ಪಡೆಯಬಹುದು. ಇದರಿಂದ ಭಾರತದಾದ್ಯಂತ ನೆರವು ಪಡೆಯಬಹುದಾದ ಕಾಂಪ್ರಹೆನ್ಸಿವ್ ನೆಟ್ ವರ್ಕ್ ಕವರೇಜ್ ದೊರೆಯುತ್ತದೆ. ಆರ್ಯ ಹೆಲ್ತ್ ಇನ್ಶೂರೆನ್ಸ್ ಮೂಲಕ ಗ್ರಾಹಕರು ದೇಶಾದ್ಯಂತ ಇರುವ ನಾರಾಯಣ ಹೆಲ್ತ್ ಆಸ್ಪತ್ರೆಗಳಲ್ಲಿ ಸುಲಭವಾಗಿ ಪ್ರವೇಶ ಪಡೆಯಬಹುದು. ಜೊತೆಗೆ ಬೆಂಗಳೂರಿನಲ್ಲಿ ಫೋರ್ಟಿಸ್, ಗ್ಲೆನಿಗಲ್ಸ್ ಬಿಜಿಎಸ್, ಸ್ಪರ್ಶ್ ಹಾಸ್ಪಿಟಲ್, ನಾರಾಯಣ ನೇತ್ರಾಲಯ, ಈವನ್ ಹಾಸ್ಪಿಟಲ್ಸ್, ಕ್ಲೌಡ್ ನೈನ್ ಮತ್ತು ಸಕ್ರ ವರ್ಲ್ಡ್ ಹಾಸ್ಪಿಟಲ್ ಸೇರಿದಂತೆ ವೆರಿಫೈಡ್ ಪ್ರೊವೈಡರ್ ನೆಟ್‌ವರ್ಕ್ ವಿಭಾಗದಲ್ಲಿ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಸೇವೆ ಹೊಂದಬಹುದು.

ಆರ್ಯ+ ಯೋಜನೆಯಲ್ಲಿ ಗ್ರಾಹಕರು ಇತರ ವೈದ್ಯಕೀಯ ಸೇವೆ ಒದಗಿಸುವ ನೆಟ್ ವರ್ಕ್ ಸೌಲಭ್ಯ ಪಡೆಯಬಹುದು. ಈ ಮೂಲಕ ದೇಶಾದ್ಯಂತ ಇರುವ 2,400ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಹಾಸ್ಪಿಟಲೈಸೇಷನ್ ಕವರೇಜ್ ಪಡೆಯಬಹುದು. ಗ್ರಾಹಕರು ಆರ್ಯ ಅಥವಾ ಆರ್ಯ+ ಯೋಜನೆಯನ್ನು ತಮ್ಮ ನೆಟ್‌ ವರ್ಕ್ ಆದ್ಯತೆ ಮತ್ತು ವೈಯಕ್ತಿಕ ವೈದ್ಯಕೀಯ ಸೇವಾ ಅಗತ್ಯದ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಇದಲ್ಲದೆ, ನಾರಾಯಣ ಹೆಲ್ತ್ ಇನ್ಶೂರೆನ್ಸ್ ದೇಶದಲ್ಲಿಯೇ ಮೊದಲ ಬಾರಿಗೆ 'ಝಡ್ಎಪಿ (ಜೀರೋ ಅಡಿಷನಲ್ ಪೇಮೆಂಟ್) ಪ್ರೊಟೆಕ್ಷನ್' ಸೇವಾ ಭರವಸೆಯನ್ನು ನೀಡುತ್ತಿದೆ.

ಈ ಮೂಲಕ ಅರ್ಹ ಕ್ಲೈಮ್‌ಗಳಿಗೆ ಯಾವುದೇ ಕಡಿತ ಇರುವುದಿಲ್ಲ ಎಂಬ ಖಾತ್ರಿ ನೀಡುತ್ತದೆ. ಝಡ್ಎಪಿ ಪ್ರೊಟೆಕ್ಷನ್ ದೇಶಾದ್ಯಂತ ಇರುವ ಎಲ್ಲಾ ನಾರಾಯಣ ಹೆಲ್ತ್ ಆಸ್ಪತ್ರೆಗಳಲ್ಲಿ ತೆಗೆದುಕೊಂಡ ಅರ್ಹ ಕ್ಲೈಮ್‌ಗಳಿಗೆ ಮಾತ್ರ ಲಭ್ಯವಿರುತ್ತದೆ. ಈ ಕುರಿತು ಮಾತನಾಡಿದ ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್ ನ ಪೂರ್ಣಾವಧಿ ನಿರ್ದೇಶಕರು & ಸಿಇಓ ಶ್ರೀಮತಿ ಶೀಲಾ ಆನಂದ್ ಅವರು, 'ಆರ್ಯ ಉತ್ಪನ್ನವು ಸಂಪೂರ್ಣ ಓಪಿಡಿ ಮತ್ತು ಆಸ್ಪತ್ರೆ ದಾಖಲಾತಿ ಲಾಭ, ವಿಸ್ತಾರ ನೆಟ್‌ ವರ್ಕ್, ಜಿ.ಎಸ್.ಟಿ ರಿಯಾಯಿತಿಯ ಸಂಪೂರ್ಣ ಲಾಭ ಮತ್ತು ಝಡ್ಎಪಿ ಪ್ರೊಟೆಕ್ಷನ್ ಒದಗಿಸುತ್ತಿದ್ದು, ಈ ಮೂಲಕ ಸುಲಭವಾಗಿ ಗುಣಮಟ್ಟದ ವೈದ್ಯಕೀಯ ಒದಗಿಸುತ್ತಿದೆ' ಎಂದರು.

ನಾರಾಯಣ ಹೆಲ್ತ್ ಇನ್ಶೂರೆನ್ಸ್ ನ ನಿರ್ದೇಶಕರು ಮತ್ತು ನಾರಾಯಣ ವನ್ ಹೆಲ್ತ್ ನ ಸಿಇಓ ಆದ ಶ್ರೀ ರವಿ ವಿಶ್ವನಾಥ್ ಅವರು, 'ಭಾರತದ ಮೊದಲ ಆಸ್ಪತ್ರೆ- ಮಾಲೀಕತ್ವದ ಇನ್ಶೂರೆನ್ಸ್ ಬ್ರ್ಯಾಂಡ್ ಆಗಿರುವ ಆರ್ಯ ಹೆಲ್ತ್ ಇನ್ಶೂರೆನ್ಸ್ ಜನರು ವೈದ್ಯಕೀಯ ಸೇವೆ ಪಡೆಯುವ ರೀತಿಯನ್ನೇ ಬದಲಿಸಲಿದೆ. ಇನ್ಶೂರೆನ್ಸ್ ಮತ್ತು ವೈದ್ಯಕೀಯ ಸೇವೆಯನ್ನು ಜೊತೆಗೂಡಿಸಿ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾರಾಯಣ ಹೆಲ್ತ್‌ ಗಳಿಸಿರುವ ನಂಬಿಕೆ ಮತ್ತು ಅದರ ಪಾರದರ್ಶಕ ಸೇವೆಯ ಬೆಂಬಲ ಪಡೆದಿರುವ ಆರ್ಯ ಅತ್ಯುತ್ತಮ ಸೇವೆ ಒದಗಿಸಲಿದೆ' ಎಂದರು.

ಆರ್ಯ ಹೆಲ್ತ್ ಇನ್ಶೂರೆನ್ಸ್‌ನ ಪ್ರಮುಖ ಪ್ರಯೋಜನಗಳು

ದೈನಂದಿನ ಆರೈಕೆ: ಜನರಲ್ ಫಿಜಿಷಿಯನ್, ಪೀಡಿಯಾಟ್ರಿಷಿಯನ್, ಪ್ರಸೂತಿ ಮತ್ತು ಹೆರಿಗೆ ತಜ್ಞರ ಜೊತೆಗಿನ ಸಮಾಲೋಚನೆ ಒಳಗೊಂಡಿದೆ. ತಜ್ಞವೈದ್ಯರ ಸಲಹೆ ಮತ್ತು ಡಯಾಗ್ನೋಸ್ಟಿಕ್ಸ್‌ ಸೇವೆಯಲ್ಲಿ ರಿಯಾಯಿತಿ, ಮನೆಯಲ್ಲಿಯೇ ಮಾದರಿ ಸಂಗ್ರಹ ಮತ್ತು ಉಚಿತ ಔಷಧ ವಿತರಣೆ ಸೇವೆ ಲಭ್ಯವಿದೆ.

ಉತ್ಕೃಷ್ಟ ಕವರೇಜ್: ₹25 ಲಕ್ಷ, ₹50 ಲಕ್ಷ ಅಥವಾ ₹1 ಕೋಟಿ ಆಯ್ಕೆಗಳು ಲಭ್ಯವಿದೆ. ಆಸ್ಪತ್ರೆ ದಾಖಲಾತಿಯ ಮೊದಲು ಮತ್ತು ನಂತರದ ವೆಚ್ಚಗಳು ಕ್ರಮವಾಗಿ 60 ಮತ್ತು 180 ದಿನಗಳವರೆಗೆ ಕವರ್ ಆಗುತ್ತದೆ. 2,400ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್ ಸೌಲಭ್ಯ ದೊರೆಯುತ್ತದೆ.

ವನ್ ಹೆಲ್ತ್ ಭರವಸೆ: ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ನಾರಾಯಣ ಹೆಲ್ತ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಾಗ ಹಾಸ್ಪಿಟಲೈಸೇಷನ್ ಕವರೇಜ್ ಜೊತೆಗೆ ವೈಯಕ್ತಿಕ ವಾರ್ಷಿಕ ಪ್ರೀಮಿಯಂ (ಹೆಲ್ತ್ ಚೆಕಪ್ ಮತ್ತು ವಿಎಎಸ್ ಶುಲ್ಕಗಳನ್ನು ಹೊರತುಪಡಿಸಿ) ನಷ್ಟೇ ಸಮಾನವಾದ ಹಣದ ಲಾಭ ದೊರೆಯಲಿದೆ.

ಜೀರೋ ಅಡಿಷನಲ್ ಪೇಮೆಂಟ್ ಪ್ರೊಟೆಕ್ಷನ್: ದೇಶಾದ್ಯಂತ ಇರುವ ನಾರಾಯಣ ಹೆಲ್ತ್ ಆಸ್ಪತ್ರೆಗಳಲ್ಲಿ ಅರ್ಹ ಕ್ಲೈಮ್‌ಗಳಿಗೆ ಹೆಚ್ಚು ದುಡ್ಡು ಪಾವತಿಸಬೇಕಿಲ್ಲ ಎಂಬ ಭರವಸೆ ಒದಗಿಸಲಾಗುತ್ತದೆ.

ಜೀರೋ ವೇಟಿಂಗ್ ಪೀರಿಯಡ್: ಅರ್ಹ ಗ್ರಾಹಕರು ಪಾಲಿಸಿ ಪೂರ್ವ ವೈದ್ಯಕೀಯ ಪರೀಕ್ಷೆಗಳ ಮೂಲಕ ಮೊದಲ ದಿನದಿಂದಲೇ ಲಾಭಗಳನ್ನು ಪಡೆಯಬಹುದು. ನಾರಾಯಣ ಆಸ್ಪತ್ರೆಗಳಲ್ಲಿ ಆರಂಭಿಕ ಠೇವಣಿ ಇಲ್ಲದೆ ಸುಲಭ ಚಿಕಿತ್ಸೆ ಪಡೆಯಬಹುದು.