ಈಗ ಇಡೀ ತಮಿಳುನಾಡು ನಿರ್ದೇಶಕರ ಸಂಘ ಸೇರಿ ವಿಜಯ್ ಗೆ ಮತ್ತೆ ನಟನೆಗೆ ಹಿಂದಿರುಗೋ ಮನವಿ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಆದರೆ ಸದ್ಯ ತಮಿಳುನಾಡಿನ ದೊರೆ ಆಗಿರುವ ದಳಪತಿ ವಿಜಯ್ ಅವರಿಗೆ ಸಿನಿಮಾ ನಟನೆ ಮಾಡುವಷ್ಟು ಟೈಂ ಸಿಗುತ್ತಾ? ಅದಕ್ಕವರು ಮನಸ್ಸು ಮಾಡ್ತಾರಾ ಅನ್ನೋದು ಪ್ರಶ್ನೆ!
ತಮಿಳು ಜಗತ್ತು ಈಗ ವಿಜಯ್ (Vijay Joseph) ಮಯವಾಗಿದೆ. ದಳಪತಿ ಧೈರ್ಯ ಮಾಡಿ ಎಲೆಕ್ಷನ್ ಗೆದ್ದು ಮುಖ್ಯಮಂತ್ರಿ ಆಗಿದ್ದಾರೆ. ಸಿನಿಮಾ ರಂಗಕ್ಕೂ ವಿಜಯ್ಗೂ ಇನ್ಮುಂದೆ ಯಾವ್ದೇ ಸಂಬಂಧ ಇಲ್ಲ. ಯಾಕಂದ್ರೆ ನಾನು ಇನ್ಮುಂದೆ ಬಣ್ಣ ಹಚ್ಚಲ್ಲ ಎಂದಿದ್ದಾರೆ ವಿಜಯ್. ಆದ್ರೆ ಅದನ್ನ ಪಕ್ಕಕ್ಕಿಟ್ಟು, ತಮಿಳು ಚಿತ್ರರಂದ ಸ್ಟಾರ್ ಡೈರೆಕ್ಟರ್ಸ್ ವಿಜಯ್ರನ್ನ ಬೇಟಿ ಮಾಡಿದ್ದಾರೆ. ಆ ಬೇಟಿ ಹಿಂದೆ ದೊಡ್ಡ ರಹಸ್ಯೆ ಅಡಗಿದೆ. ಅದೇನು ಅಂತ ನೋಡೋಣ ಬನ್ನಿ...

ಮುಖ್ಯಮಂತ್ರಿ ವಿಜಯ್ಜೊತೆ ಡೈರೆಕ್ಟರ್ಸ್ರಹಸ್ಯ ಬೇಟಿ; ದಳಪತಿ ಸಿನಿ ಕರಿಯರ್ನ ರಹಸ್ಯ ಇಲ್ಲಿ ಅಡಗಿದೆಯಾ..?
ಚಿತ್ರರಂಗ ಬಿಟ್ಟಿರೋ ವಿಜಯ್ ಗೆ ಚಿತ್ರರಂಗ ಮೇಲಿರೋ ಆಸೆ ಏನು..?
ಸಾವಿರಾರು ಕೋಟಿ ಕಲೆಕ್ಷನ್ ಮಾಡುತ್ತಿದ್ದ ಒಬ್ಬ ದೊಡ್ಡ ಹೀರೋ ಚಿತ್ರರಂಗದಿಂದ ದೂರ ಆದ್ರೆ ಹೇಗಿರುತ್ತೆ..? ಅದೆಷ್ಟೋ ಕುಟುಂಬಗಳು ಬೀದಿಗೆ ಬರುತ್ತೆ. ಯಾಕಂದ್ರೆ ಆ ಹೀರೋನ ನಂಬಿ ದುಡ್ಡು ಸುರಿದು ಸಿನಿಮಾ ಮಾಡೋರು ಯಾರು ಇರಲ್ಲ. ಸಿನಿಮಾ ಇಲ್ಲ ಅಂದ್ರೆ ಕೆಲಸ ಮಾಡೋ ಸಿನಿ ಕಾರ್ಮಿಕರಿಗೆ ಕೆಲಸ ಇರೋಲ್ಲ. ಇಂತದ್ದೊಂದು ಸ್ಥಿತಿ ತಮಿಳು ಚಿತ್ರರಂಗದಲ್ಲೂ ಇದೆ. ಅದಕ್ಕೆ ಮುಖ್ಯ ಕಾರಣ ನಟ ದಳಪತಿ ವಿಜಯ್..
ಯೆಸ್, ನಟ ವಿಜಯ್ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿದ್ಮೇಲೆ ಅಲ್ಲಿ ಆಗುತ್ತಿದ್ದ ಒಂದಷ್ಟು ಕೆಲಸಗಳಿಗೆ ಬ್ರೇಕ್ ಬಿದ್ದಿದೆ. ವರ್ಷಕ್ಕೆ ಎರಡು ಸಿನಿಮಾ ಮಾಡುತ್ತಿದ್ದ ವಿಜಯ್ ಮೇಲೆ ಹೂಡಿಕೆ ಮಾಡೋಕೆ ನಿರ್ಮಾಪಕರು ಈಗ್ಲೂ ಸಿದ್ಧರಿದ್ದಾರೆ. ಆದ್ರೆ ದಳಪತಿ ನನಗೆ ಸಿನಿಮಾನೇ ಬೇಡ ಅಂದ್ಬಿಟ್ಟಿದ್ದಾರೆ. ಇದರಿಂದ ವಿಜಯ್ರನ್ನೇ ನಂಬಿದ್ದ ಒಂದಿಷ್ಟು ಕಾರ್ಮಿಕ ಕುಟುಂಬಕ್ಕೆ ಕೆಲಸ ಇಲ್ಲದಂತಾಗಿದೆ.
ವಿಜಯ್ ಗೆ ದೊಡ್ಡ ಬೇಡಿಕೆ ಇಟ್ಟ ನಿರ್ದೇಶಕರ ತಂಡ; ಮತ್ತೆ ಮರಳಿ ಸಿನಿಮಾ ರಂಗಕ್ಕೆ ಬರುತ್ತಾರಾ ದಳಪತಿ..?
ನಟ ವಿಜಯ್ ಒಂದು ಸಿನಿಮಾಗೆ 200 ಕೋಟಿ ಸಂಭಾವನೆ ಪಡೆಯುತ್ತಿದ್ದ ಹೀರೋ. ಆದ್ರೆ ನನ್ನದು ಜನನಾಯಗನ್ ಕೊನೆ ಸಿನಿಮಾ. ನಾನಿನ್ನು ರಾಜಕಾರಣಿ ಅಂತ ವಿಜಯ್ ಅನೌನ್ಸ್ ಮಾಡಿದ್ದೇ ತಡ. ವಿಜಯ್ರನ್ನೇ ನಂಬಿ ಕತೆ ಸಿದ್ಧಪಡಿಸಿದ್ದ ನಿರ್ದೇಶಕರು, ಬಂಡವಾಳ ಹೂಡೋಕೆ ಸಿದ್ಧರಾಗಿದ್ದ ನಿರ್ಮಾಪಕರು ಕಂಗಾಲಾಗಿದ್ರು. ಯಾಕಂದ್ರೆ ಇಂತಹ ಅದ್ಭುತ ಹೀರೋ ಒಬ್ಬನನ್ನ ಚಿತ್ರರಂಗ ಕಳೆದುಕೊಳ್ಳಬೇಕಲ್ಲಾ ಅನ್ನೋ ನೋವು ಬಾದೆ ಅವರದ್ದು. ಆದ್ರೆ ವಿಜಯ್ ಈಗ ಸಿಎಂ ಆಗಿದ್ದಾರೆ. ತಮಿಳುನಾಡು ಆಡಳಿತ ನಡೆಸಬೇಕಿದೆ. ಇಷ್ಟಾದ್ರು ದಳಪತಿಗೆ ದೊಡ್ಡ ಬೇಡಿಕೆ ಒಂದು ಬಂದಿದೆ. ಅದು ವಿಜಯ್ ಮತ್ತೆ ಮರಳಿ ಸಿನಿಮಾ ರಂಗಕ್ಕೆ ಬರಬೇಕು ಅನ್ನೋ ಬೇಡಿಕೆ..
ವಿಜಯ್ ಸಿಎಂ ಆದ ಖುಷಿಯನ್ನ ಆಚರಿಸಿರೋ ತಮಿಳು ನಿರ್ದೇಶಕರ ಸಂಘ. ಸಿಎಂ ವಿಜಯ್ರನ್ನ ಬೇಟಿ ಮಾಡಿ ಶುಭ ಕೋರಿದ್ದಾರೆ. ಅದೇ ಸಮಯದಲ್ಲಿ ನೀವು ಚಿತ್ರರಂಗದಿಂದ ದೂರಾಗೋದು ಬೇಡ. ಸಿನಿಮಾ ಮಾಡಿ ಅಂತ ಆ ನಿರ್ದೇಶಕರೆಲ್ಲಾ ವಿಜಯ್ ಬಳಿ ಕೇಳಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ. ಆದ್ರೆ ಇದಕ್ಕೆ ವಿಜಯ್ ಒಪ್ಪಿಗೆ ಕೊಟ್ಟಿಲ್ಲ ಅನ್ನೋ ಮಾತು ಇದೆ.
ಚಿತ್ರರಂಗ ಅಭಿವೃದ್ದಿಗೆ ವಿಜಯ್ಗೆ ಕಮಲ್ ಹಾಸನ್ ಮನವಿ..!
ಕಳೆದ ವಾರ ಸಿಎಂ ವಿಜಯ್ರಬ್ಬ ಬೇಟಿ ಮಾಡಿದ್ದ ತಮಿಳು ನಟ ಕಲಮ್ ಹಾಸನ್, ತಮಿಳು ಚಿತ್ರೋದ್ಯಮದ ಉಳಿವಿಗೆ ಅಗತ್ಯ 6 ಬೇಡಿಕೆಗಳ ಪಟ್ಟಿ ಕೊಟ್ಟಿದ್ರು, ತಮಿಳುನಾಡು ಸರ್ಕಾರದ ಒಟಿಟಿ ಪ್ಲಾಟ್‌ಫಾರ್ಮ್ ಬರಬೇಕು. ಸ್ಥಳೀಯ ಸಿನಿಮಾಗಳ ಮನರಂಜನಾ ತೆರಿಗೆ ರದ್ದುಪಡಿಸುವುದು ಮತ್ತು ಬಲಿಷ್ಠ ಪೈರಸಿ ವಿರೋಧಿ ತಂಡ ರಚಿಸುವುದು ಈ ಮನವಿಯಲ್ಲಿತ್ತು. ಆದ್ರೆ ಈಗ ಇಡೀ ತಮಿಳುನಾಡು ನಿರ್ದೇಶಕರ ಸಂಘ ಸೇರಿ ವಿಜಯ್ಗೆ ಮತ್ತೆ ನಟನೆಗೆ ಹಿಂದಿರುಗೋ ಮನವಿ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ.
ತಮಿಳು ಚಿತ್ರರಂಗದಲ್ಲಿ ವಿಜಯ್ ಸ್ಥಾನ ತುಂಬೋ ನಟ ಇಲ್ಲವಾ..?
ಹಾಗ್ ನೋಡಿದ್ರೆ ತಮಿಳುನಾಡು ದೊಡ್ಡ ಸ್ಟಾರ್ ನಟರ ಹಬ್.. ರಜನಿಕಾಂತ್, ಕಮಲ್ ಹಾಸನ್, ಧನುಷ್, ಅಜಿತ್, ಕಾರ್ತಿ, ಶಿವಕಾರ್ತಿಕೇಯನ್, ವಿಶಾಲ್, ವಿಜಯ್ ಸೇತುಪತಿ, ಸೂರ್ಯ, ಚಿಯಾನ್ ವಿಕ್ರಂ ಹೀಗೆ ದೊಡ್ಡ ಲೀಸ್ಟೇ ಇದೆ. ಆದ್ರೆ ವಿಜಯ್ ಸ್ಥಾನ ತುಂಬ ಬಲ್ಲ ನಟ ಯಾರು ಅನ್ನೋದೇ ಈಗಿರೋ ಗೊಂದಲ. ಹೀಗಾಗಿ ಈ ಗೊಂದಲವೇ ಬೇಡ.. ವಿಜಯ್ ಅವರೇ ಸಿನಿಮಾ ಮಾಡಲಿ ಅನ್ನೋದು ಹಲವರ ಆಸೆ. ಆದ್ರೆ ರಾಜ್ಯದ ಮುಖ್ಯಮಂತ್ರಿ ಆಗಿರೋ ವಿಜಯ್ ಇದಕ್ಕೆ ಒಪ್ಪುತ್ತಾರಾ ಅನ್ನೋದೇ ಈಗಿರೋ ಪ್ರಶ್ನೆ..


