ನಟಿ ಪೂನಂ ಕೌರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ 'ಫೇಕ್ ಗುರೂಜಿ' ಎಂದು ನಿಗೂಢ ಪೋಸ್ಟ್ ಹಂಚಿಕೊಂಡಿದ್ದು, ಇದು ಭಾರೀ ಚರ್ಚೆಗೆ ಕಾರಣವಾಗಿದೆ. ತಮ್ಮ ವೃತ್ತಿಜೀವನವನ್ನು ಮುಗಿಸಿದ ಟಾಲಿವುಡ್ ನಿರ್ದೇಶಕರೊಬ್ಬರನ್ನು ಗುರಿಯಾಗಿಸಿ ಅವರು ಈ ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ನಟಿ ಪೂನಂ ಕೌರ್ ಮತ್ತೆ ಟ್ರೆಂಡಿಂಗ್ನಲ್ಲಿ ಇದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ನಿಗೂಢ ಪೋಸ್ಟ್ ಒಂದು ಶೇರ್ ಮಾಡಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ.
ಏನೆಂದು ಪೋಸ್ಟ್ ಮಾಡಿದ್ದಾರೆ?
ನೀನು ನನ್ನ ವೃತ್ತಿಜೀವನವನ್ನು ಮುಗಿಸಿದ್ದೀಯಾ. ನಿನ್ನ ಕಿರುಕುಳವನ್ನು ನಾನು ಪ್ರಶ್ನಿಸಿದ್ದಕ್ಕೆ ಹೀಗೆ ಮಾಡಿದ್ದೀಯಾ? ಈಗ ದೇವರು ನಿನಗೆ ಏನು ನೀಡಿದ್ದಾನೆ ನೋಡು.. ಸ್ವಲ್ಪವಾದರೂ ನಾಚಿಕೆ ಇರಬೇಕು. ನೀನು ವೇದಿಕೆಗಳಲ್ಲಿ ಮೌಲ್ಯಗಳ ಬಗ್ಗೆ ಮಾತನಾಡಬಹುದು. ಆದರೆ ನಾನು ಅವುಗಳನ್ನು ಆಚರಿಸುತ್ತೇನೆ. ಫೇಕ್ ಗುರೂಜಿ ಎಂದು ಪೂನಂ ಕೌರ್ ಇನ್ಸ್ಟಾಗ್ರಾಂ ಸ್ಟೋರಿಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಯಾರಿಗೆ ಪೋಸ್ಟ್ ಮಾಡಿದ್ದು?
ನಟಿ ಪೂನಂ ಕೌರ್ ಹೇಳಿಕೆಗಳು ಟಾಲಿವುಡ್ ಅಂಗಳದಲ್ಲಿ ಆಗಾಗ ಸುದ್ದಿಯಲ್ಲಿರುತ್ತದೆ. ಸೋಶಿಯಲ್ ಮೀಡಿಯಾ ಮೂಲಕ ಟಾಂಗ್ ನೀಡುವ ಪೂನಂ, ಆ ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ಹೇಳಿಲ್ಲ. ಆದರೆ ನಿರಂತರವಾಗಿ ಗುರಿಯಾಗಿಸಿಕೊಂಡು ಪೋಸ್ಟ್ಗಳನ್ನ ಮಾಡುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೇ ಯಾವುದೇ ಪೋಸ್ಟ್ಗಳನ್ನ ಶೇರ್ ಮಾಡದೇ ಮೌನವಾಗಿದ್ದರು. ಇದೀಗ ಮತ್ತೆ ನಿಗೂಢ ಪೋಸ್ಟ್ಗಳನ್ನ ಹರಿಬಿಟ್ಟಿದ್ದಾರೆ.
ಕೆಲವು ವರದಿಗಳ ಪ್ರಕಾರ.. ಟಾಲಿವುಡ್ನ ನಿರ್ದೇಶಕರೊಬ್ಬರನ್ನು ಗುರಿಯಾಗಿಸಿ ನಿಗೂಢ ಪೋಸ್ಟ್ಗಳನ್ನ ಮಾಡುತ್ತಾರೆ ಎಂದು ಹೇಳಲಾಗತ್ತದೆ. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಟಾಲಿವುಡ್ನ ಸ್ಟಾರ್ ನಿರ್ದೇಶಕರೊಬ್ಬರು ಒಬ್ಬ ನಟಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದರು. ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ತಾವು ಮಾಡುವ ಪೋಸ್ಟ್ಗಳ ಬಗ್ಗೆಯೂ ಪ್ರತಿಕ್ರಿಯಿಸಿ.. ನಾನು ಯಾವತ್ತೂ ಟೈಂ ಪಾಸ್ಗಾಗಿ ಪೋಸ್ಟ್ ಮಾಡುವುದಿಲ್ಲ. ನನ್ನ ಹೃದಯಕ್ಕೆ ತಟ್ಟಿದ ವಿಷಯಗಳ ಬಗ್ಗೆಯಷ್ಟೇ ಮಾತನಾಡುತ್ತೇನೆ ಎಂದಿದ್ದರು.
ತನ್ನ ಕುಟುಂಬ ಸದಸ್ಯರ ದೌರ್ಬಲ್ಯಗಳನ್ನು ಬಳಸಿಕೊಂಡು.. ಅವರ ಮೂಲಕ ತನಗೆ ವಿರುದ್ಧವಾಗಿ ಹೇಳಿಕೆಗಳನ್ನು ಕೊಡಿಸಿದ್ದಾರೆ. ರಾಜಕಾರಣಿ ಮಾಡುವ ತಪ್ಪುಗಳಿಗೆ ತನ್ನ ಕುಟುಂಬ ಏಕೆ ಜವಾಬ್ದಾರಿಯಾಗಬೇಕು? ಎಂದು ಈ ಹಿಂದಿನ ಪೋಸ್ಟ್ಗಳಲ್ಲಿ ಪ್ರಶ್ನೆ ಮಾಡಿದ್ದರು. ಒಬ್ಬ ನಿರ್ದೇಶಕರ ವಿರುದ್ಧ ದೂರು ನೀಡಿದರೂ ನಂಗೆ ನ್ಯಾಯ ಸಿಗುತ್ತಿಲ್ಲ. ವರ್ಷಗಳು ಕಳೆದರೂ ನ್ಯಾಯಕ್ಕಾಗಿ ಎದುರು ನೋಡುತ್ತಿದ್ದೇನೆ. ಇನ್ನೂ ಎಷ್ಟು ಅಮಾಯಕರ ಜೀವನ ಹಾಳಾಗುವ ತನಕ ಕಾಯುತ್ತೀರಾ ಎಂದು ಪ್ರಶ್ನೆ ಮಾಡಿದ್ದರು.
ಯಾರು ಪೂನಂ ಕೌರ್?
ಪೂನಂ ಕೌರ್ ತೆಲುಗಿನ 'ಮಾಯಾಜಾಲಂ' ಚಿತ್ರದ ಮೂಲಕ ಟಾಲಿವುಡ್ಗೆ ಕಾಲಿಟ್ಟರು. ಆ ನಂತರ 'ಒಕ ವಿಚಿತ್ರಂ', 'ನಿಕ್ಕಿ ಅಂಡ್ ನೀರಜ್', 'ವಿನಾಯಕಡು', 'ಶೌರ್ಯಂ', 'ಗತಂ', 'ಬ್ರಹ್ಮಿ ಗಾಣಿ ಕಥೆ', 'ಆಡು ಮಗಡ್ರಾ ಬುಜ್ಜಿ', 'ಅಟ್ಯಾಕ್', 'ನಾಯಕಿ', 'ನಾತಿಚರಾಮಿ' (ತೆಲುಗು) 'ಈನಾಡು', 'ಗಣೇಶ್', 'ನಾಗವಲ್ಲಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಕನ್ನಡದ 'ಬಂಧು ಬಳಗ' ಸಿನಿಮಾದಲ್ಲಿ ಶಿವಣ್ಣ ಜೊತೆ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.






