ನವದೆಹಲಿ: ಭಾರತದ ಮುಖ್ಯ ನ್ಯಾಯಾಧೀಶ ನ್ಯಾ। ಸೂರ್ಯಕಾಂತ್ ಅವರ ಹೇಳಿಕೆಯಿಂದಾಗಿ ಹುಟ್ಟಿಕೊಂಡಿದ್ದ ‘ಜಿರಳೆ ಪಾರ್ಟಿ’ ಜೆನ್-ಝಿಗಳನ್ನು ಒಗ್ಗೂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನೇ ಕೆಳಗೆ ಇಳಿಸಿದೆ. ಇದರ ಬೆನ್ನಲ್ಲೇ, ದೇಶದಲ್ಲಿ ಸದ್ಯ ಜಾರಿಯಲ್ಲಿರುವ ಪೆಟ್ರೋಲ್‌ಗೆ ಶೇ.20ರಷ್ಟು ಎಥನಾಲ್ ಮಿಶ್ರಣ ಮಾಡುವ ಕ್ರಮದ ವಿರುದ್ಧ ‘ಇ20 ಜನತಾ ಪಾರ್ಟಿ’ ಎಂಬ ಇನ್‌ಸ್ಟಾಗ್ರಾಂ ಪೇಜ್ ಶುರು ಮಾಡಲಾಗಿದೆ ಹಾಗೂ ಇ20 ಪ್ರತಿಪಾದಕ ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜೀನಾಮೆಗೆ ಆಗ್ರಹಿಸಲಾಗಿದೆ.
ಈ ಪಕ್ಷವ ಖಾತೆಯನ್ನು ಇನ್‌ಸ್ಟಾಗ್ರಾಂನಲ್ಲಿ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಸೋಮವಾರ ಮಧ್ಯಾಹ್ನದವರೆಗೆ 2.18 ಲಕ್ಷ ಹಿಂಬಾಲಕರು ಫಾಲೋ ಮಾಡಿದ್ದಾರೆ.
ಯಾವುದೇ ಮಿಶ್ರಣವಿಲ್ಲದ ಶೇ.100ರಷ್ಟು ಶುದ್ಧ ಪೆಟ್ರೋಲ್ ಲಭ್ಯವಾಗುವಂತೆ ಮಾಡಬೇಕು ಹಾಗೂ ಅದರ ಬೆಲೆಯನ್ನು ತಗ್ಗಿಸಬೇಕು. ಜತೆಗೆ ಇ20 ಪೆಟ್ರೋಲ್ ಪರಿಚಯಿಸಿದ್ದಕ್ಕಾಗಿ ಭಾರೀ ಆಕ್ರೋಶ ಎದುರಿಸುತ್ತಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ರಾಜೀನಾಮೆ ನೀಡಬೇಕು ಎಂಬುದು ಇ20 ಜನತಾ ಪಕ್ಷದ ಆಗ್ರಹವಾಗಿದೆ.
ಆದರೆ ಸರ್ಕಾರ ಮಾತ್ರ ಈ ಎರಡೂ ಪ್ರಸ್ತಾಪಗಳು ನಮ್ಮ ಮುಂದಿಲ್ಲ. ಇದರ ಜಾರಿ ಸಾಧ್ಯವಿಲ್ಲ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದೆ.
11:07 PM (IST) Jul 28
ಆ ಕಾಲದಲ್ಲಿ ಹಾರರ್ ಸಿನೆಮಾಗಳಲ್ಲಿ ನಟಿಸುವುದು ಸುಲಭದ ಮಾತಾಗಿರಲಿಲ್ಲ. ‘ಶೂಟಿಂಗ್ ಬಹುತೇಕ ತಡರಾತ್ರಿಯಲ್ಲೇ ನಡೆಯುತ್ತಿತ್ತು. ದಟ್ಟವಾದ ಮಂಜು ಮತ್ತು ಸ್ಮಶಾನದಂತಹ ನಿಶ್ಯಬ್ದದ ನಡುವೆ ರಾತ್ರಿಯಿಡೀ ಕಿರುಚಾಡುತ್ತಾ, ದೆವ್ವಗಳಿಂದ ತಪ್ಪಿಸಿಕೊಂಡು ಓಡುವ ದೃಶ್ಯಗಳಲ್ಲಿ ಅಭಿನಯಿಸುವುದು ನಿಜಕ್ಕೂ ಮೈ ಜುಂ ಎನ್ನುವ ಅನುಭವ’ ಎಂದಿದ್ದಾರೆ ನಟಿ ಪ್ರೀತಿ ಸಪ್ರು.
10:44 PM (IST) Jul 28
10:24 PM (IST) Jul 28
ವಿದ್ಯಾರ್ಥಿ ಪ್ರತಿಭಟನೆ ವೇಳೆ ದಾಖಲಾದ ಎಫ್‌ಐಆರ್‌ಗಳನ್ನು ಹಿಂಪಡೆಯುವ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸದಿದ್ದರೆ ಮತ್ತೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ (CJP) ಎಚ್ಚರಿಸಿದೆ.
09:53 PM (IST) Jul 28
09:15 PM (IST) Jul 28
ಟೊಯೋಟಾ ಸಂಸ್ಥೆಯು ತನ್ನ ಜನಪ್ರಿಯ ಪಿಕಪ್ ಟ್ರಕ್ 'ಹೈಲಕ್ಸ್'ನ ಹೊಸ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ, ಇದರ ಆರಂಭಿಕ ಬೆಲೆ ₹31.99 ಲಕ್ಷ. ಈ ಹೊಸ ಮಾದರಿಯು ಆಕರ್ಷಕ ಬಾಹ್ಯ ವಿನ್ಯಾಸ, ಪ್ರೀಮಿಯಂ ಇಂಟೀರಿಯರ್ ಫೀಚರ್‌ಗಳನ್ನು ಹೊಂದಿದೆ.
08:50 PM (IST) Jul 28
08:34 PM (IST) Jul 28
ನಟಿ ಶಿಲ್ಪಾ ಶೆಟ್ಟಿ ಅವರ ಹೆಸರಿನಲ್ಲಿ ಜಾತಿ ಆಧಾರಿತ ಮೀಸಲಾತಿ ಕುರಿತು ವೈರಲ್ ಆಗಿದ್ದ ವಿವಾದಾತ್ಮಕ ಹೇಳಿಕೆಯು ಸಂಪೂರ್ಣ ನಕಲಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಮಗೆ ಆಘಾತವಾಗಿದೆ ಎಂದು ಹೇಳಿರುವ ಅವರು, ಇಂತಹ ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ನಂಬದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
07:52 PM (IST) Jul 28
07:48 PM (IST) Jul 28
ಯೂರಿಯಾ ಆಮದು ಅವಲಂಬನೆ ತಗ್ಗಿಸಲು, ಕೇಂದ್ರ ಸರ್ಕಾರವು ಕೃಷಿಯಲ್ಲಿ ನೇರವಾಗಿ 'ಅನ್‌ಹೈಡ್ರಸ್ ಅಮೋನಿಯಾ' ಬಳಕೆಗೆ ಅನುಮತಿ ನೀಡಿದೆ. ಶೇ. 82ರಷ್ಟು ಸಾರಜನಕ ಹೊಂದಿರುವ ಈ ಪರ್ಯಾಯವು ಕ್ರಾಂತಿಕಾರಕವಾಗಿದ್ದರೂ, ಇದರ ಸುರಕ್ಷಿತ ಬಳಕೆ ಮತ್ತು ವಿತರಣೆಗೆ ಬೇಕಾದ ಮೂಲಸೌಕರ್ಯ ನಿರ್ಮಾಣವು ದೊಡ್ಡ ಸವಾಲಾಗಿದೆ.
07:07 PM (IST) Jul 28
06:16 PM (IST) Jul 28
ಭಾರತದಲ್ಲಿ ₹100 ಕೋಟಿಗೂ ಹೆಚ್ಚು ಆದಾಯ ಘೋಷಿಸುವವರ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದ್ದು, 2025-26ರ ಮೌಲ್ಯಮಾಪನ ವರ್ಷದಲ್ಲಿ 576ಕ್ಕೆ ತಲುಪಿದೆ ಎಂದು ಆದಾಯ ತೆರಿಗೆ ರಿಟರ್ನ್ಸ್ ಡೇಟಾ ಬಹಿರಂಗಪಡಿಸಿದೆ.
06:02 PM (IST) Jul 28
05:41 PM (IST) Jul 28
04:50 PM (IST) Jul 28
04:33 PM (IST) Jul 28
04:05 PM (IST) Jul 28
ನಟಿ ಕಂಗನಾ ರಣಾವತ್ ಅವರ ಪ್ರಕಾರ ಹೆಚ್ಚು ಪ್ರೊಟೀನ್ ಸೇವನೆಯಿಂದ ಬುದ್ಧಿಶಕ್ತಿ ಕುಂದುತ್ತದೆ. ಆದರೆ, ವೈಜ್ಞಾನಿಕವಾಗಿ ಇದಕ್ಕೆ ಯಾವುದೇ ಪುರಾವೆಗಳಿಲ್ಲವೆಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಪ್ರೊಟೀನ್ ಮೆದುಳಿಗೆ ಅವಶ್ಯಕ. ಕಾರ್ಬೋಹೈಡ್ರೇಟ್ ಮತ್ತು ನೀರಿನ ಕೊರತೆಯಿಂದ ತಾತ್ಕಾಲಿಕವಾಗಿ ಮೆದುಳು ಮಂದವಾಗಬಹುದೇ ಹೊರತು, ಐಕ್ಯೂ ಕಡಿಮೆಯಾಗುವುದಿಲ್ಲ. ಆದ್ದರಿಂದ ಸಮತೋಲಿತ ಆಹಾರ ಸೇವಿಸುವುದು ಮುಖ್ಯವಾಗಿದೆ.
03:57 PM (IST) Jul 28
03:29 PM (IST) Jul 28
03:20 PM (IST) Jul 28
02:59 PM (IST) Jul 28
ರಾಜಮೌಳಿ ಸಿನಿಮಾಗೆ 'ವಾರಣಾಸಿ' ಟೈಟಲ್ಆಗಿ ತೆಲುಗು ಫಿಲ್ಮ್ ನಗರಿಯ ಕಾಂಪೌಂಡ್‌ನಲ್ಲಿ ವಾರ್ ಶುರುವಾಗಿತ್ತು. ನಿಜ ಹೇಳ್ಬೇಕಂದ್ರೆ, 2023ರಲ್ಲೇ ‘ವಾರಣಾಸಿ’ ಶೀರ್ಷಿಕೆಯನ್ನು ತಮ್ಮ ಬ್ಯಾನರ್ ಅಡಿಯಲ್ಲಿ ಸುಬ್ಬಾರೆಡ್ಡಿ ಆಫೀಶಿಯಲ್ ಆಗಿ ರಿಜಿಸ್ಟರ್ ಮಾಡಿಸಿಕೊಂಡು ಕಥೆ ರೆಡಿ ಮಾಡಿಕೊಳ್ತಿದ್ರು. ಆಗ ಶುರುವಾಯ್ತು ವಾರ್!
02:41 PM (IST) Jul 28
02:35 PM (IST) Jul 28
02:30 PM (IST) Jul 28
ಹರಾರೆ: ಜಿಂಬಾಬ್ವೆ ಎದುರಿನ ಮೂರು ಪಂದ್ಯಗಳ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಬೆನ್ನಲ್ಲೇ ಹಂಗಾಮಿ ಕೋಚ್ ಲಕ್ಷ್ಮಣ್‌ಗೆ ಧನ್ಯವಾದ ಹೇಳುವ ಮೂಲಕ ಟೀಂ ಇಂಡಿಯಾ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್, ಹೆಡ್ ಕೋಚ್ ಗೌತಮ್ ಗಂಭೀರ್‌ಗೆ ಟಾಂಗ್ ಕೊಟ್ರಾ? ಇಲ್ಲಿದೆ ಅಪ್‌ಡೇಟ್ಸ್
02:23 PM (IST) Jul 28
ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರನು ಪ್ರತಿವರ್ಷ ಭೂಮಿಯಿಂದ ನಿಧಾನವಾಗಿ ದೂರ ಸರಿಯುತ್ತಿದ್ದಾನೆ. ಚಂದ್ರನು ಭೂಮಿಯಿಂದ ಎಷ್ಟು ದೂರವಾಗಿದ್ದಾನೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಚಂದ್ರನ ಕುರಿತ ವಿಶೇಷ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
02:13 PM (IST) Jul 28
12:58 PM (IST) Jul 28
ಭಾರತ ಮತ್ತು ಪಾಕಿಸ್ತಾನದ ಮಾಂಸಾಹಾರ ಸೇವನೆಯಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಭಾರತದಲ್ಲಿ ಮಾಂಸ ಸೇವಿಸುವವರ ಸಂಖ್ಯೆ ಹೆಚ್ಚುತ್ತಿದೆ. ಈ ಲೇಖನವು ಎರಡೂ ದೇಶಗಳ ಮಾಂಸ ಬಳಕೆಯ ಪ್ರಮಾಣ ಮತ್ತು ಸಂಬಂಧಿತ ಅಂಕಿಅಂಶಗಳನ್ನು ವಿವರಿಸುತ್ತದೆ.
12:56 PM (IST) Jul 28
12:42 PM (IST) Jul 28
ಟೀಂ ಇಂಡಿಯಾ ಮಾಜಿ ಅಂಡರ್ 19 ವಿಶ್ವಕಪ್ ಹೀರೋ ಜೈಲಿನಲ್ಲೇ ಬಂಧಿಯಾಗಿದ್ದಾರೆ. ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಶ್ರೀಲಂಕಾ ಪೊಲೀಸರಿಂದ ಅರೆಸ್ಟ್ ಆಗಿದ್ದ ಈ ಭಾರತದ ಮಾಜಿ ಹೀರೋಗೆ ಸಂಕಷ್ಟ ತೀವ್ರಗೊಂಡಿದೆ.
12:40 PM (IST) Jul 28
12:02 PM (IST) Jul 28
11:50 AM (IST) Jul 28
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಳಿಕ ಪ್ರತಿಭಟನಾ ನಿರತ ಕಾಕ್ರೋಚ್ ಜನತಾ ಪಾರ್ಟಿ ಫೈವ್ ಸ್ಟಾರ್ ಹೊಟೆಲ್‌ನಲ್ಲಿ ಮಾಡಿದ ಅದ್ಧೂರಿ ಪಾರ್ಟಿ ವಿವಾದಕ್ಕೆ ಕಾರಣಾಗಿದೆ. ಇದರ ಬೆನ್ನಲ್ಲೇ ಉಪವಾಸ ಸತ್ಯಾಗ್ರಹ ಮಾಡಿದ ಸೋನಂ ವಾಂಗ್ಚುಕ್ ಈ ಪಾರ್ಟಿ ಕುರಿತು ಪ್ರತಿಕ್ರಿಯಿಸಿದ್ದಾರೆ.
11:40 AM (IST) Jul 28
ಮುಂಬೈ: ಮುಂಬರುವ ಆಗಸ್ಟ್ ತಿಂಗಳಿನಲ್ಲಿ ಟೀಂ ಇಂಡಿಯಾ, ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದು, ಈ ಮಹತ್ವದ ಸರಣಿಗೆ ಭಾರತ ತಂಡ ಪ್ರಕಟವಾಗಿದೆ. ಇದರಲ್ಲಿ ಮೂವರು ಕನ್ನಡಿಗರಿಗೆ ಜಾಕ್‌ಪಾಟ್ ಹೊಡೆದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
11:40 AM (IST) Jul 28
"ಒಂದೇ ಕೆಫೆಗೆ ಯಾಕೆ ಹೋದರು? ಇಬ್ಬರೂ ಸೀಕ್ರೆಟ್ ಆಗಿ ಮೀಟ್ ಮಾಡಿದ್ದಾರಾ?" ಎಂದು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಈ ಹಿಂದೆ ಮೃಣಾಲ್ ಹೆಸರು ತಮಿಳು ನಟ ಧನುಷ್ ಜೊತೆಯೂ ಕೇಳಿಬಂದಿತ್ತು. ಆದರೆ ಈಗ ಜೈಸ್ವಾಲ್! ಏನಿದು ಹೊಸ ಲವ್ ಸ್ಟೋರಿ
11:21 AM (IST) Jul 28
ಮಧ್ಯಪ್ರದೇಶದ ಆಲ್-ರೌಂಡರ್ ಸಾರಂಶ್ ಜೈನ್, ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆ ಆಗಿದ್ದಾರೆ. ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸಿರೀಸ್‌ನಲ್ಲಿ ತಂಡದ ಭಾಗವಾಗಲಿದ್ದಾರೆ. ಯಾರು ಈ ಸಾರಂಶ್ ಜೈನ್? ಇವರ ಕ್ರಿಕೆಟ್ ಜರ್ನಿ ಹೇಗಿತ್ತು? ಇಲ್ಲಿದೆ ಸಂಪೂರ್ಣ ಮಾಹಿತಿ.
11:16 AM (IST) Jul 28
ನೀಟ್ ಪ್ರತಿಭಟನೆ ಬಳಿಕ ತೆಗೆದುಕೊಂಡ ಕ್ರಮಗಳ ಕುರಿತು ಪ್ರಧಾನಿ ಮೋದಿ ಜೆನ್‌ಝಿ ಉದ್ದೇಶಿಸಿ ಸೆಲ್ಫಿ ವಿಡಿಯೋ ಮಾಡಿದ್ದರು. ಇದು ಮಿಲಿಯನ್ ವೀವ್ಸ್ ಪಡೆದಿತ್ತು, ಆದರೆ ದಿಢೀರ್ ಫೇಸ್‌ಬುಕ್ ಈ ವಿಡಿಯೋ ಡಿಲೀಟ್ ಮಾಡಿ ಇದೀಗ ಸ್ಪಷ್ಟನೆ ನೀಡಿದೆ.
10:55 AM (IST) Jul 28
ತಿರುವನಂತಪುರದಲ್ಲಿ ಕಳ್ಳತನವಾದ 70 ವರ್ಷ ಹಳೆಯ ಸೈಕಲ್‌ಗೆ ಉದ್ಯಮಿ ಬಾಬಿ ಚೆಮ್ಮಣ್ಣೂರ್ 5 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ತಂದೆಯ ನೆನಪಿನ ಈ ಸೈಕಲ್ ಹಿಂದಿರುಗಿಸುವ ಕಳ್ಳನಿಗೆ ಗೌಪ್ಯತೆ ಹಾಗೂ ಉದ್ಯೋಗದ ಭರವಸೆಯನ್ನೂ ನೀಡಿದ್ದಾರೆ.
10:51 AM (IST) Jul 28
10:49 AM (IST) Jul 28
10:44 AM (IST) Jul 28
ನೀಟ್ ಪೇಪರ್ ಲೀಕ್ ವಿವಾದ ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ಹಿನ್ನೆಲೆ ಸಂಸತ್ ಕಲಾಪದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು 'ಇಂಡಿಯಾ' ಒಕ್ಕೂಟದ ನಾಯಕರು ಸಭೆ ಸೇರಲಿದ್ದಾರೆ. ಪರೀಕ್ಷಾ ಅಕ್ರಮ ತಡೆ ಕಾಯ್ದೆ ಜಾರಿ ಬೆನ್ನಲ್ಲೇ ಈ ಸಭೆ ಮಹತ್ವ ಪಡೆದಿದೆ.
10:21 AM (IST) Jul 28