ಯಾವಾಗ್ಲೂ ಆಂಟಿ, ಅಮ್ಮ, ಅಜ್ಜಿಯ ಪಾತ್ರಗಳನ್ನೇ ಮಾಡಲು ಆಗಲ್ಲ: 59 ವರ್ಷದ ಖ್ಯಾತ ನಟಿ
ಖ್ಯಾತ ನಟಿಯೊಬ್ಬರು ವಯಸ್ಸಾದಂತೆ ಸಿಗುವ ಪಾತ್ರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟಿಯರ ವಯಸ್ಸು 30 ದಾಟುತ್ತಿದ್ದಂತೆ ಅವರನ್ನು ಅಜ್ಜಿ ಪಾತ್ರಗಳಿಗೆ ಸೀಮಿತಗೊಳಿಸಲಾಗುತ್ತದೆ ಮತ್ತು ಬಾಲಿವುಡ್ ಒಂದು ನಕಲಿ ಉದ್ಯಮ ಎಂದು ಅವರು ಟೀಕಿಸಿದ್ದಾರೆ.

ಮಹಿಳಾ ಕಲಾವಿದರ ಪಾತ್ರದ ಬಗ್ಗೆ ಟೀಕೆ
ಸಾಮಾನ್ಯವಾಗಿ ಒಂದೆರಡು ಸೀರಿಯಲ್ ಬಳಿಕ ಲೀಡ್ ರೋಲ್‌ನಲ್ಲಿರುವ ನಟಿಯರನ್ನು ಅಕ್ಕ/ಚಿಕ್ಕಮ್ಮ/ಅಜ್ಜಿ ಅಂತಹ ಪಾತ್ರಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತೆ ಎಂಬುವುದು ಹಲವು ಕಲಾವಿದರ ಮಾತಾಗಿದೆ. ಇದೀಗ ಈ ಬಗ್ಗೆ ಖ್ಯಾತ ನಟಿಯೊಬ್ಬರು ಮಾತನಾಡಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ನಟಿ, ಬಾಲಿವುಡ್‌ನಲ್ಲಿ ಕಲಾವಿದರನ್ನು ನಡೆಸಿಕೊಳ್ಳುವ ರೀತಿಯನ್ನು ಟೀಕಿಸಿದ್ದಾರೆ.
ನಟಿಯರಿಗೆ ಸಿಗೋ ಪಾತ್ರಗಳು
ಬಾಲಿವುಡ್ ಸಿನಿಮಾ, ಹಿಂದಿ ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಕಿತು ಗಿದ್ವಾನಿ, ವಯಸ್ಸು ಆಗುತ್ತಿದ್ದಂತೆ ನಟಿಯರಿಗೆ ಸಿಗೋ ಪಾತ್ರಗಳು ಮತ್ತು ಕಲರ್‌ಫುಲ್ ದುನಿಯಾದ ರಿಯಾಲಿಟಿ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಕಿರು, ಬಾಲಿವುಡ್‌ನ್ನು ನಕಲಿ ಉದ್ಯಮ ಎಂದು ಕರೆಯುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಆಂಟಿ, ಅಮ್ಮ, ಅಜ್ಜಿ ಅಥವಾ ಅತ್ತೆ ಪಾತ್ರ ಮಾಡಲು ಇಷ್ಟಪಡಲ್ಲ
ಬಾಲಿವುಡ್ ಅಸ್ಪಷ್ಟ ಮತ್ತು ಯಾವುದೇ ನಿಯಮಗಳಿಲ್ಲದೇ ನಡೆಯುವ ಉದ್ಯಮವಾಗಿದೆ. ಬಾಲಿವುಡ್ ಇಂಡಸ್ಟ್ರಿಯ ಕಲಾವಿದರಿಗೆ ತಮ್ಮ ಪ್ರತಿಭೆಯ ಲಾಭ ಸಿಗದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿರುವ ನಟಿ ಕಿತು, ಮಹಿಳೆಯರಿಗೆ ತೂಕವುಳ್ಳ ಪಾತ್ರಗಳು ಕಡಿಮೆಯಾಗುತ್ತಿವೆ. ಮಹಿಳಾ ಕಲಾವಿದರಿಗೆ ವಯಸ್ಸಿಗೆ ತಕ್ಕಂತಹ ಸೂಕ್ತ ಪಾತ್ರಗಳು ಸಿಗುತ್ತಿಲ್ಲ. ನಾವು ಎಲ್ಲಾ ಸಂದರ್ಭದಲ್ಲಿಯೂ ಆಂಟಿ, ಅಮ್ಮ ಅಥವಾ ಅತ್ತೆ ಪಾತ್ರ ಮಾಡಲು ಇಷ್ಟಪಡಲ್ಲ. ಕಾಮಿಡಿ, ಆಕ್ಷನ್ ಮತ್ತು ಜನರು ಇಷ್ಟಪಡುವಂತಹ ಪಾತ್ರಗಳಲ್ಲಿ ನಟಿಸಲು ಇಷ್ಟಪಡುತ್ತೇವೆ ಅಂತಾರೆ.
ವಿಚಿತ್ರ ಮತ್ತು ನಿಯಮಗಳಿಲ್ಲದ ಉದ್ಯಮ
ಇನ್ನು ಕಿರುತರೆ ಬಗ್ಗೆಯೂ ಮಾತನಾಡಿರುವ ಕಿತು ಗಿದ್ವಾನಿ, ನಟಿಯರ ವಯಸ್ಸು 30 ಆಗುತ್ತಿದ್ದಂತೆ ಅವರನ್ನು ಅಜ್ಜಿ ಪಾತ್ರಕ್ಕೆ ಶಿಫ್ಟ್ ಮಾಡಲಾರಂಭಿಸುತ್ತಾರೆ. ಅವರ ಮುಖದಲ್ಲಿ ವಯಸ್ಸಾಗಿರೋ ಒಂದೇ ಒಂದು ಕುರುಹು ಸಹ ಕಾಣಿಸುತ್ತಿರಲ್ಲ. ಆದ್ರೂ ಅಂತಹ ಪಾತ್ರಗಳೇ ಸಿಗುತ್ತವೆ. ಇದೊಂದು ವಿಚಿತ್ರ ಮತ್ತು ನಿಯಮಗಳಿಲ್ಲದ ಉದ್ಯಮವಾಗಿದೆ ಎಂದಿದ್ದಾರೆ.
ಬಾಲಿವುಡ್ ಅನ್ನೋದು ನಕಲಿ ಇಂಡಸ್ಟ್ರಿ
ಬಾಲಿವುಡ್ ಅನ್ನೋದು ನಕಲಿ ಇಂಡಸ್ಟ್ರಿ ಆಗಿದ್ದು, ಅಸ್ಪಷ್ಟವಾದ ನಿಯಮಗಳಿಂದ ಇಲ್ಲಿ ಕೆಲಸ ನಡೆಯುತ್ತದೆ. ಭಾರತದಲ್ಲಿ ಹಾಲಿವುಡ್‌ನ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್‌ನಂತೆ ಏನೂ ಇಲ್ಲ. 10 ವರ್ಷಗಳ ಕಾಲ ಕೆಲಸ ಮಾಡಿದ ನಂತರ, ಮುಂದಿನ 10 ವರ್ಷಗಳ ಕಾಲ ರಾಯಲ್ಟಿ ಹಣದಿಂದ ಬದುಕಲು ಸಾಧ್ಯವಾಗಬೇಕಿತ್ತು. ಆದ್ರೆ ಇಲ್ಲಿ 40 ವರ್ಷಗಳ ಕಾಲ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಎಂದು ಕಿತು ಗಿದ್ವಾನಿ ಹೇಳುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

