ಪಾಲೊ ಆಲ್ಟೊ ನೆಟ್‌ವರ್ಕ್ ಸಿಇಒ ನಿಕೇಶ್ ಅರೋರಾ ಅವರ ಪ್ರಕಾರ, ಎಐ ತಂತ್ರಜ್ಞಾನದಿಂದಾಗಿ ಮುಂದಿನ ಮೂರು ವರ್ಷಗಳಲ್ಲಿ ಕಾರ್ಪೊರೇಟ್ ಉದ್ಯೋಗಗಳಲ್ಲಿ ಭಾರೀ ಬದಲಾವಣೆಯಾಗಲಿದೆ. ಕಾಲಕ್ಕೆ ತಕ್ಕಂತೆ ಉದ್ಯೋಗಿಗಳು ಎಐ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ.
ವಿಶ್ವದ ಸೈಬರ್ ಸೆಕ್ಯೂಟಿರಿ ದಿಗ್ಗಜ ಪಾಲೊ ಆಲ್ಟೊ ನೆಟ್‌ವರ್ಕ್‌ನ ಬಿಲಿಯನೇರ್ ಸಿಇಒ ನಿಕೇಶ್ ಅರೋರಾ, ಆರ್ಟಿಫಿಶಿಯಲ್ ಇಂಟೆಲಿಜನ್ಸ್ (ಎಐ) ತಂತ್ರಜ್ಞಾನದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಮುಂಬರುವ ಮೂರು ದಿನಗಳಲ್ಲಿ ಕಾರ್ಪೊರೇಟ್ ಉದ್ಯೋಗಿಗಳ ಸ್ವರೂಪದಲ್ಲಿ ಭಾರೀ ಬದಲಾವಣೆ ಆಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಕಂಪನಿಗಳ ಮಾರ್ಕೆಟಿಂಗ್, ಫೈನಾನ್ಸ್, ಹೆಚ್‌ಆರ್ ನಂತರ ಜನಲರ್ ಅಂಡ್ ಅಡ್ಮಿನಿಸ್ಟ್ರೇಟಿವ್ ವಿಭಾಗದಲ್ಲಿ ಪ್ರಮುಖ ಬದಲಾವಣೆಗಳಾಗಿದೆ ಎಂದು ಹೇಳಿದ್ದಾರೆ. ಇದರಿಂದ ಮುಂಬರುವ ಮೂರು ವರ್ಷಗಳಲ್ಲಿ ಈ ವಿಭಾಗಗಳಲ್ಲಿ ಕೆಲಸ ಮಾಡುವವರ ಸಂಖ್ಯೆ ಅರ್ಧ ಕಡಿಮೆಯಾಗುವ ಅವಕಾಶವಿದೆ ಎಂದು ಒಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಎಐ ತಂತ್ರಜ್ಞಾನದ ಅಭಿವೃದ್ಧಿಯ ವೇಗ!
ಈ ಹಿಂದೆ ಗೂಗಲ್ ಸಂಸ್ಥೆಯಲ್ಲಿ ಅತ್ಯಧಿಕ ಸಂಬಳ ಪಡೆದ ಉದ್ಯೋಗಿ ಎಂಬ ದಾಖಲೆ ಬರೆದಿದ್ದ ಅರೋರಾ, ಸದ್ಯ ಮಾರ್ಕೆಟ್‌ನಲ್ಲಿ ವಿಸ್ತೃತವಾಗಿರುವ SaaS (ಸಾಫ್ಟ್‌ವೇರ್ ಆಸ್ ಎ ಸರ್ವೀಸ್) ಅಪ್ಲಿಕೇಷನ್‌ಗಳ ಸ್ಥಾನವನ್ನು ಭವಿಷ್ಯದಲ್ಲಿ ಎಜೆಂಟಿಕ್ ಎಐ (Agentic AI) ವ್ಯವಸ್ಥೆಗಳು ತುಂಬುತ್ತವೆ. ಸದ್ಯ ಸಾಸ್ ಸಾಫ್ಟ್ವೇರ್ ಗಳಿಗೆ ಯಾವುದೇ ಸ್ವತಃ ಅಭಿಪ್ರಾಯ ಇರೋದಿಲ್ಲ, ಆದರೆ ಹೊಸ ಎಐ ಅಪ್ಲಿಕೇಷನ್‌ಗಳಲ್ಲಿ ಒಂದು ಪ್ರತ್ಯೇಕ ಅಭಿಪ್ರಾಯವನ್ನು ಹೊಂದಿರುತ್ತವೆ ಎಂದು ವಿಶ್ಲೇಷಣೆ ಮಾಡಿದ್ದಾರೆ.
ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳ ಅಗತ್ಯತೆ ಕುಸಿತ
ಐಐಟಿ ವಾರಣಾಸಿ ವಿದ್ಯಾರ್ಥಿಯಾಗಿರುವ ಅರೋರಾ, ಅಧುನಿಕ ಎಐ ಸಹಾಯಕರು ಎಷ್ಟು ಸಮರ್ಥವಾಗಿ ಕೆಲಸ ಮಾಡುತ್ತವೆ ಎಂದು ವಿವರಿಸುವ ಪ್ರಯತ್ನ ಮಾಡಿದ್ದಾರೆ. ಒಂದು ಮಾರ್ಕೆಟಿಂಗ್ ತಂಡ ತಯಾರಿಸಿದ ಕಂಟೆಂಟನ್ನು ಎಐ ಪರಿಶೀಲನೆ ನಡೆಸಿ, ಅದು ಬ್ರ್ಯಾಂಡ್ ಶೈಲಿಗೆ ಉತ್ತಮವಾಗಿಲ್ಲ ಎಂದು ಹೇಳಿ, ಅದಕ್ಕೆ ಬದಲಾಗಿ ಮತ್ತಷ್ಟು ಉತ್ತಮ ಶಿಫಾರಸ್ಸುಗಳನ್ನು ಸ್ವತಃ ನೀಡುತ್ತದೆ ಎಂದು ತಿಳಿಸಿದ್ದಾರೆ. ಈ ಮಟ್ಟದ ಬುದ್ಧಿವಂತಿಕೆ ಕಾರಣ ಒಂದು ಸಾಮಾನ್ಯ ಉದ್ಯೋಗಿ ಕೂಡ ಪ್ರತಿಭಾವಂತನಾಗಿ ಬದಲಾಗುತ್ತಾನೆ, ಆ ಮೂಲಕ ಸಂಸ್ಥೆಗಳಿಗೆ ದೊಡ್ಡ ಮಟ್ಟದಲ್ಲಿ ಸಿಬ್ಬಂದಿಯ ಅಗತ್ಯ ಇರೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾವು ಏನು ಮಾಡಬೇಕು?
ಸದ್ಯ ಪಾಲೊ ಆಲ್ಟೊ ನೆಟ್‌ವರ್ಕ್‌ನ ಮಾರ್ಕೆಟಿಂಗ್ ವಿಭಾಗದಲ್ಲಿ ಸುಮಾರು 600 ಮಂದಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಹಾಗೂ ಸೇಲ್ಸ್ ರಂಗದಲ್ಲಿ ಎಐ ತಂತ್ರಜ್ಞಾನಕ್ಕೆ ಇರುವ ಡಿಮ್ಯಾಂಡ್ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದು ಅತ್ಯುತ್ತಮ ಉತ್ಪಾದನೆಯನ್ನು ವಿಶ್ವದಾದ್ಯಂತ ಪ್ರಚಾರ ಮಾಡಲು ಕೌಶಲ್ಯಯುಕ್ತ ವ್ಯಕ್ತಿಗಳ ಅಗತ್ಯ ಹೆಚ್ಚಿರುತ್ತದೆ. ಸದ್ಯ ಕಾರ್ಪೊರೇಟ್ ರಂಗದಲ್ಲಿರುವ ದೊಡ್ಡ ಸವಾಲು ಎಂದರೆ, ಶೇಕಡಾ 90ರಷ್ಟು ಮಂದಿ ಉದ್ಯೋಗಿಗಳಿಗೆ AI ಫ್ಲೂಯೆನ್ಸಿ ಅಂದರೆ ಎಐ ಉಪಕರಣಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಹಾಗೂ ಬಳಕೆ ಮಾಡುವ ಸಾಮರ್ಥ್ಯ ಇಲ್ಲದಿರುವುದು ಎಂದು ಅರೋರಾ ಹೇಳಿದ್ದಾರೆ. ಶಿಕ್ಷಣ ಸಂಸ್ಥೆಗಳು ಇವುಗಳಿಗೆ ಸಂಬಂಧಿಸಿದ ವಿಶೇಷ ಕೋರ್ಸ್ ಗಳನ್ನು, ಅಥವಾ ಉದ್ಯೋಗಿಗಳು ಸ್ವಯಂ ಪ್ರೇರಣೆಯಿಂದ ಈ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಕರೆ ನೀಡಿದ್ದಾರೆ.
ಮಾಸ್ ಲೇ ಆಫ್ ಬಗ್ಗೆ ಹೇಳಿದ್ದೇನು?
ಅರೋರಾ ಅವರು ಈ ಬೆಳವಣಿಗೆಯನ್ನು 'ಡಾರ್ವಿನ್'ರ ಸಿದ್ದಾಂತಕ್ಕೆ ಸಂಬಂಧಿಸಿದ ಕ್ಷಣ ಎಂದು ಹೇಳಿದ್ದು, ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಮ್ಮ ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳಬೇಕು. ಇಂತವರು ಮಾತ್ರ ಮಾರುಕೊಟ್ಟೆಯಲ್ಲಿ ಉಳಿದುಕೊಳ್ಳುತ್ತಾರೆ. ಸುಮಾರು $289 ಬಿಲಿಯನ್ ಮಾರ್ಕೆಟ್ ಮೌಲ್ಯವನ್ನು ಹೊಂದಿರುವ ಪಾಲೊ ಆಲ್ಟೊ ನೆಟ್‌ವರ್ಕ್ ಸಂಸ್ಥೆ, ದಿಗ್ಗಜ ಸಂಸ್ಥೆಗಳಾದ ಮೆಟಾ, ಅಮೆಜಾನ್, ಒರಾಕಿಲ್, ಕಾಗ್ನಿಜೆಂಟ್ ಎಐ ಹೆಸರು ಹೇಳಿ ಮಾಡುತ್ತಿರುವ ಮಾಸ್ ಲೇ ಆಫ್‌ಗಳನ್ನು ವಿರೋಧಿಸುತ್ತದೆ. ಇದರ ಬದಲು ಶ್ರಮಶಕ್ತಿಯನ್ನು ಕ್ರಮದ್ಧಗೊಳಿತ್ತಾ, ಹ್ಯಾಕಥಾನ್ ಮೂಲಕ ಎಐ ಕೌಶಲ್ಯ ಹೊಂದಿರುವ ಹೊಸ ತಲೆಮಾರಿನ ಪ್ರತಿಭೆಗಳನ್ನು ಗುರುತಿಸಬೇಕು. ಇದರಂತೆ ಮುಂದಿನ ಮೂರು ವರ್ಷಗಳಲ್ಲಿ ಸಂಸ್ಥೆಯನ್ನು ಸಂಪೂರ್ಣವಾಗಿ ಎಐ ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಿರುವ ಸಂಸ್ಥೆಯನ್ನಾಗಿ ರೂಪಿಸುವುದು ನಮ್ಮ ಗುರಿ ಎಂದು ಅರೋರಾ ಸ್ಪಷ್ಟಪಡಿಸಿದ್ದಾರೆ.


