- Home
- Entertainment
- TV Talk
- Bigg Boss ಸ್ಕ್ರಿಪ್ಟೆಡ್ಡಾ? ದೊಡ್ಮನೆಯ ಶಾಕಿಂಗ್ ವಿಷ್ಯ ರಿವೀಲ್ ಮಾಡಿದ ಟ್ಯಾಟೂ ಆರ್ಟಿಸ್ಟ್ ಮನೋಜ್ ಕುಮಾರ್
Bigg Boss ಸ್ಕ್ರಿಪ್ಟೆಡ್ಡಾ? ದೊಡ್ಮನೆಯ ಶಾಕಿಂಗ್ ವಿಷ್ಯ ರಿವೀಲ್ ಮಾಡಿದ ಟ್ಯಾಟೂ ಆರ್ಟಿಸ್ಟ್ ಮನೋಜ್ ಕುಮಾರ್
ಬಿಗ್ಬಾಸ್ ಶೋ ಸ್ಕ್ರಿಪ್ಟೆಡ್ ಎಂಬ ಆರೋಪ ಸಾಮಾನ್ಯವಾಗಿದ್ದು, ಈ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ಸ್ಪರ್ಧಿ ರಜತ್ ಅವರಿಗೆ ಟ್ಯಾಟೂ ಹಾಕಲು ಮನೆಗೆ ಹೋಗಿದ್ದ ಕಲಾವಿದ ಮನೋಜ್ ಕುಮಾರ್, ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಸ್ಕ್ರಿಪ್ಟೆಡ್ ಷೋ
ಬಿಗ್ಬಾಸ್ (Bigg Boss) ಎಂದಾಕ್ಷಣ ಇದರಲ್ಲಿ ಎಲ್ಲವೂ ಸ್ಕ್ರಿಪ್ಟೆಡ್ ಎನ್ನುವ ಮಾತು ಎಲ್ಲಾ ಭಾಷೆಗಳ ಷೋನಲ್ಲಿಯೂ ಇದೆ. ಹೀಗೆಯೇ ಮಾತನಾಡಬೇಕು ಎನ್ನುವುದರಿಂದ ಹಿಡಿದು, ಗಲಾಟೆ-ಗದ್ದಲ, ಲವ್ ಹೀಗೆ ಅಲ್ಲಿ ನಡೆಯುವ ಪ್ರತಿಯೊಂದನ್ನೂ ಮೊದಲೇ ಹೇಳಿರುತ್ತಾರೆ ಎಂಬ ಆರೋಪ ಇದ್ದೇ ಇದೆ.
ಬಿಗ್ಬಾಸ್ ಮೇಲೆ ಆರೋಪ
ಇದಾಗಲೇ ಕೆಲವು ಭಾಷೆಗಳ ಸ್ಪರ್ಧಿಗಳು ಇದೊಂದು ರೀತಿಯಲ್ಲಿ ಸ್ಕ್ರಿಪ್ಟೆಡ್ ಎಂಬುದಾಗಿ ಹೇಳಿದ್ದರೆ, ಮತ್ತೆ ಕೆಲವರು ಅದನ್ನು ನಿರಾಕರಿಸಿದ್ದಾರೆ. ಅಲ್ಲಿ ಎಲ್ಲವೂ ತಂತಾನೇಯಾಗಿಯೇ ನಡೆಯುವುದು, ಏನೂ ಮೊದಲೇ ಹೇಳಿಕೊಟ್ಟಿರುವುದಿಲ್ಲ ಎಂದಿದ್ದಾರೆ.
ಕೆಲವರು ಹೇಳೋದು ಬೇರೆ
ಇನ್ನು ಕೆಲವರು, ಅಲ್ಲಿ ಹೀಗೆಯೇ ಮಾಡಿ ಅನ್ನುವುದಿಲ್ಲ, ಬದಲಿಗೆ ಆ ರೀತಿಯ ವಾತಾವರಣವನ್ನು ಸೃಷ್ಟಿ ಮಾಡಲಾಗುತ್ತದೆ. ನೀವು ಗೆಲ್ಲಲೇಬೇಕಾದರೆ, ಗಲಾಟೆ, ಗದ್ದಲ, ಕಿರುಚಾಟ ಎಲ್ಲವೂ ಮಾಡಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡಲಾಗುತ್ತದೆ ಎಂದಿದ್ದಾರೆ.
ಟ್ಯಾಟೂ ಆರ್ಟಿಸ್ಟ್
ಇದೀಗ ಟಾಸ್ಕ್ ಒಂದರಲ್ಲಿ ಬಿಗ್ಬಾಸ್ 12 ಸ್ಪರ್ಧಿ ರಜತ್ ಅವರಿಗೆ ಟ್ಯಾಟೂ ಹಾಕಲು ಹೋಗಿದ್ದ ಟ್ಯಾಟೂ ಆರ್ಟಿಸ್ಟ್ ಮನೋಜ್ ಕುಮಾರ್ ಈ ಬಗ್ಗೆ ಮಾತನಾಡಿದ್ದಾರೆ. ಮನೆಯೊಳಗೆ ಹೋದಾಗ ಕಂಡಿದ್ದೇನು ಎನ್ನುವ ಬಗ್ಗೆ ಅವರು ಬಾಸ್ಟಿವಿಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಷರತ್ತು ಹಾಕಿದ್ರು
ಬಿಗ್ಬಾಸ್ ಮನೆಗೆ ಹೋದಾಗ ನನಗೆ ತುಂಬಾ ಷರತ್ತು ಹಾಕಲಾಗಿತ್ತು. ಯಾರ ಜೊತೆಯೂ ಮಾತನಾಡುವಂತೆ ಇರಲಿಲ್ಲ. ಕಣ್ಣುಗಳನ್ನು ಕಟ್ಟಿ ಒಳಗಡೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ತುಂಬಾ ಸ್ಟ್ರಿಕ್ಟ್ ಇದೆ ಎಂದು ಹೇಳಿದ್ದಾರೆ.
ಎಲ್ಲರ ಎದುರೇ...
ಎಲ್ಲರ ಎದುರೇ ನಾನು ಟ್ಯೂಟೂ ಹಾಕಬೇಕಿತ್ತು. ಕ್ಯಾಮೆರಾ ಎದುರು ಹಾಕುವಾಗ ಸ್ವಲ್ಪ ಭಯ ಆಯ್ತು. ರಜತ್ ಅವರಿಗೆ ಇದಾಗಲೇ ಟ್ಯಾಟೂ ಹಾಕಿಸಿಕೊಂಡು ಗೊತ್ತಿರುವ ಕಾರಣ ನನಗೂ ಈಸಿಯಾಯಿತು. ಅವರು ತುಂಬಾ ಸಹಕರಿಸಿದರು ಎಂದರು.
ಸ್ಕ್ರಿಪ್ಟೆಡ್ಡಾ?
ಉಳಿದ ಸ್ಪರ್ಧಿಗಳು ನನ್ನ ಬಳಿ ಹಲವು ಪ್ರಶ್ನೆ ಕೇಳಿದ್ರು, ಆದರೆ ನಾನು ಮಾತನಾಡುವಂತೆ ಇರಲಿಲ್ಲ ಎಂದಿದ್ದಾರೆ. ಅದೇ ವೇಳೆ ಬಿಗ್ಬಾಸ್ನಲ್ಲಿ ಇರುವಷ್ಟು ಸಮಯ ಅದೊಂದು ಸ್ಕ್ರಿಪ್ಟೆಡ್ ಎಂದು ಅನ್ನಿಸಿತಾ ಕೇಳಿದಾಗ, ಖಂಡಿತ ಇಲ್ಲ. ಹಾಗೇನೂ ಇಲ್ಲ. ಅಲ್ಲಿ ಎಲ್ಲವೂ ಸಹಜವಾಗಿ ತನ್ನಿಂದ ತಾನೇ ನಡೆಯುತ್ತದೆ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

