Published : Aug 15, 2026, 07:45 AM ISTUpdated : Aug 15, 2026, 11:31 PM IST

National News Live: ಗೆಳತಿಯ ತಡೆಯಲು ಕಾರಿನ ರೂಫ್‌ ಮೇಲೆ ಹತ್ತಿದ.. ಆದರೆ ಆಕೆಯ ಪ್ರಿಯಕರ ಆತನ ಮೇಲೆ ಕಾರು ಹತ್ತಿಸಿದ

ಸಾರಾಂಶ

ನವದೆಹಲಿ (ಆ.15): ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 80ನೇ ವರ್ಷದ ದಿನಾಚರಣೆಯನ್ನು ಇಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ.ದೆಹಲಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಸತತ 13ನೇ ಸಲ ಧ್ವಜಾರೋಹಣ ಮಾಡಿದ್ದಾರೆ. ಅದರೊಂದಿಗೆ ಕೆಂಪುಕೋಟೆಯಲ್ಲಿ ಇದೇ ಮೊದಲ ಬಾರಿಗೆ ವಂದೇ ಮಾತರಂ ಗೀತೆಯನ್ನು ಗಾಯನ ಮಾಡಲಾಗುತ್ತದೆ. ಸ್ವಚ್ಛತಾ ಕಾರ್ಮಿಕರು ಸೇರಿ 5 ಸಾವಿರ ಮಂದಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಇದೇ ವೇಳೆ ಮೋದಿ ಜೆನ್‌ಝೀ ಹೋರಾಟದ ಬಗ್ಗೆ ತಮ್ಮ ಭಾಷಣದಲ್ಲಿ ಮಾತನಾಡುತ್ತಾರೆಯೇ ಎನ್ನುವ ಕುತೂಹಲವೂ ವ್ಯಕ್ತವಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅದ್ದೂರಿಯಾಗಿ ಸ್ವಾತಂತ್ರ್ಯೋತ್ಸವದ ಆಚರಣೆ ಮಾಡಲಾಗುತ್ತಿದ್ದು, ಬೆಂಗಳೂರಿನ ವಿಧಾನಸೌಧದ ಎದುರು ಇದೇ ಮೊದಲ ಬಾರಿಗೆ ಫ್ರೀಡಮ್‌ ಹಬ್ಬದ ಆಚರಣೆ ನಡೆಯಲಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:31 PM (IST) Aug 15

ಗೆಳತಿಯ ತಡೆಯಲು ಕಾರಿನ ರೂಫ್‌ ಮೇಲೆ ಹತ್ತಿದ.. ಆದರೆ ಆಕೆಯ ಪ್ರಿಯಕರ ಆತನ ಮೇಲೆ ಕಾರು ಹತ್ತಿಸಿದ

ರಾಯ್‌ಪುರದಲ್ಲಿ ಪ್ರೇಯಸಿ ಹಾಗೂ ಆಕೆಯ ಸ್ನೇಹಿತನ ಜೊತೆಗಿನ ಪ್ರೇಮ ವಿವಾದದ ಜಗಳದ ನಂತರ, 34 ವರ್ಷದ ಪರಂಪ್ರೀತ್ ಸಿಂಗ್ ಎಂಬ ಯುವಕನ ಮೇಲೆ ಕಾರು ಹರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಇಬ್ಬರನ್ನು ತಡೆಯಲು ಪರಂಪ್ರೀತ್ ಚಲಿಸುತ್ತಿದ್ದ ಕಾರಿನ ಛಾವಣಿ ಮೇಲೇರಿದ್ದರು, ಆದರೆ ಅವರು ಕೆಳಗೆ ಬಿದ್ದಾಗ ಆರೋಪಿಗಳು ಅವರ ಮೇಲೆಯೇ ಕಾರು ಚಲಾಯಿಸಿ ಪರಾರಿಯಾಗಿದ್ದಾರೆ.

Read Full Story

10:55 PM (IST) Aug 15

ಮಲಗಿದ್ದ ಹಿಮ ಕರಡಿಯನ್ನು ಹಾರ್ನ್ ಹಾಕಿ ಎಬ್ಬಿಸಿದ, ವನ್ಯಜೀವಿ ಶಾಪಕ್ಕೆ ಸಿಬ್ಬಂದಿಗೆ ನಿದ್ದೆ ಇಲ್ಲದಾಯಿತು

ಹಿಮ ಕರಡಿ ತನ್ನ ಪಾಡಿಗೆ ಗಾಢ ನಿದ್ದೆಯಲ್ಲಿತ್ತು. ನಿದ್ದೆಯಲ್ಲಿದ್ದ ಹಿಮ ಕರಡಿಯನ್ನು ಉದ್ದೇಶಪೂರ್ವಕವಾಗಿ ಹಡಗಿನ ಹಾರ್ನ್ ಹಾಕಿ ಸಿಬ್ಬಂದಿ ಎಬ್ಬಿಸಿದ್ದ. ಆತಂಕದಿಂದಲೇ ಎದ್ದ ಹಿಮ ಕರಡಿ ನೀಡಿದ ಶಾಪ ಕ್ಯಾಪ್ಟನ್‌ಗೆ ತಟ್ಟಿದೆ.

Read Full Story

10:45 PM (IST) Aug 15

ತೆಲುಗು ಓದಲು ಬರಲ್ಲ.. ಆದರೂ ಡೈಲಾಗ್ ಹೇಳುವುದರಲ್ಲಿ ಎಕ್ಸ್‌ಪರ್ಟ್ - ಮಹೇಶ್ ಬಾಬು ಸೀಕ್ರೆಟ್ ರಿವೀಲ್!

ಸೂಪರ್‌ಸ್ಟಾರ್ ಕೃಷ್ಣ ಅವರ ಪುತ್ರನಾಗಿ ಚಿತ್ರರಂಗಕ್ಕೆ ಬಂದ ಮಹೇಶ್ ಬಾಬು, ತನ್ನ ತಂದೆಯಿಂದ ಒಂದು ವಿಶೇಷ ಅಭ್ಯಾಸವನ್ನು ಬಳುವಳಿಯಾಗಿ ಪಡೆದಿದ್ದಾರೆ. ಆ ಅಭ್ಯಾಸವೇ ಅವರ ವೃತ್ತಿಜೀವನವನ್ನು ಉತ್ತುಂಗಕ್ಕೇರಿಸಿತೇ? ಏನಿದು ಸ್ವಾರಸ್ಯಕರ ವಿಷಯ?

Read Full Story

10:12 PM (IST) Aug 15

‘ಮರ್ಡರ್’ ಮೂಲಕ ಖ್ಯಾತಿ ಪಡೆದ ನಟಿ ಮಲ್ಲಿಕಾ ಶೆರಾವತ್ - ಅವರ ನಿಜವಾದ ಹೆಸರು ಇದೇನಾ!

Mallika Sherawat: ಹಿಂದಿ ಸಿನಿಮಾರಂಗದಲ್ಲಿ ನಟ-ನಟಿಯರು ಹೆಸರು ಬದಲಿಸಿಕೊಳ್ಳುವುದು ಹೊಸದೇನಲ್ಲ. ಇದೇ ಹಾದಿಯಲ್ಲಿ ಬಂದವರು ನಟಿ ಮಲ್ಲಿಕಾ ಶೆರಾವತ್. ಆ ಹೆಸರು ಬದಲಾಗಿದ್ದೇ ಒಂದು ದೊಡ್ಡ ಕಥೆ.

Read Full Story

09:56 PM (IST) Aug 15

ಆ ವಿಶೇಷ ಸ್ಥಾನಮಾನ ತೆಗೆಯದೇ ಇದ್ದಿದ್ದರೆ, POK ಜನ ಭಾರತಕ್ಕೆ ಸೇರಲು ಹೋರಾಡುತ್ತಿದ್ದರು! ಓಮರ್ ಅಬ್ದುಲ್ಲಾ ಹೇಳಿಕೆ ಸಂಚಲನ

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡದೇ ಇದ್ದಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರದ (POK) ಜನರು ಭಾರತ ಸೇರಲು ಹೋರಾಡುತ್ತಿದ್ದರು ಎಂದು ಮಾಜಿ ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿ ತರಲು ಸರ್ಕಾರ ಬದ್ಧವಾಗಿದೆ ಎಂದರು.

Read Full Story

08:46 PM (IST) Aug 15

‘ತಲ’ ಅಜಿತ್‌ಗೆ ಏನಾಯ್ತು? ಬರೋಬ್ಬರಿ 42 ಕೆಜಿ ತೂಕ ಇಳಿಸಿಕೊಂಡಿದ್ದೇಕೆ? ಅಭಿಮಾನಿಗಳಿಗೆ ಶಾಕ್!

ಕಾಲಿವುಡ್‌ನ ಬಹುಜನಪ್ರಿಯ ನಟ ಅಜಿತ್ ಕುಮಾರ್ ಅವರು 8 ತಿಂಗಳ ಅವಧಿಯಲ್ಲಿ ಬರೋಬ್ಬರಿ 42 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಸ್ವತಃ ಹೇಳಿಕೊಂಡಿದ್ದಾರೆ. ಕಾರ್ ರೇಸಿಂಗ್‌ನಲ್ಲಿ ಭಾಗವಹಿಸಲು ಉತ್ತಮ ಫಿಟ್‌ನೆಸ್ ಅಗತ್ಯವಿತ್ತು.

Read Full Story

08:45 PM (IST) Aug 15

ರಿಲಯನ್ಸ್ ರಿಟೇಲ್‌ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ವಿಭಾಗದ ಸಿಒಒ ಆಗಿ ವಿನೀತ್ ಜೈನ್ ನೇಮಕ, ಈ ಹಿಂದೆ ಎಲ್ಲಿದ್ರು?

ರಿಲಯನ್ಸ್ ರಿಟೇಲ್ ತನ್ನ ಫ್ಯಾಷನ್ ಮತ್ತು ಜೀವನಶೈಲಿ ವಿಭಾಗದ ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿ (COO) ಅನುಭವಿ ಉದ್ಯಮಿ ವಿನೀತ್ ಜೈನ್ ಅವರನ್ನು ನೇಮಕ ಮಾಡಿದೆ. ಸುಮಾರು ಮೂರು ದಶಕಗಳ ಅನುಭವ ಹೊಂದಿರುವ ಜೈನ್, ಈ ಹಿಂದೆ ವಿ-ಮಾರ್ಟ್ ಮತ್ತು ಫ್ಯೂಚರ್ ಗ್ರೂಪ್‌ನಂತಹ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ನೇಮಕಾತಿಯು ರಿಲಯನ್ಸ್‌ನ ಚಿಲ್ಲರೆ ವ್ಯಾಪಾರವನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿದೆ.
Read Full Story

08:20 PM (IST) Aug 15

ಭಾರತೀಯ ಮಾರ್ಕೆಟ್‌ಗೆ Gen Z ಜನಾಂಗ ಎಷ್ಟು ದೊಡ್ಡ ಆಸ್ತಿ? ಅವರು ಶಾಪಿಂಗ್‌ ಮಾಡೋದು ಹೇಗೆ ಗೊತ್ತಾ?

ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 27 ರಷ್ಟಿರುವ ಜೆನ್ ಜಿ (Gen Z) ಜನಾಂಗವು ದೇಶದ ಒಟ್ಟು ಬಳಕೆಯಲ್ಲಿ ಶೇಕಡಾ 43 ರಷ್ಟು ಪಾಲನ್ನು ಹೊಂದುವ ಮೂಲಕ ಇಂದಿನ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಸಂಪೂರ್ಣವಾಗಿ ಡಿಜಿಟಲ್ ಜಗತ್ತಿಗೆ ಒಗ್ಗಿಕೊಂಡಿರುವ ಈ ಯುವ ಪೀಳಿಗೆಯು ಬ್ರ್ಯಾಂಡ್ ನಿಷ್ಠೆಗಿಂತ ಹೆಚ್ಚಾಗಿ ಆನ್‌ಲೈನ್ ಟ್ರೆಂಡ್‌ಗಳು ಹಾಗೂ ನಂಬಿಕೆಗೆ ಹೆಚ್ಚಿನ ಆದ್ಯತೆ ನೀಡಿ ಮಾರುಕಟ್ಟೆಯ ದಿಕ್ಕನ್ನು ಬದಲಾಯಿಸುತ್ತಿದೆ.

Read Full Story

08:19 PM (IST) Aug 15

ಸಾಲ ಕಟ್ಟಲಾಗದಿದ್ದರೆ ಫೋನ್ ಲಾಕ್ ಆಗುತ್ತಾ? ಆರ್‌ಬಿಐನ ಕಟ್ಟುನಿಟ್ಟಿನ ನಿಯಮಗಳ ಮಾಹಿತಿ ಇಲ್ಲಿದೆ

ಆರ್‌ಬಿಐ ಹೊರಡಿಸಿರುವ ಹೊಸ ಮಾರ್ಗಸೂಚಿಗಳ ಪ್ರಕಾರ, ಸಾಲದ ಕಂತು ಬಾಕಿ ಉಳಿದರೆ ಸಾಲದಾತರು ನಿಮ್ಮ ಮೊಬೈಲ್ ಫೋನ್‌ಗಳನ್ನು ನಿಯಮಬಾಹಿರವಾಗಿ ಲಾಕ್ ಮಾಡುವಂತಿಲ್ಲ. ಈ ನಿಯಮಗಳು ಗ್ರಾಹಕರ ಗೌಪ್ಯತೆಯನ್ನು ರಕ್ಷಿಸುತ್ತವೆ ಮತ್ತು ಸಾಲ ವಸೂಲಾತಿಗೆ ಹಂತ-ಹಂತದ ನಿರ್ಬಂಧಗಳನ್ನು ವಿಧಿಸುತ್ತವೆ, ಜೊತೆಗೆ ವಿಳಂಬಕ್ಕೆ ದಂಡವನ್ನೂ ನಿಗದಿಪಡಿಸಿವೆ.
Read Full Story

07:08 PM (IST) Aug 15

ಆರು ಮೂಸ್‌ಗಳು ಬದಲಿಸಿದ ದ್ವೀಪದ ಹಣೆಬರಹ, ನ್ಯೂಫೌಂಡ್‌ಲ್ಯಾಂಡ್‌ನಲ್ಲಿ ಬೋರಿಯಲ್ ಕಾಡುಗಳು ನಾಶದತ್ತ!

ನ್ಯೂಫೌಂಡ್‌ಲ್ಯಾಂಡ್‌ಗೆ ಪರಿಚಯಿಸಲಾದ ಕೆಲವೇ ಮೂಸ್‌ಗಳು, ನೈಸರ್ಗಿಕ ಶತ್ರುಗಳ ಅನುಪಸ್ಥಿತಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬೆಳೆದು ದ್ವೀಪದ ಅರಣ್ಯಗಳಿಗೆ ಕಂಟಕವಾದವು. ಈ ಪರಿಸರ ಅಸಮತೋಲನವನ್ನು ನಿಯಂತ್ರಿಸಲು ಮತ್ತು ಕಾಡುಗಳನ್ನು ರಕ್ಷಿಸಲು, ಇಂದು ಬೇಟೆಯನ್ನು ಒಂದು ಪ್ರಮುಖ ನಿರ್ವಹಣಾ ಸಾಧನವಾಗಿ ಬಳಸಲಾಗುತ್ತಿದೆ. ಪ್ರಸ್ತುತ, ಅರಣ್ಯ ರಕ್ಷಿಸಲು ಬೇಟೆ ಮೂಲಕ ಅವುಗಳ ಸಂಖ್ಯೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತಿದೆ.

Read Full Story

07:06 PM (IST) Aug 15

Trisha Marriage - 2015ರಲ್ಲಿ ತ್ರಿಶಾ ಮದುವೆ ನಿಂತು ಹೋಗಿದ್ದು ಏಕೆ? ಬಯಲಾಯ್ತು ಶಾಕಿಂಗ್ ರಹಸ್ಯ

2015ರಲ್ಲಿ ತ್ರಿಶಾ ತಾವು ಉದ್ಯಮಿಯೊಬ್ಬರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ರಿವೀಲ್ ಮಾಡಿದ್ದರು. ಕೆಲವೇ ದಿನಗಳಲ್ಲಿ ಅವರ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಆ ಬಳಿಕ ಈ ಬಗ್ಗೆ ಮಾತನಾಡಿದ್ದ ತ್ರಿಶಾ, ಅಸಲಿ ಕಾರಣವನ್ನು ರಿವೀಲ್ ಮಾಡಿದ್ದರು.

Read Full Story

07:06 PM (IST) Aug 15

ಟೀಂ ಇಂಡಿಯಾಗೆ ಮೊದಲ ದಿನವೇ ಆಘಾತ.. ಕೆಎಲ್‌ ರಾಹುಲ್‌ಗೆ ಗಾಯ, ತಂಡದಲ್ಲಿ ಭಾರೀ ಆತಂಕ

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಭಾರತದ ಬ್ಯಾಟರ್ ಕೆ ಎಲ್ ರಾಹುಲ್ ಅಜೇಯ 77 ರನ್ ಗಳಿಸಿದ್ದಾಗ ಸ್ನಾಯು ಸೆಳೆತದ ಸಮಸ್ಯೆಯಿಂದಾಗಿ ಗಾಯಗೊಂಡು ಹೊರನಡೆದಿದ್ದಾರೆ. ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ದೇವದತ್ ಪಡಿಕ್ಕಲ್ ಅಜೇಯ 131 ರನ್ ಗಳಿಸಿದ್ದು, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಟೆಸ್ಟ್ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಇತಿಹಾಸ ಬರೆದಿದ್ದಾರೆ.

Read Full Story

06:29 PM (IST) Aug 15

ಸ್ವಾತಂತ್ರ್ಯ ದಿನಾಚರಣೆ ವೇಳೆ ರಾತ್ರೋರಾತ್ರಿ ವೈರಲ್‌ ಆದ ಪುಟಾಣಿ.. ವಿಡಿಯೋದಲ್ಲಿ ಅಂಥದ್ದೇನಿದೆ?

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸೇನಾ ಸಮವಸ್ತ್ರ ಧರಿಸಿರುವ ಪುಟಾಣಿ ಬಾಲಕಿಯ ಅತ್ಯಂತ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

Read Full Story

06:08 PM (IST) Aug 15

ಈ ಜಾಬ್ ಮಾಡ್ತಿದ್ದೀರಾ? ಕೂಡಲೇ ಚೇಂಜ್ ಮಾಡಿ, ಇಲ್ಲ ಎಂದರೆ ಬೀದಿಗೆ ಬೀಳ್ತೀರಾ! ಖ್ಯಾತ CEO ವಾರ್ನಿಂಗ್

ಪಾಲೊ ಆಲ್ಟೊ ನೆಟ್‌ವರ್ಕ್ ಸಿಇಒ ನಿಕೇಶ್ ಅರೋರಾ ಅವರ ಪ್ರಕಾರ, ಎಐ ತಂತ್ರಜ್ಞಾನದಿಂದಾಗಿ ಮುಂದಿನ ಮೂರು ವರ್ಷಗಳಲ್ಲಿ ಕಾರ್ಪೊರೇಟ್ ಉದ್ಯೋಗಗಳಲ್ಲಿ ಭಾರೀ ಬದಲಾವಣೆಯಾಗಲಿದೆ. ಕಾಲಕ್ಕೆ ತಕ್ಕಂತೆ ಉದ್ಯೋಗಿಗಳು ಎಐ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ.

Read Full Story

06:03 PM (IST) Aug 15

ಮೃತ ಮಗನ ರೂಮ್ ಕ್ಲೀನ್ ಮಾಡುವಾಗ ಅಲ್ಲಿದ್ದ ವಸ್ತು ನೋಡಿ ಬಿಕ್ಕಿ ಬಿಕ್ಕಿ ಅತ್ತ ಅಮ್ಮ

ಮೃತ ಮಗನ ಕೋಣೆಯನ್ನು ಸ್ವಚ್ಛಗೊಳಿಸಲು ಹೋದ ತಾಯಿಯೊಬ್ಬರು, ಅಲ್ಲಿನ ವಸ್ತುವೊಂದನ್ನು ನೋಡಿ ಕಣ್ಣೀರು ಹಾಕಿದ್ದಾರೆ. ಮಗನೇ ತನ್ನೊಂದಿಗೆ ಮಾತನಾಡಿದ ಭಾವನೆ ಮೂಡಿಸಿದ ಆ ವಸ್ತುವಿನ ಹೃದಯ ವಿದ್ರಾವಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

05:06 PM (IST) Aug 15

ಯಾವಾಗ್ಲೂ ಆಂಟಿ, ಅಮ್ಮ, ಅಜ್ಜಿಯ ಪಾತ್ರಗಳನ್ನೇ ಮಾಡಲು ಆಗಲ್ಲ - 59 ವರ್ಷದ ಖ್ಯಾತ ನಟಿ

ಖ್ಯಾತ ನಟಿಯೊಬ್ಬರು ವಯಸ್ಸಾದಂತೆ ಸಿಗುವ ಪಾತ್ರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟಿಯರ ವಯಸ್ಸು 30 ದಾಟುತ್ತಿದ್ದಂತೆ ಅವರನ್ನು ಅಜ್ಜಿ ಪಾತ್ರಗಳಿಗೆ ಸೀಮಿತಗೊಳಿಸಲಾಗುತ್ತದೆ ಮತ್ತು ಬಾಲಿವುಡ್ ಒಂದು ನಕಲಿ ಉದ್ಯಮ ಎಂದು ಅವರು ಟೀಕಿಸಿದ್ದಾರೆ.

Read Full Story

05:02 PM (IST) Aug 15

ಚೊಚ್ಚಲ ಟೆಸ್ಟ್‌ ಶತಕ ಚಚ್ಚಿದ ದೇವದತ್ ಪಡಿಕ್ಕಲ್; ಗಾಲೆ ಟೆಸ್ಟ್‌ನಲ್ಲಿ ಕನ್ನಡಿಗರದ್ದೇ ದರ್ಬಾರ್..!

ಭಾರತ ಮತ್ತು ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್‌ನ ಮೊದಲ ದಿನ, ಕನ್ನಡಿಗರಾದ ದೇವದತ್ ಪಡಿಕ್ಕಲ್ ಮತ್ತು ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿದರು. ಪಡಿಕ್ಕಲ್ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದರೆ, ರಾಹುಲ್ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ಈ ಜೋಡಿಯ ಶತಕದ ಜೊತೆಯಾಟದಿಂದ ಭಾರತ ಮೊದಲ ದಿನ ಉತ್ತಮ ಮೊತ್ತ ಕಲೆಹಾಕಿದೆ.
Read Full Story

04:53 PM (IST) Aug 15

ಯೂಟ್ಯೂಬ್ ವಿಡಿಯೋ ರೆಕಾರ್ಡಿಂಗ್‌ ನಡೀತಿತ್ತು.. ಅಶ್ವಿನ್‌ ಮನೆಗೆ ದಿಢೀರ್ ಪೊಲೀಸರು ಎಂಟ್ರಿ! ಅಶ್ವಿನ್‌ ಪತ್ನಿ‌ ಗಾಬರಿ

ರವಿಚಂದ್ರನ್ ಅಶ್ವಿನ್ ಅವರು ತಮ್ಮ ಯೂಟ್ಯೂಬ್ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗ ಅವರ ಮನೆಗೆ ದಿಢೀರನೆ ಪೊಲೀಸರು ಆಗಮಿಸಿದ್ದರು. ಇದು ಯಾವುದೇ ಕಾನೂನು ಸಮಸ್ಯೆಯಾಗಿರದೆ ಕೇವಲ ವೀಸಾ ಮತ್ತು ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ಸಾಮಾನ್ಯ ಪೊಲೀಸ್ ವೆರಿಫಿಕೇಶನ್‌ ಪ್ರಕ್ರಿಯೆಯಾಗಿತ್ತು ಎಂದು ತಿಳಿದುಬಂದಿದೆ.

Read Full Story

04:23 PM (IST) Aug 15

MS Dhoni, ಸುರೇಶ್ ರೈನಾ ಆಗಸ್ಟ್‌ 15ರಂದೇ ಒಟ್ಟಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದೇಕೆ? ಕೊನೆಗೂ ಆ ಸೀಕ್ರೆಟ್ ಬಯಲು..!

2020ರ ಆಗಸ್ಟ್ 15 ರಂದು ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಒಟ್ಟಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ತಮ್ಮ ಜೆರ್ಸಿ ಸಂಖ್ಯೆ 7 ಮತ್ತು 3 ಸೇರಿ 73 ಆಗುವುದರಿಂದ, ಭಾರತದ 73ನೇ ಸ್ವಾತಂತ್ರ್ಯ ದಿನದಂದೇ ವಿದಾಯ ಹೇಳಲು ನಿರ್ಧರಿಸಿದ್ದೆವು ಎಂದು ರೈನಾ ಈ ನಿರ್ಧಾರದ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

Read Full Story

04:12 PM (IST) Aug 15

ಗುಂಡು ತಾಗಿದರೂ ಉಗ್ರರ ಸುಳಿವು ನೀಡಿದ ಭಾರತೀಯ ಸೇನೆಯ ಟೈಸನ್‌ಗೆ ಮೆನ್ಶನ್ ಇನ್ ಡಿಸ್ಪಾಚಸ್ ಗೌರವ

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಭಾರತೀಯ ಸೇನೆಯ ಕಮಾಂಡೋ ಡಾಗ್ ಟೈಸನ್‌ಗೆ ಗೌರವ ಪದಕ ನೀಡಲಾಗಿದೆ. ಕಾಶ್ಮೀರದಲ್ಲಿ ಉಗ್ರರ ವಿರುದ್ದ ನಡೆದ ಕಾರ್ಯಾಚರಣೆಯಲ್ಲಿ ಉಗ್ರರ ಗುಂಡು ತಾಗಿದರೂ ಭಾರತೀಯ ಸೇನೆಗೆ ಮಹತ್ವದ ಸುಳಿವು ನೀಡಿದ ಟೈಸನ್‌ಗೆ ಸೇನಾ ಸನ್ಮಾನ ಘೋಷಿಸಲಾಗಿದೆ.

Read Full Story

03:56 PM (IST) Aug 15

'ವಿಲನ್ ರೋಲ್'ನ ಲೀಸ್ ತೆಗೆದುಕೊಂಡಿದ್ದಾರಾ ಯಶ್? ಈ ಸೀಕ್ರೆಟ್ ಮ್ಯಾಟರ್‌ಗೆ ಉತ್ತರ ಇಲ್ಲಿದೆ ನೋಡಿ!

ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರ ಜನಪ್ರಿಯ ಕಾರ್ಯಕ್ರಮ 'ಆಪ್ ಕಿ ಅದಾಲತ್'ನಲ್ಲಿ ಭಾಗವಹಿಸಿದ್ದ ಯಶ್, ಅಲ್ಲಿ ಕೇಳಲಾದ ಪ್ರತಿಯೊಂದು ಗುಗ್ಲಿ ಎಸೆತಕ್ಕೂ ಸಿಕ್ಸರ್ ಬಾರಿಸಿದ್ದಾರೆ. ರಜತ್ ಶರ್ಮಾರ ‘ರಾವಣ’ನ ಪ್ರಶ್ನೆಗೆ ಯಶ್ ಉತ್ತರ ಇದು..!

Read Full Story

03:22 PM (IST) Aug 15

2030ರ ವೇಳೆಗೆ 1.6 ಬಿಲಿಯನ್ ಟನ್‌ಗೆ ತಲುಪಲಿದೆ ಭಾರತದ ಕಲ್ಲಿದ್ದಲು ಬೇಡಿಕೆ, ವಿನಿಮಯ ಕೇಂದ್ರ ಸ್ಥಾಪನೆಗೆ ಚಿಂತನೆ

ಭಾರತದ ಕಲ್ಲಿದ್ದಲು ಬೇಡಿಕೆಯು 2030ರ ವೇಳೆಗೆ 1.6 ಶತಕೋಟಿ ಟನ್‌ಗಳಿಗೆ ಏರುವ ನಿರೀಕ್ಷೆಯಿದ್ದು, ದೇಶೀಯ ಉತ್ಪಾದನೆಯು ದಾಖಲೆಯ 1 ಶತಕೋಟಿ ಟನ್ ದಾಟಿದೆ. ಈ ಬದಲಾವಣೆಗೆ ಸ್ಪಂದಿಸಲು, ಸರ್ಕಾರವು 'ಒನ್ ಟು ಮೆನಿ' ಮಾರಾಟ ಮಾದರಿಯನ್ನು ಬದಲಿಸಿ, ಪಾರದರ್ಶಕತೆ ಮತ್ತು ಸ್ಪರ್ಧಾತ್ಮಕ ಬೆಲೆಗಾಗಿ 'ಕಲ್ಲಿದ್ದಲು ವಿನಿಮಯ ಕೇಂದ್ರ' ಸ್ಥಾಪಿಸಲು ಮುಂದಾಗಿದೆ.
Read Full Story

03:21 PM (IST) Aug 15

ವಂದೇ ಮಾತರಂ ತಡೆದ ಆರೋಪಕ್ಕೆ ಕಾಂಗ್ರೆಸ್ ಸ್ಪಷ್ಟನೆ - ಹೊಸ ಕಾನೂನಿನ ಪ್ರಕಾರ ಸಂಪೂರ್ಣ ಗೀತೆ ಗಾಯನ ಎಂದ ಜೈರಾಮ್ ರಮೇಶ್

ಸ್ವಾತಂತ್ರ್ಯ ದಿನಾಚರಣೆಯಂದು ವಂದೇ ಮಾತರಂ ಗಾಯನವನ್ನು ಸೋನಿಯಾ ಗಾಂಧಿ ತಡೆದಿದ್ದಾರೆ ಎಂಬ ಬಿಜೆಪಿ ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿದೆ. ಪಕ್ಷದ ಅಧ್ಯಕ್ಷರಿಗೆ ಕುರ್ಚಿ ತರಲು ಸೂಚಿಸಿದ್ದನ್ನೇ ತಪ್ಪಾಗಿ ಬಿಂಬಿಸಲಾಗಿದೆ ಎಂದು ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ.

Read Full Story

03:17 PM (IST) Aug 15

ಫೋನ್‌ ನಿಮ್ಮ ಬೆರಳನ್ನು ಹೇಗೆ ಗುರುತಿಸುತ್ತದೆ? ಸ್ಮಾರ್ಟ್‌ಫೋನ್‌ ʼಟಚ್‌ಸ್ಕ್ರೀನ್‌ʼ ಹಿಂದಿದೆ ರೋಚಕ ತಂತ್ರಜ್ಞಾನ..!

ಸ್ಮಾರ್ಟ್‌ಫೋನ್‌ಗಳು 'ಕೆಪಾಸಿಟಿವ್ ಟಚ್‌ಸ್ಕ್ರೀನ್' ತಂತ್ರಜ್ಞಾನ ಬಳಸುತ್ತವೆ, ಇದು ಸೂಕ್ಷ್ಮ ವಿದ್ಯುತ್ ಕ್ಷೇತ್ರವನ್ನು ಹೊಂದಿರುವ ಪಾರದರ್ಶಕ ಎಲೆಕ್ಟ್ರೋಡ್‌ಗಳ ಮೂಲಕ ಬೆರಳಿನ ಸ್ಪರ್ಶವನ್ನು ಗುರುತಿಸುತ್ತದೆ. ಮಾನವ ದೇಹವು ವಿದ್ಯುತ್ ವಾಹಕ ಗುಣ ಹೊಂದಿರುವುದರಿಂದ, ನಾವು ಸ್ಕ್ರೀನ್ ಸ್ಪರ್ಶಿಸಿದಾಗ ಉಂಟಾಗುವ ವಿದ್ಯುತ್ ಬದಲಾವಣೆಗಳನ್ನು ಗ್ರಹಿಸಿ ಫೋನ್‌ನ ಆಪರೇಟಿಂಗ್ ಸಿಸ್ಟಮ್ ತಕ್ಷಣವೇ ಪ್ರತಿಕ್ರಿಯಿಸುತ್ತದೆ.

Read Full Story

02:25 PM (IST) Aug 15

Lotte Choco Pie ಸೇವನೆ ಆರೋಗ್ಯಕ್ಕೆ ಅಪಾಯಕಾರಿ - 'NM10DC2' ಬ್ಯಾಚ್ ಮಾರುಕಟ್ಟೆಯಿಂದ ವಾಪಸ್‌ ಪಡೆಯಲು ಆಹಾರ ಇಲಾಖೆ ಆದೇಶ!

ಜನಪ್ರಿಯ 'ಲೊಟ್ಟೆ ಚೊಕೊ ಪೈ' ಚಾಕೋಲೆಟ್‌ನ 'NM10DC2' ಬ್ಯಾಚ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ರಾಸಾಯನಿಕ ಸಂರಕ್ಷಕಗಳು ಪತ್ತೆಯಾಗಿವೆ. ಇದನ್ನು ಮಾನವ ಬಳಕೆಗೆ ಅಪಾಯಕಾರಿ ಎಂದು ಪರಿಗಣಿಸಿ, ಆಹಾರ ಸುರಕ್ಷತಾ ಇಲಾಖೆಯು ಈ ಉತ್ಪನ್ನವನ್ನು ತಕ್ಷಣವೇ ಮಾರುಕಟ್ಟೆಯಿಂದ ಹಿಂಪಡೆಯಲು ಆದೇಶಿಸಿದೆ.
Read Full Story

02:07 PM (IST) Aug 15

ಇದು ದುರ್ಬಲ ಹೃದಯದವರಿಗಲ್ಲ; 9.7 ರೇಟಿಂಗ್ ಹೊಂದಿರೋ ವೆಬ್‌ ಸಿರೀಸ್ OTTಯಲ್ಲಿ ಲಭ್ಯ

ಇದು ನೈಜ ಘಟನೆ ಆಧಾರಿತ ವೆಬ್ ಸಿರೀಸ್ ಆಗಿದ್ದು, ಪತಿಯನ್ನು ಕೊ*ಲೆ ಮಾಡಿದ ಮಹಿಳೆಯರ ಪ್ರಕರಣಗಳನ್ನು ಇದು ಒಳಗೊಂಡಿದೆ. 9.7ರ IMDb ರೇಟಿಂಗ್ ಪಡೆದಿರುವ ಈ ಸರಣಿಯನ್ನು ಅಜಿತೇಶ್ ಶರ್ಮಾ ನಿರ್ದೇಶಿಸಿದ್ದಾರೆ.

Read Full Story

01:33 PM (IST) Aug 15

ಶ್ರೀಲಂಕಾ ನೆಲದಲ್ಲಿ ನಿಂತು ಭಾರತದ ರಾಷ್ಟ್ರಧ್ವಜ ಹಾರಿಸಿದ ಟೀಂ ಇಂಡಿಯಾ..! ವಿಡಿಯೋ ವೈರಲ್

ಲಂಕಾ ಪ್ರವಾಸದಲ್ಲಿರುವ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ. ಭಾರತಕ್ಕೆ 600ನೇ ಐತಿಹಾಸಿಕ ಟೆಸ್ಟ್ ಪಂದ್ಯ ಇದಾಗಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ, ಮಳೆಯ ಅಡ್ಡಿಯ ನಡುವೆಯೂ ಉತ್ತಮ ಆರಂಭ ಪಡೆದಿದೆ.
Read Full Story

12:45 PM (IST) Aug 15

Goat Farming - ಅತ್ಯಧಿಕ ಹಣ, ಹಾಲು ನೀಡುವ ಮೇಕೆ ತಳಿ ಯಾವುದು? ಲಕ್ಷಾಧಿಪತಿಯಾಗೋ ಚಾನ್ಸ್

Goat Farming: ಮೇಕೆ ಸಾಕಾಣಿಕೆಯು ಹಾಲು ಮತ್ತು ಮಾಂಸದಿಂದ ಉತ್ತಮ ಆದಾಯ ತರುವ ಲಾಭದಾಯಕ ಉದ್ಯಮವಾಗಿದೆ. ಯಶಸ್ವಿ ಸಾಕಾಣಿಕೆಗೆ ಜಮುನಾಪರಿ, ಬಾರ್ಬರಿ, ಬೀಟಲ್, ಮತ್ತು ಓಸ್ಮಾನಬಾದಿಯಂತಹ ವಿವಿಧ ತಳಿಗಳ ಬಗ್ಗೆ ತಿಳಿದುಕೊಂಡು, ನಿಮ್ಮ ಪ್ರದೇಶ ಮತ್ತು ಉದ್ದೇಶಕ್ಕೆ ಸರಿಹೊಂದುವ ತಳಿಯನ್ನು ಆಯ್ಕೆ ಮಾಡುವುದು ಅತ್ಯಗತ್ಯ.

Read Full Story

12:27 PM (IST) Aug 15

ಬ್ರೇಕಪ್ ಸುದ್ದಿ ಬೆನ್ನಲ್ಲೇ ಮತ್ತೆ ತ್ರಿಶಾ ಪ್ರತ್ಯಕ್ಷ! ಯಾರ ಜೊತೆ ಎಲ್ಲಿ ಬಂದು ಚಮಕ್ ಕೊಟ್ರು ನೋಡಿ!

'ಗಿಲ್ಲಿ' ಸಿನಿಮಾದಿಂದ ಹಿಡಿದು ಕಳೆದ ವರ್ಷ ತೆರೆಕಂಡ 'ಲಿಯೋ'ವರೆಗೆ ಇವರಿಬ್ಬರ ಸ್ನೇಹ ಮತ್ತು ಸಿನಿಮಾ ಪಯಣ ಅದ್ಭುತವಾಗಿದೆ. ವಿಜಯ್ ಮತ್ತು ತ್ರಿಶಾ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡದಿದ್ದರೂ ಸಿಕ್ಕಾಪಟ್ಟೆ ವೈರಲ್ ಅಗ್ತಿದ್ದಾರೆ. ಇಲ್ಲಿದೆ ಹೊಸ ಸ್ಟೋರಿ ನೋಡಿ..

Read Full Story

12:16 PM (IST) Aug 15

ಕ್ರಿಕೆಟ್‌ನಂತೆ ಬಿಸಿನೆಸ್‌ನಲ್ಲೂ ಸಿಕ್ಸರ್ ಹೊಡೆದ 'ಮಾಸ್ಟರ್ ಬ್ಲಾಸ್ಟರ್' - ಸಚಿನ್ ತೆಂಡೂಲ್ಕರ್ ₹5 ಕೋಟಿ ಹೂಡಿಕೆ ಈಗ ಮಲ್ಟಿಬ್ಯಾಗರ್!

ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಆಝಾದ್ ಇಂಜಿನಿಯರಿಂಗ್ ಕಂಪನಿಯಲ್ಲಿ 5 ಕೋಟಿ ರೂಪಾಯಿ ಹೂಡಿಕೆ ಮಾಡಿ ಭಾರಿ ಲಾಭ ಗಳಿಸಿದ್ದಾರೆ. ಡಿಸೆಂಬರ್ 2023ರಲ್ಲಿ ಮಾರುಕಟ್ಟೆಗೆ ಬಂದ ಈ ಕಂಪನಿಯ ಷೇರುಗಳ ಮೌಲ್ಯ ಗಣನೀಯವಾಗಿ ಏರಿಕೆಯಾಗಿದ್ದು, ಸಚಿನ್ ಜೊತೆಗೆ ಸೈನಾ ನೆಹ್ವಾಲ್, ಪಿ.ವಿ. ಸಿಂಧು ಅವರಂತಹ ಕ್ರೀಡಾಪಟುಗಳು ಕೂಡ ಹೂಡಿಕೆ ಮಾಡಿದ್ದಾರೆ.
Read Full Story

11:35 AM (IST) Aug 15

ಅಲ್ಪಸಂಖ್ಯಾತ ಮಕ್ಕಳು ರಫೇಲ್‌ ಯುದ್ಧವಿಮಾನ ಬಿಚ್ಚಿ ಜೋಡಿಸಬಲ್ಲರು, ಆದ್ರೆ ಓದಿದ್ದು ಮರೀತಾರೆ - ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು, ಅಲ್ಪಸಂಖ್ಯಾತ ಯುವಕರು ರಫೇಲ್ ಯುದ್ಧ ವಿಮಾನವನ್ನೇ ಬಿಚ್ಚಿ ಜೋಡಿಸುವಷ್ಟು ಕೌಶಲ್ಯ ಹೊಂದಿದ್ದರೂ, ಓದಿದ್ದನ್ನು ನೆನಪಿಟ್ಟುಕೊಳ್ಳಲು ಹೆಣಗಾಡುತ್ತಾರೆ ಎಂದು ಹೇಳಿದ್ದಾರೆ.

Read Full Story

11:05 AM (IST) Aug 15

ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮಾತನಾಡಲ್ಲ ಎಂದಿದ್ದೇಕೆ ಸೋನು ನಿಗಮ್? ಈ ನಿರ್ಧಾರದ ಹಿಂದಿನ ಸೀಕ್ರೆಟ್ ಇದು!

ಒಂದೆಡೆ ಹುಮಾ ಖುರೇಷಿ, ಆಲಿಯಾ ಭಟ್, ಸೋನಾಕ್ಷಿ ಸಿನ್ಹಾ ಅವರಂತಹ ತಾರೆಯರು ನೀಟ್ ಪ್ರತಿಭಟನೆಗೆ ಬಹಿರಂಗ ಬೆಂಬಲ ಸೂಚಿಸುತ್ತಿದ್ದರೆ, ಸೋನು ನಿಗಮ್ ಮಾತ್ರ ತಮ್ಮದೇ ಆದ ವಿಭಿನ್ನ ಹಾದಿಯಲ್ಲಿ ನಡೆಯುತ್ತಿದ್ದಾರೆ. ಈ ವಿವಾದದ ಬಗ್ಗೆ ಸೋನು ನಿಗಮ್ ಹೇಳಿದ್ದು ಇದು.. ನೋಡಿ..

Read Full Story

10:33 AM (IST) Aug 15

ಸರ್ಕಾರದ ₹100 ಕೋಟಿಯ 1.37 ಎಕರೆ ಕಬಳಿಕೆ, ದಾಖಲೆ ಸಹಿತ ಲೋಕಾಯುಕ್ತ, ಜಿಬಿಎ ದಕ್ಷಿಣ ನಗರ ಪಾಲಿಕೆ ಆಯುಕ್ತರಿಗೆ ದೂರು

ಬೆಂಗಳೂರಿನ ಕೋಣನಕುಂಟೆಯಲ್ಲಿ ಸುಮಾರು 100 ಕೋಟಿ ರೂ. ಮೌಲ್ಯದ 1.37 ಎಕರೆ ಸರ್ಕಾರಿ ಸ್ವತ್ತನ್ನು ಕಾನೂನುಬಾಹಿರವಾಗಿ ಏಳು ಖಾಸಗಿ ವ್ಯಕ್ತಿಗಳಿಗೆ ಖಾತಾ ಮಾಡಿಕೊಟ್ಟಿರುವ ಬಗ್ಗೆ ಬಿಬಿಎಂಪಿ ಮಾಜಿ ಸದಸ್ಯ ಎನ್.ಆರ್. ರಮೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

Read Full Story

10:09 AM (IST) Aug 15

ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯಂತ ಕಡಿಮೆ ಅವಧಿಯ ಕೆಂಪುಕೋಟೆ ಭಾಷಣ ಮಾಡಿದ ಪ್ರಧಾನಿ ಮೋದಿ

80ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ 78 ನಿಮಿಷಗಳ ಕಾಲ ಭಾಷಣ ಮಾಡಿದರು. ಇದು ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಕಡಿಮೆ ಅವಧಿಯ ಭಾಷಣವಾಗಿದ್ದು, 2025ರ 103 ನಿಮಿಷಗಳ ಸುದೀರ್ಘ ಭಾಷಣಕ್ಕೆ ವ್ಯತಿರಿಕ್ತವಾಗಿದೆ.

Read Full Story

09:54 AM (IST) Aug 15

ಬಸ್‌ನಲ್ಲೂ ವಂದೇ ಭಾರತ್ ವೈಭೋಗ - ಶೌಚಾಲಯ, ಪ್ಯಾಂಟ್ರಿ ಹೊಂದಿರುವ ಎಕ್ಸಿಕ್ಯೂಟಿವ್ ಬಸ್ ಆರಂಭಿಸಿದ KSRTC!

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಆಲಪ್ಪುಳ-ಬೆಂಗಳೂರು ಮಾರ್ಗದಲ್ಲಿ 'ವಂದೇ ಭಾರತ್' ಮಾದರಿಯ ಹೊಸ 'ಎಕ್ಸಿಕ್ಯೂಟಿವ್ ಕ್ಲಾಸ್' ಬಸ್ ಸೇವೆಯನ್ನು ಆರಂಭಿಸಿದೆ. ಈ ಐಷಾರಾಮಿ ಬಸ್‌ನಲ್ಲಿ ಶೌಚಾಲಯ, ಪ್ಯಾಂಟ್ರಿ, ಮತ್ತು ವೈಯಕ್ತಿಕ ಮನರಂಜನಾ ಪರದೆಗಳಂತಹ ವಿಶ್ವದರ್ಜೆಯ ಸೌಲಭ್ಯಗಳಿವೆ.

Read Full Story

09:54 AM (IST) Aug 15

Independence day 2026 - ಭಾರತಕ್ಕೆ ಬ್ರಿಟಿಷರಿಂದ ಮುಕ್ತಿ ಸಿಕ್ಕಿದ್ದಷ್ಟೇ, ನಿಜವಾದ ಸ್ವಾತಂತ್ರ್ಯವಲ್ಲ - ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸ್ವಾತಂತ್ರ್ಯ ದಿನದಂದು ದೇಶವಾಸಿಗಳಿಗೆ ಶುಭ ಕೋರಿದ್ದಾರೆ. ನಿಜವಾದ ಸ್ವಾತಂತ್ರ್ಯವೆಂದರೆ ಸಂವಿಧಾನಬದ್ಧ ಸಮಾನತೆ, ನ್ಯಾಯ, ಘನತೆ ಎಂದು ಪ್ರತಿಪಾದಿಸಿದ ಅವರು ಇಂದು ಸಾಂವಿಧಾನಿಕ ಮೌಲ್ಯಗಳಿಗೆ ಸವಾಲು ಎದುರಾಗಿದೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Read Full Story

09:45 AM (IST) Aug 15

ಗಾಲೆ ಟೆಸ್ಟ್‌ - ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ; ಲಂಕಾ ಪಡೆಗೆ ಹೊಸ ಅಸ್ತ್ರ ಪಾದಾರ್ಪಣೆ

ಗಾಲೆಯಲ್ಲಿ ಆರಂಭವಾದ ಭಾರತ-ಶ್ರೀಲಂಕಾ ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಅಭ್ಯಾಸ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳನ್ನು ಕಾಡಿದ್ದ ಯುವ ಸ್ಪಿನ್ನರ್ ಕೇಶಾರ ನುವಾಂತ ಲಂಕಾ ಪರ ಪಾದಾರ್ಪಣೆ ಮಾಡಿದ್ದು, ಸರ್ಫರಾಜ್ ಖಾನ್‌ಗೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ.
Read Full Story

09:36 AM (IST) Aug 15

ಕೆಂಪುಕೋಟೆಯಿಂದಲೇ ದೇಶದ ದಿಮಾಗಿ ನಕ್ಸಲರಿಗೆ ವಾರ್ನಿಂಗ್‌ ನೀಡಿದ ನರೇಂದ್ರ ಮೋದಿ!

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಭಾರತವು ಸಶಸ್ತ್ರ ನಕ್ಸಲಿಸಂ ಅನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿದೆ ಎಂದು ಘೋಷಿಸಿದರು. ಆದರೆ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ 'ದಿಮಾಗಿ ನಕ್ಸಲರು' ಎಂಬ ಹೊಸ ಸವಾಲಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

Read Full Story

09:21 AM (IST) Aug 15

BCCI ಮಾಸ್ಟರ್ ಪ್ಲಾನ್ - ಅಜಿತ್ ಅಗರ್ಕರ್‌, ಕೋಚ್‌ ಗೌತಮ್ ಗಂಭೀರ್‌ಗಿಂತ ಉನ್ನತ ಹುದ್ದೆ ವಿವಿಎಸ್‌ ಲಕ್ಷ್ಮಣ್ ಹೆಗಲಿಗೆ?

ಬಿಸಿಸಿಐ 'ಕ್ರಿಕೆಟ್‌ ನಿರ್ದೇಶಕ' ಎಂಬ ಹೊಸ ಹುದ್ದೆಯನ್ನು ಸೃಷ್ಟಿಸುವ ಸಾಧ್ಯತೆಯಿದ್ದು, ಈ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ನೇಮಕಗೊಳ್ಳುವ ನಿರೀಕ್ಷೆಯಿದೆ. ಈ ಹುದ್ದೆಯು ಕೋಚ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥರಿಗಿಂತ ಉನ್ನತವಾಗಿದ್ದು, ಭಾರತೀಯ ಕ್ರಿಕೆಟ್‌ನ ಸಮಗ್ರ ಕಾರ್ಯಾಚರಣೆಯ ಜವಾಬ್ದಾರಿಯನ್ನು ಲಕ್ಷ್ಮಣ್ ಹೊರಲಿದ್ದಾರೆ.
Read Full Story

09:18 AM (IST) Aug 15

ಶ್ರೀನಗರದ ಲಾಲ್‌ ಚೌಕ್‌ನಲ್ಲಿ ಮೈತುಂಬಾ ತ್ರಿವರ್ಣ ಬಳಿದುಕೊಂಡು ಸಂಭ್ರಮಿಸಿದ ಪ್ರವಾಸಿಗ! ವೈರಲ್

ಸ್ವಾತಂತ್ರ್ಯ ದಿನದಂದು ಶ್ರೀನಗರದ ಐತಿಹಾಸಿಕ ಲಾಲ್ ಚೌಕ್‌ನಲ್ಲಿ ಅಹಮದಾಬಾದ್‌ನ ಪ್ರವಾಸಿ ಅರುಣ್ ಹರ್ಯಾನಿ ಮೈತುಂಬಾ ತ್ರಿವರ್ಣ ಧ್ವಜದ ಬಣ್ಣ ಬಳಿದುಕೊಂಡು ಗಮನ ಸೆಳೆದಿದ್ದಾರೆ. 2022ರಿಂದ ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗ ಈ ಬಾರಿ ಬದಲಾವಣೆ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Read Full Story

More Trending News