- Home
- Entertainment
- TV Talk
- ಲವ್ ಅಜ್ಜಿಯ ಮಾಸ್ಟರ್ ಪ್ಲ್ಯಾನ್ನಿಂದ ರೋಚಕ ಟ್ವಿಸ್ಟ್: Amruthadhaare Serial ಯಾವಾಗ ಮುಗಿಯತ್ತೆ?
ಲವ್ ಅಜ್ಜಿಯ ಮಾಸ್ಟರ್ ಪ್ಲ್ಯಾನ್ನಿಂದ ರೋಚಕ ಟ್ವಿಸ್ಟ್: Amruthadhaare Serial ಯಾವಾಗ ಮುಗಿಯತ್ತೆ?
'ಅಮೃತಧಾರೆ' ಧಾರಾವಾಹಿಯಲ್ಲಿ ಲವ್ ಅಜ್ಜಿಯ ಮರುಪ್ರವೇಶವಾಗಿದ್ದು, ದೂರವಾಗಿರುವ ಗೌತಮ್ ಮತ್ತು ಭೂಮಿಕಾರನ್ನು ಒಂದು ಮಾಡಲು ಸಾಯುವ ನಾಟಕವಾಡಿದ್ದಾಳೆ. ಅಜ್ಜಿಯ ಕೊನೆಯಾಸೆಯಂತೆ ಇಬ್ಬರೂ ಆಶ್ರಮಕ್ಕೆ ಬರಲಿದ್ದು, ಈ ಪ್ಲ್ಯಾನ್ ಯಶಸ್ವಿಯಾಗುವುದೇ ಎಂದು ಕಾದುನೋಡಬೇಕಿದೆ.

ಲವ್ ಅಜ್ಜಿ ಎಂಟ್ರಿ
ಅಮೃತಧಾರೆ ಸೀರಿಯಲ್ (Amruthadhaare)ನಲ್ಲಿ ಲವ್ ಅಜ್ಜಿಯ ಎಂಟ್ರಿ ಆಗಿದೆ. ಹಾವು -ಮುಂಗುಸಿಯಂತಿದ್ದ ಗೌತಮ್ ಮತ್ತು ಭೂಮಿಕಾ ನಡುವೆ ಪ್ರೀತಿಯನ್ನು ಚಿಗುರಿಸಿದ್ದ ಇದೇ ಲವ್ ಗುರು ಅಜ್ಜಿ, ಇದೀಗ ಮತ್ತೆ ಇಬ್ಬರನ್ನೂ ಒಂದು ಮಾಡಲು ಮಾಸ್ಟರ್ ಪ್ಲ್ಯಾನ್ ಹಾಕಿದ್ದಾಳೆ.
ದೂರ ದೂರ...
ಅಮೃತಧಾರೆಯಲ್ಲಿ (Amruthadhaare) ಸದ್ಯ ಗೌತಮ್ ಮತ್ತು ಭೂಮಿಕಾರನ್ನು ಒಂದು ಮಾಡಲು ಎಲ್ಲರೂ ಪ್ರಯತ್ನಿಸಿ ಫೇಲ್ ಆದರು. ಶಕುಂತಲಾ ಭಯದಿಂದ ಭೂಮಿಕಾ ಗೌತಮ್ ಜೊತೆ ಬರಲು ರೆಡಿನೇ ಇಲ್ಲ. ಗೌತಮ್ಗೆ ಶಕುಂತಲಾ ಏನು ಮಾಡಿಬಿಟ್ಟಿಯಾಳೋ ಎನ್ನುವ ಭಯ. ಈಗ ಆ ಭಯ ದೂರವಾಗಿದೆ.
ಆಸ್ತಿ ಕಬಳಿಕೆ
ಅದೇ ಇನ್ನೊಂದೆಡೆ, ಅಜ್ಜಿಯ ಎಲ್ಲಾ ಆಸ್ತಿಗಳನ್ನು ಕಬಳಿಸಿ ಜೈದೇವ್ ಆಕೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸಿದ್ದಾನೆ. ಅಜ್ಜಿಯ ಕಷಾಯದಲ್ಲಿ ನಿದ್ದೆ ಮಾತ್ರೆ ಬೆರೆಸಿ, ಹೆಬ್ಬೆರಳು ಅಚ್ಚು ಹಾಕಿಸಿಕೊಂಡು ಆಸ್ತಿ ಲಪಟಾಯಿಸಿದ್ದಾನೆ.
ಆನಂದ್ಗೆ ವಿಷ್ಯ
ಈ ವಿಷ್ಯ ಮಾವ ಲಕ್ಷ್ಮೀಕಾಂತನಿಂದ ಆನಂದ್ಗೆ ಗೊತ್ತಾಗಿದೆ. ಅಜ್ಜಿಯನ್ನು ಹುಡುಕಿ ಭಾಗ್ಯಮ್ಮ ಮತ್ತು ಆನಂದ್ ವೃದ್ಧಾಶ್ರಮಕ್ಕೆ ಹೋಗಿದ್ದಾರೆ. ಅಜ್ಜಿ ಅಂದ್ರೆ ಸುಮ್ಮನೇ ಅಲ್ಲ. ಈ ಮೊದಲೂ ಇವರಿಬ್ಬರನ್ನು ಒಂದು ಮಾಡಿದ್ದು ಇದೇ ಅಜ್ಜಿ. ಈಗಲೂ ಒಂದು ಮಾಡುವ ಪಣ ತೊಟ್ಟಿದ್ದಾಳೆ.
ಸಾಯುವ ನಾಟಕ
ಸಾಯುವ ಹಾಗೆ ನಾಟಕ ಮಾಡಿದ್ದಾಳೆ. ಭೂಮಿಕಾ ಮತ್ತು ಗೌತಮ್ಗೆ ಕರೆ ಮಾಡಿ ಅಜ್ಜಿಯ ಕೊನೆಯ ಆಸೆ ಈಡೇರಿಸಲು ಬನ್ನಿ ಎಂದು ಹೇಳುವಂತೆ ಆನಂದ್ಗೆ ಹೇಳಿದ್ದಾಳೆ. ಆ ಪ್ಲ್ಯಾನ್ನಂತೆ ಭಾಗ್ಯಮ್ಮ ಭೂಮಿಕಾ ಮನೆಗೆ ಬಂದು ಅಜ್ಜಿ ಈಗಲೋ ಆಗಲೋ ಎನ್ನುತ್ತಿದ್ದಾರೆ. ಬೇಗ ಗೌತಮ್ನನ್ನು ಕರೆದುಕೊಂಡು ಬಾ ಎಂದಿದ್ದಾಳೆ.
ಗೌತಮ್ಗೆ ವಿಷ್ಯ
ಅದೇ ಇನ್ನೊಂದೆಡೆ, ಆನಂದ್ ಗೌತಮ್ಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾನೆ. ಅಜ್ಜಿಯ ಕೊನೆಯ ಆಸೆ ಈಡೇರಿಸಬೇಕು ಎಂದರೆ ಅತ್ತಿಗೆಯನ್ನು ಕರೆದುಕೊಂಡು ಆಶ್ರಮಕ್ಕೆ ಬಾ ಎಂದಿದ್ದಾನೆ. ಮೊದಲಿಗೆ ಇದನ್ನು ಗೌತಮ್ ನಂಬದಿದ್ದರೂ ಕೊನೆಗೆ ನಂಬಿದ್ದಾನೆ.
ಇಬ್ಬರೂ ಬರಲೇಬೇಕು
ಇದೀಗ ಗೌತಮ್ ಮತ್ತು ಭೂಮಿಕಾ ಅಜ್ಜಿಯನ್ನು ನೋಡಲು ಬರಲೇಬೇಕು. ನಾಟಕದಲ್ಲಿ ಎಕ್ಸ್ಪರ್ಟ್ ಅಜ್ಜಿ ಇಬ್ಬರನ್ನೂ ಒಂದು ಮಾಡೋದಂತೂ ಗ್ಯಾರೆಂಟಿ. ಹೀಗಾದರೆ ಅಲ್ಲಿಗೆ ದೊಡ್ಡ ಸ್ಟೋರಿ ಮುಗಿದಂತೆ.
ಜೈದೇವ್ಗೆ ಬುದ್ಧಿ ಕಲಿಸೋದು
ಇನ್ನೇನಿದ್ದರೂ ಜೈದೇವ ಮತ್ತು ಶಕುಂತಲಾಗೆ ಬುದ್ಧಿ ಕಲಿಸೋದು ಮಾತ್ರ ಬಾಕಿ ಇರೋದು. ಅದಕ್ಕೂ ಈ ಅಜ್ಜಿ ಬಳಿ ಪ್ಲ್ಯಾನ್ ಇದ್ದೇ ಇದೆ. ಎಲ್ಲರೂ ಒಂದಾಗಿ ಅದನ್ನೂ ಮಾಡಿದರೆ ಅಲ್ಲಿಗೆ ಸೀರಿಯಲ್ ಅತಿ ಶೀಘ್ರದಲ್ಲಿ ಮುಗಿಯುವ ಸೂಚನೆ ಕಾಣಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

