ಗಿಲ್ಲಿನಟ 90% ಸುಳ್ಳು 10% ಮಾತ್ರ ಸತ್ಯ; ಕಾವ್ಯಾ ನೋಟಕ್ಕೆ ನಾಚಿ ನೀರಾದ ಮಂಡ್ಯದ ಹೈದ!
ಬಿಗ್ ಬಾಸ್ ಮನೆಯಲ್ಲಿರುವ ಕ್ಯೂಟ್ ಜೋಡಿಯ ಪೈಕಿ ಗಿಲ್ಲಿ ಹೇಳಿದ ಒಂದು ಮಾತಿಗೆ ಕಾವ್ಯಾ ತುಂಬಾ ಆಶ್ಚರ್ಯದಿಂದ ನೋಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಆದ್ರೆ, ಶೇ.90 ಸುಳ್ಳು, ಶೇ.10 ನಿಜ ಹೇಳಿದ ಗಿಲ್ಲಿ ಮಾತ್ರ ನಾಚಿ ನೀರಾಗಿದ್ದಾನೆ.

ಕಾವ್ಯಾ ನೋಟಕ್ಕೆ ಕರಗಿದ ಗಿಲ್ಲಿನಟ
ಬಿಗ್ ಬಾಸ್ ಮನೆಯಲ್ಲಿರುವ ಕ್ಯೂಟ್ ಜೋಡಿಯ ಪೈಕಿ ಗಿಲ್ಲಿ ಹೇಳಿದ ಒಂದು ಮಾತಿಗೆ ಕಾವ್ಯಾ ತುಂಬಾ ಆಶ್ಚರ್ಯದಿಂದ ನೋಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವೇಳೆ ಗಿಲ್ಲಿ ನಟ ಹೇಳಿದ್ದಾದರೂ ಏನು? ಆ ಮಾತಿಗೆ ಕಾವ್ಯಾ ಆಶ್ಚರ್ಯಗೊಂಡಿದ್ದಲ್ಲದೇ, ಗಿಲ್ಲಿ ಕೂಡ ನಾಚಿ ನೀರಾಗಿದ್ದಾನೆ.
ಗಿಲ್ಲಿ ಕಾವ್ಯಾ ಜೋಡಿಗೆ ಬಹುಪರಾಕ್
ಬಿಗ್ ಬಾಸ್ ಮನೆಯಲ್ಲಿ ಮಂಡ್ಯದ ಜೋಡಿಗಳಾದ ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಅವರ ಆಟವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಒಮ್ಮೊಮ್ಮೆ ಸ್ನೇಹಿತರಾಗಿ, ಒಮ್ಮೊಮ್ಮೆ ಪ್ರೇಮಿಗಳನ್ನೂ ಮೀರಿಸುವಂತೆ ಆತ್ಮೀಯರಾಗಿ, ಮತ್ತೊಮ್ಮೆ ಬಿಗ್ ಬಾಸ್ ಸ್ಪರ್ಧಿಗಳಾಗಿ, ಮಗದೊಮ್ಮೆ ಗಿಲ್ಲಿಗೆ ಗೋಳೊಯ್ದುಳ್ಳುವ ವೇಳೆ ಅಣ್ಣ-ತಂಗಿಯಾಗಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಿರುವ ಗಿಲ್ಲಿ ನಟ ಹಾಗೂ ಕಾವ್ಯಾಳ ಆಟವೇ ನಾಡಿನ ಜನತೆಯ ಮನಸ್ಸನ್ನು ಮನಸೂರೆಗೊಂಡಿದೆ.
ಕಾವ್ಯಾ ಕಣ್ಣಲ್ಲಿ ನೀರು ಸೀಕ್ರೆಟ್ ಟಾಸ್ಕ್
ಈ ದೃಶ್ಯ ಬಿಗ್ ಬಾಸ್ ಸೀಸನ್ 12ರ 10ನೇ ವಾರದ ಕಿಚ್ಚನ ಪಂಚಾಯಿತಿಯಲ್ಲಿ ನಡೆದಿದೆ. ಕಳೆದ ವಾರದಲ್ಲಿ ಬಿಗ್ ಬಾಸ್ ಮನೆಯನ್ನು ಆಳ್ವಿಕೆ ಮಾಡಿದ್ದ ವಿಲನ್, ಗಿಲ್ಲಿ ನಟನಿಗೆ ಕವ್ಯಾಳನ್ನು ಅಳಿಸುವಂತೆ (ಕಾವ್ಯಾಳ ಕಣ್ಣಲ್ಲಿ ನೀರು ಬರಿಸಬೇಕು) ಸೀಕ್ರೇಟ್ ಟಾಸ್ಕ್ ನೀಡಿದ್ದರು. ಈ ವೇಳೆ ಗಿಲ್ಲಿ ನಟ ತನಗೆ ಈ ಟಾಸ್ಕ್ ಬೇಡವೇ ಬೇಡ ಎಂಬ ಮನಸ್ಥಿತಿಯನ್ನು ಹೊಂದಿದ್ದರು. ಈ ಬಗ್ಗೆ ವಿಲನ್ ಮುಂದೆ ಚರ್ಚೆ ಮಾಡುವುದಕ್ಕೂ ಅವಕಾಶ ಕೊಡದೇ ಕೆಲವೇ ಸೆಕೆಂಡುಗಳ ಅವಧಿಯಲ್ಲಿ ಈ ಟಾಸ್ಕ್ ಅನ್ನು ಗಿಲ್ಲಿಗೆ ಒಪ್ಪಿಸಲಾಯಿತು.
ಕಿಚ್ಚನ ಪಂಚಾಯಿತಿ ವೇಳೆ ವಿಡಿಯೋ ತೋರಿಸಲು ಮನವಿ
ಸಮಯದ ಕೈಗೊಂಬೆಯಾದ ಗಿಲ್ಲಿ ನಟ ಕೊನೆಯ ಘಳಿಗೆಯಲ್ಲಿ ಕಾವ್ಯಾಳನ್ನು ಅಳಿಸುವುದಾಗಿ ಒಪ್ಪಿಕೊಳ್ಳುತ್ತಾರೆ. ಆದರೆ, ಗಿಲ್ಲಿಗೆ ಕೊಟ್ಟಿದ್ದ ಸೀಕ್ರೆಟ್ ಟಾಸ್ಕ್ ವೇಳೆ ಕಾವ್ಯಾಳನ್ನು ಅಳಿಸುವುದಕ್ಕೆ ಎಷ್ಟು ಹಿಂದೇಟು ಹಾಕಿದ್ದಾನೆ ಎಂಬ ದೃಶ್ಯವು ಮನೆಯೊಳಗೆ ಇದ್ದ ಇತರೆ ಸ್ಪರ್ಧಿಗಳಿಗೆ ಗೊತ್ತಾಗಿಲ್ಲ. ಹೀಗಾಗಿ, ಕಿಚ್ಚಿನ ಪಂಚಾಯಿತಿ ವೇಳೆ ಕಾವ್ಯಾಳಿಗೆ ಅಳಿಸುವುದಕ್ಕೆ ಗಿಲ್ಲಿ ಒಪ್ಪಿಕೊಂಡ ಕ್ಷಣ ಹೇಗಿತ್ತು ಎಂಬುದನ್ನು ಕಾವ್ಯಾಳಿಗೂ ತೋರಿಸಬೇಕು ಎಂದು ಬಿಗ್ ಬಾಸ್ ಕಾರ್ಯಕ್ರಮದ ವೀಕ್ಷಕರು ಮನವಿ ಮಾಡಿದ್ದರು.
ಪಂಚಾಯಿತಿಯಲ್ಲಿ ಬಯಲಾದ ರೊಮ್ಯಾಂಟಿಕ್ ಸುಳ್ಳು
ಈ ಬೆನ್ನಲ್ಲಿಯೇ ಕಿಚ್ಚ ಸುದೀಪ್ ಅವರು ಗಿಲ್ಲಿಗೆ ಸೀಕ್ರೆಟ್ ಟಾಸ್ಕ್‌ನಲ್ಲಿ ಕಾವ್ಯಾಳಿಗೆ ಅಳಿಸುವುದಕ್ಕೆ ವಿಲನ್ ಹೇಳಿದ್ದಕ್ಕೆ ಪ್ರತಿಕ್ರಿಯೆ ಹೇಗಿತ್ತು ಎಂದು ಕಿಚ್ಚ ಸುದೀಪ್ ಕೇಳುತ್ತಾರೆ. ಆಗ ಗಿಲ್ಲಿ ನಟ, ವಿಲನ್ ಅವರು ಕಾವ್ಯಾಳನ್ನು ಅಳಿಸುವಂತೆ ಹೇಳಿದಾಗ ಆಗುವುದೇ ಇಲ್ಲವೆಂದು ನಿರಂತರ 15 ನಿಮಿಷಗಳ ಕಾಲ ವಾದ, ವಾಗ್ವಾದ ನಡೆಯಿತು. ಕೊನೆಗೆ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು ಎಂದು ಸುದೀಪ್ ಮುಂದೆ ಹೇಳುತ್ತಾರೆ.
ಗಿಲ್ಲಿನಟ 90% ಸುಳ್ಳು 10% ಮಾತ್ರ ಸತ್ಯ
ಆದರೆ, ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ನಡೆದ ಘಟನೆಯ ಬಗ್ಗೆ ಸುಳ್ಳು ಹೇಳಿದ ಗಿಲ್ಲಿಗೆ ಸುದೀಪ್ ಅವರು, ನೀವು ಹೇಳಿದ ಕಥೆಯಲ್ಲಿ ಎಷ್ಟು ನಿಜ, ಎಷ್ಟು ಸುಳ್ಳು ಎಂದು ಕೇಳುತ್ತಾರೆ. ಆಗ ಗಿಲ್ಲಿನಟ 90% ಸುಳ್ಳು 10% ಮಾತ್ರ ಸತ್ಯ ಎಂದು ಹೇಳುತ್ತಾರೆ. ಆಗ ಕಾವ್ಯಾ ಗಿಲ್ಲಿಯ ಮಾತನ್ನು ಕೇಳಿ ತುಂಬಾ ಆಶ್ಚರ್ಯದಿಂದ ಗಿಲ್ಲಿ ಮುಖವನ್ನು ನೋಡುತ್ತಾರೆ. ಈ ಕ್ಷಣದಲ್ಲಿ ಗಿಲ್ಲಿಯೂ ಕೂಡ ರೊಮ್ಯಾಂಟಿಕ್ ಆಗಿ ತಲೆ ತಗ್ಗಿಸಿ ಸಣ್ಣದೊಂದು ತಪ್ಪು ಮಾಡಿದವರಂತೆ ನಗಾಡುತ್ತಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

