- Home
- Entertainment
- TV Talk
- BBK 12: ಕಿಚ್ಚ ಸುದೀಪ್ ಮುಂದೆ ರಜತ್ ಬೆಂಡೆತ್ತಿದ ಅಶ್ವಿನಿ ಗೌಡ; ವೀಕ್ಷಕರಿಂದ ಭಾರೀ ಮೆಚ್ಚುಗೆ
BBK 12: ಕಿಚ್ಚ ಸುದೀಪ್ ಮುಂದೆ ರಜತ್ ಬೆಂಡೆತ್ತಿದ ಅಶ್ವಿನಿ ಗೌಡ; ವೀಕ್ಷಕರಿಂದ ಭಾರೀ ಮೆಚ್ಚುಗೆ
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಜತ್, ಅಶ್ವಿನಿ ಗೌಡ ಮಧ್ಯೆ ದೊಡ್ಡ ಜಗಳ ಆಗಿದೆ. ಕಚಡಾ, ಮುದುಕಿ, ಥರ್ಡ್ ರೇಟೆಡ್ ಜೋಕ್ ಎಂದೆಲ್ಲ ಒಂದಿಷ್ಟು ಮಾತುಗಳು ಕೇಳಿ ಬಂದಿತ್ತು. ಈಗ ದೊಡ್ಮನೆಯಲ್ಲಿ ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ಚರ್ಚೆ ಆಗಿದೆ.

ವಾದ-ವಿವಾದ ಶುರುವಾಗಿದ್ದೆಲ್ಲಿ?
ಸೂರಜ್ ಹಾಗೂ ರಾಶಿಕಾ ಶೆಟ್ಟಿ ನಡುವೆ ಮನಸ್ತಾಪ ಬಂದಿತ್ತು. ಇದರ ಮಧ್ಯೆ ಜಗಳ ಬರಬಾರದು ಎಂದು ಅಶ್ವಿನಿ ಗೌಡ ಮಾತನಾಡಲು ಹೋದರು. ಇದನ್ನು ರಜತ್ ಅವರು ತಡೆಯಲು ನೋಡಿದರು. ಸೂರಜ್-ರಾಶಿಕಾ ಅವರೇ ಮನಸ್ತಾಪ ಬಗೆಹರಿಸಿಕೊಳ್ಳಲಿ, ಬೇರೆಯುವರು ಬೇಡ ಎನ್ನೋದು ರಜತ್ ಉದ್ದೇಶವಾಗಿತ್ತು. ಆದರೆ ಅಶ್ವಿನಿ ಮಧ್ಯೆ ಬಂದರು. ಇದನ್ನೇ ಅವರು ಸುದೀಪ್ ಬಳಿ ಹೇಳಿದರು. ಆಗ ಅಶ್ವಿನಿ ಗೌಡ ಮಾತನಾಡಿದ್ದಾರೆ.
ಸ್ಟುಪಿಡ್ ಆಗಿ ಮಾತಾಡ್ತಿದ್ದಾರೆ
“ರಜತ್ ಅವರು ಯಾಕೆ ಇಷ್ಟೊಂದು ಸ್ಟುಪಿಡ್ ಆಗಿ ಮಾತಾಡ್ತಿದ್ದಾರೆ ಅರ್ಥವೇ ಆಗ್ತಿಲ್ಲ. ರಾಶಿಕಾ-ಜಗಳದಲ್ಲಿ ನನ್ನ ಪಾತ್ರ ಇಲ್ಲ, ಕಾರಣವೂ ಗೊತ್ತಿಲ್ಲ. ನನ್ನ ಟೀಂನಿಂದ ಸೂರಜ್ ಆಡುತ್ತಾರೆ, ಉಸ್ತುವಾರಿ ಸರಿಯಾಗಿ ಕೆಲಸ ಮಾಡಿಲ್ಲ. ನನ್ನ ಟೀಂನಿಂದ ಆಡಿದ ಸೂರಜ್ ಸೋಲುತ್ತಾರೆ ಎಂದು ನಾನು ಮಾತನಾಡಿದೆ” ಎಂದು ಹೇಳಿದ್ದಾರೆ.
ರಜತ್‌ರಿಂದ ಇದೆಲ್ಲ ನಡೆಯುತ್ತಿದೆ
“ಕಿವಿ ಊದೋದು, ಪಿತೂರಿ ಮಾಡೋದು ಎಲ್ಲವೂ ಇವರು ಬಂದಮೇಲೆ ನಡೆಯುತ್ತಿದೆ. ಇನ್ಮುಂದೆ ನನ್ನ ತಂಟೆಗೆ ಬರಬಾರದು. ನಾನು ಆ ರಾತ್ರಿಯೇ ಆ ಟಾಸ್ಕ್ ವಿಚಾರ ಬಿಟ್ಟೆ. ರಾಶಿಕಾ ಕ್ಯಾಪ್ಟನ್ ಆಗಿರೋದು ಖುಷಿಯಾಗಿದೆ, ಆದರೆ ಉಸ್ತುವಾರಿ ಮಾಡಿದ್ದು ಸರಿ ಅನಿಸಲಿಲ್ಲ” ಎಂದು ಹೇಳಿದ್ದಾರೆ.
ಮುದುಕಿಯನ್ನು ಹೊಡಿತೀನಿ ಅಂತಾರೆ
ಎಲ್ಲಿಂದ ಅಶ್ವಿನಿ ವಿಚಾರ ಬರ್ತಿದೆ ಎನ್ನೋದು ಗೊತ್ತಾಗ್ತಿಲ್ಲ. ಅವರ ತಾಯಿ ವಯಸ್ಸೇನು? ಮುದುಕಿಯನ್ನು ಹೊಡಿತೀನಿ ಅಂತಾರೆ. ನನ್ನ ವಯಸ್ಸೇನು? ಅವರ ವಯಸ್ಸೇನು? ರಜತ್ ಅವರು ನನ್ನ ಹಿಟ್ ಲಿಸ್ಟ್‌ನಲ್ಲೇ ಇಲ್ಲ. ಇವರ ಮನೆಯಲ್ಲಿ ಅಕ್ಕ-ತಂಗಿ ಇರುತ್ತಾರೆ ಅಲ್ವಾ? ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ಈ ಥರ ಕಳಪೆ ಯಾರೂ ಇಲ್ಲ
“ಹೆಣ್ಣು ಮಕ್ಕಳ ಬಗ್ಗೆ ರಜತ್ ಅವರು ನಡೆದುಕೊಳ್ಳುವ ರೀತಿ ಸರಿ ಇಲ್ಲ. ರಜತ್ ಅವರಂತಹ ಕಳಪೆ ಈ ಮನೆಯಲ್ಲಿ ಯಾರೂ ಕೂಡ ಇಲ್ಲ. ಇವರನ್ನು ಈ ಮನೆಗೆ ಸ್ಪರ್ಧಿ ಎಂದು ಕಳುಹಿಸಿದ್ದಾರೋ ಅಥವಾ ಬೇರೆ ಯಾವುದೋ ಎಲಿಮೆಂಟ್ ಎನ್ನೋದು ನನಗೆ ಗೊತ್ತಾಗಿಲ್ಲ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ಬುದ್ಧಿ ಹೇಳಿದ್ರು
ಆಮೇಲೆ ಕಿಚ್ಚ ಸುದೀಪ್ ಅವರು, “ನೀವು ನನ್ನ ಮುಂದೆ ರಜತ್‌ಗೆ ಸ್ಟುಪ್ಪಿಡ್ ಎಂದು ಕರೆದಿರಿ. ಇದು ಸರಿ ಅಲ್ಲ. ಇಡೀ ವಾರ ನೀವು ಏನೂ ಬೇಕಿದ್ರೂ ಜಗಳ ಆಡ್ತೀರಿ. ನನ್ನ ಮುಂದೆ ಈ ಮಾತು ಬೇಡ” ಎಂದು ಬುದ್ಧಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

