ನವದೆಹಲಿ: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಿಪಕ್ಷಗಳ ಇಂಡಿಯಾ ಕೂಟವು ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ‘ಚಲೋ ದೆಹಲಿ’ ಪ್ರತಿಭಟನೆ ನಡೆಸಿತು. ಈ ವೇಳೆ ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ ಸೇರಿದಂತೆ ಮೈತ್ರಿಕೂಟದ ವಿವಿಧ ಪಕ್ಷಗಳ ನಾಯಕರು ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜ್ಞಾನೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ಜ್ಞಾನೇಶ್ ಅವರನ್ನು ಹುದ್ದೆಯಿಂದ ಕೆಳಗಿಳಿಸುತ್ತೇವೆ. ಅವರು ಮಾಡಿದ ದೇಶದ್ರೋಹದ ಕೆಲಸಕ್ಕಾಗಿ ಅವರು ಜೈಲು ಸೇರಲಿದ್ದಾರೆ. ಮತಚೋರಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಕಾನೂನಿನಿಂದ ತಪ್ಪಿಸಿಕೊಳ್ಳುವ ಬಗ್ಗೆ ಅವರು ಯೋಚಿಸಬಾರದು’ ಎಂದು ಕಿಡಿ ಕಾರಿದರು.
‘ಮೋದಿ ಎಲ್ಲಿಗೂ ಹೋಗುತ್ತಿಲ್ಲ ಎಂದು ಶಾ ಹೇಳಿದ್ದಾರೆ. ಮೋದಿ ಹೋಗಲು ಬಯಸಿದರೂ, ನಾವು ಅವರನ್ನು ಹೋಗಲು ಬಿಡುವುದಿಲ್ಲ. ಜ್ಞಾನೇಶ್ ಕುಮಾರ್ ಅವರ ನಂತರ, ನಾವು ಮೋದಿ, ಶಾ ವಿರುದ್ಧ ನಿಲ್ಲುತ್ತೇವೆ. ಅವರು ಎಸಗಿರುವ ಮತ ಕಳ್ಳತನಕ್ಕಾಗಿ ಅವರ ವಿರುದ್ಧ ಕಾನೂನು ತನ್ನದೇ ಆದ ಕ್ರಮ ಜರುಗಲಿದೆ’ ಎಂದರು.
11:04 PM (IST) Nov 02
10:59 PM (IST) Nov 02
ಕೇವಲ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ 452 ಕೋಟಿ ರೂ. ಗಳಿಸಿದ 'ಹನುಮಾನ್ ಅಂಶ್' ಸಿನಿಮಾದ ನಿರ್ಮಾಪಕರ ನಡುವೆ ಹಕ್ಕುಗಳ ಕುರಿತು ತೀವ್ರ ವಿವಾದ ಸೃಷ್ಟಿಯಾಗಿದೆ. ಯಾವುದೇ ಒಬ್ಬ ವ್ಯಕ್ತಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದು ನಿರ್ಮಾಪಕರು ಸಾರ್ವಜನಿಕ ನೋಟಿಸ್ ಜಾರಿ ಮಾಡಿದ್ದಾರೆ.
09:51 PM (IST) Nov 02
ತಮಿಳುನಾಡಿನ ಸಿವಕಾಶಿಯಲ್ಲಿ ಕೇವಲ ಬೆಂಕಿಪೊಟ್ಟಣ ತಯಾರಿಕಾ ಘಟಕವಾಗಿ ಆರಂಭವಾದ 'ಸ್ಟ್ಯಾಂಡರ್ಡ್ ಫೈರ್‌ವರ್ಕ್ಸ್' ಇಂದು ₹300 ಕೋಟಿ ಮೌಲ್ಯದ ಪಟಾಕಿ ಸಾಮ್ರಾಜ್ಯವಾಗಿ ಬೆಳೆದಿದೆ. ಪ್ರಸ್ತುತ ಈ ಉದ್ಯಮವು ಹಸಿರು ಪಟಾಕಿ ನಿಯಮಗಳು ಮತ್ತು ಕಚ್ಚಾವಸ್ತುಗಳ ಬೆಲೆ ಏರಿಕೆಯಂತಹ ಸವಾಲು ಎದುರಿಸುತ್ತಿದೆ.
09:49 PM (IST) Nov 02
09:42 PM (IST) Nov 02
ನಟಿ ನತಾಶಾ ಸ್ಟಾಂಕೋವಿಕ್ ನೀತಾ ಅಂಬಾನಿ ಅವರ ವಿಶೇಷ ಕಾರ್ಯಕ್ರಮದಲ್ಲಿ ಬೆಳ್ಳಿಯ ಲೆಹೆಂಗಾ ಧರಿಸಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ಅವರ ರಾಯಲ್ ಲುಕ್ ಹಾಗೂ ಗ್ಲಾಮರಸ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
09:11 PM (IST) Nov 02
08:54 PM (IST) Nov 02
08:13 PM (IST) Nov 02
06:49 PM (IST) Nov 02
ನಟ ಇಮ್ರಾನ್ ಖಾನ್ ತಮ್ಮ ಜೀವನದ ಬಹುಪಾಲು ಭಾರತದಲ್ಲೇ ಕಳೆದಿದ್ದಾರೆ ಮತ್ತು ಹುಟ್ಟಿನಿಂದಲೇ ಅಮೆರಿಕದ ಪೌರತ್ವ ಹೊಂದಿದ್ದಾರೆ. ಭಾರತದಲ್ಲೇ ನೆಲೆಸಿ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ಅವರು ಭಾರತೀಯ ಪೌರತ್ವ ಏಕೆ ಪಡೆಯಲಿಲ್ಲ ಎಂಬ ಪ್ರಶ್ನೆಯನ್ನೂ ನ್ಯಾಯಪೀಠ ಮುಂದಿಟ್ಟಿದೆ. ಇದೀಗ ನ್ಯಾಯಾಲಯ ಕೊಟ್ಟ ತೀರ್ಪೇನು? ನೋಡಿ..
06:47 PM (IST) Nov 02
06:34 PM (IST) Nov 02
ಇಂದು ಶಾರುಖ್ ಖಾನ್ 61ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ, ಕ್ರಿಕೆಟ್, ಐಷಾರಾಮಿ ಬ್ರ್ಯಾಂಡ್‌ಗಳು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲೂ ಈ ಸೂಪರ್‌ಸ್ಟಾರ್ ತಮ್ಮ ಬೃಹತ್ ಸಾಮ್ರಾಜ್ಯ ಕಟ್ಟಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 10,000 ಕೋಟಿ ರೂಪಾಯಿ.
06:30 PM (IST) Nov 02
ಎನ್‌ಎಂಎಸಿಸಿ ನೂತನ ಗ್ರಂಥಾಲಯದ ಉದ್ಘಾಟನಾ ಸಮಾರಂಭದಲ್ಲಿ ನೀತಾ ಅಂಬಾನಿ ಅವರು ಆಧುನಿಕ ಶೈಲಿಯ ಸೂಟ್ ಧರಿಸಿ ಗಮನ ಸೆಳೆದಿದ್ದಾರೆ. ಈ ವೇಳೆ ಅವರು ಧರಿಸಿದ್ದ ವಾಲ್ಲೇಸ್ ಚಾನ್ ವಿನ್ಯಾಸದ 'ಡ್ರ್ಯಾಗನ್‌ಫ್ಲೈ' ಬ್ರೂಚ್‌ನ ಬೆಲೆ ಬರೋಬ್ಬರಿ ₹12 ರಿಂದ ₹15 ಕೋಟಿ ಎಂದು ಅಂದಾಜಿಸಲಾಗಿದೆ.
06:15 PM (IST) Nov 02
06:12 PM (IST) Nov 02
05:56 PM (IST) Nov 02
ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್‌ಗೆ ಇಂದು 61ನೇ ಹುಟ್ಟುಹಬ್ಬದ ಸಂಭ್ರಮ. ಇಳಿ ವಯಸ್ಸಿನಲ್ಲೂ ಸಿಂಪಲ್ ಡಯಟ್ ಹಾಗೂ ವರ್ಕೌಟ್ ಮೂಲಕ ಅವರು ಹೇಗೆ ಫಿಟ್ ಆಗಿದ್ದಾರೆ ಅನ್ನೋದರ ಡೀಟೇಲ್ಸ್ ಇಲ್ಲಿದೆ.
05:37 PM (IST) Nov 02
ಫಿಟ್ನೆಸ್ ಪ್ರಿಯರಿಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೊಸ ಮಂಡೇ ಮೋಟಿವೇಶನ್ ಕೊಟ್ಟಿದ್ದಾರೆ. ಆಕರ್ಣ ಧನುರಾಸನ ಅಥವಾ ಆರ್ಚರ್ ಪೋಸ್‌ನ ಹೊಸ ವೇರಿಯೇಶನ್ ಟ್ರೈ ಮಾಡಿರುವ ಅವರು, ಇದರಿಂದ ದೇಹದ ಫ್ಲೆಕ್ಸಿಬಿಲಿಟಿ ಹಾಗೂ ಶಕ್ತಿ ಹೇಗೆ ಹೆಚ್ಚಾಗುತ್ತದೆ ಎಂದು ವಿವರಿಸಿದ್ದಾರೆ.
05:28 PM (IST) Nov 02
05:25 PM (IST) Nov 02
ಫಾಸ್ಟಾಗ್ ವಾಲೆಟ್‌ನಲ್ಲಿ ಹಣವಿದ್ದರೂ ಟೋಲ್ ಪ್ಲಾಜಾದಲ್ಲಿ ಅಕ್ರಮವಾಗಿ ದಂಡ ವಸೂಲಿ ಮಾಡಿದ ಎನ್‌ಹೆಚ್‌ಎಐ ಮತ್ತು ಪೇಮೆಂಟ್ಸ್ ಬ್ಯಾಂಕ್‌ಗೆ ಚಂಡೀಗಢ ಗ್ರಾಹಕ ಆಯೋಗ ದಂಡ ವಿಧಿಸಿದೆ. ವಾಲೆಟ್‌ನಲ್ಲಿ ನೆಗೆಟಿವ್ ಬ್ಯಾಲೆನ್ಸ್ ಇಲ್ಲದಿದ್ದಾಗ ದಂಡ ವಿಧಿಸುವುದು ಸೇವಾ ನ್ಯೂನತೆ ಎಂದು ಆಯೋಗ ತೀರ್ಪು ನೀಡಿದೆ.
05:10 PM (IST) Nov 02
04:34 PM (IST) Nov 02
ನ್ಯಾಫ್ತಲೀನ್ (Naphthalene) ಒಂದು ಆವಿಯಾಗುವ ರಾಸಾಯನಿಕವಾಗಿದ್ದು, ಕೀಟಗಳನ್ನು ನಿಯಂತ್ರಿಸಲು ಬಳಸಲಾಗುತ್ತದೆ. ಸಾಮಾನ್ಯ ತಾಪಮಾನದಲ್ಲಿಯೇ ಇದು ಘನ ಸ್ಥಿತಿಯಿಂದ ಅನಿಲ ಸ್ಥಿತಿಗೆ ಬದಲಾಗುತ್ತದೆ. ಹೀಗಾಗಿ ಕಪಾಟಿನಲ್ಲಿ ಇಟ್ಟಿರುವ ಗುಳಿಗೆಗಳು ಕ್ರಮೇಣ ಸಣ್ಣದಾಗುತ್ತವೆ ಅಥವಾ ಸಂಪೂರ್ಣವಾಗಿ ಮಾಯವಾಗುತ್ತವೆ.
04:32 PM (IST) Nov 02
04:29 PM (IST) Nov 02
ಹಾಂಗ್‌ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಪಾಕಿಸ್ತಾನ 5ನೇ ಸ್ಥಾನ ಪಡೆದರೂ, ಆಟಗಾರ ಅಬ್ಬಾಸ್ ಅಫ್ರಿದಿ ಟ್ರೋಫಿಯೊಂದಿಗೆ ಮಲಗಿರುವ ಫೋಟೋ ಹಂಚಿಕೊಂಡು ಟ್ರೋಲ್‌ಗೆ ಗುರಿಯಾಗಿದ್ದಾರೆ. ನೆಟ್ಟಿಗರು ಈ ಫೋಟೋವನ್ನು ಸೂರ್ಯಕುಮಾರ್ ಯಾದವ್ ಅವರ ಟಿ20 ವಿಶ್ವಕಪ್ ಸಂಭ್ರಮಕ್ಕೆ ಹೋಲಿಸಿ ವ್ಯಂಗ್ಯವಾಡಿದ್ದಾರೆ.
03:33 PM (IST) Nov 02
03:08 PM (IST) Nov 02
ಇತ್ತೀಚೆಗೆ ಲಾಸ್ ಏಂಜಲೀಸ್‌ನಲ್ಲಿ ಚಿತ್ರದ ಭರ್ಜರಿ ವಿಶ್ವ ಪ್ರೀಮಿಯರ್ ನಡೆದಿದ್ದು, ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಚಿತ್ರದ ಅದ್ದೂರಿ ದೃಶ್ಯ ವೈಭವ ಮತ್ತು ನಿರ್ಮಾಣದ ಪ್ರಮಾಣಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದರೆ, ಕಥೆಯ ನಿರೂಪಣೆ, ಉದ್ದ ಮತ್ತು ವೇಗದ ಕುರಿತು ಕೆಲವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಯಶ್ ಅದೇನು ಹೇಳಿದ್ದಾರೆ ಗೊತ್ತಾ?
02:58 PM (IST) Nov 02
02:52 PM (IST) Nov 02
02:15 PM (IST) Nov 02
ಪೊಲೀಸರ ಕ್ರೈಂ ಬ್ರಾಂಚ್ ನಡೆಸಿದ ಕಾರ್ಯಾಚರಣೆಯಲ್ಲಿ ನಕಲಿ 20 ರೂಪಾಯಿ ನಾಣ್ಯಗಳನ್ನು ಟಂಕಿಸುತ್ತಿದ್ದ ಜಾಲ ಪತ್ತೆಯಾಗಿದೆ. ಬರೋಬ್ಬರಿ 5,000 ನಕಲಿ ನಾಣ್ಯಗಳನ್ನು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಲಾಗಿದೆ. ಸಾರ್ವಜನಿಕರು ನಾಣ್ಯಗಳನ್ನು ಪಡೆಯುವಾಗ ಎಚ್ಚರವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ.
01:39 PM (IST) Nov 02
01:13 PM (IST) Nov 02
ಉತ್ತರಪ್ರದೇಶದಲ್ಲಿ ಮದುವೆಯಾಗುವುದಾಗಿ ನಂಬಿಸಿ ಯುವತಿಯ ಜತೆ ದೈಹಿಕ ಸಂಪರ್ಕ ಮಾಡಿ ಆ ಬಳಿಕ ಮದುವೆಗೆ ನಿರಾಕರಿಸಿದ್ದ ಯುವಕನಿಗೆ ಪಾಠ ಕಲಿಸಲು ಯುವತಿ ಮುಂದಾಗಿದ್ದಾಳೆ. ಆತನ ಮನೆಯ ಮೇಲ್ಚಾವಣಿ ಏರಿ, ಮದುವೆಗೆ ಡಿಮ್ಯಾಂಡ್ ಇಟ್ಟಿದ್ದಾಳೆ. ಆಮೇಲೆ ಏನೇನು ಅಯ್ತು ಎನ್ನುವುದನ್ನು ನೀವೇ ನೋಡಿ.
12:26 PM (IST) Nov 02
ಎಸ್ಐಆರ್ ವಿರುದ್ದ ಹೋರಾಟ, ಚುನಾವಣೆ ತಯಾರಿ, ಸ್ಟಿಂಗ್ ಗದ್ದಲಗಳ ನಡುವೆ ಮೂವರು ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದು ಆಡಳಿತರೂಡ ಸರ್ಕಾರಕ್ಕೆ ತೀವ್ರ ಹಿನ್ನಡೆ ನೀಡಿದ್ದು, ಕೋಲಾಹಲ ಶುರುವಾಗಿದೆ.
11:33 AM (IST) Nov 02
11:01 AM (IST) Nov 02
10:20 AM (IST) Nov 02
ನವೆಂಬರ್ 4ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಏಕದಿನ ಸರಣಿಯಿಂದ ನ್ಯೂಜಿಲೆಂಡ್‌ನ ಪ್ರಮುಖ ಆಟಗಾರರಾದ ರಚಿನ್ ರವೀಂದ್ರ ಮತ್ತು ಮಾರ್ಕ್ ಚಾಪ್‌ಮನ್ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದಾರೆ. ಇವರ ಬದಲಿಗೆ ಹೊಸ ಆಟಗಾರರಿಗೆ ಮಣೆ ಹಾಕಲಾಗಿದ್ದು, ಮ್ಯಾಟ್ ಹೆನ್ರಿ ಫಿಟ್‌ನೆಸ್ ಕೂಡ ತಂಡಕ್ಕೆ ಚಿಂತೆಯಾಗಿದೆ.
09:55 AM (IST) Nov 02
ಪ್ರಸಾರಕರ ಕೊರತೆಯಿಂದಾಗಿ ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್) ಭವಿಷ್ಯ ಅತಂತ್ರವಾಗಿದ್ದು, ಈ ವರ್ಷ ಪಂದ್ಯಗಳು ನಡೆಯುವುದಿಲ್ಲ. ಜಿಯೋಸ್ಟಾರ್ ಸಂಸ್ಥೆಯು ಹಿಂದಿನ ಒಪ್ಪಂದದ ಅರ್ಧದಷ್ಟು ಮೊತ್ತವನ್ನು ಮಾತ್ರ ನೀಡಲು ಮುಂದಾಗಿರುವುದರಿಂದ ಈ ಗೊಂದಲ ಸೃಷ್ಟಿಯಾಗಿದೆ. ಫುಟ್ಬಾಲ್ ಲೀಗ್ ಬಳಿಕ ಇದೀಗ ಕಬಡ್ಡಿ ಲೀಗ್ ಕೂಡ ಮಾಧ್ಯಮ ಹಕ್ಕಿನ ಸಮಸ್ಯೆಗೆ ಸಿಲುಕಿದೆ.
09:47 AM (IST) Nov 02
08:38 AM (IST) Nov 02
ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ ಮುಂಬರುವ 'ರಾಮಾಯಣ' ಚಿತ್ರದಲ್ಲಿ ಶೂರ್ಪನಖಿಯನ್ನು 'ಜನಸ್ಥಾನದ ರಾಜಕುಮಾರಿ' ಎಂದು ಪರಿಚಯಿಸಲಾಗಿದೆ. ಈ ಜನಸ್ಥಾನವು ಇಂದಿನ ಮಹಾರಾಷ್ಟ್ರದ ನಾಸಿಕ್ ಪ್ರದೇಶವಾಗಿದ್ದು, ಇಲ್ಲಿಯೇ ಲಕ್ಷ್ಮಣನು ಶೂರ್ಪನಖಿಯ ಮೂಗನ್ನು ಕತ್ತರಿಸಿದ್ದನು ಎಂಬ ಐತಿಹಾಸಿಕ ನಂಟಿದೆ.