MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಟಬು, ಅಕ್ಷಯ್ ಖನ್ನಾ..: ತಮ್ಮ ಅದ್ಭುತ ನಟನೆಯಿಂದ ಕನ್ನಡಿಗರ ಮನಗೆದ್ದ 7 ಭಾರತೀಯ ತಾರೆಯರು!

ಟಬು, ಅಕ್ಷಯ್ ಖನ್ನಾ..: ತಮ್ಮ ಅದ್ಭುತ ನಟನೆಯಿಂದ ಕನ್ನಡಿಗರ ಮನಗೆದ್ದ 7 ಭಾರತೀಯ ತಾರೆಯರು!

ಮನೋಜ್ ಬಾಜಪೇಯಿ, ಟಬು ಅವರಿಂದ ಹಿಡಿದು ಮೋನಾ ಸಿಂಗ್ ಹಾಗೂ ಅಕ್ಷಯ್ ಖನ್ನಾವರೆಗೆ, ತಮ್ಮ ವಿಭಿನ್ನ ಪಾತ್ರಗಳು ಮತ್ತು ಅದ್ಭುತ ನಟನೆಯ ಮೂಲಕ ಭಾರತೀಯ ಸಿನಿಮಾರಂಗದ ಮಟ್ಟವನ್ನು ಹೆಚ್ಚಿಸುತ್ತಿರುವ 7 ಶ್ರೇಷ್ಠ ನಟರ ಬಗ್ಗೆ ಇಲ್ಲಿದೆ ಮಾಹಿತಿ.

2 Min read
Author : Govindaraj S
Published : Nov 02 2026, 06:15 PM IST
Share this Photo Gallery
  • FB
  • TW
  • Linkdin
  • Whatsapp
17
ಅದ್ಭುತ ನಟನೆಯ 7 ಭಾರತೀಯ ನಟರು
Image Credit : PR

ಅದ್ಭುತ ನಟನೆಯ 7 ಭಾರತೀಯ ನಟರು

ಕೇವಲ ಬಾಕ್ಸ್ ಆಫೀಸ್ ಕಲೆಕ್ಷನ್ ಮತ್ತು ಸ್ಟಾರ್ ಗಿರಿಯ ಹಿಂದೆ ಬೀಳದೆ, ತಮ್ಮ ಅದ್ಭುತ ನಟನೆಯಿಂದಲೇ ಸಿನಿಮಾಗಳ ತೂಕ ಹೆಚ್ಚಿಸುವ ಕೆಲವೇ ನಟರು ಚಿತ್ರರಂಗದಲ್ಲಿದ್ದಾರೆ. ಒಟಿಟಿ ಪ್ರಾಜೆಕ್ಟ್‌ಗಳಿಂದ ಹಿಡಿದು ಥಿಯೇಟರ್ ಸಿನಿಮಾಗಳವರೆಗೆ, ಈ 7 ನಟರು ತಮ್ಮ ವಿಭಿನ್ನ ಪಾತ್ರಗಳ ಮೂಲಕ ಆಧುನಿಕ ಭಾರತೀಯ ಸಿನಿಮಾದ ನಿಜವಾದ ಎಂವಿಪಿ (MVPs) ಎನಿಸಿಕೊಂಡಿದ್ದಾರೆ.

1. ಮನೋಜ್ ಬಾಜಪೇಯಿ

'ದಿ ಫ್ಯಾಮಿಲಿ ಮ್ಯಾನ್', 'ಸಿರ್ಫ್ ಏಕ್ ಬಂದಾ ಕಾಫಿ ಹೈ' ನಿಂದ ಹಿಡಿದು 'ಗವರ್ನರ್' ಹಾಗೂ 'ಲಾಸ್ಟ್ ಮ್ಯಾನ್ ಇನ್ ಟವರ್' ವರೆಗೆ ಮನೋಜ್ ಬಾಜಪೇಯಿ ತಮ್ಮ ನಟನಾ ವೈವಿಧ್ಯತೆಯನ್ನು ಸಾಬೀತುಪಡಿಸಿದ್ದಾರೆ. ಸಂಕೀರ್ಣ ಪಾತ್ರಗಳಿಗೆ ಜೀವ ತುಂಬುವ ಮೂಲಕ ಹಿಂದಿ ಚಿತ್ರರಂಗದ ಅತ್ಯಂತ ಗೌರವಾನ್ವಿತ ನಟರಾಗಿ ಅವರು ಗುರುತಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
2. ಟಬು
Image Credit : PR

2. ಟಬು

'ಅಂಧಾಧುನ್', 'ಹೈದರ್', 'ದೃಶ್ಯಂ' ಮತ್ತು 'ಕ್ರ್ಯೂ' ಸಿನಿಮಾಗಳಲ್ಲಿ ಟಬು ತಮ್ಮ ಅತ್ಯುತ್ತಮ ನಟನೆಯನ್ನು ನೀಡಿದ್ದಾರೆ. ಕಮರ್ಷಿಯಲ್ ಸಿನಿಮಾಗಳು ಮತ್ತು ಕಥೆ ಆಧಾರಿತ ಚಿತ್ರಗಳ ನಡುವೆ ಅವರು ಅದ್ಭುತವಾಗಿ ಬ್ಯಾಲೆನ್ಸ್ ಮಾಡುತ್ತಾರೆ. ತೆರೆಯ ಮೇಲೆ ಅವರ ಗತ್ತು ಮತ್ತು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡುವ ಅವರ ಗುಣ ಅವರನ್ನು ಚಿತ್ರರಂಗದ ಶ್ರೇಷ್ಠ ನಟಿಯರ ಸಾಲಿನಲ್ಲಿ ನಿಲ್ಲಿಸಿದೆ.

Related Articles

Related image1
61ರಲ್ಲೂ ಸಿಕ್ಸ್ ಪ್ಯಾಕ್‌ಗಾಗಿ ಶಾರುಖ್ ಖಾನ್ ಮಾಡುವುದೇನು?: ಇಲ್ಲಿದೆ ಆ ಫಿಟ್ನೆಸ್ ಸೀಕ್ರೆಟ್!
Related image2
ನಟಿ ಶಿಲ್ಪಾ ಶೆಟ್ಟಿಯ ಮಂಡೇ ಯೋಗ ಮೋಟಿವೇಶನ್: ಆರ್ಚರ್ ಪೋಸ್‌ನಿಂದ ಹೊಸ ಚೈತನ್ಯ ಸಿಗುತ್ತಾ?
37
3. ಪಂಕಜ್ ತ್ರಿಪಾಠಿ
Image Credit : PR

3. ಪಂಕಜ್ ತ್ರಿಪಾಠಿ

'ಮಿರ್ಜಾಪುರ್', 'ಓಎಂಜಿ 2', 'ಸ್ತ್ರೀ 2' ಮತ್ತು 'ಕ್ರಿಮಿನಲ್ ಜಸ್ಟಿಸ್' ಮೂಲಕ ಪಂಕಜ್ ತ್ರಿಪಾಠಿ ಪಾತ್ರಗಳಿಗೆ ನೈಜ ಸ್ಪರ್ಶ ನೀಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅವರ ಡೈಲಾಗ್ ಡೆಲಿವರಿ ಶೈಲಿ, ಮೌನದಲ್ಲೇ ಭಾವನೆ ವ್ಯಕ್ತಪಡಿಸುವ ರೀತಿ ಮತ್ತು ಸಹಜ ಹಾಸ್ಯ ಪ್ರಜ್ಞೆ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದೆ.

47
4. ಮೋನಾ ಸಿಂಗ್
Image Credit : PR

4. ಮೋನಾ ಸಿಂಗ್

2026ರ ವರ್ಷ ಮೋನಾ ಸಿಂಗ್ ಪಾಲಿಗೆ ಅತ್ಯಂತ ವಿಶೇಷವಾಗಿದೆ. 'ಹ್ಯಾಪಿ ಪಟೇಲ್: ಖತರ್ನಾಕ್ ಜಾಸೂಸ್', 'ಬಾರ್ಡರ್ 2', 'ಕೊಹ್ರಾ ಸೀಸನ್ 2', 'ಸುಬೇದಾರ್', 'ಮಾ ಕಾ ಸಮ್' ಮತ್ತು 'ಪ್ರೀತಮ್ ಪೆಡ್ರೋ' ಎಂಬ ಆರು ವಿಭಿನ್ನ ಪ್ರಾಜೆಕ್ಟ್‌ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಯುದ್ಧದ ಕಥೆಯ ಮಿಲಿಟರಿ ಕುಟುಂಬದಿಂದ ಹಿಡಿದು ಕ್ರೈಮ್ ಲೋಕದ ಡಾನ್ ವರೆಗೆ, ಪ್ರತಿಯೊಂದು ಪಾತ್ರದಲ್ಲೂ ಅವರು ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

57
5. ಜೈದೀಪ್ ಅಹ್ಲಾವತ್
Image Credit : PR

5. ಜೈದೀಪ್ ಅಹ್ಲಾವತ್

'ಪಾತಾಳ್ ಲೋಕ್', 'ಜಾನೆ ಜಾನ್', 'ಮಹಾರಾಜ್' ಮತ್ತು 'ದಿ ಬ್ರೋಕನ್ ನ್ಯೂಸ್' ನಂತಹ ಪ್ರಾಜೆಕ್ಟ್‌ಗಳ ಮೂಲಕ ಜೈದೀಪ್ ಅಹ್ಲಾವತ್ ಸಂಕೀರ್ಣ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅವರ ಗಂಭೀರ ನಟನೆ, ದೈಹಿಕ ಹಾವಭಾವ ಮತ್ತು ಪಾತ್ರದ ಆಳವನ್ನು ಅರಿತು ನಟಿಸುವ ಶೈಲಿ ಅವರನ್ನು ಇಂದಿನ ಭಾರತೀಯ ಮನರಂಜನಾ ಕ್ಷೇತ್ರದ ಪ್ರಮುಖ ನಟರನ್ನಾಗಿ ಮಾಡಿದೆ.

67
6. ಕೊಂಕಣಾ ಸೇನ್ ಶರ್ಮಾ
Image Credit : PR

6. ಕೊಂಕಣಾ ಸೇನ್ ಶರ್ಮಾ

'ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಖಾ', 'ಲಸ್ಟ್ ಸ್ಟೋರೀಸ್ 3', 'ಸರ್ಚ್: ದಿ ನೈನಾ ಮರ್ಡರ್ ಕೇಸ್', 'ಅಕ್ಯೂಸ್ಡ್' ಮತ್ತು 'ಮೆಟ್ರೋ ಇನ್ ದಿನೋ' ಸಿನಿಮಾಗಳಲ್ಲಿ ಕೊಂಕಣಾ ಸೇನ್ ಶರ್ಮಾ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಸಹಜ ನಟನೆ ಮತ್ತು ಭಾವನೆಗಳನ್ನು ನಿಖರವಾಗಿ ವ್ಯಕ್ತಪಡಿಸುವ ರೀತಿ, ಜೊತೆಗೆ ಓರ್ವ ನಿರ್ದೇಶಕಿಯಾಗಿ ಅವರ ಕೆಲಸ ಭಾರತೀಯ ಚಿತ್ರರಂಗದಲ್ಲಿ ಅವರಿಗೆ ವಿಶೇಷ ಸ್ಥಾನ ತಂದುಕೊಟ್ಟಿದೆ.

77
7. ಅಕ್ಷಯ್ ಖನ್ನಾ
Image Credit : PR

7. ಅಕ್ಷಯ್ ಖನ್ನಾ

'ಸೆಕ್ಷನ್ 375', 'ದೃಶ್ಯಂ 2' ಮತ್ತು 'ಛಾವಾ' ಸಿನಿಮಾಗಳಲ್ಲಿ ಅಕ್ಷಯ್ ಖನ್ನಾ ಯಾವುದೇ ಅಬ್ಬರವಿಲ್ಲದೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಬಂದ 'ಧುರಂಧರ್' ಸಿನಿಮಾದಲ್ಲಿ ಅವರ ನಟನೆ, ಪಾತ್ರವನ್ನು ವಿಭಿನ್ನವಾಗಿ ಕಟ್ಟಿಕೊಡುವ ಅವರ ಶೈಲಿ ಮತ್ತು ತೆರೆಯ ಮೇಲಿನ ಅವರ ಗತ್ತು ಮತ್ತೊಮ್ಮೆ ಸಾಬೀತಾಗಿದೆ.

ಇನ್ನು ಈ 7 ನಟರು ತಮ್ಮ ಅದ್ಭುತ ನಟನೆಯ ಮೂಲಕ ಪ್ರತಿಯೊಂದು ಕಥೆಯನ್ನು ಪ್ರೇಕ್ಷಕರಿಗೆ ಹತ್ತಿರವಾಗಿಸಿದ್ದಾರೆ. ಕೇವಲ ಸ್ಟಾರ್ ಗಿರಿಯ ಹಿಂದೆ ಹೋಗದೆ, ನೈಜ ನಟನೆಯ ಮೂಲಕವೇ ಇವರು ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಬಾಲಿವುಡ್
ಸೆಲೆಬ್ರಿಟಿಗಳು
ಮನರಂಜನಾ ಸುದ್ದಿ
ಸಿನಿಮಾ
 
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
1st ODI • NZ vs IND 2026
NZNZ
Wed, 4 Nov, 2026
INDIND
07:30 am
Match yet to begin.
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd TEST • SA vs AUS
Result
SASA
329 & 387
AUSAUS
429 & 111
SA won by 176 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ನೋರಾ ಫತೇಹಿಗೆ ದೆಹಲಿ ನ್ಯಾಯಾಲಯ ಛೀಮಾರಿ; 'ದಾರಿ ತಪ್ಪಿಸ್ಬೇಡಿ' ಅಂದಿದ್ಯಾಕೆ? ಏನ್ ಮಾಡ್ತಿದ್ದಾರೆ ಈ ನಟಿ?
Recommended image2
ಶಿವಣ್ಣ ಜೊತೆ ನಟಿಸಿದ್ದ ಆ ನಟಿಯ ಕರಿಯರ್ ಹಾಳು ಮಾಡಿದವರು ಯಾರು? ವರ್ಷಗಳ ಬಳಿಕ ಸ್ಫೋಟಕ ಪೋಸ್ಟ್!
Recommended image3
ಮಂಡ್ಯದ ಬಸರಾಳು ಕನ್ನಡ ಉತ್ಸವದಲ್ಲಿ ಡಿ ಬಾಸ್ ಫ್ಯಾನ್ಸ್‌ಗೆ ಪ್ರೀತಿಯಿಂದಲೇ ಕಿವಿಮಾತು ಹೇಳಿ ಜನರ ಮನಗೆದ್ದ ಅನುಶ್ರೀ
Related Stories
Recommended image1
61ರಲ್ಲೂ ಸಿಕ್ಸ್ ಪ್ಯಾಕ್‌ಗಾಗಿ ಶಾರುಖ್ ಖಾನ್ ಮಾಡುವುದೇನು?: ಇಲ್ಲಿದೆ ಆ ಫಿಟ್ನೆಸ್ ಸೀಕ್ರೆಟ್!
Recommended image2
ನಟಿ ಶಿಲ್ಪಾ ಶೆಟ್ಟಿಯ ಮಂಡೇ ಯೋಗ ಮೋಟಿವೇಶನ್: ಆರ್ಚರ್ ಪೋಸ್‌ನಿಂದ ಹೊಸ ಚೈತನ್ಯ ಸಿಗುತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved