ಹರ್ಯಾಣದಲ್ಲಿ ಹೇಳಿದ್ದು ಕಾಂಗ್ರೆಸ್ ಬಂದಿದ್ದು ಬಿಜೆಪಿ, ಈಗ ಬಿಹಾರದಲ್ಲಿ ನೋಡಿ ಎಂದ ಖರ್ಗೆ, ಎಕ್ಸಿಟ್ ಪೋಲ್ ಬಿಹಾರದಲ್ಲಿ ಬಿಜೆಪಿಗೆ ಗೆಲುವು ಎಂದಿದೆ. ಆದರೆ ಈ ಬಾರಿ ಕಾಂಗ್ರೆಸ್ ಬಿಹಾರದಲ್ಲಿ ಗೆಲುವು ಸಾಧಿಸಲಿದೆ ಎಂದು ಖರ್ಗೆ ಭವಿಷ್ಯ ನುಡಿದಿದ್ದಾರೆ.

ನವದೆಹಲಿ (ನ.12) ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಕುತೂಹಲ ತೀವ್ರಗೊಳ್ಳುತ್ತಿದೆ. ಬಹುತೇಕಾ ಎಲ್ಲಾ ಎಕ್ಸಿಟ್ ಪೋಲ್‌ಗಳು ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸ್ಪಷ್ಟ ಬಹುಮತ ಎಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಹಾರದಲ್ಲಿ ಎಕ್ಸಿಟ್ ಪೋಲ್ ಬಿಜೆಪಿಗೆ ಗೆಲುವು ಎಂದಿದೆ. ಆದರೆ ಈ ಹಿಂದೆ ಹರ್ಯಾಣದಲ್ಲಿ ಎಕ್ಸಿಟ್ ಪೋಲ್ ಕಾಂಗ್ರೆಸ್‌ಗೆ ಗೆಲುವು ಎಂದಿದೆ. ಆದರೆ ಅಲ್ಲಿ ಬಿಜೆಪಿ ಗೆದ್ದಿತ್ತು. ಇದೀಗ ಬಿಹಾರದಲ್ಲೂ ಅದೇ ರೀತಿ ಉಲ್ಟಾ ಆಗಲಿದೆ. ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್ ಗೆಲುವಿನ ವಿಶ್ವಾಸ

ಎಕ್ಸಿಟ್ ಪೋಲ್‌ಗಳೆಲ್ಲಾ ಎನ್‌ಡಿಎಗೆ ಮುನ್ನಡೆ ತೋರಿಸುತ್ತಿದೆ. ಅಷ್ಟು ಮಹಾಘಟಬಂದನ್ ಗೆ ಪ್ರೋತ್ಸಾಹ ಇಲ್ಲ ಎಂದು ತೋರಿಸುತ್ತಿದೆ. ಇದೇ ರೀತಿಯಾಗಿ ಹರಿಯಾಣದಲ್ಲಿ ಎಕ್ಸಿಟ್ ಪೋಲ್ ಎಲ್ಲ ಕಾಂಗ್ರೆಸ್ ಗೆ ಬರುತ್ತದೆ ಎಂದು ತೋರಿಸಿದ್ದರು. ಆದರೆ ರಿಸಲ್ಟ್ ಉಲ್ಟಾ ಆಗಿ ಬಿಜೆಪಿ ಬಂತು. ರಿಸಲ್ಟ್ ಬರುವ ತನಕ ಇದನ್ನೂ ಕಾದು ನೋಡೋಣ ಎಂದು ಖರ್ಗೆ ಹೇಳಿದ್ದಾರೆ.

8ಕ್ಕೂ ಹೆಚ್ಚು ಎಕ್ಸಿಟ್ ಪೋಲ್ ವರದಿಗಳು ಎನ್‌ಡಿಗೆ ಗೆಲುವು ಎಂದಿದೆ. ವಿಶೇಷ ಅಂದರೆ ಶೇಕಡಾ 65 ರಷ್ಟು ಮಹಿಳಯರು ಎನ್‌ಡಿಎ ಬೆಂಬಲಿಸಿದ್ದಾರೆ ಎಂದು ಎಕ್ಸಿಟ್ ಪೋಲ್ ಹೇಳುತ್ತಿದ್ದೆ. ಇನ್ನು ಶೇಕಡಾ 52ರಷ್ಟು ಪುರುಷ ಮತದಾರರು ಎನ್‌ಡಿಗೆ ಮತ ಹಾಕಿದ್ದಾರೆ ಎಂದಿದೆ. ನಿನ್ನೆ ಎಕ್ಸಿಟ್ ಪೋಲ್ ನೀಡಿದ ಸ್ಥಾನಗಳೆಷ್ಟು?

ಪೀಪಲ್ಸ್ ಫಲ್ಸ್ ಮತಗಟ್ಟೆ ಸಮೀಕ್ಷೆ

  • ಎನ್‌ಡಿಎ: 133-159
  • ಮಹಾಘಟನಬಂಧನ: 75-101
  • ಜೆಎಸ್‌ಪಿ: 0-5
  • ಇತರರು: 2-8

ಟೈಮ್ಸ್ ನೌ ಮತಗಟ್ಟೆ ಸಮೀಕ್ಷೆ

  • ಎನ್‌ಡಿಎ: 135-150
  • ಮಹಾಘಟನಬಂಧನ: 88-100
  • ಜೆಎಸ್‌ಪಿ: 0-01

ಮ್ಯಾಟ್ರಿಜ್ ಮತಗಟ್ಟೆ ಸಮೀಕ್ಷೆ

  • ಎನ್‌ಡಿಎ: 147-167
  • ಮಹಾಘಟನಬಂಧನ: 70-90
  • ಇತರರು: 0-02

ದೈನಿಕ್ ಭಾಸ್ಕರ್ ಮತಗಟ್ಟೆ ಸೆಮೀಕ್ಷೆ

  • ಎನ್‌ಡಿಎ: 145-160
  • ಮಹಾಘಟನಬಂಧನ: 73-91
  • ಜೆಎಸ್‌ಪಿ: 0-03
  • ಇತರರು: 5-7

ಪೀಪಲ್ಸ್ ಇನ್‌ಸೈಟ್ ಮತಗಟ್ಟೆ ಸೆಮೀಕ್ಷೆ

  • ಎನ್‌ಡಿಎ:133-148
  • 87-102
  • ಜೆಎಸ್‌ಪಿ:0-2
  • ಇತರರು:3-6

ಪೋಲ್ ಆಫ್ ಫೋಲ್

  • ಎನ್‌ಡಿಎ: 138-155
  • ಮಹಾಘಟನಬಂಧನ: 82-98
  • ಇತರರು: 0-02

ನವೆಂಬರ್ 14ರಂದು ಫಲಿತಾಂಶ

ನವೆಂಬರ್ 14ರಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳಲಿದೆ. ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ಚುನಾವಣೆಯಲ್ಲಿ ಯಾರು ಎಷ್ಟು ಸ್ಥಾನ ಪಡೆಯಲಿದ್ದಾರೆ ಅನ್ನೋದು ನವೆಂಬರ್ 14ರಂದು ಬಹಿರಂಗವಾಗಲಿದೆ. 243 ಸ್ಥಾನಗಳಿಗೆ ಬಿಹಾರ ವಿಧಾನಸಭಾ ಚುನಾವಣೆ ನಡೆದಿತ್ತು.