Published : May 22, 2026, 07:36 AM ISTUpdated : May 22, 2026, 09:32 PM IST

India News Live: ಮದುವೆ ನನ್ನ ಜೀವನದ ದೊಡ್ಡ ತಪ್ಪು ಅಂತ ಅಮಿತಾಭ್ ಹೇಳಬಹುದು - ಜಯಾ ಬಚ್ಚನ್ ಹೇಳಿಕೆ ವೈರಲ್!

ಸಾರಾಂಶ

ನವದೆಹಲಿ (ಮೇ.22): ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸೂರ್ಯಕಾಂತ್ ಅವರ ಹೇಳಿಕೆ ಹಾಗೂ ದೇಶದ ರಾಜಕೀಯ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಹಾಗೂ ರಾಜಕೀಯ ಪಕ್ಷಗಳನ್ನು ಟೀಕಿಸುವ ಉದ್ದೇಶದಿಂದ ಹುಟ್ಟುಹಾಕಲಾದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಸಾಮಾಜಿಕ ಮಾಧ್ಯಮದಲ್ಲಿ ಸುನಾಮಿ ಎಬ್ಬಿಸಿದೆ. ಇದಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ದೇಶದ ಜೆನ್‌ಝೀಗಳು (ಯುವಕರು) ಇದರ ಬೆನ್ನ ಹಿಂದೆ ನಿಂತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

09:32 PM (IST) May 22

ಮದುವೆ ನನ್ನ ಜೀವನದ ದೊಡ್ಡ ತಪ್ಪು ಅಂತ ಅಮಿತಾಭ್ ಹೇಳಬಹುದು - ಜಯಾ ಬಚ್ಚನ್ ಹೇಳಿಕೆ ವೈರಲ್!

ಮದುವೆ, ಆಧುನಿಕ ಸಂಬಂಧಗಳು ಮತ್ತು ಪ್ರೀತಿಯ ಬಗ್ಗೆ ಜಯಾ ಬಚ್ಚನ್ ಮುಕ್ತವಾಗಿ ಮಾತನಾಡಿದ್ದಾರೆ. ಮೊಮ್ಮಗಳು ನವ್ಯಾ ನವೇಲಿ ನಂದಾ ಮದುವೆಗೆ ಅವಸರ ಮಾಡುವುದು ತಮಗೆ ಯಾಕೆ ಇಷ್ಟವಿಲ್ಲ ಎಂಬುದನ್ನೂ ಅವರು ಬಹಿರಂಗಪಡಿಸಿದ್ದಾರೆ.

Read Full Story

09:05 PM (IST) May 22

PM Modi - ಮೋದಿ 'ಇಂಧನ ಮಂತ್ರ'ಕ್ಕೆ ಕಮಲ್ ಹಾಸನ್ ಸಾಥ್.. ರಾಜಕೀಯ ಮರೆತು ರಾಷ್ಟ್ರಭಕ್ತಿ ಮೆರೆದ ಕಮಲ್ ಹಾಸನ್!

ಭಾರತ ಮಾತ್ರವಲ್ಲದೆ ವಿಶ್ವದ 60ಕ್ಕೂ ಹೆಚ್ಚು ದೇಶಗಳು ಈಗಾಗಲೇ ಇಂಧನ ಉಳಿತಾಯದ ಕಠಿಣ ನಿಯಮಗಳನ್ನು ಜಾರಿಗೆ ತಂದಿವೆ. ಸಿಂಗಾಪುರದ ಉದಾಹರಣೆ ನೀಡಿದ ಕಮಲ್, ಮುಂಬರುವ ಕಠಿಣ ದಿನಗಳನ್ನು ಎದುರಿಸಲು ನಾವೆಲ್ಲರೂ ಒಗ್ಗಟ್ಟಾಗಬೇಕಿದೆ ಎಂದು ಎಚ್ಚರಿಸಿದ್ದಾರೆ.

Read Full Story

08:26 PM (IST) May 22

ಭೋಜಶಾಲ ಮಂದಿರದಲ್ಲಿ 2003ರ ಬಳಿಕ ಇದೇ ಮೊದಲ ಬಾರಿಗೆ ಶುಕ್ರವಾರದ ಮಹಾ ಆರತಿ

ಭೋಜಶಾಲ ವಿವಾದಿತ ಸಂಕೀರ್ಣ ಕುರಿತು ಹೈಕೋರ್ಟ್ ತೀರ್ಪು ನೀಡಿದ ಬಳಿಕ ಮೊದಲ ಬಾರಿಗೆ ಶುಕ್ರವಾರ ಹಿಂದೂಗಳು ಮಹಾ ಆರತಿ ಪೂಜೆ ಮಾಡಿದ್ದಾರೆ. ಇದೇ ವೇಳೆ ಮುಸ್ಲಿಮರು ಕಪ್ಪು ಪಟ್ಟಿ ಧರಿಸಿ ತಮ್ಮ ಮನೆ ಮನೆಗಳಲ್ಲಿ ನಮಾಜ್ ಮಾಡಿ ಪ್ರತಿಭಟಿಸಿದ್ದಾರೆ

Read Full Story

08:14 PM (IST) May 22

'ನಂಬಿದ್ದೇ ತಪ್ಪಾಯ್ತು, ಕೊಟ್ಟ ಪ್ರೀತಿ ವಾಪಸ್ ಸಿಗಲಿಲ್ಲ' - ಕಣ್ಣೀರಿಟ್ಟಿದ್ಯಾಕೆ ನಟಿ ಅಪ್ಸರಾ!

ನಾನು ಎಲ್ಲರಿಗೂ ಪ್ರೀತಿ, ಕಾಳಜಿ ಕೊಟ್ಟೆ, ಆದರೆ ನನಗೆ ಪ್ರತಿಯಾಗಿ ಏನೂ ಸಿಗಲಿಲ್ಲ ಎಂದು ನಟಿ ಅಪ್ಸರಾ ರತ್ನಾಕರನ್ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ವೈಯಕ್ತಿಕ ಜೀವನದ ನೋವನ್ನು ಅವರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

Read Full Story

08:04 PM (IST) May 22

ಶಾರುಖ್​ ಖಾನ್​ರ King Movie ಲೀಕ್​ - ಆನ್​ಲೈನ್​ನಲ್ಲಿ ಭರ್ಜರಿ ಡಿಮಾಂಡ್​- ಭದ್ರತೆ ಹೆಚ್ಚಳ

ಶಾರುಖ್ ಖಾನ್ ಅಭಿನಯದ 'ಕಿಂಗ್' ಚಿತ್ರದ ಚಿತ್ರೀಕರಣದ ದೃಶ್ಯಗಳು ಸೋರಿಕೆಯಾಗಿವೆ. ಈ ಲೀಕ್ ಆದ ದೃಶ್ಯಗಳು ಮತ್ತು ಫೋಟೋಗಳನ್ನು ಬಳಸಿ, ಕೃತಕ ಬುದ್ಧಿಮತ್ತೆ (ಎಐ) ಮೂಲಕ ಸಿನಿಮಾದ ಮಿನಿ ಆವೃತ್ತಿಯನ್ನೇ ರಚಿಸಿ ಆನ್‌ಲೈನ್‌ನಲ್ಲಿ ಹರಿಬಿಡಲಾಗಿದ್ದು, ಇದು ಚಿತ್ರತಂಡಕ್ಕೆ ದೊಡ್ಡ ಸಂಕಷ್ಟ ತಂದೊಡ್ಡಿದೆ.
Read Full Story

07:18 PM (IST) May 22

ನಿಲ್ಲದ 'ಧುರಂಧರ್‌ 2' ಆರ್ಭಟ, ಚಿತ್ರರಂಗದಲ್ಲಿ ಹೊಸ ದಾಖಲೆ; OTTಗೆ ಬರೋದು ಯಾವಾಗ ಗೊತ್ತಾ?

ರಣವೀರ್ ಸಿಂಗ್ ಅವರ ಪವರ್‌ಫುಲ್ ಆಕ್ಟಿಂಗ್ ಮತ್ತು ಆದಿತ್ಯ ಧರ್ ಅವರ ಚಾಣಾಕ್ಷ ನಿರ್ದೇಶನ 'ಧುರಂಧರ್' ಚಿತ್ರವನ್ನು ಕೇವಲ ಸಿನಿಮಾ ಆಗಿ ಉಳಿಸದೆ, ಒಂದು ಎಮೋಷನ್ ಆಗಿ ಬದಲಿಸಿದೆ. 65 ದಿನಗಳ ಈ ಓಟ ಬಾಕ್ಸ್ ಆಫೀಸ್ ಇತಿಹಾಸ ನಿರ್ಮಿಸಿದೆ. OTTಗೆ ಬರೋದು ಆ ಡೇಟ್‌ಗೆ.. ಸ್ಟೋರಿ ನೋಡಿ..

Read Full Story

07:14 PM (IST) May 22

ವೈರಲ್ ಆಯ್ತು ಸಂಜಯ್ ದತ್ ಮಗಳ ಸಂದರ್ಶನ - ಕಾರಣ ಕೇಳಿದ್ರೆ ಕಣ್ಣೀರು ಬರೋದಂತು ಗ್ಯಾರಂಟಿ!

ಸಂಜಯ್ ದತ್ ಅವರ ಮಗಳು ತ್ರಿಶಾಲಾ ದತ್ ಇತ್ತೀಚೆಗೆ ತಮ್ಮ ಬಾಲ್ಯದ ನೋವಿನ ಕ್ಷಣಗಳನ್ನು ಹಂಚಿಕೊಂಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ಭಾವುಕರನ್ನಾಗಿಸಿದೆ. ಒಂದು ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ತ್ರಿಶಾಲಾ..

Read Full Story

07:12 PM (IST) May 22

ಸಿಎಸ್‌ಕೆ ಹೊರಬಿದ್ದ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಮಾಜಿ ಪ್ಲೇಯರ್ ವಿಜಯ್ ಶಂಕರ್

ಐಪಿಎಲ್ ಹಾಗೂ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿದ ಆಲ್‌ರೌಂಡರ್ ವಿಜಯ್ ಶಂಕರ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ವಿಜಯ್, ಐಪಿಎಲ್ ಹಾಗೂ ದೇಸಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

Read Full Story

06:38 PM (IST) May 22

'ನಾನು ಇನ್ನೂ ವರ್ಜಿನ್' ಎಂದ 32ರ ಬಿಗ್ ಬಾಸ್ OTT ವಿನ್ನರ್ - ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

‘ಬಿಗ್ ಬಾಸ್ OTT 3’ ಗೆದ್ದ ನಂತರ ಸನಾ ಮಕ್ಬೂಲ್ ನಿರಂತರವಾಗಿ ಚರ್ಚೆಯಲ್ಲಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಇರಲಿ ಅಥವಾ ವೈಯಕ್ತಿಕ ಜೀವನದ ಹೇಳಿಕೆಗಳಿಂದ ಇರಲಿ, ಈ ನಟಿ ಸದಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿರುತ್ತಾರೆ.

Read Full Story

06:17 PM (IST) May 22

ಮೆಲೋಡಿ ಟ್ರೆಂಡ್‌ಗೆ ಸೇರಿದ ಸೋನಾಕ್ಷಿ ಸಿನ್ಹಾ-ಜಹೀರ್ - ವೈರಲ್ ಆಯ್ತು ಫನ್ನಿ ವಿಡಿಯೋ!

ಬಾಲಿವುಡ್‌ನ ಜೋಡಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮತ್ತೊಂದು ತಮಾಷೆಯ ವಿಡಿಯೋದೊಂದಿಗೆ ಬಂದಿದ್ದಾರೆ. ಈ ಬಾರಿ, ಸದ್ಯ ವೈರಲ್ ಆಗಿರುವ 'ಮೆಲೋಡಿ' ಟ್ರೆಂಡ್‌ಗೆ ಇವರಿಬ್ಬರೂ ಸೇರಿಕೊಂಡಿದ್ದಾರೆ.

Read Full Story

06:03 PM (IST) May 22

ನಾನು ಮದ್ವೆಯಾಗಿದ್ದು ನಿಜ ಎನ್ನುತ್ತಲೇ ಪತಿಯ ಗುಟ್ಟನ್ನೂ ರಿವೀಲ್​ ಮಾಡಿದ Kangana Ranaut

ಸಂಸದೆ ಕಂಗನಾ ರಣಾವತ್ ಮಂಗಳಸೂತ್ರ ಮತ್ತು ಹಸಿರು ಬಳೆ ಧರಿಸಿ ಕಾಣಿಸಿಕೊಂಡಿದ್ದು, ಅವರ ರಹಸ್ಯ ವಿವಾಹದ ಬಗ್ಗೆ ವದಂತಿಗಳನ್ನು ಹುಟ್ಟುಹಾಕಿದೆ. ಆದರೆ, ಇದು ತಮ್ಮ ಮುಂಬರುವ ಸಿನಿಮಾದ ಗೃಹಿಣಿಯ ಪಾತ್ರದ ಗೆಟಪ್ ಎಂದು ಕಂಗನಾ ಸ್ಪಷ್ಟಪಡಿಸಿದ್ದು, ತಾನು ಮದುವೆಯಾದರೆ ತಿಳಿಸಿಯೇ ಆಗುವುದಾಗಿ ಹೇಳಿದ್ದಾರೆ.
Read Full Story

05:47 PM (IST) May 22

ಗರಂ ಮಸಾಲದಿಂದ ಆದ ಎಡವಟ್ಟು; 10 ಲಕ್ಷ ರೂಪಾಯಿ ಪರಿಹಾರ ಪಡೆದ ಯುವಕ; ಅಂಥದ್ದೇನಾಯ್ತು?

Why Indian spices trigger airport drug alarms: ಏರ್‌ಪೋರ್ಟ್‌ನಲ್ಲಿ ಮಾಡಿದ ಎಡವಟ್ಟಿನಿಂದಾಗಿ ಉದ್ಯಮಿಯೊಬ್ಬ 57 ದಿನಗಳ ಕಾಲ ಜೈಲಿನಲ್ಲಿ ಇರುವ ಹಾಗೆ ಆಯ್ತು. ಇದಕ್ಕೆಲ್ಲ ಕಾರಣ ಗರಂ ಮಸಾಲ. ಹಾಗಿದ್ದರೆ ನಿಜಕ್ಕೂ ಏನಾಯ್ತು? ಪರಿಹಾರ ಸಿಕ್ಕಿತು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story

05:38 PM (IST) May 22

Cockroach Janata Party - ಅಮೆರಿಕದ ವಾಸಿಗೆ ಭಾರತದ ಮೇಲೆ ಏಕಿಷ್ಟು ಮೋಹ, ಯಾರೀ ಅಭಿಜೀತ್​? ಡಿಟೇಲ್ಸ್​ ಇಲ್ಲಿದೆ

ಅಭಿಜೀತ್ ದಿಪ್ಕೆ ಸ್ಥಾಪಿಸಿದ ಕಾಕ್ರೋಚ್ ಜನತಾ ಪಾರ್ಟಿ (CJP) ಸೋಷಿಯಲ್ ಮೀಡಿಯಾದಲ್ಲಿ 2 ಕೋಟಿಗೂ ಹೆಚ್ಚು ಫಾಲೋವರ್ಸ್ ಗಳಿಸಿ, ಬಿಜೆಪಿ ವಿರೋಧಿ ನಿಲುವು ತಾಳಿದೆ. ಇದು ಯುವಕರ ನಿರುದ್ಯೋಗದ ಹತಾಶೆಯ ಧ್ವನಿ ಎಂದು ಹೇಳಲಾಗುತ್ತಿದ್ದರೂ, ಭಾರತದಲ್ಲಿ ಅಶಾಂತಿ ಮೂಡಿಸುವ ವಿದೇಶಿ ಪಿತೂರಿಯೇ ಎಂಬ ಅನುಮಾನಗಳೂ ವ್ಯಕ್ತವಾಗಿವೆ.
Read Full Story

05:18 PM (IST) May 22

ಭಾರತದಿಂದ ಪಾಕಿಸ್ತಾನಕ್ಕೂ ಹರಡಿದ ‘Cockroach Janta Party’ ಜ್ವರ; ವಿರೋಧಿಗಳನ್ನೆಲ್ಲ ಒಟ್ಟುಗೂಡಿಸಿದ ಪಕ್ಷ!

ಜಿರಳೆ ಎಂದರೆ ಅಸಹ್ಯ ಎಂದುಕೊಳ್ತೀವಿ. ಆರಂಭದಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಒಂದು ಮೀಮ್ಸ್‌ ಪೇಜ್‌ ಎಂದುಕೊಂಡ ಪೇಜ್‌ವೊಂದು ಸೃಷ್ಟಿ ಆಗಿತ್ತು. Cockroach Janta Party ಆರಂಭ ಆಗಿದ್ದು, ಎಷ್ಟರಮಟ್ಟಿಗೆ ವೈರಲ್‌ ಆಗ್ತಿದೆ ಎಂದು ನೋಡಿದ್ದೀರಿ, ಈಗ ಇದು ಪಾಕಿಸ್ತಾನಕ್ಕೂ ಹರಡಿದೆ. ಹಾಗಾದರೆ ಏನಾಯ್ತು?

 

Read Full Story

05:17 PM (IST) May 22

ಥಿಯೇಟರ್‌ನಲ್ಲಿ ನಟ ಮೋಹನ್‌ಲಾಲ್ ಕಣ್ಣೀರು ಹಾಕಿದ್ದು ಯಾಕೆ? ವಿಡಿಯೋ ವೈರಲ್

ದುಬೈನಲ್ಲಿ ನಡೆದ 'ದೃಶ್ಯಂ 3' ವಿಶೇಷ ಪ್ರದರ್ಶನದಲ್ಲಿ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿದ್ದನ್ನು ನೋಡಿ ಸೂಪರ್‌ಸ್ಟಾರ್ ಮೋಹನ್‌ಲಾಲ್ ಭಾವುಕರಾದರು. ಪ್ರೇಕ್ಷಕರ ಪ್ರೀತಿಗೆ ಕಣ್ಣೀರು ಹಾಕಿದ ನಟನ ವಿಡಿಯೋ ಈಗ ವೈರಲ್ ಆಗಿದೆ.

Read Full Story

05:14 PM (IST) May 22

ಐಪಿಎಲ್ ಟೂರ್ನಿಗೆ ಮತ್ತೊಂದು ತಂಡ ಸೇರ್ಪಡೆ? ಹೊಸ ಟೀಂ ಸುಳಿವು ನೀಡಿದ ಮುಖ್ಯಮಂತ್ರಿ

ಐಪಿಎಲ್ ಟೂರ್ನಿ ಜನಪ್ರಿಯತೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಮತ್ತೊಂದು ತಂಡ ಸೇರ್ಪಡೆ ಕುರಿತು ಮುಖ್ಯಮಂತ್ರಿ ಸುಳಿವು ನೀಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಸೇರಿಕೊಳ್ಳಲು ಬಯಸಿದ ಮತ್ತೊಂದು ತಂಡ ಯಾವುದು?

Read Full Story

04:58 PM (IST) May 22

ಮೈಕಲ್ ಜಾಕ್ಸನ್ ಸತ್ತಿದ್ದಕ್ಕೆ ನಂಗೆ ಅವನ ಮೇಲೆ ದ್ವೇಷ - ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪೋಸ್ಟ್ ವೈರಲ್

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು 'ಮೈಕಲ್' ಬಯೋಪಿಕ್ ನೋಡಿದ ನಂತರ ಮೈಕಲ್ ಜಾಕ್ಸನ್ ಬಗ್ಗೆ ಭಾವುಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಕಾಲೇಜು ದಿನಗಳಿಂದಲೂ 'ಪಾಪ್ ಕಿಂಗ್'..

Read Full Story

04:40 PM (IST) May 22

ಮದುವೆ ಅಂದ್ರೆ ಸಿನಿಮಾ ಅಲ್ಲ, ರೊಮ್ಯಾಂಟಿಕ್ ಮಾಡ್ಕೋಬೇಡಿ - ಯುವಕರಿಗೆ ನಟಿಯ ಖಡಕ್ ಎಚ್ಚರಿಕೆ

ನೋಯ್ಡಾ ನಿವಾಸಿ ಟ್ವಿಶಾ ಶರ್ಮಾ ಅವರ ದುರಂತ ಸಾವಿನ ಹಿನ್ನೆಲೆಯಲ್ಲಿ, ಖ್ಯಾತ ನಟಿ ರಿಧಿ ಡೋಗ್ರಾ ಸೋಶಿಯಲ್ ಮೀಡಿಯಾದಲ್ಲಿ ಖಡಕ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇಂದಿನ ಯುವಕರು..

Read Full Story

04:31 PM (IST) May 22

ಭಾರತಕ್ಕೆ ಎಬೋಲಾ ವೈರಸ್ ಆತಂಕ, ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಆರಂಭ

ಎಬೋಲಾ ವೈರಸ್ ಆತಂಕ ಹೆಚ್ಚಾಗುತ್ತಿದೆ. ಕಾಂಗೋದಲ್ಲಿ ಎಬೋಲಾ ವೈರಸ್ ಸ್ಫೋಟಗೊಂಡಿದೆ. ಪರಿಣಾಮ ಭಾರತದಲ್ಲಿ ನಡಯಬೇಕಿದ್ದ ಇಂಡೋ ಆಫ್ರಿಕನ್ ಶೃಂಗಸಭೆ ಮುಂದೂಡಲಾಗಿದೆ. ಇದೀಗ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಆರಂಭಿಸಿದೆ.

Read Full Story

04:28 PM (IST) May 22

ಕರೆಂಟ್‌, ಮೊಬೈಲ್‌ ಇಲ್ಲದ ವೇದಿಕ್‌ ಗ್ರಾಮ; ಬೆಂಗಳೂರಿನಿಂದ ಈ ಶ್ರೀಕಷ್ಣನ ಹಳ್ಳಿಗೆ ಬರಲು 1 ದಿನ ಸಾಕು!

ಇಂದು ಒಂದು ಗಂಟೆ ಕರೆಂಟ್‌ ಇಲ್ಲ, ಮೊಬೈಲ್‌ ಇಲ್ಲ ಅಂದರೆ ಏನೋ ಕಳೆದುಕೊಂಡಿದ್ದೇವೆ, ಜೀವನವೇ ಹೋಯ್ತು ಎನ್ನುವ ರೀತಿಯಲ್ಲಿ ಕೆಲವರು ಗೋಳಿಡುತ್ತಾರೆ. ಸಣ್ಣ ಜಾಗದ್ಲಿ ಕಸ ಗುಡಿಸಿ, ನೆಲ ಒರೆಸಲು ಕೂಡ ಇಂದು ರೋಬೋಟ್‌ಗಳು ಬಂದಿವೆ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಕರೆಂಟ್‌, ಮೊಬೈಲ್‌, ಯಾವುದೇ ಮಶಿನ್‌ ಇಲ್ಲ.

Read Full Story

04:21 PM (IST) May 22

ಆಲಿಯಾ ಭಟ್ ಸೌಂದರ್ಯದ ಸೀಕ್ರೆಟ್ ರಿವೀಲ್! ಈ ನಾಲ್ಕೇ ಪದಾರ್ಥಗಳಲ್ಲಿದೆ ಆ ಗುಟ್ಟು!

ತುಪ್ಪ, ಸ್ವಲ್ಪ ಬೆಲ್ಲ, ಶೇಂಗಾ ಮತ್ತು ಕೊಬ್ಬರಿ... ಈ ನಾಲ್ಕು ಪದಾರ್ಥಗಳಿಂದ ಮಾಡಿದ ಲಡ್ಡು ಆಲಿಯಾ ಭಟ್ ಅವರ ಸೌಂದರ್ಯದ ಗುಟ್ಟಂತೆ. ಇದನ್ನವರು 'ಸ್ಕಿನ್ ಸ್ನ್ಯಾಕ್' ಅಂತಾನೇ ಕರೀತಾರೆ. ಇದರಿಂದ ಚರ್ಮ ಹೊಳೆಯುತ್ತೆ ಅಂತ ಆಲಿಯಾ ಭಟ್ ಹೇಳಿದ್ದಾರೆ.

Read Full Story

03:54 PM (IST) May 22

ಜನಗಣತಿ ಕಾರ್ಯಾಗಾರಕ್ಕೆ ಆಗಮಿಸಿ ಸಿಬ್ಬಂದಿಗಳ ಜೊತೆ ಕುಳಿತು ಪ್ರೆಸೆಂಟೇಶನ್ ಆಲಿಸಿದ ಕೋತಿ

ಜನಗಣತಿ ಹೇಗೆ ನಡೆಸಬೇಕು ಸೇರಿದಂತೆ ಹಲವು ವಿಚಾರಗಳ ಕುರಿತು ತರಬೇತಿ ಕಾರ್ಯಗಾರದಲ್ಲಿ ಟೀಚರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಈ ಕಾರ್ಯಾಗಾರದಲ್ಲಿ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದರು.

Read Full Story

03:53 PM (IST) May 22

ಸತತ ಮೂರನೇ ಬಾರಿಗೆ IPL ಲೀಗ್‌ನಲ್ಲೇ ಸಿಎಸ್‌ಕೆ ಔಟ್; ಈ ಐವರಿಗೆ ಗೇಟ್ ಪಾಸ್ ಕೊಡಲು ರೆಡಿಯಾದ ಚೆನ್ನೈ ಫ್ರಾಂಚೈಸಿ!

ಬೆಂಗಳೂರು: ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ಇದೀಗ ಸತತ ಮೂರನೇ ಬಾರಿಗೆ ಲೀಗ್ ಹಂತದಲ್ಲೇ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿದೆ. ಇದರ ಬೆನ್ನಲ್ಲೇ ಸಿಎಸ್‌ಕೆ ಫ್ರಾಂಚೈಸಿ ತಂಡದಲ್ಲಿ ಮೇಜರ್ ಸರ್ಜರಿಗೆ ಮುಂದಾಗಿದ್ದು, ಈ ಐದು ಆಟಗಾರರಿಗೆ ಗೇಟ್‌ಪಾಸ್ ನೀಡಲು ರೆಡಿಯಾಗಿದೆ.

Read Full Story

03:12 PM (IST) May 22

ಸನ್‌ರೈಸರ್ಸ್ ಹೋರಾಟಕ್ಕೂ ಮೊದಲು ಕೊಹ್ಲಿಗೆ ಬಂತು ಭಾರತ ಹಾಕಿ ತಂಡದ ವಿಶೇಷ ಆಹ್ವಾನ

ಭಾರತ ಹಾಕಿ ತಂಡದ ಸ್ಟಾರ್ ಮನ್‌ಪ್ರೀತ್ ಸಿಂಗ್ ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿಗೆ ವಿಶೇಷ ಆಹ್ವಾನ ನೀಡಿದ್ದಾರೆ. ಮನ್‌ಪ್ರೀತ್ ಸಿಂಗ್ ದಿಢೀರ್ ಕೊಹ್ಲಿ ಹಾಗೂ ಆರ್‌ಸಿಬಿ ತಂಡಕ್ಕೆ ಆಹ್ವಾನ ನೀಡಿದ್ದು ಯಾಕೆ?

Read Full Story

03:09 PM (IST) May 22

'ಐಎಎಸ್‌ ಅಧಿಕಾರಿಗಳ ಮಕ್ಕಳಿಗೆ ಮೀಸಲಾತಿ ಯಾಕೆ ಕೊಡಬೇಕು?' ಚಾಟಿ ಬೀಸಿದ ಸುಪ್ರೀಂ ಕೋರ್ಟ್‌

ಹಿಂದುಳಿದ ವರ್ಗಗಳಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದ ಕೆನೆಪದರಕ್ಕೆ ಮೀಸಲಾತಿ ಸೌಲಭ್ಯ ವಿಸ್ತರಿಸುವುದರ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಐಎಎಸ್ ಅಧಿಕಾರಿಗಳಂತಹ ಉನ್ನತ ಸ್ಥಾನದಲ್ಲಿರುವವರ ಮಕ್ಕಳಿಗೆ ಮೀಸಲಾತಿಯ ಅಗತ್ಯವಿದೆಯೇ ಎಂದು ಪ್ರಶ್ನಿಸಿದೆ.

Read Full Story

02:52 PM (IST) May 22

'ಇಲ್ಲದ ಸಮಸ್ಯೆಗಳನ್ನು ಸೃಷ್ಟಿ ಮಾಡ್ತಿದ್ರು..'ಅನ್ನೋ ಕಾರಣಕ್ಕೆ ಇಡೀ HR ವಿಭಾಗವನ್ನೇ ಕೆಲಸದಿಂದ ಕಿತ್ತೆಸೆದ ಫಿನ್‌ಟೆಕ್ ಸಿಇಒ

ಅಮೆರಿಕದ ಫಿನ್‌ಟೆಕ್ ಸಂಸ್ಥೆ 'ಬೋಲ್ಟ್' ತನ್ನ ಸಂಪೂರ್ಣ ಹೆಚ್‌ಆರ್ ವಿಭಾಗವನ್ನೇ ವಜಾಗೊಳಿಸಿದೆ. ಸಿಇಒ ರಿಯಾನ್ ಬ್ರೆಸ್ಲೋ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಹೆಚ್‌ಆರ್ ತಂಡವು ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತಿತ್ತು ಎಂದು ಆರೋಪಿಸಿದ್ದಾರೆ. 

Read Full Story

02:37 PM (IST) May 22

Shocking - ಒಂದು ಕೋಟಿ ಗಳಿಸಿದ ಮೊದಲ ಭಾರತೀಯ ಸಿನಿಮಾ ಇದು; ಥಿಯೇಟರ್‌ನಲ್ಲಿ 3 ವರ್ಷ ಭರ್ಜರಿಯಾಗಿ ಓಡಿತ್ತು!

ಸಿನಿಮಾ ಕೇವಲ ಮನರಂಜನೆ ಮಾತ್ರ ನೀಡಲಿಲ್ಲ, ಜೊತೆಗೆ ದೇಶಭಕ್ತಿಯ ಕಿಚ್ಚನ್ನೂ ಹೊತ್ತಿಸಿತ್ತು. ಈ ಸಿನಿಮಾದಲ್ಲಿ ಬರುವ "ದೂರ್ ಹಟೋ ಏ ದುನಿಯಾ ವಾಲೋ, ಹಿಂದೂಸ್ತಾನ್ ಹಮಾರಾ ಹೈ" (ದೂರ ಹೋಗಿ ಪ್ರಪಂಚದವರೇ, ಇದು ನಮ್ಮ ಹಿಂದೂಸ್ಥಾನ) ಎಂಬ ಹಾಡು ಬ್ರಿಟಿಷರ ವಿರುದ್ಧದ ಆಕ್ರೋಶಕ್ಕೆ ಸಾಕ್ಷಿಯಾಗಿತ್ತು. ಅಷ್ಟೇ ಅಲ್ಲ,.. ಈ ಸ್ಟೋರಿ ನೋಡಿ..!

Read Full Story

02:27 PM (IST) May 22

ಆನೆಗೆ ಢಿಕ್ಕಿ ಹೊಡೆದ ಮಹಿಳಾ ಟೀಚರ್‌, ಸ್ಕೂಟಿ ಹೆಡ್‌ಲೈಟ್‌ನಲ್ಲಿ ಸಿಲುಕಿ ಮುರಿದು ಚೂರಾಯ್ತು ದಂತ!

ಉತ್ತರಾಖಂಡದ ಖತಿಮಾದಲ್ಲಿ, ಶಾಲೆಗೆ ಹೊರಟಿದ್ದ ಶಿಕ್ಷಕಿಯ ಸ್ಕೂಟಿಗೆ ಕಾಡಾನೆಯೊಂದು ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಆನೆಯ ದಂತವು ಸ್ಕೂಟಿಯ ಹೆಡ್‌ಲೈಟ್‌ನಲ್ಲಿ ಸಿಲುಕಿ ಮುರಿದುಬಿದ್ದಿದ್ದು, ಶಿಕ್ಷಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅರಣ್ಯ ಇಲಾಖೆಯು ಇದೀಗ ಗಾಯಗೊಂಡ ಆನೆಗಾಗಿ ಹುಡುಕಾಟ ನಡೆಸುತ್ತಿದೆ.
Read Full Story

02:04 PM (IST) May 22

ಆರ್‌ಸಿಬಿ ತಂಡದಲ್ಲಿಂದು ಒಂದಲ್ಲ ಎರಡು ಮೇಜರ್ ಚೇಂಜ್..! SRH ಎದುರಿನ ಪಂದ್ಯಕ್ಕೆ RCB ಬಲಿಷ್ಠ ಸಂಭಾವ್ಯ ತಂಡವಿದು

ಬೆಂಗಳೂರು: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಹೈದರಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ಎರಡು ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.

 

Read Full Story

01:31 PM (IST) May 22

ತಿರುಪತಿಯ ಸಾಮಾನ್ಯ ಭಕ್ತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಟಿಟಿಡಿ

ತಿರುಮಲ ತಿರುಪತಿ ದೇವಸ್ಥಾನವು (ಟಿಟಿಡಿ) ಸಾಮಾನ್ಯ ಭಕ್ತರಿಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಸುಲಭಗೊಳಿಸಲು ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಂಡಿದೆ. ಇನ್ನು ಮುಂದೆ 'ಅಭಿಷೇಕ ಸೇವೆ'ಯ ಸಮಯದಲ್ಲಿಯೂ ಸಾಮಾನ್ಯ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

Read Full Story

01:31 PM (IST) May 22

Be Alert - ಕಾಕ್ರೋಚ್​ ಜನತಾ ಪಾರ್ಟಿ ಹೆಸ್ರಲ್ಲಿ ಲಕ್ಷ ಲಕ್ಷ ಲೂಟಿ - ಲಿಂಕ್​ ಕ್ಲಿಕ್​ ಮಾಡಿದ್ರೆ ಬ್ಯಾಂಕ್​ ಖಾತೆ ದಿವಾಳಿ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಕಾಕ್ರೋಚ್ ಜನತಾ ಪಾರ್ಟಿ, ಜೆನ್ Z ಯುವಕರನ್ನು ಆಕರ್ಷಿಸುತ್ತಿದೆ. ಆದರೆ, ಈ ಪಕ್ಷಕ್ಕೆ ಸೇರಲು ಕಳುಹಿಸಲಾಗುವ ವಾಟ್ಸ್​ಆ್ಯಪ್​ ಲಿಂಕ್‌ಗಳ ಮೂಲಕ ಸೈಬರ್ ವಂಚಕರು ಬ್ಯಾಂಕ್ ಖಾತೆಗಳನ್ನು ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದ್ದು, ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಸೂಚಿಸಿದೆ.
Read Full Story

01:26 PM (IST) May 22

ಚಿನ್ನ ಕೊಳ್ಳೋರಿಗೆ ಶುಕ್ರದಶೆ; ಮತ್ತೆ ಕುಸಿದ ಬಂಗಾರದ ಬೆಲೆ..! ಇವತ್ತಿನ ಗೋಲ್ಡ್‌ ರೇಟ್ ಇಲ್ಲಿದೆ ನೋಡಿ

ಬೆಂಗಳೂರು: ಚಿನ್ನ ಖರೀದಿಸುವವರ ಪಾಲಿಗೆ ಇಂದು ಶುಭಶುಕ್ರವಾರ ಎನಿಸಿಕೊಂಡಿದೆ. ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡಿದೆ ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ನೋಡೋಣ ಬನ್ನಿ.

Read Full Story

01:09 PM (IST) May 22

ಸಾಮಾನ್ಯ ಜನರಿಗೆ ಶಾಕ್‌ ನೀಡಿದ ಮಾರುತಿ ಸುಜುಕಿ, ನೆಚ್ಚಿನ ಮೈಲೇಜ್‌ ಕಾರುಗಳ ಬೆಲೆಯಲ್ಲಿ ಭಾರೀ ಏರಿಕೆ

ಉತ್ಪಾದನಾ ವೆಚ್ಚ ಹೆಚ್ಚಳದ ಕಾರಣ ಮಾರುತಿ ಸುಜುಕಿ ತನ್ನ ಕಾರುಗಳ ಬೆಲೆಯನ್ನು ಏರಿಸಲು ನಿರ್ಧರಿಸಿದೆ. ಈ ಬೆಲೆ ಏರಿಕೆಯು ಜೂನ್‌ನಿಂದ ಜಾರಿಗೆ ಬರಲಿದ್ದು, ವ್ಯಾಗನ್ಆರ್, ಸ್ವಿಫ್ಟ್‌ನಂತಹ ಜನಪ್ರಿಯ ಕಾರುಗಳು ದುಬಾರಿಯಾಗುವುದರಿಂದ ಮಧ್ಯಮ ವರ್ಗದ ಗ್ರಾಹಕರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ.
Read Full Story

12:48 PM (IST) May 22

Secret Meet - ಸಿಎಂ ವಿಜಯ್ ಜೊತೆ ನಿರ್ದೇಶಕರ ರಹಸ್ಯ ಭೇಟಿ; ಮತ್ತೆ ಸಿನಿಮಾ ಒಪ್ಕೊಂಡ್ರಾ ತಮಿಳುನಾಡು ದೊರೆ?

ಈಗ ಇಡೀ ತಮಿಳುನಾಡು ನಿರ್ದೇಶಕರ ಸಂಘ ಸೇರಿ ವಿಜಯ್ ಗೆ ಮತ್ತೆ ನಟನೆಗೆ ಹಿಂದಿರುಗೋ ಮನವಿ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಆದರೆ ಸದ್ಯ ತಮಿಳುನಾಡಿನ ದೊರೆ ಆಗಿರುವ ದಳಪತಿ ವಿಜಯ್ ಅವರಿಗೆ ಸಿನಿಮಾ ನಟನೆ ಮಾಡುವಷ್ಟು ಟೈಂ ಸಿಗುತ್ತಾ? ಅದಕ್ಕವರು ಮನಸ್ಸು ಮಾಡ್ತಾರಾ ಅನ್ನೋದು ಪ್ರಶ್ನೆ!

Read Full Story

12:25 PM (IST) May 22

281 ಕೋಟಿಗೆ ಲಾಭ ಏರಿದ ಬೆನ್ನಲ್ಲಿಯೇ ಭರ್ಜರಿ ಡಿವಿಡೆಂಡ್‌ ಘೋಷಿಸಿದ ಸ್ಮಾಲ್‌ ಕ್ಯಾಪ್‌ ಕಂಪನಿ

ಪ್ರಮುಖ ಫಾರ್ಮಾ ಕಂಪನಿ ಎರಿಸ್ ಲೈಫ್‌ಸೈನ್ಸಸ್, ನಾಲ್ಕನೇ ತ್ರೈಮಾಸಿಕದಲ್ಲಿ ತನ್ನ ನಿವ್ವಳ ಲಾಭದಲ್ಲಿ ಶೇ. 200ರಷ್ಟು ಭಾರೀ ಏರಿಕೆ ದಾಖಲಿಸಿದೆ. ಈ ಬಲಿಷ್ಠ ಆರ್ಥಿಕ ಪ್ರಗತಿಯ ಹಿನ್ನೆಲೆಯಲ್ಲಿ, ಕಂಪನಿಯು ತನ್ನ ಷೇರುದಾರರಿಗೆ ಶೇ. 721ರಷ್ಟು ಬೃಹತ್ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ.

Read Full Story

12:23 PM (IST) May 22

IPL 2026 - ಒಂದ್ವೇಳೆ ಹೀಗಾದ್ರೆ, 18 ಅಂಕ ಗಳಿಸಿದ್ದರೂ ಗುಜರಾತ್ ಟೈಟಾನ್ಸ್ ಟಾಪ್-2 ಪಟ್ಟಿಯಿಂದ ಕುಸಿಯಬಹುದು..!

ಹೈದರಾಬಾದ್: 2026ರ ಐಪಿಎಲ್ ಟೂರ್ನಿಯಲ್ಲಿಂದು ಬಲಿಷ್ಠ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿನ ಫಲಿತಾಂಶ, 18 ಅಂಕ ಗಳಿಸಿರುವ ಗುಜರಾತ್ ಟೈಟಾನ್ಸ್ ತಂಡವನ್ನು ಟಾಪ್-2 ಪಟ್ಟಿಯಿಂದ ಹೊರಬೀಳುವಂತೆ ಮಾಡುವ ಸಾಧ್ಯತೆಯಿದೆ.

Read Full Story

11:59 AM (IST) May 22

'ಕಾಕ್ರೋಚ್ ಜನತಾ ಪಾರ್ಟಿ' ಬೆನ್ನಿಗೆ ನಿಂತ ಶಶಿ ತರೂರ್ - ವಿಪಕ್ಷಗಳಿಗೆ ಕಾಂಗ್ರೆಸ್ ಸಂಸದ ಕೊಟ್ಟ ಬಿಗ್ ಸಲಹೆ ಏನು?

'ಕಾಕ್ರೋಚ್ ಜನತಾ ಪಾರ್ಟಿ'ಯ 'ಎಕ್ಸ್' ಖಾತೆ ನಿರ್ಬಂಧವನ್ನು ಖಂಡಿಸಿರುವ ಶಶಿ ತರೂರ್, ಇದು ಪ್ರಜಾಪ್ರಭುತ್ವ ವಿರೋಧಿ ಎಂದಿದ್ದಾರೆ. ಯುವಕರ ಈ ಆಕ್ರೋಶವನ್ನು ವಿಪಕ್ಷಗಳು ಅವಕಾಶವಾಗಿ ಬಳಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದ್ದಾರೆ.

Read Full Story

11:57 AM (IST) May 22

Italy PM Meloni - ಗರ್ಭದಿಂದಲೇ ಹೋರಾಟ ಶುರು- ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಒಂಟಿ ಹೆಣ್ಣಿನ ಕಣ್ಣೀರ ಕಥೆ

ಜಾರ್ಜಿಯಾ ಮೆಲೋನಿ ಅವರ ಬದುಕು ಬಡತನ, ಕೌಟುಂಬಿಕ ಸಂಕಷ್ಟಗಳಿಂದ ಕೂಡಿತ್ತು. ಬಾಲ್ಯದಲ್ಲಿಯೇ ಮನೆ ಬೆಂಕಿಗೆ ಆಹುತಿಯಾಗಿ, ಬಾರ್ ಅಟೆಂಡರ್ ಆಗಿ ಕೆಲಸ ಮಾಡುತ್ತಲೇ ರಾಜಕೀಯ ಪ್ರವೇಶಿಸಿ, ತಮ್ಮ ಛಲದಿಂದ ಇಟಲಿಯ ಮೊಟ್ಟಮೊದಲ ಮಹಿಳಾ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿದರು.
Read Full Story

11:11 AM (IST) May 22

ಡೋಪಿಂಗ್‌ಗಿನ್ನು 5 ವರ್ಷ ಜೈಲು, ₹2 ಲಕ್ಷ ದಂಡ - ಕಾಯ್ದೆ ತಿದ್ದುಪಡಿ?

ಕೇಂದ್ರ ಸರ್ಕಾರವು ಹೆಚ್ಚುತ್ತಿರುವ ಡೋಪಿಂಗ್ ಪ್ರಕರಣಗಳನ್ನು ತಡೆಯಲು ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಈ ಹೊಸ ತಿದ್ದುಪಡಿಯ ಪ್ರಕಾರ, ನಿಷೇಧಿತ ಮದ್ದು ಸೇವಿಸಿದ ಅಥ್ಲೀಟ್‌ಗಳು, ಪೂರೈಕೆದಾರರು ಮತ್ತು ಕೋಚ್‌ಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ.
Read Full Story

10:52 AM (IST) May 22

ಶೀತಲ್‌ ದೇವಿ ಕೋಚ್‌ ಕುಲ್ದೀಪ್‌ಗೆ ಪೋಕ್ಸೋ ಕೇಸಲ್ಲಿ 5 ವರ್ಷ ಜೈಲು!

ರಾಷ್ಟ್ರೀಯ ಪ್ಯಾರಾ ಆರ್ಚರಿ ಕೋಚ್‌ ಕುಲ್ದೀಪ್‌ ವೆದ್ವಾನ್‌ ಅವರಿಗೆ ಪೋಕ್ಸೋ ಪ್ರಕರಣದಲ್ಲಿ 5 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ. 2023ರಲ್ಲಿ ಸೋನಿಪತ್‌ನ ಸಾಯ್‌ ಕೇಂದ್ರದಲ್ಲಿ ಕಿರಿಯ ಅಥ್ಲೀಟ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾಗಿದ್ದು, ಹರ್ಯಾಣದ ನ್ಯಾಯಾಲಯ ಈ ತೀರ್ಪು ನೀಡಿದೆ. ಇವರು ಶೀತಲ್‌ ದೇವಿ ಮತ್ತು ಪಾಯಲ್‌ ನಾಗ್‌ ಅವರಂತಹ ಖ್ಯಾತ ಪ್ಯಾರಾ ಆರ್ಚರಿ ಪಟುಗಳಿಗೆ ತರಬೇತಿ ನೀಡಿದ್ದರು.
Read Full Story

More Trending News