Minister Zameer Ahmed Khan Questions Delhi Blast Timing ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರ್ ಬಾಂಬ್ ಸ್ಫೋಟದ ಸಮಯದ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನೆ ಎತ್ತಿದ್ದಾರೆ. ಬಿಹಾರ ಚುನಾವಣೆಗೆ ಒಂದು ದಿನ ಮುಂಚಿತವಾಗಿ ಈ ಘಟನೆ ನಡೆದಿದೆ ಎಂದಿದ್ದಾರೆ.
ಬೆಂಗಳೂರು (ನ.12): ದೆಹಲಿಯ ಕೆಂಪುಕೋಟೆಯ ಬಳಿ ಸಂಭವಿಸಿದ ಕಾರ್ ಬಾಂಬ್ ಸ್ಫೋಟದ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರುಗಳು ಮನಸ್ಸಿಗೆ ಬಂದಂತ ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಬಳಿಕ ವಸತಿ ಹಾಗೂ ಅಲ್ಪಸಂಖ್ಯಾತ ಇಲಾಖೆಗಳ ಸಚಿವ ಜಮೀರ್ ಅಹ್ಮದ್ ಖಾನ್ ಕೂಡ ಬಿಹಾರ ಚುನಾವಣೆಗೆ ಒಂದು ದಿನ ಮುಂಚೆ ಬ್ಲಾಸ್ಟ್ ಹೇಗಾಯಿತು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ನನಗೆ ಆಶ್ಚರ್ಯ ಆಗೋದು ಏನೆಂದರೆ ಚುನಾವಣೆಗೆ ಒಂದು ದಿನ ಮುಂಚೆ ಇದು ಹೇಗಾಯ್ತು? ಬಿಹಾರ ಚುನಾವಣೆ ಒಂದು ದಿನದ ಮುಂಚೆ ಬ್ಲಾಸ್ಟ್ ಹೇಗಾಯಿತು?ಗಾಯಗೊಂಡವರು ಆರೋಗ್ಯ ಸರಿ ಹೋಗಲಿ ಅಂತ ಪ್ರಾರ್ಥನೆ ಮಾಡುತ್ತೇನೆ. ರಾಜಕೀಯಕ್ಕೆ ಬ್ಲಾಸ್ಟ್ ಆಗಿದೆ ಅಂತ ಟುಸ ಪುಸ ಅಂತ ಸುದ್ದಿ ಬರುತ್ತಿದೆ. ಹಾಗೇನಾದರೂ ರಾಜಕೀಯಕ್ಕೆ ಮಾಡಿದ್ದರೆ ಯಾರಿಗೂ ಒಳ್ಳೆಯದಾಗಲ್ಲ. ರಾಜಕೀಯ ಲಾಭಕ್ಕೆ ಮಾಡಿದ್ದರೆ ಅವರಿಗೂ ಒಳ್ಳೆಯದಾಗಲ್ಲ, ಅವರ ಕುಟುಂಬಕ್ಕೂ ಒಳ್ಳೆಯದಾಗಲ್ಲ. ಹಾಗೇನಾದರೂ ಆಗಿದ್ದರೆ ಯಾರಿಗೂ ಒಳ್ಳೆಯದಾಗಲ್ಲ ಎಂದು ಜಮೀರ್ ಹೇಳಿದ್ದಾರೆ.
ಯಾರೂ ಇಲ್ಲಿಯೇ ಗೂಟ ಹೊಡೆದುಕೊಂಡು ಇಲ್ಲಿಯೇ ಇರಲ್ಲ. ಸಿಎಂ ಆಗಲಿ ಪ್ರಧಾನಿ ಆಗ್ಲಿ ಯಾರೂ ಶಾಶ್ವತವಾಗಿ ಇಲ್ಲಿಯೇ ಗೂಟ ಹೊಡೆದು ಇರಲ್ಲ. ಬ್ಲಾಸ್ಟ್ ಬಗ್ಗೆ ನಾನು ಕೇಳ್ತಾ ಇರೋದು ಇದನ್ನ? ಅನುಮಾನ ಅಲ್ಲ. ನಾನು ಪ್ರಶ್ನೆ ಮಾಡ್ತಿದ್ದಿನಿ ಎಂದು ಜಮೀರ್ ಖಾರವಾಗಿ ಹೇಳಿದ್ದಾರೆ.
ಭಯೋತ್ಪಾದಕರಿಗೆ ಜಾತಿ ಇಲ್ಲ
ಟೆರರಿಸ್ಟ್‌ಗೆ ಜಾತಿಯೇ ಇಲ್ಲ. ಇಸ್ಲಾಂ ಧರ್ಮದಲ್ಲಿ ಟೆರರಿಸಂಗೆ ಯಾರೂ ಅವಕಾಶನೇ ಕೊಟ್ಟಿಲ್ಲ. ಟೆರರಿಸಂ ಮಾಡುವವನು ಇಸ್ಲಾಂ ಧರ್ಮದವನೇ ಅಲ್ಲ. ಯಾವ ಧರ್ಮದಲ್ಲೂ ಹೀಗೆ ಮಾಡಿ ಅಂತ ಹೇಳಿಕೊಡಲ್ಲ. ಹಾಗೆಯೇ ಮಾಡಿದರೆ ಹುಳ ಬಿದ್ದು ಸಾಯ್ತಾನೆ ಅವನು. 11ಕ್ಕೆ ಬಿಹಾರ ಚುನಾವಣೆ ಒಂದು ದಿನದ ಮುಂದೆ ಬ್ಲಾಸ್ಟ್ ಆಗಿದೆ. ಟೆರರಿಸ್ಟ್ ಗಳಿಗೆ ರಾಜಕೀಯ ಸಂಪರ್ಕ ಇತ್ತು ಎನ್ನುವುದನ್ನು ನಾನು ಅಲ್ಲಿ ಇಲ್ಲಿ ಕೇಳ್ಪಟ್ಟಿದ್ದು ಹೇಳುತ್ತಿದ್ದೇನೆ. ಎಲ್ಲವೂ ಈಗ ಊಹಾಪೋಹಗಳು ಸೃಷ್ಟಿ ಆಗುತ್ತಿವೆ. ಹಾಗೇನಾದರೂ ಆದರೆ ಯಾರಿಗೂ ಒಳ್ಳೆಯದಾಗಲ್ಲ. ರಾಜಕೀಯದಲ್ಲಿ ಇರುವವರು ಜಾತಿಯೂ ಮಾಡಬಾರದು. ಈ ಘಟನೆ ಆಗಬಾರದಿತ್ತು ಆಗಿದೆ. ಊಹಾಪೋಹ ಸುದ್ದಿ ಪ್ರಕಾರ ಆಗಿದ್ದರೆ ಯಾರಿಗೂ ಒಳ್ಳೆಯದಲ್ಲ. ತಾತ್ಕಾಲಿಕವಾಗಿ ಲಾಭ ಆಗಬಹುದು ಆದರೆ ಮುಂದೆ ಒಳ್ಳೆಯದಾಗಲ್ಲ ಎಂದಿದ್ದಾರೆ.
