ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮ್ಯಾಗಿ ನೂಡಲ್ಸ್ ಬಗ್ಗೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕ್ಯಾನ್ಸರ್ ಎಚ್ಚರಿಕೆ ನೀಡಿ ಮಾರಾಟ ಮಾಡಲಾಗುತ್ತಿದೆ. ಈ ಕುರಿತ ಫೋಟೋವೊಂದು ರೆಡಿಟ್ನಲ್ಲಿ ವೈರಲ್ ಆಗಿದ್ದು, ಭಾರತದಲ್ಲಿ ಯಾವುದೇ ಎಚ್ಚರಿಕೆ ಇಲ್ಲದೆ ಮಾರಾಟವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗಿದೆ.
ಮಕ್ಕಳ, ಯುವ ಸಮುದಾಯದ ಅದರಲ್ಲಿಯೂ ಹೆಚ್ಚಾಗಿ ಯುವತಿಯರ ಫೆವರೆಟ್ ಮ್ಯಾಗಿ ನೂಡಲ್ಸ್ ಎನ್ನೋದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅದರಲ್ಲಿಯೂ ಗಂಡು ನೋಡಲು ಬಂದಾಗ ಹೆಣ್ಣುಮಕ್ಕಳಿಗೆ ಅಡುಗೆ ಮಾಡಲು ಬರತ್ತಾ ಕೇಳಿದ್ರೆ, ಹೌದು, ಮ್ಯಾಗಿ ಮಾಡ್ತೇನೆ ಎನ್ನುವ ಮೀಮ್ಸ್, ಜೋಕ್ಗಳೆಲ್ಲವೂ ಈಗ ಹಳತಾಗಿದೆ. 5 ರೂಪಾಯಿ ಮ್ಯಾಗಿ ಪ್ಯಾಕೇಟ್ಗೆ ಒಂದಿಷ್ಟು ತರಕಾರಿ ಹಾಕಿ ಅದನ್ನೇ 200-300 ರೂಪಾಯಿ ಮಾರಾಟ ಮಾಡಿ ಬದುಕು ಕಂಡುಕೊಳ್ಳುತ್ತಿರುವವರೂ ಕೆಲವರು. ಏಕೆಂದರೆ ಇದನ್ನು ತಿನ್ನೋದು ಎಂದ್ರೆ ಅಷ್ಟು ಇಷ್ಟ ಹಲವರಿಗೆ.
ಆದರೆ ನಿಮಗೆ ನೆನಪಿದ್ಯಾ? ಕೆಲ ವರ್ಷಗಳ ಹಿಂದೆ ಮ್ಯಾಗಿಯ ಟೇಸ್ಟಿಂಗ್ ಪೌಡರ್ನಲ್ಲಿ ಕ್ಯಾನ್ಸರ್ಕಾರಕ ಅಂಶ ಇದೆ ಎಂದು ಅದನ್ನು ಸರ್ಕಾರ ಬ್ಯಾನ್ ಮಾಡಿತ್ತು. ಕೊನೆಗೆ ಏನೆನೋ ಟೆಸ್ಟ್ ಮಾಡಿಸಿ, ಟೇಸ್ಟಿಂಗ್ ಪೌಡರ್ ಬದಲು ಮಾಡಿದ್ದೇವೆ ಎಂದೆಲ್ಲಾ ಹೇಳಿದ್ದ ಕಂಪೆನಿ ಸರ್ಕಸ್ ಮಾಡಿ ಹೊಸ ಪೌಡರ್ ಮಾರುಕಟ್ಟೆಗೆ ಬಿಟ್ಟಿತ್ತು. ಕೊನೆಗೆ, ಅದರ ಮಾರಾಟಕ್ಕೆ ಅನುಮತಿಯೂ ಸಿಕ್ಕಿತ್ತು. ಇದರ ಅರ್ಥ, ಅದಕ್ಕಿಂತಲೂ ಮುಂಚೆ ಇದರ ಟೇಸ್ಟಿಂಗ್ ಪೌಡರ್ನಲ್ಲಿ ಹಾನಿಕಾರಕ ಅಂಶ ಇದ್ದದ್ದು ನಿಜ ಎಂದು ಸಾಬೀತಾಗಿತ್ತು.
ಷಾರ್ಟ್ ಮೆಮೋರಿ ಜನತೆ!
ಆದರೆ ನಮ್ಮ ಜನರನ್ನು ಷಾರ್ಟ್ ಮೆಮೋರಿ. ಎಲ್ಲಾ ಮರೀತಾರೆ. ಮತ್ತೆ ಮ್ಯಾಗಿಗೆ ಡಿಮಾಂಡ್ ಜಾಸ್ತಿಯಾಗಿದೆ. ಇದೇ ಭಾರತದವರ ಮನಸ್ಥಿತಿ. ಆದರೆ ಹೊರದೇಶಗಳಲ್ಲಿ ಹಾಗಲ್ಲವಲ್ಲ. ಅದರಲ್ಲಿಯೂ ಭಾರತದಲ್ಲಿ ಉತ್ಪಾದನೆ ಆಗುವ ಸಾಮಗ್ರಿಗಳ ಮೇಲೆ ವಿದೇಶಿಗರ ಕಣ್ಣು ನೆಟ್ಟಿರುತ್ತದೆ. ಅದೇ ಕಾರಣಕ್ಕೆ ಮ್ಯಾಗಿ ಇಂದಿಗೂ ಕ್ಯಾನ್ಸರ್ ಮುಕ್ತವಾಗಿಲ್ಲ ಎನ್ನುವ ಕಾರಣಕ್ಕೆ ಅದರ ಮೇಲೆ ಕ್ಯಾನ್ಸರ್ ಎಚ್ಚರಿಕೆಯ ವಾರ್ನಿಂಗ್ ಕೊಡಲಾಗಿದ್ದು, ಮಾರಾಟ ಮಾಡಲಾಗುತ್ತಿದೆ. ಸಿಗರೆಟ್ ಪ್ಯಾಕಿಂಗ್ ಮೇಲೆ ಎಚ್ಚರಿಕೆ ಕೊಡ್ತಾರಲ್ಲ, ಇಲ್ಲೂ ಅದೇ ರೀತಿ. ನಾವಂತೂ ವಾರ್ನಿಂಗ್ ಕೊಟ್ಟಾಗಿದೆ. ಮುಂದಿನದ್ದು ನಿಮ್ಮ ಹಣೆಯಬರಹ ಎನ್ನುವ ಮಾತು ಇದು ಅಷ್ಟೇ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಇದನ್ನೀಗ ರೆಡಿಟ್ ಬಳಕೆದಾರರೊಬ್ಬರು ಶೇರ್ ಮಾಡಿದ್ದು, ವೈರಲ್ ಆಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮಾರಾಟವಾಗುವ ಮ್ಯಾಗಿ ನೂಡಲ್ಸ್ ಪ್ಯಾಕೆಟ್ ಅನ್ನು ತೋರಿಸಿರುವ ಅನಿವಾಸಿ ಭಾರತೀಯರೊಬ್ಬರು ಇದನ್ನು ಶೇರ್ ಮಾಡಿಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದ ಪ್ರೊಪೊಸಿಷನ್ 65 ಕಾನೂನಿನ ಅಡಿಯಲ್ಲಿ ಕ್ಯಾನ್ಸರ್ ಮತ್ತು ಸಂತಾನೋತ್ಪತ್ತಿ ಹಾನಿಯನ್ನುಂಟುಮಾಡುವ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವ ಬಗ್ಗೆ ಎಚ್ಚರಿಕೆಯನ್ನು ಆ ಪ್ಯಾಕೆಟ್ನಲ್ಲಿ ಮುದ್ರಿಸಲಾಗಿದೆ. ಭಾರತದಲ್ಲಿ ಇದೇ ಪ್ಯಾಕೆಟ್ ಯಾವುದೇ ಎಚ್ಚರಿಕೆಕೊಡದೇ ಮಾರಾಟವಾಗುತ್ತಿದೆ!






