MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Trisha Marriage: 2015ರಲ್ಲಿ ತ್ರಿಶಾ ಮದುವೆ ನಿಂತು ಹೋಗಿದ್ದು ಏಕೆ? ಬಯಲಾಯ್ತು ಶಾಕಿಂಗ್ ರಹಸ್ಯ

Trisha Marriage: 2015ರಲ್ಲಿ ತ್ರಿಶಾ ಮದುವೆ ನಿಂತು ಹೋಗಿದ್ದು ಏಕೆ? ಬಯಲಾಯ್ತು ಶಾಕಿಂಗ್ ರಹಸ್ಯ

2015ರಲ್ಲಿ ತ್ರಿಶಾ ತಾವು ಉದ್ಯಮಿಯೊಬ್ಬರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ರಿವೀಲ್ ಮಾಡಿದ್ದರು. ಕೆಲವೇ ದಿನಗಳಲ್ಲಿ ಅವರ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಆ ಬಳಿಕ ಈ ಬಗ್ಗೆ ಮಾತನಾಡಿದ್ದ ತ್ರಿಶಾ, ಅಸಲಿ ಕಾರಣವನ್ನು ರಿವೀಲ್ ಮಾಡಿದ್ದರು.

2 Min read
Author : Sumanth SN
Published : Aug 15 2026, 07:06 PM IST
Share this Photo Gallery
  • FB
  • TW
  • Linkdin
  • Whatsapp
16
ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿ
Image Credit : Instagram@trishakrishnan

ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿ

ದಶಕಗಳ ಕಾಲ ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋಯಿನ್ ಆಗಿ ಮಿಂಚಿದ್ದ ತ್ರಿಶಾ, ತಮ್ಮದೇ ಅಭಿಮಾನಿಗಳ ಪಡೆಯನ್ನು ಹೊಂದಿದ್ದಾರೆ. ವಯಸ್ಸು ನಾಲ್ಕು ದಶಕಗಳು ದಾಟುತ್ತಿದ್ದರು, ಸತತವಾಗಿ ಕ್ರೇಜಿ ಆಫರ್‌ಗಳೊಂದಿಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಟಾಲಿವುಡ್ ಮೆಗಾಸ್ಟಾರ್ ಅವರ 'ವಿಶ್ವಂಭರ' ಸಿನಿಮಾದಂತಹ ಬಿಗ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡು ಸಖತ್ ಬ್ಯುಸಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
11 ವ‍ರ್ಷಗಳ ಹಿಂದೆಯೇ 'ಆ' ಘಟನೆ
Image Credit : Instagram@trishakrishnan

11 ವ‍ರ್ಷಗಳ ಹಿಂದೆಯೇ 'ಆ' ಘಟನೆ

ವೃತ್ತಿಪರವಾಗಿ ಸಕ್ಸಸ್ ಪಡೆದುಕೊಂಡು ಮುನ್ನಡೆ ಸಾಧಿಸುತ್ತಿದ್ದರೂ, ತ್ರಿಶಾ ಅವರು ವೈಯುಕ್ತಿಕ ಜೀವನ, ಅದರಲ್ಲೂ ಅವರ ಮದುವೆ ಬಗ್ಗೆ ಕಾಲ ಕಾಲಕ್ಕೆ ಯಾವುದೋ ಒಂದು ರೂಮರ್ ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ ಹಲವರು ಮಂದಿಗೆ ತ್ರಿಶಾ ಅವರ ಮದುವೆ ಕುರಿತ ಘಟನೆಯೊಂದು 11 ವರ್ಷಗಳ ಹಿಂದೆಯೇ ಒಂದು ಪ್ರಮುಖ ಪರಿಣಾಮ ಉಂಟು ಮಾಡಿತ್ತು ಎಂಬ ವಿಚಾರ ತಿಳಿದಿಲ್ಲ.

Related Articles

Related image1
ಲವ್​ ಮಾಡ್ತಿದ್ರೂ Vijay-Trisha ಮದ್ವೆಯಾಕಾಗಿಲ್ಲ? ಇಬ್ಬರ ಸಂಬಂಧಕ್ಕೆ ತಡೆಯೊಡ್ಡಿದ ಆ ವ್ಯಕ್ತಿಯ ನೆನೆದ ಹಿರಿಯ ನಟಿ
Related image2
S Janaki - Trisha: ನಟಿ ತ್ರಿಷಾ ಜೊತೆ ಎಸ್ ಜಾನಕಿಗೆ ಸ್ಪೆಷಲ್ ನಂಟು; ಆ '96'ರಲ್ಲಿದೆ ಅಪರೂಪದ ನೆನಪು!
36
ಚೆನ್ನೈ ಮೂಲಕ ಪ್ರಮುಖ ಬ್ಯುಸಿನೆಸ್ ಮೆನ್ ಜೊತೆ ನಿಶ್ಚಿತಾರ್ಥ
Image Credit : Instagram@trishakrishnan

ಚೆನ್ನೈ ಮೂಲಕ ಪ್ರಮುಖ ಬ್ಯುಸಿನೆಸ್ ಮೆನ್ ಜೊತೆ ನಿಶ್ಚಿತಾರ್ಥ

2014ರಲ್ಲಿ ಚೆನ್ನೈ ಮೂಲಕ ಪ್ರಮುಖ ಬ್ಯುಸಿನೆಸ್ಮೆನ್ ಆಗಿದ್ದ ವರುಣ್ ಮಣಿಯನ್ ಎಂಬವರೊಂದಿಗೆ ತ್ರಿಶಾ ಅವರ ಮದುವೆ ನಿಶ್ಚಿತಾರ್ಥ ನಡೆದಿತ್ತು. ಈ ವಿಚಾರವನ್ನು 2015ರ ಜನವರಿಯಲ್ಲಿ ತ್ರಿಶಾ ಅವರೇ ಸ್ವತಃ ಅಭಿಮಾನಿಗಳಿಗೆ ತಿಳಿಸಿದ್ದರು. ಆದರೆ ಈ ಸಂತಸ ಎಷ್ಟೋ ಕಾಲ ಉಳಿಯಲಿಲ್ಲ. ಕೆಲವೇ ತಿಂಗಳಲ್ಲಿ ಮದುವೆ ನಡೆಯಬೇಕು ಎಂಬ ಸಿದ್ಧತೆಗಳ ನಡುವೆಯೇ ಮದುವೆ ರದ್ದಾಗಿತ್ತು. ಇದಕ್ಕೆ ಪ್ರಮುಖ ಕಾರಣ ಏನಪ್ಪಾ ಅಂತ ನೋಡುವುದಾರೆ, ತ್ರಿಶಾ ಅವರಿಗೆ ಮದುವೆ ಬಳಿಕ ಸಿನಿಮಾಗಳಿಂದ ಸಂಪೂರ್ಣವಾಗಿ ದೂರ ಉಳಿಯಬೇಕು ಎಂಬ ಷರತ್ತು ಹಾಕಿದ್ದರಂತೆ. ಈ ಕಾರಣದಿಂದಲೇ ಅವರು ಬ್ರೇಕ್ ಮಾಡಿಕೊಂಡಿದ್ದರಂತೆ ಎಂದು ಆಗ ವರದಿಗಳು ಪ್ರಕಟವಾಗಿದ್ದವು.

46
ಕೊನೆಯ ವರೆಗೂ ಸಿನಿಮಾದಲ್ಲಿ ನಟಿಸಬೇಕು
Image Credit : Instagram@trishakrishnan

ಕೊನೆಯ ವರೆಗೂ ಸಿನಿಮಾದಲ್ಲಿ ನಟಿಸಬೇಕು

ಈ ಘಟನೆ ಬಳಿಕ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ತ್ರಿಶಾ, ಮದುವೆ ಮುರಿದು ಬೀಳಲು ಕಾರಣವೇನು ಅಂತ ರಿವೀಲ್ ಮಾಡಿದ್ದರು. 'ನಾನು ಮದುವೆಯಾಗಬೇಕು ಎಂದುಕೊಂಡಿದ್ದ ವ್ಯಕ್ತಿ, ನನ್ನನ್ನು ಸಿನಿಮಾಗಳಲ್ಲಿ ನಟಿಸೋದನ್ನು ನಿಲ್ಲಿಸಲು ಹೇಳಿದ್ದರು. ಇದರಿಂದ ಸಿನಿಮಾಗಳ ಬದಲು ನಾನು ನನ್ನ ನಿಶ್ಚಿತಾರ್ಥ ಮುರಿದುಕೊಳ್ಳಲು ನಿರ್ಧಾರ ಮಾಡಿದ್ದೆ. ನಾನು ಗರ್ಭಿಣಿಯಾದ ಸಮಯದಲ್ಲಿ ಮಾತ್ರ ಸಿನಿಮಾಗಳಿಗೆ ವಿರಾಮ ಕೊಡ್ತೀನಿ. ಒಂದೊಮ್ಮೆ ನನಗೆ ಪ್ರಮುಖ ಅವಕಾಶಗಳು ಸಿಗಲಿಲ್ಲ ಎಂದರೆ, ನನ್ನ ಇಮೇಜ್‌ಗೆ ಸೂಟ್ ಆಗುವ ಬೇರೆ ಯಾವುದೇ ಪಾತ್ರ ಆದರೂ ನಾನು ಮಾಡ್ತೀನಿ. ಆದರೆ ಸಿನಿಮಾಗಳಿಂದ ಮಾತ್ರ ದೂರ ಆಗೋದಿಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ಸಿನಿಮಾಗಳಲ್ಲಿ ನಟಿಸಬೇಕು ಅನ್ನೋದು ನನ್ನ ಆಸೆ' ಎಂದು ಹೇಳಿದ್ದರು.

56
ಹಲವು ನಟರೊಂದಿಗೆ ತ್ರಿಶಾ ಹೆಸರು!
Image Credit : Instagram@trishakrishnan

ಹಲವು ನಟರೊಂದಿಗೆ ತ್ರಿಶಾ ಹೆಸರು!

ನಿಶ್ಚಿತಾರ್ಥ ರದ್ದಾದ ಬಳಿಕ ತ್ರಿಶಾ ಸಿಂಗಲ್ ಆಗಿ ಜೀವನ ನಡೆಸಲು ನಿರ್ಧಾರ ಮಾಡಿದ್ದರು. ಸಿಂಗಲ್ ಆಗಿ ಇರೋದಕ್ಕೆ ಬಹಳ ಸಂತಸ ಇದೆ ಎಂದಿದ್ದ ತ್ರಿಶಾ ಅವರು, ಆ ಬಳಿಕ ಹಲವು ಬಾರಿ ಸುದ್ದಿಯಾಗುತ್ತಲೇ ಬರ್ತಿದ್ದರೆ. ಟಾಲಿವುಡ್ ನಟ ರಾಣಾ ಸೇರಿದಂತೆ ಹಲವು ಸಿನಿಮಾ ಪ್ರಮುಖರ ಜೊತೆ ತ್ರಿಶಾ ಅವರ ಹೆಸರು ಕೇಳಿ ಬರುತ್ತಿದ್ದವು. ಆದರೆ ಅವುಗಳನ್ನು ತ್ರಿಶಾ ತಿರಸ್ಕಾರ ಮಾಡಿ ತಮ್ಮ ಕೆಲಸ ತಾವು ಮಾಡಿಕೊಂಡು ಹೋಗುತ್ತಿದ್ದರು.

66
ಟೀಕೆಗಳಿಗೆ ತಿರುಗೇಟು
Image Credit : Asianet News

ಟೀಕೆಗಳಿಗೆ ತಿರುಗೇಟು

ಸದ್ಯ ತಮಿಳು ನಟ, ಸ್ಟಾರ್ ಹೀರೋ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರೊಂದಿಗೆ ತ್ರಿಶಾ ಅವರ ಹೆಸರು ಭಾರೀ ಚರ್ಚೆ ಆಗುತ್ತಿದೆ. ಹಲವು ಸ್ಟೋರಿಗಳು ಈ ಕುರಿತಂತೆ ವೈರಲ್ ಆಗುತ್ತಿದೆ. ರಾಜಕೀಯವಾಗಿಯೂ ಈ ವಿಚಾರವನ್ನು ಬಳಕೆ ಮಾಡಿಕೊಳ್ಳಲು ಕೆಲವು ನಾಯಕರು, ಸಿನಿಮಾ ಕಲಾವಿದರು ಮುಂದಾಗುತ್ತಿದ್ದಾರೆ. ಬೇಕು ಅಂತಲೇ ತ್ರಿಶಾ ಅವರ ಹೆಸರು ತೆಗೆದು ವಿವಾದ ಮಾಡುತ್ತಿದ್ದಾರೆ. ಆದರೆ ಈ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದ ತ್ರಿಶಾ, ತಾಳ್ಮೆ ಮುಂದುವರಿಸಿದ್ದು, ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡುವ ಕೆಲಸ ಕೂಡ ಮಾಡುತ್ತಿದ್ದಾರೆ. ವಿವಾದಗಳು, ಟೀಕೆಗಳು, ವಿಶ್ಲೇಷಣೆಗಳ ಬಗ್ಗೆ ಗಮನ ನೀಡದೆ ಸಿನಿಮಾ ಕ್ಷೇತ್ರದ ಜರ್ನಿಯನ್ನು ಮುಂದುವರಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SS
Sumanth SN
ಕಳೆದ 09 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಊರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲುಕಿನ ಸೀಕಲ್ಲು ಎಂಬ ಗ್ರಾಮ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದು, ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್, ನ್ಯೂಸ್18 ಕನ್ನಡದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಈಗ ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಲೀಡ್-ಲೋಕಲ್ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ, ರಾಜಕೀಯ, ಸ್ಪೋರ್ಟ್ಸ್, ಕೃಷಿ ನನ್ನ ಆಸಕ್ತಿಯ ಕ್ಷೇತ್ರಗಳು.
ನಟಿ
ತ್ರಿಷಾ ಕೃಷ್ಣನ್
ತಮಿಳುನಾಡು

Latest Videos
Recommended Stories
Recommended image1
‘ಟಾಕ್ಸಿಕ್’ನಲ್ಲಿ ಮೆಲ್ಲಿಸಾ ಪಾತ್ರವೇ ವಿಭಿನ್ನ: ಯಶ್ ಜೊತೆ ನಟಿಸಿದ ಅನುಭವದ ಬಗ್ಗೆ ರುಕ್ಮಿಣಿ ವಸಂತ್ ಮಾತು
Recommended image2
ಕುಮಟಾದಲ್ಲಿ ಶೂಟಿಂಗ್.. ಮತ್ತೆ ಕನ್ನಡಕ್ಕೆ ಬಂದ 'ಕೆಜಿಎಫ್‌' ನಟಿ ಶ್ರೀನಿಧಿ ಶೆಟ್ಟಿ; ಹೀರೋ ಯಾರು? ಯಾವ ಸಿನಿಮಾ?
Recommended image3
"ಕರ್ಣನ ಬೆನ್ನಲ್ಲೇ ನಿಧಿಗೂ ಆಕ್ಸಿಡೆಂಟ್"? ಭವ್ಯಾ ಗೌಡ ಹಂಚಿಕೊಂಡ ವಿಡಿಯೋ ನೋಡಿ ಶಾಕ್ ಆದ ಫ್ಯಾನ್ಸ್!
Related Stories
Recommended image1
ಲವ್​ ಮಾಡ್ತಿದ್ರೂ Vijay-Trisha ಮದ್ವೆಯಾಕಾಗಿಲ್ಲ? ಇಬ್ಬರ ಸಂಬಂಧಕ್ಕೆ ತಡೆಯೊಡ್ಡಿದ ಆ ವ್ಯಕ್ತಿಯ ನೆನೆದ ಹಿರಿಯ ನಟಿ
Recommended image2
S Janaki - Trisha: ನಟಿ ತ್ರಿಷಾ ಜೊತೆ ಎಸ್ ಜಾನಕಿಗೆ ಸ್ಪೆಷಲ್ ನಂಟು; ಆ '96'ರಲ್ಲಿದೆ ಅಪರೂಪದ ನೆನಪು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved