ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರ ಅವರ ಆಪ್ತ ಶಾಸಕರು ಬ್ಯಾಟಿಂಗ್ ಮುಂದುವರಿಸಿದ್ದಾರೆ. ಜನವರಿ 6ರಂದು ಡಿ.ಕೆ.ಶಿವಕುಮಾರ್‌ಗೆ ಸಿಎಂ ಪಟ್ಟಾಭಿಷೇಕವಾಗುವ ವಿಶ್ವಾಸವಿದೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಪುನರುಚ್ಚರಿಸಿದರೆ, ಡಿಕೆಶಿ ಸದ್ಯದಲ್ಲೇ ಸಿಎಂ ಸ್ಥಾನ ಅಲಂಕರಿಸಲಿದ್ದಾರೆ ಎಂದು ಮದ್ದೂರು ಶಾಸಕ ಕೆ.ಎಂ.ಉದಯ್ ಭವಿಷ್ಯ ನುಡಿದಿದ್ದಾರೆ. ಇನ್ನೊಂದೆಡೆ ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ, ಡಿಕೆಶಿಯವರು ನಮ್ಮ ಆರಾಧ್ಯದೈವ ಎಂಬುದರಲ್ಲಿ ಎರಡು ಮಾತಿಲ್ಲ. ಜನವರಿ 6 ಅಥವಾ 9ಕ್ಕೆ ಅವರು ಪ್ರಮಾಣವಚನ ಸ್ವೀಕರಿಸಿದರೆ, ಸಂಭ್ರಮ ಪಡುವುದರಲ್ಲಿ ನಾನೇ ಮೊದಲಿಗ ಎಂದಿದ್ದಾರೆ.

12:07 AM (IST) Dec 15
11:12 PM (IST) Dec 14
ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ, ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ದಾವಣಗೆರೆಗೆ ತರಲಾಗುತ್ತಿದೆ. ಸಾರ್ವಜನಿಕರ ಅಂತಿಮ ದರ್ಶನಕ್ಕೆ ಹೈಸ್ಕೂಲ್ ಮೈದಾನದಲ್ಲಿ ವ್ಯವಸ್ಥೆ. ಕಲ್ಲೇಶ್ವರ ಮಿಲ್ ಆವರಣದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ.
10:12 PM (IST) Dec 14
ತುಮಕೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಕೇವಲ ರಸ್ತೆ, ಚರಂಡಿ ನಿರ್ಮಾಣದಿಂದ ಬಡವರ ಉದ್ದಾರ ಸಾಧ್ಯವಿಲ್ಲ, ಸಾವಿರಾರು ವರ್ಷಗಳ ಶೋಷಣೆ ಕೊನೆಗಾಣಿಸಲು ಗ್ಯಾರಂಟಿಗಳು ಅವಶ್ಯಕ ಎಂದರು.
09:57 PM (IST) Dec 14
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಶೋಕಾಚರಣೆ ಹಾಗೂ ನಾಯಕರ ಗೌರವಾರ್ಥ ಶಾಲೆಗಳಿಗೆ ರಜೆ ನೀಡಲಾಗಿದೆ.
09:38 PM (IST) Dec 14
09:18 PM (IST) Dec 14
ಕಾರು ಅಪಘಾತದಲ್ಲಿ ಮುಂಡಗೋಡು ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲೇ ಸಾವು, ಮತ್ತಿಬರಿಗೆ ಗಾಯ, ಸಣ್ಣ ಸೇತುವೆಗೆ ಡಿಕ್ಕಿ ಹೊಡೆದ ಕಾರು ಪ್ರಪಾತಕ್ಕೆ ಬಿದ್ದಿದೆ. ಪರಿಣಾಮ ಅಪಘಾತದ ತೀವ್ರತೆ ಹೆಚ್ಚಾಗಿದೆ. ತಹಶಿಲ್ದಾರ್ ಕಚೇರಿ ಇಬ್ಬರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
08:42 PM (IST) Dec 14
ಹಿರಿಯ ರಾಜಕಾರಣಿ ಮತ್ತು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು 95ನೇ ವಯಸ್ಸಿನಲ್ಲಿ ನಿಧನ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ತಿರುಪತಿ ಯಾತ್ರೆಯಲ್ಲಿದ್ದ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಪ್ರಯಾಣ ರದ್ದುಗೊಳಿಸಿ ಹಿಂತಿರುಗುತ್ತಿದ್ದು, ಪಾರ್ಥಿವ ಶರೀರ ದಾವಣಗೆರೆಗೆ ರವಾನಿಸಲು ಸಿದ್ಧತೆ
08:29 PM (IST) Dec 14
ಹೊಸಕೋಟೆಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಇದರೊಂದಿಗೆ, ನಮ್ಮ ಮೆಟ್ರೋ ಜಾಲವನ್ನು 175 ಕಿ.ಮೀ.ಗೆ ವಿಸ್ತರಿಸಲಾಗುತ್ತಿದ್ದು, ಗುಲಾಬಿ, ನೀಲಿ ಸೇರಿದಂತೆ ಹೊಸ ಮಾರ್ಗಗಳಲ್ಲಿ ಚಾಲಕ ರಹಿತ ರೈಲುಗಳನ್ನು ಪರಿಚಯಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ.
08:23 PM (IST) Dec 14
ಬಿಗ್ ಬಾಸ್ ಮನೆಯಲ್ಲಿ ಕ್ಯೂಟ್ ಜೋಡಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಸಂಬಂಧದ ಬಗ್ಗೆ ಎಲ್ಲರಿಗೂ ಗೊಂದಲವಿದೆ. ಇದೀಗ ಗಿಲ್ಲಿ ನಟ ಮೇಕಪ್ ಕೋಣೆಯಲ್ಲಿ ಕಾವ್ಯಾಗೆ 'ಐ ಲವ್ ಯು' ಎಂದು ಹೇಳಿ ಪ್ರೀತಿ ನಿವೇದನೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾವ್ಯಾ ಅಚ್ಚರಿ ಮತ್ತು ನಗುವಿನಿಂದ ಪ್ರತಿಕ್ರಿಯಿಸಿದ್ದಾರೆ.
08:14 PM (IST) Dec 14
ಹಾವೇರಿಯಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಕುರುಬ ಸಮುದಾಯವನ್ನು ಎಸ್‌ಟಿ ಮೀಸಲಾತಿಗೆ ಸೇರಿಸುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಕುಲಶಾಸ್ತ್ರ ಅಧ್ಯಯನವಿಲ್ಲದೆ ಸೇರ್ಪಡೆ ಸಾಧ್ಯವೇ? ಒಬಿಸಿಯಿಂದ ಎಸ್‌ಟಿಗೆ ಬರುವಾಗ ಅವರ ಮೀಸಲಾತಿ ಪಾಲನ್ನೂ ತರಬೇಕು ಎಂಬ ಷರತ್ತನ್ನು ಮುಂದಿಟ್ಟಿದ್ದಾರೆ.
08:11 PM (IST) Dec 14
ಜನವರಿಯಿಂದ ಎಲ್‌ಇಡಿ ಟೀವಿಗಳ ದರ ಹೆಚ್ಚಾಗುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಮೊರಿ ಚಿಪ್‌ಗಳ ಕೊರತೆ, ಚಿಪ್‌ಗಳ ಬೆಲೆ ಏರಿಕೆ ಮತ್ತು ರುಪಾಯಿ ಮೌಲ್ಯ ಕುಸಿತ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ಬೆಲೆ ಏರಿಕೆಯು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೂ ಪರಿಣಾಮ ಬೀರಲಿದೆ.
07:56 PM (IST) Dec 14
ಬಿಗ್ಬಾಸ್ ಮನೆಯಲ್ಲಿ ಸಂಬಂಧಗಳು ಯಾವ ಕ್ಷಣದಲ್ಲಿ ಬೇಕಾದರೂ ಬದಲಾಗಬಹುದು ಎಂಬುದಕ್ಕೆ ಹೊಸ ಸೇರ್ಪಡೆಯಾಗಿದೆ. ಹಾವು-ಮುಂಗುಸಿಯಂತಿದ್ದ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಇದೀಗ ಸ್ನೇಹಿತರಾಗಿದ್ದು, ಗಿಲ್ಲಿಯಿಂದಲೇ ತನ್ನ ಮನಸ್ಸು ಪರಿವರ್ತನೆಯಾಗಿದೆ ಎಂದು ಧ್ರುವಂತ್ ಹೇಳಿಕೊಂಡಿದ್ದಾರೆ.
07:47 PM (IST) Dec 14
ಬೆಂಗಳೂರಿನಲ್ಲಿ ಮಹಿಳಾ ವೈದ್ಯೆಯೊಬ್ಬರು ಕಳೆದ ಮೂರು ತಿಂಗಳಿಂದ ಸೈಕೋ ವ್ಯಕ್ತಿಯೊಬ್ಬನಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾರೆ. ರಾತ್ರಿ ವೇಳೆ ಮನೆ ಬಳಿ, ವಿಶೇಷವಾಗಿ ಬೆಡ್‌ರೂಂ ಬಳಿ ಬಂದು ದಿಟ್ಟಿಸಿ ನೋಡುವ ಈತನ ಕಾಟದಿಂದ ಬೇಸತ್ತು ವೈದ್ಯೆ ಕೋರಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ
07:31 PM (IST) Dec 14
ಬೆಡ್ತಿ-ವರದಾ ನದಿ ಜೋಡಣೆ ಯೋಜನೆಗೆ ತಪ್ಪು ಕಲ್ಪನೆಯಿಂದ ವಿರೋಧಿಸುವುದು ಬೇಡವೆಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಪರಿಷ್ಕೃತ ಯೋಜನೆಯಡಿ ಕೇವಲ 10% ನೀರನ್ನು ಮಾತ್ರ ಬಳಸಿಕೊಳ್ಳಲಾಗುವುದು ಮತ್ತು ಇದರಿಂದ ನದಿ ಹರಿವಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
07:17 PM (IST) Dec 14
ಕೊಡಗಿನ ಭಾಗಮಂಡಲದ ಭಗಂಡೇಶ್ವರ ದೇವಾಲಯದ ಆದಾಯ ಹೆಚ್ಚಿಸಲು ಜಿಲ್ಲಾಡಳಿತವು ದೇಗುಲದ ಮುಂದೆ ಅಂಗಡಿ ಮಳಿಗೆಗಳನ್ನು ನಿರ್ಮಿಸುತ್ತಿದೆ. ಆದರೆ, ಈ ನಿರ್ಮಾಣದಿಂದ ದೇವಾಲಯದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಮತ್ತು ಇದು ನಿಯಮಬಾಹಿರ ಎಂದು ಸ್ಥಳೀಯರು ಹಾಗೂ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
07:16 PM (IST) Dec 14
ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ, ಎಐವಿಎಂ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು 95 ನೇ ವಯಸ್ಸಿನಲ್ಲಿ ನಿಧನರಾದರು. ಅವರು 6 ಬಾರಿ ಶಾಸಕ, 1 ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದರು.
07:05 PM (IST) Dec 14
ಯಜಮಾನ ಸೀರಿಯಲ್ನಲ್ಲಿ ಅಪಘಾತದಿಂದ ನೆನಪು ಕಳೆದುಕೊಂಡಿರುವ ಝಾನ್ಸಿಯನ್ನು ಒಲಿಸಿಕೊಳ್ಳಲು ರಾಘು ಅವಳ ಡ್ರೈವರ್ ಆಗಿ ಸೇರಿದ್ದಾನೆ. ಈ ಮೈ ಜುಮ್ಮೆನ್ನಿಸುವ ಅಪಘಾತದ ದೃಶ್ಯವನ್ನು ಹೇಗೆ ಚಿತ್ರೀಕರಿಸಲಾಯಿತು ಎಂಬುದರ ರಿಸ್ಕಿ ಶೂಟಿಂಗ್ ವಿಡಿಯೋವನ್ನು ನಟಿ ಮಧು ಭೈರಪ್ಪ ಹಂಚಿಕೊಂಡಿದ್ದಾರೆ.
07:02 PM (IST) Dec 14
ಚಾಮರಾಜನಗರದಲ್ಲಿ ಬೇಟೆಗಾರರ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಕಾಡು ಹಂದಿಯೊಂದನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದ್ದು, ಚಿರತೆಗಳನ್ನು ಬೇಟೆಯಾಡಲು ಬಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬೇಟೆಗಾರರನ್ನು ಶೀಘ್ರವೇ ಬಂಧಿಸುವಂತೆ ಅರಣ್ಯ ಇಲಾಖೆಗೆ ಒತ್ತಾಯ.
06:43 PM (IST) Dec 14
ಅಥಣಿಯಲ್ಲಿ ನಡೆದ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, 2028ರಲ್ಲಿ ತಾವೇ ಮುಖ್ಯಮಂತ್ರಿಯಾಗುವುದಾಗಿ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಸಚಿವ ಸಂತೋಷ್ ಲಾಡ್ ಅವರಿಗೆ ಸವಾಲು ಹಾಕಿದರು.
06:38 PM (IST) Dec 14
ಬಿಗ್ಬಾಸ್ ಸೀಸನ್ 11ರ ನಂತರ ನಿರೂಪಣೆ ಮಾಡುವುದಿಲ್ಲ ಎಂದು ಟ್ವೀಟ್ ಮಾಡಿ ಶಾಕ್ ನೀಡಿದ್ದ ಕಿಚ್ಚ ಸುದೀಪ್, ಇದೀಗ ಮತ್ತೆ ನಿರೂಪಣೆಗೆ ಮರಳಿದ್ದಾರೆ. ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದ ಅವರು, ವಾಹಿನಿಯವರ ಮನವಿಗೆ ಸ್ಪಂದಿಸಿ ಮುಂದಿನ ನಾಲ್ಕು ವರ್ಷಗಳ ಕಾಲ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದಾರೆ.
06:14 PM (IST) Dec 14
ಬಿಗ್ಬಾಸ್ 10ರ ಸ್ಪರ್ಧಿ ವರ್ತೂರು ಸಂತೋಷ್, ಶೋ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವ ಇತರ ಸ್ಪರ್ಧಿಗಳ ವಿರುದ್ಧ ಕಿಡಿಕಾರಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಊಟಕ್ಕೆ ಕೊರತೆ ಇರಲಿಲ್ಲ ಮತ್ತು ಶೋ ಸ್ಕ್ರಿಪ್ಟೆಡ್ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
05:50 PM (IST) Dec 14
ಬೆಳಗಾವಿಯ ಅಥಣಿಯಲ್ಲಿ, ಶಾಸಕ ಯತ್ನಾಳ್ ಭಾಷಣಕ್ಕೆ ಪ್ರತ್ಯುತ್ತರ ನೀಡಲು ಯತ್ನಿಸಿದ ಸಚಿವ ಸಂತೋಷ್ ಲಾಡ್, ಶಿವಾಜಿ ಮಹಾರಾಜರ ಇತಿಹಾಸದ ಬಗ್ಗೆ ಮಾತನಾಡಿದರು. ಇದರಿಂದ ಕೆರಳಿದ ಯುವಕರು 'ಜೈ ಶ್ರೀರಾಮ್' ಮತ್ತು 'ಜೈ ಶಿವಾಜಿ' ಘೋಷಣೆ ಕೂಗಿ ಅವರ ಭಾಷಣಕ್ಕೆ ಅಡ್ಡಿ, ಇದು ಸಚಿವರ ಅಸಮಾಧಾನಕ್ಕೆ ಕಾರಣವಾಯಿತು.
05:27 PM (IST) Dec 14
ಸವಣೂರಿನಲ್ಲಿ ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಘಟನೆಗೆ ಸರ್ಕಾರದ ಓಲೈಕೆ ರಾಜಕಾರಣ, ಪೊಲೀಸರ ನಿಷ್ಕ್ರಿಯತೆ ಕಾರಣ ಎಂದು ಸಂಸದ ಬಸವರಾಜ್ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ನ 'ಓಟ್ ಚೋರ್, ಗದ್ದಿ ಚೋಡ್' ಅಭಿಯಾನದಿಂದ ಯಾವುದೇ ಪ್ರಯೋಜನವಿಲ್ಲವೆಂದು ವ್ಯಂಗ್ಯವಾಡಿದರು.
05:20 PM (IST) Dec 14
ಬಿಗ್ ಬಾಸ್ ಮನೆಯಲ್ಲಿರುವ ಕ್ಯೂಟ್ ಜೋಡಿಯ ಪೈಕಿ ಗಿಲ್ಲಿ ಹೇಳಿದ ಒಂದು ಮಾತಿಗೆ ಕಾವ್ಯಾ ತುಂಬಾ ಆಶ್ಚರ್ಯದಿಂದ ನೋಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಆದ್ರೆ, ಶೇ.90 ಸುಳ್ಳು, ಶೇ.10 ನಿಜ ಹೇಳಿದ ಗಿಲ್ಲಿ ಮಾತ್ರ ನಾಚಿ ನೀರಾಗಿದ್ದಾನೆ.
05:20 PM (IST) Dec 14
ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ ಬಹಿರಂಗ ಎಚ್ಚರಿಕೆಗೆ ಉದ್ಯಮಿ ಮೋಹನ್‌ದಾಸ್ ಪೈ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮಂತ್ರಿಗಳನ್ನು ಪ್ರಶ್ನಿಸುವ ಹಕ್ಕು ನಾಗರಿಕರಿಗಿದೆ ಎಂದು ಪೈ ಪ್ರತಿಪಾದಿಸಿದ್ದಾರೆ.
05:16 PM (IST) Dec 14
04:57 PM (IST) Dec 14
04:47 PM (IST) Dec 14
ದೇವಸ್ಥಾನದ ಅನ್ನದಾನಕ್ಕೆ ಸಹಾಯ ಕೇಳುವ ನೆಪದಲ್ಲಿ ಬಂದ ಇಬ್ಬರು ನಕಲಿ ಸ್ವಾಮಿಗಳು, ಮಾಟ ಮಂತ್ರದ ಪರಿಹಾರದ ನಾಟಕವಾಡಿ ಮಲ್ಲೇಶ್ವರಂನ ಮಹಿಳೆಗೆ 48 ಗ್ರಾಂ ಚಿನ್ನಾಭರಣ ದೋಚಿದ್ದಾರೆ. ಗೋಧಿ ಹಿಟ್ಟಿನಲ್ಲಿ ಚಿನ್ನ ಮುಚ್ಚಿಟ್ಟು, 38 ದಿನಗಳ ಕಾಲ ಪೂಜೆ ಮಾಡುವಂತೆ ನಂಬಿಸಿ ವಂಚಿಸಿದ್ದಾರೆ.
04:29 PM (IST) Dec 14
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈಗಾಗಲೇ 77 ದಿನಗಳು ಕಳೆದಿವೆ. ಯಾರು ಫಿನಾಲೆ ತಲುಪುತ್ತಾರೆ? ಯಾರು ವಿಜೇತರಾಗುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇದೆ. ವೀಕ್ಷಕರ ಮತಗಳು ಅಥವಾ ಅಭಿಮಾನಿ ಪ್ರಕಾರ ಯಾರು ಫಿನಾಲೆಗೆ ಹೋಗುತ್ತಾರೆ? ಯಾರು ಗೆಲ್ಲುತ್ತಾರೆ?
04:24 PM (IST) Dec 14
ಫ್ರಾನ್ಸ್-ಭಾರತದ ಜಂಟಿ ಸಂಶೋಧನೆಯ ಪ್ರಕಾರ, ರಸ್ತೆ ಸಾರಿಗೆಯಿಂದ ಪ್ರತಿ ಕಿ.ಮೀ.ಗೆ ಅತಿ ಹೆಚ್ಚು CO₂ ಹೊರಸೂಸುವ ನಗರವಾಗಿ ಮುಂಬೈ ಹೊರಹೊಮ್ಮಿದೆ. ದೆಹಲಿ, ಬೆಂಗಳೂರು ಸೇರಿದಂತೆ ಪ್ರಮುಖ ಮಹಾನಗರಗಳು ನೈಟ್ರೋಜನ್ ಆಕ್ಸೈಡ್ (NOx) ಮತ್ತು ಕಾರ್ಬನ್ ಮಾನಾಕ್ಸೈಡ್ (CO) ಹೊರಸೂಸುವಿಕೆಯಲ್ಲಿ ಮುಂದಿದೆ.
04:24 PM (IST) Dec 14
ಬಿಗ್ಬಾಸ್ ಶೋ ಸ್ಕ್ರಿಪ್ಟೆಡ್ ಎಂಬ ಆರೋಪ ಸಾಮಾನ್ಯವಾಗಿದ್ದು, ಈ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ಸ್ಪರ್ಧಿ ರಜತ್ ಅವರಿಗೆ ಟ್ಯಾಟೂ ಹಾಕಲು ಮನೆಗೆ ಹೋಗಿದ್ದ ಕಲಾವಿದ ಮನೋಜ್ ಕುಮಾರ್, ತಮ್ಮ ಅನುಭವ ಹಂಚಿಕೊಂಡಿದ್ದಾರೆ.
03:49 PM (IST) Dec 14
ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ನೇತೃತ್ವದಲ್ಲಿ, ತಮ್ಮ ಸಹೋದ್ಯೋಗಿ ತುಂಬು ಗರ್ಭಿಣಿ ಉಮಾ ಅವರಿಗೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಿದರು. ಈ ಮೂಲಕಮಾನವೀಯ ಮೌಲ್ಯಗಳು ಮತ್ತು ಸಹೋದ್ಯೋಗಿಗಳ ನಡುವಿನ ಬಾಂಧವ್ಯವನ್ನು ಎತ್ತಿ ತೋರಿಸಿತು.
03:45 PM (IST) Dec 14
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಜತ್, ಅಶ್ವಿನಿ ಗೌಡ ಮಧ್ಯೆ ದೊಡ್ಡ ಜಗಳ ಆಗಿದೆ. ಕಚಡಾ, ಮುದುಕಿ, ಥರ್ಡ್ ರೇಟೆಡ್ ಜೋಕ್ ಎಂದೆಲ್ಲ ಒಂದಿಷ್ಟು ಮಾತುಗಳು ಕೇಳಿ ಬಂದಿತ್ತು. ಈಗ ದೊಡ್ಮನೆಯಲ್ಲಿ ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ಚರ್ಚೆ ಆಗಿದೆ.
02:53 PM (IST) Dec 14
ವಿಧವೆ ತಾಯಿ ಅಥವಾ ಒಂಟಿಯಾಗಿ ಮಹಿಳೆಯೊಬ್ಬಳು ಮಕ್ಕಳನ್ನು ಅದರಲ್ಲೂ ಹೆಣ್ಣು ಮಗುವನ್ನು ಸಾಕುವುದು ಸುಲಭದ ಕೆಲಸವಲ್ಲ. ಹೆಣ್ಣೊಬ್ಬಳು ಒಂಟಿಯಾಗಿದ್ದಾಳೆ ಎಂದರೆ ಸಹಾಯದ ನೆಪದಲ್ಲಿ ಹತ್ತಿರ ಬರಲು ಬಯಸುವವರು ಸಾವಿರಾರು ಜನ ಹೀಗಿರುವಾಗ ವಿಧವೆ ತಾಯೊಬ್ಬಳು ಮಗಳ ರಕ್ಷಣೆಗಾಗಿ ವೇಷವನ್ನೇ ಬದಲಿಸಿ ಬದುಕಿದ್ದಾಳೆ.
02:39 PM (IST) Dec 14
Bigg Boss Kannada Season 12 Elimination: ಈ ವಾರ ಡಬಲ್ ಎಲಿಮಿನೇಶನ್ ಇದೆ. ಈ ವಾರ ಒಬ್ಬರಲ್ಲ, ಇಬ್ಬರು ಮನೆಯಿಂದ ಹೊರಗಡೆ ಹೋಗ್ತಾರೆ ಎಂದು ಕಿಚ್ಚ ಸುದೀಪ್ ಅವರು ಘೋಷಣೆ ಮಾಡಿದ್ದಾರೆ. ಸಂಡೇ ವಿಥ್ ಸುದೀಪ್ ಎಪಿಸೋಡ್‌ನಲ್ಲಿ ಡಬಲ್ ಎಲಿಮಿನೇಶನ್ ಆಗಿದೆ ಎನ್ನಲಾಗಿದೆ.
02:17 PM (IST) Dec 14
ಕನ್ನಡ ಕಿರುತೆರೆ ನಟಿ ಐಶ್ವರ್ಯಾ ಸಾಲೀಮಠ ಕೂಡ ಮಗುವಿನ ನಿರೀಕ್ಷೆಯಲ್ಲಿರುವ ವಿಷಯವನ್ನು ತಿಳಿಸಿದ್ದರು. ಈಗ ಇವರ ಖುಷಿ ಡಬಲ್ ಆಗಿದೆ. ಈ ವಿಷಯವನ್ನು ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಶುಭಾಶಯವನ್ನು ತಿಳಿಸಿದ್ದಾರೆ. ಹಾಗಾದರೆ ಏನದು?
01:51 PM (IST) Dec 14
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಹೊಸ ಹಂಪಾಪುರ ಗ್ರಾಮದಲ್ಲಿ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಪ್ರಿಯಾಂಕ ತೀವ್ರ ಹೊಟ್ಟೆನೋವು ತಾಳಲಾರದೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲು.
01:51 PM (IST) Dec 14
2025ನೇ ವರ್ಷದಲ್ಲಿ ಬೆಂಗಳೂರು ಹಲವು ಗಂಭೀರ ಅಪರಾಧ ಪ್ರಕರಣಗಳಿಗೆ ಸಾಕ್ಷಿಯಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ, ರೇಣುಕಾಸ್ವಾಮಿ ಹತ್ಯೆ ಪ್ರಕರಣ, ಸಚಿವರ ಹನಿಟ್ರ್ಯಾಪ್ ಯತ್ನದಂತಹ ಘಟನೆಗಳು ರಾಜ್ಯವನ್ನೇ ಬೆಚ್ಚಿಬೀಳಿಸಿ, ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದವು.
01:21 PM (IST) Dec 14
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ, ಗಂಡನ ಕಿರುಕುಳದಿಂದ ತವರು ಮನೆಗೆ ತೆರಳಿದ್ದ ಪತ್ನಿ ಹಾಗೂ ಆಕೆಯ ಕುಟುಂಬದ ಆರು ಮಂದಿಯ ಮೇಲೆ ಪತಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಡಿಸೆಂಬರ್ 10 ರಂದು ನಡೆದ ಈ ಘಟನೆಯಲ್ಲಿ ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ.
01:04 PM (IST) Dec 14
ಬಿಗ್ ಬಾಸ್ ಕನ್ನಡ ಸೀಸನ್ 11ರ ನಂತರವೂ ತಮ್ಮ ಸ್ನೇಹವನ್ನು ಮುಂದುವರೆಸಿರುವ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ ಅವರ ಮದುವೆಯ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಮದುವೆಯ ಬಗ್ಗೆ ಸ್ಪಷ್ಟನೆ ನೀಡದ ಈ ಜೋಡಿ, ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ.