MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಶಾರುಖ್​ ಖಾನ್​ರ King Movie ಲೀಕ್​: ಆನ್​ಲೈನ್​ನಲ್ಲಿ ಭರ್ಜರಿ ಡಿಮಾಂಡ್​- ಭದ್ರತೆ ಹೆಚ್ಚಳ

ಶಾರುಖ್​ ಖಾನ್​ರ King Movie ಲೀಕ್​: ಆನ್​ಲೈನ್​ನಲ್ಲಿ ಭರ್ಜರಿ ಡಿಮಾಂಡ್​- ಭದ್ರತೆ ಹೆಚ್ಚಳ

ಶಾರುಖ್ ಖಾನ್ ಅಭಿನಯದ 'ಕಿಂಗ್' ಚಿತ್ರದ ಚಿತ್ರೀಕರಣದ ದೃಶ್ಯಗಳು ಸೋರಿಕೆಯಾಗಿವೆ. ಈ ಲೀಕ್ ಆದ ದೃಶ್ಯಗಳು ಮತ್ತು ಫೋಟೋಗಳನ್ನು ಬಳಸಿ, ಕೃತಕ ಬುದ್ಧಿಮತ್ತೆ (ಎಐ) ಮೂಲಕ ಸಿನಿಮಾದ ಮಿನಿ ಆವೃತ್ತಿಯನ್ನೇ ರಚಿಸಿ ಆನ್‌ಲೈನ್‌ನಲ್ಲಿ ಹರಿಬಿಡಲಾಗಿದ್ದು, ಇದು ಚಿತ್ರತಂಡಕ್ಕೆ ದೊಡ್ಡ ಸಂಕಷ್ಟ ತಂದೊಡ್ಡಿದೆ.

2 Min read
Author : Suchethana D
Published : May 22 2026, 08:04 PM IST
Share this Photo Gallery
  • FB
  • TW
  • Linkdin
  • Whatsapp
16
ಕಿಂಗ್​ ಸಿನಿಮಾ ಹವಾ
Image Credit : Red Chillies Entertainment

ಕಿಂಗ್​ ಸಿನಿಮಾ ಹವಾ

ನಟ ಶಾರುಖ್​ ಖಾನ್​ ಅವರು ಸದ್ಯ ಕಿಂಗ್​ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೇ ಡಿಸೆಂಬರ್​ ತಿಂಗಳಿನಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ. ಆದರೆ ಇದಕ್ಕೂ ಮೊದಲೇ ಇವರ ಚಿತ್ರದ ದೃಶ್ಯಗಳು ಲೀಕ್​ ಆಗಿದ್ದು, ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿಬಿಟ್ಟಿದೆ. ಇದನ್ನು ನೋಡಲು ಇಂಟರ್​ನೆಟ್​ನಲ್ಲಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ.

Add Asianetnews Kannada as a Preferred SourcegooglePreferred
26
ಎಐ ಸಿನಿಮಾ ಬಿಡುಗಡೆ
Image Credit : Social Media

ಎಐ ಸಿನಿಮಾ ಬಿಡುಗಡೆ

ಅಷ್ಟಕ್ಕೂ ಆಗಿದ್ದೇನೆಂದರೆ, ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಲವೊಂದು ದೃಶ್ಯಗಳು ಸೋರಿಕೆಯಾಗಿವೆ. ಅದನ್ನು ಸೇರಿಸಿಕೊಂಡಿರುವ ಪಾಪರಾಜಿಗಳು, ನೆಟ್​ನಲ್ಲಿ ಸಿಕ್ಕಿರುವ ಕೆಲವು ಫೋಟೋಗಳನ್ನು ಬಳಸಿಕೊಂಡು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಸಿನಿಮಾ ರಚಿಸಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ದೃಶ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಲಾಗಿದೆ. ಇದು ಸಿಕ್ಕಿದ್ದರಿಂದ ಎಐ ಮೂಲಕ ಎಲ್ಲವನ್ನೂ ಸೃಷ್ಟಿಮಾಡಿದ್ದಾರೆ.

Related Articles

Related image1
ಮಗಳು ಸುಹಾನಾ ಹೊಟ್ಟೆ ಕಾಣದಂತೆ ಕಾಪಾಡಿದ ಶಾರುಖ್ ಖಾನ್​​: ಎಂಥ ಸಂಸ್ಕಾರಿ ಅಪ್ಪ ಎಂದು ಹಾಡಿ ಹೊಗಳಿದ ಫ್ಯಾನ್ಸ್​
Related image2
ಕಸಬ್​ ಒಬ್ಬ ಜಂಟಲ್​ಮನ್, ಪಾಕ್​ ತುಂಬಾ ಒಳ್ಳೆ ದೇಶ​ ಎಂದ ಶಾರುಖ್: ಬಾಲಿವುಡ್​ ಬಾದ್​ಶಾಹ್​ನ ವಿಡಿಯೋ ನೋಡಿ
36
ಭಾರಿ ಹೊಡೆತ
Image Credit : Srk Rani Mukerji Facebook

ಭಾರಿ ಹೊಡೆತ

ಇದೀಗ ಚಿತ್ರತಂಡಕ್ಕೆ ಭಾರಿ ಹೊಡೆದ ಬಿದ್ದಿದೆ. ಈ ವಿಡಿಯೋದಲ್ಲಿ, ಕಿಂಗ್​ ಚಿತ್ರದ ಮಿನಿ ಆವೃತ್ತಿಯಾಗಿದೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಸಿನಿಮಾ ಬರುವ ಮುನ್ನ ಪ್ರೇಕ್ಷಕರಿಗೆ ಇದನ್ನು ನೀಡಲಾಗುತ್ತಿದೆ ಎಂದು ಹೇಳಿ ಸಿನಿಮಾದ ಬಹುತೇಕ ದೃಶ್ಯಗಳನ್ನು ಎಐನಲ್ಲಿ ರಚಿಸಿ ಪಬ್ಲಿಷ್​ ಮಾಡಲಾಗಿದೆ.

46
 ಚಿತ್ರತಂಡದ ಹೋರಾಟ
Image Credit : Srk Rani Mukerji Facebook

ಚಿತ್ರತಂಡದ ಹೋರಾಟ

ಚಿತ್ರಕ್ಕೆ ಸಂಬಂಧಿಸಿದ ಸೋರಿಕೆಗಳೊಂದಿಗೆ ತಂಡವು ಈಗಾಗಲೇ ಹೋರಾಡುತ್ತಿದೆ. ಇದಾಗಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಇದರ ಹೋರಾಟ ಜೋರಾಗಿಯೇ ನಡೆಯುತ್ತಿದೆ. ಕ್ಲೈಮ್ಯಾಕ್ಸ್ ಫೋಟೋಗಳು ಸೋರಿಕೆಯಾದ ನಂತರ ಕಿಂಗ್​ ತಂಡವು ಈಗಾಗಲೇ ಚಿಂತಿತವಾಗಿತ್ತು. ಆದರೆ ಇದೀಗ ಎಐ ಮೂಲಕ ಸಿನಿಮಾ ತೋರಿಸಿರುವುದು ಭರಿಸಲಾರದ ನಷ್ಟ ಉಂಟು ಮಾಡುತ್ತಿದೆ.

56
ಹಾಡಿನ ವೈರಲ್​
Image Credit : SOCIAL MEDIA

ಹಾಡಿನ ವೈರಲ್​

ಇದಕ್ಕೂ ಮೊದಲು, ದೀಪಿಕಾ ಮತ್ತು ಶಾರುಖ್ ಖಾನ್ ಹಾಡನ್ನು ಚಿತ್ರೀಕರಿಸುತ್ತಿದ್ದ ಕೇಪ್ ಟೌನ್ ವೇಳಾಪಟ್ಟಿಯ ಕೆಲವು ಸನ್ನಿವೇಶಗಳು ವೈರಲ್ ಆಗಿದ್ದವು. ನಿರ್ಮಾಣ ತಂಡವು ಹೆಚ್ಚಿನ ಕಾಳಜಿ ವಹಿಸಿತ್ತು. ಆದರೆ ಶಾರುಖ್ ಖಾನ್‌ರಂತಹ ನಟರು ಸಾರ್ವಜನಿಕವಾಗಿ ಚಿತ್ರೀಕರಣ ಮಾಡುವಾಗ, ಸೋರಿಕೆಯ ಮೂಲವನ್ನು ಪತ್ತೆಹಚ್ಚುವುದು ಅಸಾಧ್ಯ. ಇದೇ ಕಾರಣಕ್ಕೆ ಈಗ ಭದ್ರತೆಯನ್ನು ಇನ್ನಷ್ಟು ಹೆಚ್ಚು ಮಾಡಲಾಗಿದೆ.

66
ಅಂತಿಮ ಹಂತದಲ್ಲಿ
Image Credit : Srk Rani Mukerji Facebook

ಅಂತಿಮ ಹಂತದಲ್ಲಿ

"ಮುಂಬೈನಲ್ಲಿರುವ ಈ ಸೆಟ್ ಜನನಿಬಿಡ ಪ್ರದೇಶವಾಗಿದೆ, ಆದ್ದರಿಂದ ಫೋನ್ ಪ್ರವೇಶವನ್ನು ನಿರ್ಬಂಧಿಸುವುದರಿಂದ ಹೆಚ್ಚಿನ ಸಹಾಯವಾಗುವುದಿಲ್ಲ. ಆದಾಗ್ಯೂ, ಆಕ್ಷನ್ ದೃಶ್ಯಗಳು ಮತ್ತು ನಿರ್ಣಾಯಕ ದೃಶ್ಯಗಳ ಸಮಯದಲ್ಲಿ ಚಲನೆಯನ್ನು ತೀವ್ರವಾಗಿ ನಿರ್ಬಂಧಿಸಲಾಗಿದೆ ಎನ್ನಲಾಗಿದೆ. ಕಿಂಗ್ ಚಿತ್ರವು ಈಗ ಪೂರ್ಣಗೊಳ್ಳುವ ಹಂತದಲ್ಲಿದೆ, ಆದರೂ ಸರಿಸುಮಾರು ಎರಡು ತಿಂಗಳ ಚಿತ್ರೀಕರಣ ಉಳಿದಿದೆ. ಯೋಜನೆಯು ಅಂತಿಮ ಹಂತದಲ್ಲಿದೆ, ಪ್ಯಾಚ್‌ವರ್ಕ್, ಆಕ್ಷನ್ ದೃಶ್ಯಗಳು ಮತ್ತು ಇತರ ದೃಶ್ಯಗಳನ್ನು ಇನ್ನೂ ಚಿತ್ರೀಕರಿಸಬೇಕಾಗಿದೆ, ಆದರೆ ನಿರ್ಮಾಣ ಮತ್ತು ದೃಶ್ಯ ಪರಿಣಾಮಗಳ ಕೆಲಸಗಳು ಸಹ ನಡೆಯುತ್ತಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಶಾರುಖ್ ಖಾನ್
ಮನರಂಜನಾ ಸುದ್ದಿ
ಬಾಲಿವುಡ್

Latest Videos
Recommended Stories
Recommended image1
ನಿಲ್ಲದ 'ಧುರಂಧರ್‌ 2' ಆರ್ಭಟ, ಚಿತ್ರರಂಗದಲ್ಲಿ ಹೊಸ ದಾಖಲೆ; OTTಗೆ ಬರೋದು ಯಾವಾಗ ಗೊತ್ತಾ?
Recommended image2
ವೈರಲ್ ಆಯ್ತು ಸಂಜಯ್ ದತ್ ಮಗಳ ಸಂದರ್ಶನ: ಕಾರಣ ಕೇಳಿದ್ರೆ ಕಣ್ಣೀರು ಬರೋದಂತು ಗ್ಯಾರಂಟಿ!
Recommended image3
'ನಾನು ಇನ್ನೂ ವರ್ಜಿನ್' ಎಂದ 32ರ ಬಿಗ್ ಬಾಸ್ OTT ವಿನ್ನರ್: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
Related Stories
Recommended image1
ಮಗಳು ಸುಹಾನಾ ಹೊಟ್ಟೆ ಕಾಣದಂತೆ ಕಾಪಾಡಿದ ಶಾರುಖ್ ಖಾನ್​​: ಎಂಥ ಸಂಸ್ಕಾರಿ ಅಪ್ಪ ಎಂದು ಹಾಡಿ ಹೊಗಳಿದ ಫ್ಯಾನ್ಸ್​
Recommended image2
ಕಸಬ್​ ಒಬ್ಬ ಜಂಟಲ್​ಮನ್, ಪಾಕ್​ ತುಂಬಾ ಒಳ್ಳೆ ದೇಶ​ ಎಂದ ಶಾರುಖ್: ಬಾಲಿವುಡ್​ ಬಾದ್​ಶಾಹ್​ನ ವಿಡಿಯೋ ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved