ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸೇನಾ ಸಮವಸ್ತ್ರ ಧರಿಸಿರುವ ಪುಟಾಣಿ ಬಾಲಕಿಯ ಅತ್ಯಂತ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಇಂದು (ಆಗಸ್ಟ್‌ 15) ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಪುಟಾಣಿ ಮಗುವೊಂದರ ಅತ್ಯಂತ ಮುದ್ದಾದ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಸೇನಾ ಸಮವಸ್ತ್ರ ಧರಿಸಿರುವ ಪುಟಾಣಿ ಬಾಲಕಿಯೊಬ್ಬಳು ಹಠ ಹಿಡಿದು ಅಳುತ್ತಿದ್ದು, ಅವಳ ಈ ದೇಶಭಕ್ತಿಯ ವಿಶಿಷ್ಟ ಶೈಲಿ ಲಕ್ಷಾಂತರ ಜನರ ಹೃದಯ ಗೆದ್ದಿದೆ.

ವಿಡಿಯೋದಲ್ಲೇನಿದೆ?

ವೈರಲ್ ಆಗಿರುವ ಈ ವಿಡಿಯೋದಲ್ಲಿ ಬಾಲಕಿ ಸಂಪೂರ್ಣವಾಗಿ ಮಿಲಿಟರಿ ಉಡುಪಿನಲ್ಲಿದ್ದಾಳೆ. ಅವಳು ಆರ್ಮಿ ಡ್ರೆಸ್ ಧರಿಸಿ, ಗ್ರೀನ್ ಬಣ್ಣದ ಬ್ಯಾಗ್ ಹಾಕಿಕೊಂಡಿದ್ದಾಳೆ. ಅಳುತ್ತಲೇ ತುಂಬಾ ಉತ್ಸಾಹದಿಂದ ತಾನು ದೊಡ್ಡವಳಾದ ಮೇಲೆ ಸೈನ್ಯಕ್ಕೆ ಸೇರಿ ಭಯೋತ್ಪಾದಕರ ವಿರುದ್ಧ ಹೋರಾಡುವುದಾಗಿ ಹೇಳುತ್ತಿದ್ದಾಳೆ. ಅವಳ ಕಣ್ಣಿನಲ್ಲಿ ನೀರಿದ್ದರೂ, ಧ್ವನಿಯಲ್ಲಿರುವ ದೇಶಭಕ್ತಿಯ ಜೋಶ್ ನೋಡುಗರ ಗಮನ ಸೆಳೆಯುತ್ತಿದೆ. ಬಾಲಕಿಯ ಈ ಮುಗ್ಧ ಮಾತುಗಳು ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿವೆ.

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?

ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಸ್ವಾರಸ್ಯಕರ ಕಮೆಂಟ್‌ಗಳು ಬರುತ್ತಿವೆ. ಬಳಕೆದಾರರೊಬ್ಬರು ತಮಾಷೆಯಾಗಿ, ಇದನ್ನು ನೋಡಿ ತಂದೆಯ ರಿಯಾಕ್ಷನ್ ಹೀಗಿರಬಹುದು - ಮಗಳೇ, ಇಂತಹ ವಿಷಯಗಳು ಆನ್‌ಲೈನ್‌ನಲ್ಲಿ ಎಲ್ಲಿ ಸಿಗುತ್ತವೆ? ಎಂದು ಬರೆದಿದ್ದಾರೆ. ಇನ್ನು ಕೆಲವರು ಮಗುವಿನ ಧೈರ್ಯ ಹಾಗೂ ಮುಗ್ಧತೆಯನ್ನು ಕೊಂಡಾಡಿದ್ದಾರೆ. ಇಂದಿನ ಕಾಲದ ಮಕ್ಕಳು ತುಂಬಾ ಬೇಗ ದೊಡ್ಡ ದೊಡ್ಡ ವಿಷಯಗಳನ್ನು ಕಲಿಯುತ್ತಾರೆ ಹಾಗೂ ಇಂಟರ್ನೆಟ್ ನೋಡಿ ತುಂಬಾ ಸ್ಮಾರ್ಟ್ ಆಗಿದ್ದಾರೆ ಎಂದು ಹಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಕ್ಕಳಿಗೆ ಸಂಬಂಧಿಸಿದ ಇಂತಹ ವಿಡಿಯೋಗಳು ಜನರಿಗೆ ಬೇಗನೆ ಇಷ್ಟವಾಗುತ್ತವೆ. ಏಕೆಂದರೆ ಇವುಗಳಲ್ಲಿ ಮುಗ್ಧತೆ ಮತ್ತು ಉತ್ಸಾಹ ಎರಡೂ ಅಡಗಿರುತ್ತವೆ. ಸಣ್ಣ ಮಗುವೊಂದು ಇಷ್ಟೊಂದು ಆತ್ಮವಿಶ್ವಾಸದಿಂದ ದೇಶದ ಬಗ್ಗೆ ಮಾತನಾಡುವುದನ್ನು ನೋಡಿ ಜನರಿಗೆ ನಗು ಬರುವ ಜೊತೆಗೆ ಹೆಮ್ಮೆಯೂ ಅನಿಸುತ್ತದೆ. ಅದರಲ್ಲೂ ಭಾರತದಲ್ಲಿ ಸೇನೆ ಮತ್ತು ದೇಶಭಕ್ತಿಗೆ ಸಂಬಂಧಿಸಿದ ವಿಡಿಯೋಗಳಿಗೆ ಸದಾ ದೊಡ್ಡ ಮಟ್ಟದ ಪ್ರೋತ್ಸಾಹ ಸಿಗುತ್ತದೆ. ಈ ಮುದ್ದಾದ ಬಾಲಕಿಯ ದೇಶಪ್ರೇಮದ ವಿಡಿಯೋ ಕೂಡ ಈಗ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

View post on Instagram