- Home
- Entertainment
- TV Talk
- ನಾನು ಹೋಗ್ತಿದೀನಿ, ಇಲ್ಲಿಗೆ ಮತ್ತೆ ಬರೋಕಾಗಲ್ಲ-Bigg Boss ಶೋನಿಂದ ರಕ್ಷಿತಾ ಶೆಟ್ಟಿ, ಧ್ರುವಂತ್ ಔಟ್!; ಅಧಿಕೃತ
ನಾನು ಹೋಗ್ತಿದೀನಿ, ಇಲ್ಲಿಗೆ ಮತ್ತೆ ಬರೋಕಾಗಲ್ಲ-Bigg Boss ಶೋನಿಂದ ರಕ್ಷಿತಾ ಶೆಟ್ಟಿ, ಧ್ರುವಂತ್ ಔಟ್!; ಅಧಿಕೃತ
Bigg Boss Kannada Season 12 Elimination: ಈ ವಾರ ಡಬಲ್ ಎಲಿಮಿನೇಶನ್ ಇದೆ. ಈ ವಾರ ಒಬ್ಬರಲ್ಲ, ಇಬ್ಬರು ಮನೆಯಿಂದ ಹೊರಗಡೆ ಹೋಗ್ತಾರೆ ಎಂದು ಕಿಚ್ಚ ಸುದೀಪ್ ಅವರು ಘೋಷಣೆ ಮಾಡಿದ್ದಾರೆ. ಸಂಡೇ ವಿಥ್ ಸುದೀಪ್ ಎಪಿಸೋಡ್‌ನಲ್ಲಿ ಡಬಲ್ ಎಲಿಮಿನೇಶನ್ ಆಗಿದೆ ಎನ್ನಲಾಗಿದೆ.

ಧ್ರುವಂತ್, ರಕ್ಷಿತಾ ಶೆಟ್ಟಿ ಎಲಿಮಿನೇಟ್
ಔಟ್ ಯಾರಾಗ್ತಾರೆ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಧ್ರುವಂತ್, ರಕ್ಷಿತಾ ಶೆಟ್ಟಿ ಅವರು ಎಲಿಮಿನೇಟ್ ಆಗಿದ್ದಾರೆ ಎಂದಿದ್ದಾರೆ. ಎಲ್ಲರೂ ಇವರಿಬ್ಬರ ಹೆಸರು ಕೇಳಿ ಶಾಕ್ ಆಗಿದ್ದಾರೆ. ನಿತ್ಯವೂ ಸೌಂಡ್ ಮಾಡುತ್ತಿದ್ದ ಧ್ರುವಂತ್, ರಕ್ಷಿತಾ ಹೊರಬಂದಿದ್ದು ಮನೆಯವರಿಗೆ ಶಾಕ್ ಆಗಿದೆ.
ಮತ್ತೊಮ್ಮೆ ಬರೋಕೆ ಆಗೋದಿಲ್ಲ
“ನಾನು ನಿಜಕ್ಕೂ ಎಲಿಮಿನೇಟ್ ಆಗಿದ್ದೀನಾ? ನಾನು ಸತ್ಯವಾಗಿಯೂ ಹೋಗುತ್ತಿದ್ದೀನಿ, ಮತ್ತೊಮ್ಮೆ ಬರೋಕೆ ಆಗೋದಿಲ್ಲ, ಸಿಗ್ತೀನಿ” ಎಂದು ರಕ್ಷಿತಾ ಶೆಟ್ಟಿ ಹೇಳಿ ಹೊರಗಡೆ ಬಂದಿದ್ದಾರೆ. ಇವರು ಹೊರಗಡೆ ಬರುತ್ತಿದ್ದಂತೆ ಮನೆಯಲ್ಲಿದ್ದವರು ಅತ್ತಿದ್ದಾರೆ.
ಮಾಳು, ಅಶ್ವಿನಿ ಗೌಡ ಕಣ್ಣೀರು
ಮಾಳು ನಿಪನಾಳ ಅವರು ರಕ್ಷಿತಾಗೆ ಕ್ಲೋಸ್ ಆಗಿದ್ದರು. ಹೀಗಾಗಿ ಮಾಳು ಅಂತೂ ಸಿಕ್ಕಾಪಟ್ಟೆ ಅತ್ತಿದ್ದಾರೆ. ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಸಿಕ್ಕಾಪಟ್ಟೆ ಜಗಳ ಆಗಿದೆ, ಬರುಬರುತ್ತ ಅವರು ಕೂಡ ರಕ್ಷಿತಾ ಜೊತೆ ಹೆಚ್ಚಿನ ಸಮಯ ಕಳೆಯಲು ಆರಂಭಿಸಿದರು. ಈಗ ಇವರು ಅತ್ತಿದ್ದಾರೆ.
ಸೀಕ್ರೆಟ್ ರೂಮ್‌ಗೆ ಹೋದ್ರಾ?
ಈಗ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರು ಹೊರಗಡೆ ಹೋಗಿಲ್ಲ. ಇವರನ್ನು ಸೀಕ್ರೆಟ್ ರೂಮ್‌ಗೆ ಕಳಿಸಲಾಗಿದೆ ಎಂದು ಹೇಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಶನಿವಾರ ಸಂಜೆಯಿಂದಲೇ ಚರ್ಚೆ ಆಗಿದೆ. ಇವರು ಸೀಕ್ರೆಟ್ ರೂಮ್‌ಗೆ ಹೋಗಿರೋದನ್ನು ಬಿಗ್ ಬಾಸ್ ಯಾವಾಗ ರಿವೀಲ್ ಮಾಡಲಿದೆ ಎಂದು ಕಾದು ನೋಡಬೇಕಿದೆ.
ರಕ್ಷಿತಾ, ಧ್ರುವಂತ್ ಇಷ್ಟು ಬೇಗ ಹೊರಬರುವವರಲ್ಲ
ಮುಗ್ಧತೆಯಿಂದ ವೀಕ್ಷಕರ ಮನಸ್ಸನ್ನು ಕದ್ದಿದ್ದಲ್ಲದೆ, ಕನ್ನಡವನ್ನು ಕಲಿತು ಮಾತನಾಡುತ್ತಿದ್ದ ರಕ್ಷಿತಾ ಯಾವಾಗಲೂ ಯಾರ ಮಾತನ್ನು ಕೇಳಿಸಿಕೊಳ್ಳಲ್ಲ, ಕಾರಣ ಕೇಳಿದರೆ ಹೇಳೋದಿಕ್ಕೆ ಬರೋದಿಲ್ಲ ಎಂಬ ಆರೋಪ ಇತ್ತು. ಅಂದಹಾಗೆ ಧ್ರುವಂತ್ ಅವರು ಅವರಿಂದ ಇವರಿಗೆ, ಇವರಿಂದ ಅವರಿಗೆ ಹೇಳುವ ಮನಸ್ಥಿತಿ ಎಂಬ ಆರೋಪ ಇತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

