ರಾಯಲ್ ಎನ್‌ಫೀಲ್ಡ್ ತನ್ನ ಶಕ್ತಿಶಾಲಿ 750cc ಎಂಜಿನ್ ಹೊಂದಿರುವ ಹೊಸ ಹಿಮಾಲಯನ್ 750 ಬೈಕ್ ಅನ್ನು ಅನಾವರಣಗೊಳಿಸಿದೆ. ಇದು ಅತ್ಯಾಧುನಿಕ ಫೀಚರ್ಸ್, ಪ್ರೀಮಿಯಂ ಲುಕ್ ಮತ್ತು ಎಲ್ಲಾ ಭೂಪ್ರದೇಶಗಳಿಗೂ ಸೂಕ್ತವಾದ ವಿನ್ಯಾಸವನ್ನು ಹೊಂದಿದೆ. ಈ ಬೈಕ್ 2026ರ ನವೆಂಬರ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಸಾಹಸಿ ಬೈಕ್ ಪ್ರಿಯರಿಗೆ ರಾಯಲ್ ಎನ್‌ಫೀಲ್ಡ್ ಗುಡ್‌ನ್ಯೂಸ್ ನೀಡಿದೆ. ತನ್ನ ಹಿಮಾಲಯನ್ 750 ಬೈಕ್ ಅನ್ನು ಅಧಿಕೃತವಾಗಿ ಅನಾವರಣ ಮಾಡಿದೆ. ಶಕ್ತಿಶಾಲಿ 750cc ಪ್ಯಾರಲಲ್-ಟ್ವಿನ್ ಎಂಜಿನ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಸುಧಾರಿತ ಫೀಚರ್ಸ್‌ನೊಂದಿಗೆ ಲುಕ್ ರಿವೀಲ್ ಮಾಡಿದೆ.
ಪ್ರಸ್ತುತ ಇರುವ ಹಿಮಾಲಯನ್ 450ಗೆ ಹೋಲಿಸಿದರೆ, ಈ ಹೊಸ ಬೈಕ್‌ನ ಗಾತ್ರ, ಶಕ್ತಿ ಮತ್ತು ಫೀಚರ್ಸ್ ತುಂಬಾ ಅಪ್‌ಡೇಟ್ ಆಗಿದೆ. ಕಂಪನಿಯು ಈ ಬೈಕ್ ಅನ್ನ ಸ್ಟಂಟ್ ರೇಂಜ್ ಮಾಡೆಲ್ ಎಂದು ಪರಿಚಯಿಸಿದೆ. ದೂರದ ಪ್ರಯಾಣ ಮತ್ತು ಹೆದ್ದಾರಿಗಳಲ್ಲಿ ಯಾವುದೇ ತೊಂದರೆ ಇಲ್ಲದೇ ಸವಾರಿ ಮಾಡೋರಿಗೆ ಹೇಳಿ ಮಾಡಿಸಿದ ಬೈಕ್ ಇದಾಗಿದೆ.
ಲುಕ್ ಮತ್ತು ವಿನ್ಯಾಸ ಹೇಗಿದೆ?
- ಹೆಚ್ಚು ಪ್ರೀಮಿಯಂ ಲುಕ್
- ದೊಡ್ಡ ಇಂಧನ ಟ್ಯಾಂಕ್
- ಎತ್ತರದ ಸೀಟ್ ಹೊಂದಿದೆ.
- ಹಿಮಾಲಯನ್ 750 ಹೊಸ 750 ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್
- ಅವಳಿ-ಸಿಲಿಂಡರ್ ಪ್ಲಾಟ್‌ಫಾರ್ಮ್
- ಎಂಜಿನ್ 6-ಸ್ಪೀಡ್ ಗೇರ್‌ಬಾಕ್ಸ್
- 55 ಎಚ್‌ಪಿ ಮತ್ತು 60 ಎನ್‌ಎಂ ಗರಿಷ್ಠ ಟಾರ್ಕ್
ಬೈಕ್‌ನ ಮುಂಭಾಗವು ಚಿಕ್ಕ ಹಿಮಾಲಯನ್‌ನ ನವೀಕರಿಸಿದ ಆವೃತ್ತಿಯಂತೆ ಕಾಣ್ತಿದೆ. ಹಿಂಭಾಗವು ಹಿಮಾಲಯನ್ 450 ಅಂತೆಯೇ ಇದೆ. ಟೈಲ್ ಲ್ಯಾಂಪ್‌ಗಳನ್ನು ತಿರುವು ಸೂಚಕಗಳಲ್ಲಿ ಸಂಯೋಜಿಸಲಾಗಿದೆ. ಕಂಪನಿಯು ಜಾಗತಿಕ ಮಾರುಕಟ್ಟೆಗಳನ್ನು ಗುರಿಯಾಗಿಸಿ ಅತ್ಯಾಕರ್ಷಕ ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ ಎಂದು ವರದಿಯಾಗಿದೆ.
ಪ್ರವಾಸ ಮತ್ತು ಒರಟು ಭೂಪ್ರದೇಶದಲ್ಲಿ ಸುಲಭವಾಗಿ ಓಡಿಸಬಹುದು. ಬೈಕಿನ ಎರಡೂ ತುದಿಗಳಲ್ಲಿ ದೀರ್ಘ-ಪ್ರಯಾಣದ ಸಸ್ಪೆನ್ಷನ್ ಹೊಂದಿದೆ. ಮುಂಭಾಗದಲ್ಲಿ ತಲೆಕೆಳಗಾದ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಇದೆ. ಮುಂಭಾಗದ ಸಸ್ಪೆನ್ಷನ್ ರಿಬೌಂಡ್ ಮತ್ತು ಕಂಪ್ರೆಷನ್ ಹೊಂದಾಣಿಕೆ ಹೊಂದಿದೆ. ಹಿಂಭಾಗದ ಸಸ್ಪೆನ್ಷನ್ ಅನ್ನು ಪೂರ್ವ ಲೋಡ್ ಸೆಟ್ಟಿಂಗ್‌ಗಳಿಗೆ ಸರಿ ಹೊಂದಿಸಬಹುದು. ಬೈಕ್ ಟ್ಯೂಬ್‌ಲೆಸ್ ಸ್ಪೋಕ್ ವೀಲ್‌ಗಳು ಮತ್ತು ಡ್ಯುಯಲ್-ಡಿಸ್ಕ್ ಫ್ರಂಟ್ ಬ್ರೇಕ್‌ಗಳನ್ನು ಒಳಗೊಂಡಿದೆ.
ದೀರ್ಘ ಸವಾರಿಗಳ ಸಮಯದಲ್ಲಿ ಗಾಳಿಯಿಂದ ರಕ್ಷಣೆ ಪಡೆಯಲು ವಿಂಡ್‌ಸ್ಕ್ರೀನ್, ಭಾರವಾದ ಸಾಮಾನು ಅಥವಾ ಹಿಂಬದಿ ಸವಾರನ ಹೊತ್ತೊಯ್ಯುವಾಗ ಸ್ಪಷ್ಟ ಗೋಚರತೆಗಾಗಿ ಹೊಂದಾಣಿಕೆ ಮಾಡಬಹುದಾದ ಹೆಡ್‌ಲೈಟ್ ಸೆಟಪ್ ಹೊಂದಿದೆ. ಇದರ ಸೀಟ್ ಎತ್ತರವು 830 ರಿಂದ 850 ಮಿಮೀ ನಡುವೆ ಇದೆ. ಗ್ರೌಂಡ್ ಕ್ಲಿಯರೆನ್ಸ್ 220 ಮಿಮೀ ಗಿಂತ ಹೆಚ್ಚಿದೆ. ಇದು ಎಲ್ಲಾ ಭೂಪ್ರದೇಶಗಳಿಗೆ ಸೂಕ್ತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಭಾರತದಲ್ಲಿ ಬಿಡುಗಡೆ ಯಾವಾಗ?
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 750 ಬೈಕ್ ಭಾರತದಲ್ಲಿ ನವೆಂಬರ್ 2026ರ ಕೊನೆಯ ವಾರದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಜೊತೆಗೆ ಅದರ ಬೆಲೆ ಬಗ್ಗೆಯೂ ಇನ್ನೂ ಕಂಪನಿ ಖಚಿತಪಡಿಸಿಲ್ಲ. ಒಂದು ಅಂದಾಜಿನ ಪ್ರಕಾರ.. ಬೆಲೆ ₹4.5 ಲಕ್ಷದಿಂದ ₹5 ಲಕ್ಷದವರೆಗೆ ಇರಬಹುದು ಎಂದು ನಿರೀಕ್ಷೆ ಮಾಡಲಾಗಿದೆ.






