ರಿಲಯನ್ಸ್ ಕಂಪನಿಯ ತ್ರೈಮಾಸಿಕ ಫಲಿತಾಂಶದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಷೇರುಗಳು ಭಾರಿ ಏರಿಕೆ ಕಂಡಿವೆ. ಇದರಿಂದಾಗಿ ಮುಕೇಶ್ ಅಂಬಾನಿ ಅವರ ಆಸ್ತಿ ಕೇವಲ ಒಂದೇ ದಿನದಲ್ಲಿ 6 ಬಿಲಿಯನ್ ಡಾಲರ್ಗಿಂತಲೂ ಹೆಚ್ಚು ಏರಿಕೆಯಾಗಿದೆ. ಈ ಮೂಲಕ ಅವರು ಫೋರ್ಬ್ಸ್ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 23ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ವಿಶ್ವದ ಅತ್ಯಂತ ಶ್ರೀಮಂತ ಬಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ. ಕೇವಲ ಒಂದೇ ದಿನದಲ್ಲಿ ಅವರ ಆಸ್ತಿ 6 ಬಿಲಿಯನ್ ಡಾಲರ್ಗಿಂತಲೂ ಹೆಚ್ಚು ಏರಿಕೆ ಕಂಡಿದೆ.
ಒಂದೇ ದಿನದಲ್ಲಿ 52,800 ಕೋಟಿ ಗಳಿಕೆ
ಅಂದರೆ ಸುಮಾರು 52,800 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣ ಒಂದೇ ದಿನದಲ್ಲಿ ಅವರ ಖಾತೆಗೆ ಸೇರ್ಪಡೆಯಾಗಿದೆ. ರಿಲಯನ್ಸ್ ಕಂಪನಿಯ ತ್ರೈಮಾಸಿಕ ಫಲಿತಾಂಶ ತುಂಬಾ ಚೆನ್ನಾಗಿ ಬಂದಿದೆ. ಈ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಷೇರು ಏರಿಕೆ ಕಂಡಿದೆ. ಇದರಿಂದಾಗಿ ಅಂಬಾನಿ ಸಂಪತ್ತು ದಿಢೀರ್ ಏರಿಕೆ ಆಗಿದೆ.
ಫೋರ್ಬ್ಸ್ ಪತ್ರಿಕೆಯು ರಿಯಲ್ ಟೈಮ್ ಶ್ರೀಮಂತರ ಪಟ್ಟಿಯನ್ನ ಪ್ರಕಟ ಮಾಡಿದೆ. ಅದರ ಪ್ರಕಾರ, ನವೆಂಬರ್ 2 ರಂದು ಬಿಡುಗಡೆಯಾದ ಅಂಕಿ-ಅಂಶಗಳಲ್ಲಿ ಮುಕೇಶ್ ಅಂಬಾನಿ ಸಂಪತ್ತು ಶೇಕಡಾ 7.85 ರಷ್ಟು ಅಂದರೆ 6.3 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ಇದು ಸುಮಾರು 55,440 ಕೋಟಿ ರೂಪಾಯಿ. ಆ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ಸಂಪತ್ತು ಹೆಚ್ಚಿಸಿಕೊಂಡ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾರೀ ಏರಿಕೆಯ ಬೆನ್ನಲ್ಲೇ ಫೋರ್ಬ್ಸ್ನ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ 23ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದರೊಂದಿಗೆ ಅವರು ಭಾರತದ ಅತಿ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 88.8 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಅಂದರೆ ಸುಮಾರು 7 ಲಕ್ಷದ 81 ಸಾವಿರ ಕೋಟಿ ರೂಪಾಯಿ. ಈ ಪಟ್ಟಿಯಲ್ಲಿ ಎರಡನೇ ಅತಿ ಶ್ರೀಮಂತ ಭಾರತೀಯ ಉದ್ಯಮಿ ಗೌತಮ್ ಅದಾನಿ 79.12 ಬಿಲಿಯನ್ ಡಾಲರ್ ಅಂದರೆ ಸುಮಾರು 6 ಲಕ್ಷದ 96 ಸಾವಿರ ಕೋಟಿ ರೂಪಾಯಿ ಆಸ್ತಿಯೊಂದಿಗೆ 26ನೇ ಸ್ಥಾನದಲ್ಲಿದ್ದಾರೆ.
ಒಂದೇ ದಿನದಲ್ಲಿ ಸಂಪತ್ತು ಹೆಚ್ಚಿಸಿಕೊಳ್ಳುವಲ್ಲಿ ಎರಡನೇ ಸ್ಥಾನದಲ್ಲಿ ಸ್ಪೇನ್ನ ರಿಟೇಲ್ ಉದ್ಯಮಿ ಅಮ್ಯಾನ್ಸಿಯೊ ಒರ್ಟೆಗಾ ಇದ್ದಾರೆ. ಅವರ ಆಸ್ತಿ 1.7 ಬಿಲಿಯನ್ ಡಾಲರ್. ಅಂದರೆ ಸುಮಾರು 14,960 ಕೋಟಿ ರೂಪಾಯಿ ಹೆಚ್ಚಾಗಿದೆ. ಮೂರನೇ ಸ್ಥಾನದಲ್ಲಿ ಚೀನಾದ ಝಾಂಗ್ ಶಾನ್ಶಾನ್ ಇದ್ದಾರೆ. ಅವರ ಆಸ್ತಿ 13,200 ಕೋಟಿ ರೂಪಾಯಿ ಏರಿಕೆಯಾಗಿದೆ.
ಸೋಮವಾರ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ರಿಲಯನ್ಸ್ ಷೇರು ಶೇಕಡಾ 11.64 ರಷ್ಟು ಏರಿಕೆಯಾಗಿ 1,299 ರೂಪಾಯಿಗೆ ತಲುಪಿ ಸ್ಟಾಪ್ ಆಗಿದೆ. ಕಳೆದ ಆರು ವರ್ಷಗಳಲ್ಲೇ ಇದು ಅತ್ಯುತ್ತಮ ಪ್ರದರ್ಶನವಾಗಿದೆ. ನಿಫ್ಟಿ-50 ಸೂಚ್ಯಂಕದಲ್ಲಿ ಅತಿ ಹೆಚ್ಚು ಏರಿಕೆ ಕಂಡ ಷೇರು ಇದಾಗಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಕಂಪನಿಯ ಲಾಭ ದಾಖಲೆ ಮಟ್ಟಕ್ಕೆ ಏರಿದೆ.
ಚಾಲ್ತಿಯಲ್ಲಿರುವ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ಶೇಕಡಾ 33.8 ರಷ್ಟು ಏರಿಕೆಯಾಗಿ ದಾಖಲೆಯ 29,550 ಕೋಟಿ ರೂಪಾಯಿ ತಲುಪಿದೆ. ತೈಲದಿಂದ ರಾಸಾಯನಿಕ ವ್ಯವಹಾರ ಮತ್ತು ಟೆಲಿಕಾಂ ವ್ಯವಹಾರದ ಉತ್ತಮ ಸಾಧನೆಯಿಂದಾಗಿ ರಿಟೇಲ್ ವ್ಯವಹಾರದ ಕೊಂಚ ಹಿನ್ನಡೆಯನ್ನು ಸರಿದೂಗಿಸಲಾಗಿದೆ ಎಂದು ಕಂಪನಿ ತಿಳಿಸಿದೆ.






