ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಟೀಂ ಇಂಡಿಯಾ 3-2 ಅಂತರದಿಂದ ಗೆದ್ದುಕೊಂಡಿದ್ದು, ನಮನ್ ಧೀರ್ ಅತ್ಯುತ್ತಮ ಫಿನಿಶರ್ ಆಗಿ ಹೊರಹೊಮ್ಮಿದ್ದಾರೆ. ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಬಿಸಿಸಿಐ 'ಇಂಪ್ಯಾಕ್ಟ್ ಪ್ಲೇಯರ್' ವಿಶೇಷ ಪದಕ ನೀಡಿ ಗೌರವಿಸಿದೆ. ಭವಿಷ್ಯದಲ್ಲಿ ಇವರು ರವೀಂದ್ರ ಜಡೇಜಾಗೆ ಪರ್ಯಾಯವಾಗುವ ಭರವಸೆ ಮೂಡಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಟೀಂ ಇಂಡಿಯಾ 3-2 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿಯಲ್ಲಿ ನಮನ್ ಧೀರ್ ಹೆಚ್ಚು ಗಮನ ಸೆಳೆದರು. ವಿಶೇಷವಾಗಿ ಅವರು ತಂಡದ ಫಿನಿಶರ್ ಆಗಿ ಗುರುತಿಸಿಕೊಂಡರು. ಜೊತೆಗೆ ಕೊನೆಯ ಓವರ್‍‌ನ ಒತ್ತಡವನ್ನು ನಿಭಾಯಿಸಲು ತಾವು ಸೂಕ್ತ ಅನ್ನೋದನ್ನು ಸಾಬೀತು ಮಾಡಿದರು. ಅವರ ಈ ವಿಶೇಷ ಪರಿಶ್ರಮವನ್ನು ಗುರುತಿಸಿದ ಬಿಸಿಸಿಐ ಸ್ಪೆಷಲ್ ಪದಕ ನೀಡಿ ಗೌರವಿಸಿದೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೆದ ಹ್ಯಾಪಿ ಮೂಮೆಂಟ್‌ ಅನ್ನು ಬಿಸಿಸಿಐ ಇದೀಗ ಶೇರ್ ಮಾಡಿದೆ.

ಸರಣಿಯ ಇಂಪ್ಯಾಕ್ಟ್ ಪ್ಲೇಯರ್

ನ್ಯೂಜಿಲೆಂಡ್ ಪ್ರವಾಸದಲ್ಲಿ ನಮನ ಧೀರ್ ಅವರನ್ನು ಸರಣಿಯ ಇಂಪ್ಯಾಕ್ಟ್ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಪಾತ್ರದರಾದರು. ಟೀಮ್ ಇಂಡಿಯಾದ ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಆಡ್ರಿಯನ್ ಲೀ ರಾಕ್ಸ್ ಪದಕ ಪ್ರದಾನ ಮಾಡಿದರು. ನಮನ್ ಧೀರ್ ಪದಕ ಸ್ವೀಕರಿಸುತ್ತಿದ್ದಂತೆಯೇ ತಂಡದ ಸದಸ್ಯರು ಕೀಟಲೆ ಶರುಮಾಡಿದರು. ಪ್ರಶಸ್ತಿ ಸ್ವೀಕರಿಸಿದ ನಮನ್ ಧೀರ್ ಎರಡು ನಿಮಿಷಗಳ ಕಾಲ ಮಾತನಾಡಬೇಕೆಂದು ಒತ್ತಾಯಿಸಿದರು. ಇದರಿಂದ ಅಲ್ಲಿ ಗದ್ದಲ ಉಂಟಾಯಿತು. ನಂತರ ನಮನ್ ಧೀರ್ ಮಾತನ್ನಾಡಲು ಶುರುಮಾಡಿದರು. ಆಗ ಪರಿಸ್ಥಿತಿ ಹತೋಟಿಗೆ ಬಂದಿದೆ.

ಈ ವೇಳೆ ಮಾತನ್ನಾಡಿದ ನಮನ್ ಧೀರ್.. ತಂಡದ ಎಲ್ಲಾ ಆಟಗಾರರಿಗೂ ಧನ್ಯವಾದಗಳನ್ನ ತಿಳಿಸಿದರು. ತಂಡದ ಸರಣಿ ಗೆಲುವಿನಲ್ಲಿ ಭಾಗವಾಗಲು ಸಂತೋಷವಾಗಿದೆ. ಇದು ನನ್ನ ಮೊದಲ ವಿದೇಶ ಪ್ರವಾಸವಾಗಿತ್ತು ಎಂದರು. ಈ ವೇಳೆ ನಮನ್ ಧೀರ್ ಭಾವುಕರಾಗಿ ಕಾಣಿಸಿಕೊಂಡರು. ಇನ್ನು ಸರಣಿಯಲ್ಲಿ ನಮನ್ ಧೀರ್ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಐದು ಪಂದ್ಯಗಳಲ್ಲಿ ಐದು ಇನ್ನಿಂಗ್ಸ್‌ನಲ್ಲಿ 138 ರನ್‌ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 46 ಮತ್ತು ಸ್ಟ್ರೈಕ್‌ ರೇಟ್ 200 ಆಸುಪಾಸಿನಲ್ಲಿದೆ. 197 ರನ್‌ಗಳಿಸಿದ ಅಭಿಷೇಕ್ ಶರ್ಮಾ ಜೊತೆ ಹೆಚ್ಚು ರನ್‌ಗಳಿಸಿ ಬ್ಯಾಟ್ಸಮನ್‌ಗಳ ಅಗ್ರಪಟ್ಟಿಯಲ್ಲಿ ನಮನ್ ಧೀರ್ ಇದ್ದಾರೆ.

ಶ್ರೇಯಸ್ ಅಯ್ಯರ್ ಮತ್ತು ತಿಲಕ್ ವರ್ಮಾ ಅವರಂತಹ ಪ್ರಮುಖ ಬ್ಯಾಟ್ಸ್‌ಮನ್‌ಗಳು ಕೆಲವೇ ಇನ್ನಿಂಗ್ಸ್‌ಗಳಲ್ಲಿ ಮಿಂಚುತ್ತಿದ್ದ ಸಮಯದಲ್ಲಿ ನಮನ ಸ್ಥಿರವಾಗಿ ರನ್ ಗಳಿಸಿ ಎಲ್ಲರ ಗಮನ ಸೆಳೆದರು. ಅಂದ್ಹಾಗೆ ನಮನ ಧೀರ್ ಮುಖ್ಯವಾಗಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್. ಅವರು ಅಗತ್ಯವಿರುವಂತೆ ಸ್ಪಿನ್ ಬೌಲಿಂಗ್ ಕೂಡ ಮಾಡಬಹುದು. ನ್ಯೂಜಿಲೆಂಡ್ ಸರಣಿಯಲ್ಲಿ.. ಅವರು ಆರು, ಏಳು ಮತ್ತು ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು.

ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಎಸೆತಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಹೀಗಿದ್ದೂ ಅವರು ತಮಗೆ ಬಂದ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡರು. ಇಡೀ ಸರಣಿಯಲ್ಲಿ ಕೇವಲ ಎರಡು ಓವರ್ ಮಾತ್ರ ಬೌಲಿಂಗ್ ಮಾಡಿದ್ದಾರೆ. ಬೌಲಿಂಗ್‌ನಲ್ಲಿ ಹೆಚ್ಚು ಮಿಂಚದಿದ್ದರೂ, ಬ್ಯಾಟಿಂಗ್‌ನಲ್ಲಿ ದರ್ಬಾರ್ ನಡೆಸಿದ್ದಾರೆ.

ಆದರೆ ನಮನ್ ಧೀರ್, ಬ್ಯಾಟಿಂಗ್ ಜೊತೆಗೆ ಸ್ಪಿನ್‌ನಲ್ಲಿ ಬೌಲಿಂಗ್‌ ಪರಿಣಾಮಕಾರಿಯಾಗಿ ಮಾಡುತ್ತಾರೆ. ಅದೇ ಕಾರಕ್ಕೆ ನಮನ್ ಧೀರ್ ಅವರನ್ನು ರವೀಂದ್ರ ಜಡೇಜಾಗೆ ಪರ್ಯಾಯವಾಗಿ ನೋಡಲಾಗುತ್ತಿದೆ. ಕಳೆದ ಒಂದು ಒಂದ್ಯದಲ್ಲಿ ಚೆನ್ನಾಗಿ ಆಡಿದರೆ ಸಾಲದು.. ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡರೆ ನಮನ್ ಧೀರ್, ಟೀಂ ಇಂಡಿಯಾದ ದಂತಕತೆ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

Scroll to load tweet…