ಸನ್‌ರೈಸರ್ಸ್ ಹೋರಾಟಕ್ಕೂ ಮೊದಲು ಕೊಹ್ಲಿಗೆ ಬಂತು ಭಾರತ ಹಾಕಿ ತಂಡದ ವಿಶೇಷ ಆಹ್ವಾನ
ಭಾರತ ಹಾಕಿ ತಂಡದ ಸ್ಟಾರ್ ಮನ್‌ಪ್ರೀತ್ ಸಿಂಗ್ ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿಗೆ ವಿಶೇಷ ಆಹ್ವಾನ ನೀಡಿದ್ದಾರೆ. ಮನ್‌ಪ್ರೀತ್ ಸಿಂಗ್ ದಿಢೀರ್ ಕೊಹ್ಲಿ ಹಾಗೂ ಆರ್‌ಸಿಬಿ ತಂಡಕ್ಕೆ ಆಹ್ವಾನ ನೀಡಿದ್ದು ಯಾಕೆ?

ಹಾಕಿ ತಂಡದಿಂದ ಕೊಹ್ಲಿಗೆ ವಿಶೇಷ ಆಹ್ವಾನ
ಆರ್‌ಸಿಬಿ ತಂಡ ಪ್ಲೇ ಆಫ್ ಆಟಕ್ಕೂ ಮೊದಲು ಕೊನೆಯ ಲೀಗ್ ಪಂದ್ಯ ಆಡುತ್ತಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಇಂದಿನ ಹೋರಾಟದ ಬಳಿಕ ಆರ್‌ಸಿಬಿ ಪ್ಲೇ ಆಫ್ ಪಂದ್ಯ ಆಡಲಿದೆ. ಇದರ ನಡುವೆ ಭಾರತ ಹಾಕಿ ತಂಡದ ಸ್ಟಾರ್ ಮನ್‌ಪ್ರೀತ್ ಸಿಂಗ್, ವಿರಾಟ್ ಕೊಹ್ಲಿಗೆ ವಿಶೇಷ ಆಹ್ವಾನ ನೀಡಿದ್ದಾರೆ. ಭಾರತ ಹಾಕಿ ತಂಡದ ಜೊತೆ ಸೇರಿಕೊಳ್ಳುವಂತೆ ಆಹ್ವಾನ ನೀಡಿದ್ದಾರೆ.

ವಿರಾಟ್ ಕೊಹ್ಲಿಗೆ ಕೊಟ್ಟ ಆಹ್ವಾನ ಏನು?
ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿಗೆ ಹಾಕಿ ಸ್ಟಾರ್ ಮನ್‌ಪ್ರೀತ್ ಸಿಂಗ್ ನೀಡಿದ ಆಹ್ವಾನ ಇದೀಗ ಭಾರಿ ಚರ್ಚೆಯಾಗುತ್ತಿದೆ. ಹಾಕಿ ತಂಡದ ಅಭ್ಯಾಸ ಕ್ಯಾಂಪ್‌ನಲ್ಲಿ ಸೇರಿಕೊಳ್ಳುವಂತೆ ಕೊಹ್ಲಿಗೆ ಆಹ್ವಾನ ನೀಡಲಾಗಿದೆ. ಕೊಹ್ಲಿ ಮಾತ್ರವಲ್ಲ, ಆರ್‌ಸಿಬಿ ತಂಡ ಕೂಡ ಭಾರತ ಹಾಕಿ ತಂಡದ ಟ್ರೈನಿಂಗ್ ಕ್ಯಾಂಪ್ ಸೇರಿಕೊಳ್ಳಲು ಆಹ್ವಾನಿಸಿದ್ದಾರೆ.
ಅತ್ಯುತ್ತಮ ಫಿಟ್ನೆಸ್ ಇದ್ದರೂ ಕೊಹ್ಲಿಗೆ ಆಹ್ವಾನ ಯಾಕೆ?
ಕ್ರಿಕೆಟಿಗರ ಪೈಕಿ ವಿರಾಟ್ ಕೊಹ್ಲಿ ಅತ್ಯುತ್ತಮ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಆದರೂ ಮನ್‌ಪ್ರೀತ್ ಸಿಂಗ್ ಭಾರತ ಹಾಕಿ ತಂಡದ ಅಭ್ಯಾಸದಲ್ಲಿ ಸೇರಿಕೊಳ್ಳುವಂತೆ ಆಹ್ವಾನ ನೀಡಿದ್ದು ಯಾಕೆ ಅನ್ನೋ ಚರ್ಚೆಗಳು ಶುರುವಾಗಿದೆ. ಇದಕ್ಕೆ ವಿರಾಟ್ ಕೊಹ್ಲಿ ಹೇಳಿದ ಮಾತುಗಳೇ ಕಾರಣ.
ಅವರ ಮುಂದೆ ನಾವು ಏನೂ ಅಲ್ಲ
ಇತ್ತೀಚೆಗೆ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಫಿಟ್ನೆಸ್ ಕುರಿತು ಮಾತನಾಡಿದ್ದರು. ಈ ವೇಳೆ ಭಾರತ ಹಾಕಿ ತಂಡದ ಆಟಗಾರರ ಫಿಟ್ನೆಸ್ ಮುಂದೆ ಕ್ರಿಕೆಟಿಗರು ಏನೂ ಇಲ್ಲ. ಅವರ ಫಿಟ್ನೆಸ್‌ಗೆ ಹೋಲಿಸಿದರೆ ನಾವು ಶೇಕಡಾ 15ರಷ್ಟು ಮಾತ್ರ ಎಂದಿದ್ದರು. ಇಷ್ಟೇ ಅಲ್ಲ ಕ್ರಿಕೆಟ್‌ನಲ್ಲಿ ಫಿಟ್ನೆಸ್ ಅತ್ಯಂತ ಪ್ರಮುಖ ಎಂದಿದ್ದಾರೆ.
ವಿರಾಟ್ ಕೊಹ್ಲಿಗೆ ಹಾಕಿ ಫಿಟ್ನೆಸ್
ಹಾಕಿ ಆಟಗಾರರ ಫಿಟ್ನೆಸ್ ತರಬೇತಿ ಅತ್ಯಂತ ಕಠಿಣವಾಗಿರುತ್ತದೆ. ಹೀಗಾಗಿ ಈ ತರಬೇತಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ತಂಡ ಪಾಲ್ಗೊಳ್ಳುವಂತೆ ಮನ್‌ಪ್ರೀತ್ ಆಹ್ವಾನ ನೀಡಿದ್ದಾರೆ. ಹಾಕಿ ಆಟಗಾರರು ಹಾಗೂ ಆರ್‌ಸಿಬಿ ಆಟಗಾರರ ನಡುವೆ ಫಿಟ್ನೆಸ್ ಸ್ಪರ್ಧೆ ಎರ್ಪಡಲಿದೆ. ಇದು ಒಳ್ಳೆಯದು ಎಂದು ಮನ್‌ಪೀತ್ ಸಿಂಗ್ ಹೇಳಿದ್ದಾರೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

