- Home
- Viral News
- ಭಾರತದಿಂದ ಪಾಕಿಸ್ತಾನಕ್ಕೂ ಹರಡಿದ ‘Cockroach Janta Party’ ಜ್ವರ; ವಿರೋಧಿಗಳನ್ನೆಲ್ಲ ಒಟ್ಟುಗೂಡಿಸಿದ ಪಕ್ಷ!
ಭಾರತದಿಂದ ಪಾಕಿಸ್ತಾನಕ್ಕೂ ಹರಡಿದ ‘Cockroach Janta Party’ ಜ್ವರ; ವಿರೋಧಿಗಳನ್ನೆಲ್ಲ ಒಟ್ಟುಗೂಡಿಸಿದ ಪಕ್ಷ!
ಜಿರಳೆ ಎಂದರೆ ಅಸಹ್ಯ ಎಂದುಕೊಳ್ತೀವಿ. ಆರಂಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಒಂದು ಮೀಮ್ಸ್ ಪೇಜ್ ಎಂದುಕೊಂಡ ಪೇಜ್‌ವೊಂದು ಸೃಷ್ಟಿ ಆಗಿತ್ತು. Cockroach Janta Party ಆರಂಭ ಆಗಿದ್ದು, ಎಷ್ಟರಮಟ್ಟಿಗೆ ವೈರಲ್ ಆಗ್ತಿದೆ ಎಂದು ನೋಡಿದ್ದೀರಿ, ಈಗ ಇದು ಪಾಕಿಸ್ತಾನಕ್ಕೂ ಹರಡಿದೆ. ಹಾಗಾದರೆ ಏನಾಯ್ತು?

ಹೇಗೆ ಹುಟ್ಟಿಕೊಂಡಿತು?
2026 ಮೇ 15ರಂದು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರೊಬ್ಬರು ನನಗೆ ಸೀನಿಯರ್ ಪಟ್ಟ ಕೊಡಿ ಎಂದು ಹೇಳಿದ್ದರು. ದೇಶದ ಮುಖ್ಯ ನ್ಯಾಯಮೂರ್ತಿಗಳಾದ ಸಿಜೆ ಸೂರ್ಯಕಾಂತ್ ಅವರು ಮಾತ್ರ ಇಡೀ ಪ್ರಪಂಚಕ್ಕೆ ಸೀನಿಯರ್ ಪಟ್ಟ ಕೊಡಬಹುದು, ಆದರೆ ನಿನಗೆ ಕೊಡೋದಿಲ್ಲ, ನಿನಗೆ ಏನು ಯೋಗ್ಯತೆ ಇದೆ? ಒಂದು ಸಮಾಜದಲ್ಲಿ ದಾಳಿ ಮಾಡುವ ಪರಾವಲಂಬಿಗಳಿದ್ದಾರೆ, ಅವರ ಜೊತೆ ನೀವು ಸೇರಿಕೊಳ್ತೀರಿ ಅನಿಸತ್ತೆ, ಕೆಲ ಯುವಕರು ಜಿರಳೆಗಳ ಥರ, ಅವರು ಕೆಲವರು ಮೀಡಿಯಾ ಆಗ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ಇರುತ್ತಾರೆ, ಹೋರಾಟಗಾರ ಆಗುತ್ತಾರೆ ಎಂದು ಹೇಳಿದ್ದರು. ಇದು ಅನೇಕರಿಗೆ ಸಿಟ್ಟು ತರಿಸಿತು. ಆ ಬಳಿಕ ನ್ಯಾಯಮೂರ್ತಿಗಳು, “ನಾನು ಎಲ್ಲರಿಗೂ ಈ ಮಾತು ಹೇಳಿಲ್ಲ” ಎಂದು ಸಮಜಾಯಿಷಿ ಕೊಟ್ಟರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ, ಒಟ್ಟಿನಲ್ಲಿ ಕೆಲವರು ಆಕ್ರೋಶ ಹೊಂದಿದ್ದರು.
ನಮಗೆ ಕೆಲಸ ಕೊಡದ ಈ ಸಮಾಜದಲ್ಲಿ ನಾವು ಜಿರಳೆಗಳಾಗದೆ ಇನ್ನೇನು ಆಗಲಿಕ್ಕೆ ಸಾಧ್ಯ ಎಂದು ಕೆಲ ಯುವಕರು ಆಕ್ರೋಶ ಹೊರಹಾಕಿದ್ದರು. ಹಾಗೆಯೇ ಕಾಕ್ರೋಚ್ ಜನತಾ ಪಾರ್ಟಿ ಎಂದು ಪೇಜ್ ಕ್ರಿಯೇಟ್ ಆಗಿದ್ದು, ಈ ಪೇಜ್‌ನ್ನು ಅನೇಕರು ಫಾಲೋ ಮಾಡುತ್ತಿದ್ದಾರೆ.

ಪಾರ್ಟಿ ಹುಟ್ಟು ಹಾಕಿದವರು ಯಾರು?
ಅಭಿಜೀತ್ ದೀಪ್ಕೆ ಅವರು ಕಾಕ್ರೋಚ್ ಜನತಾ ಪಾರ್ಟಿ ಎಂದು ಹುಟ್ಟುಹಾಕಿದರು. ಇವರು ಅಮೆರಿಕದಲ್ಲಿ ಓದಿ ಬಂದವರು. ಈ ಪಾರ್ಟಿ ಸೇರಲು ಒಂದಿಷ್ಟು ನೀತಿ ನಿಯಮಗಳು ಕೂಡ ಇವೆ. ಪಕ್ಕಾ ನಿರುದ್ಯೋಗಿ ಆಗಿರಬೇಕು, ದಿನಕ್ಕೆ 11 ಗಂಟೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರಬೇಕು, ದೈಹಿಕವಾಗಿ ಸೋಂಭೇರಿ ಆಗಿರಬೇಕು, ಆನ್‌ಲೈನ್‌ನಲ್ಲಿ ಪ್ರೊಫೆಶನಲ್ ಆಗಿ ಬೈಯ್ಯಲು ರೆಡಿ ಇರಬೇಕು ಎಂದು ನಿಯಮ ಹಾಕಿದ್ದರು. ಇದನ್ನು ಆರಂಭದಲ್ಲಿ ಕೆಲವರು ಫಾಲೋ ಮಾಡಿದ್ದರು. ಎರಡು ದಿನದೊಳಗಡೆ ಈ ಪಾರ್ಟಿಯಲ್ಲಿ 20 ಲಕ್ಷ ಜನರು ಪಾರ್ಟಿಗೆ ರಿಜಿಸ್ಟರ್ ಆಗಿದ್ದಾರೆ. ಇದರರ್ಥ ವ್ಯವಸ್ಥೆ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾ?
ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಕೂಡ ನಾನು ಈ ಪಾರ್ಟಿಯನ್ನು ಸೇರಬೇಕು ಎಂದು ಕೂಡ ಹೇಳಿದ್ದಾರೆ. ಜಿರಳೆಯ ಡೇಂಜರಸ್ ಪ್ರಣಾಣಿಕೆ ಇದೆ. ದೆಹಲಿಯಲ್ಲಿ ಅನೇಕರು ಜಿರಳೆಯ ಕಾಸ್ಟ್ಯೂಮ್ ಹಾಕಿಕೊಂಡು ಯಮುನಾ ನದಿಯಲ್ಲಿ ಬಿದ್ದ ಕಸವನ್ನು ಕ್ಲೀನ್ ಮಾಡಿದ್ದಾರೆ. ಬಿಹಾರದ ಚುನಾವಣೆಯಲ್ಲಿ ಕೂಡ ಈ ಪಕ್ಷದಿಂದ ಯಾರಾದರೂ ಸ್ಪರ್ಧೆ ಮಾಡ್ತಾರಾ ಎಂಬ ಪ್ರಶ್ನೆ ಇದೆ.
ಪಾಕಿಸ್ತಾನದಲ್ಲಿ ಏನಾಗುತ್ತೆ?
ಈಗ ಪಾಕಿಸ್ತಾನದಲ್ಲಿಯೂ ಕೂಡ ಕಾಕ್ರೋಚ್ ಅವಾಮಿ ಪಕ್ಷ ಸ್ಥಾಪನೆಯಾಗಿದೆ. ಭಾರತದಿಂದಲೇ ಸ್ಫೂರ್ತಿ ಪಡೆದಿದ್ದೇವೆ ಎಂದು ಅದು ಅಧಿಕೃತವಾಗಿ ಹೇಳಿಕೊಂಡಿದೆ. ನಮ್ಮನ್ನು ಜಿರಳೆ ಎಂದು ಕರೆದ ವ್ಯವಸ್ಥೆ ವಿರುದ್ಧ ನಾವು ದನಿ ಆಗಿರುತ್ತೇವೆ ಎಂದು ಈ ಪಕ್ಷ ಹೇಳಿಕೊಂಡಿದೆ. ಇದರ ಜೊತೆಗೆ ಇನ್ನೊಂದಿಷ್ಟು ಪಕ್ಷ ಎಂದು ಕರೆದುಕೊಂಡು ಕೆಲವರು ಕೆಲ ಪೇಜ್ ಕ್ರಿಯೇಟ್ ಮಾಡುತ್ತಿದ್ದಾರೆ. ಹೀಗಾಗಿ ಇದರ ಸ್ಥಾಪಕರು, ಉದ್ದೇಶ ಯಾವುದು ಕೂಡ ಬಯಲಾಗಿಲ್ಲ.
ಹೊಸ ದಂಗೆ ಆಗಲಿದೆಯಾ?
ನೇಪಾಳದಲ್ಲಿ ಝೆನ್ಸಿ ದಂಗೆ ಆಗಿರೋದು ಗೊತ್ತಿದೆ. ಹಾಗೆಯೇ ಈಗ ಭಾರತದಲ್ಲಿ ಕೂಡ ಜಿರಳೆ ಪಕ್ಷದ ಹೆಸರಿನಲ್ಲಿ ಹೊಸ ಕ್ರಾಂತಿ ಆದರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಈಗಾಗಲೇ ನಮ್ಮ ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಅವುಗಳಿಗೆ ಪರಿಹಾರ ಸಿಗಬೇಕು, ಮೊದಲಿಗೆ ಉದ್ಯೋಗ ಗಟ್ಟಿಯಾಗಬೇಕು.

