Bank Holiday: ಆಗಸ್ಟ್ ನಲ್ಲಿ ಬ್ಯಾಂಕ್‌ಗಳಿಗೆ 14 ದಿನ ರಜೆ; ಇಲ್ಲಿದೆ ರಜಾಪಟ್ಟಿ
ಆಗಸ್ಟ್ ತಿಂಗಳಲ್ಲಿ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಸಾಪ್ತಾಹಿಕ ರಜೆಗಳು ಸೇರಿದಂತೆ ಒಟ್ಟು 14 ದಿನಗಳ ಕಾಲ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಆದಾಗ್ಯೂ, ಗ್ರಾಹಕರು ಯುಪಿಐ, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂನಂತಹ ಡಿಜಿಟಲ್ ಸೇವೆಗಳನ್ನು ರಜಾದಿನಗಳಲ್ಲಿಯೂ ಬಳಸಿಕೊಳ್ಳಬಹುದು.

14 ದಿನ ಬ್ಯಾಂಕ್‌ಗಳು ಬಂದ್
ನೀವು ಆಗಸ್ಟ್‌ನಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದಾದ್ರೂ ಕೆಲಸಗಳನ್ನಿಟ್ಟುಕೊಂಡಿದ್ರೆ ಒಮ್ಮೆ ರಜಾದಿನಗಳನ್ನು ಚೆಕ್ ಮಾಡಿಕೊಳ್ಳಿ. ಆಗಸ್ಟ್ ತಿಂಗಳಲ್ಲಿ ಬರೋಬ್ಬರಿ 14 ದಿನ ಬ್ಯಾಂಕ್‌ಗಳು ಬಂದ್ ಇರಲಿವೆ. ಈ 14 ದಿನಗಳು ರಾಷ್ಟ್ರೀಯ, ಪ್ರಾದೇಶಿಕ ಮತ್ತು ಸಾಪ್ತಾಹಿಕ ರಜೆಗಳನ್ನು ಒಳಗೊಂಡಿವೆ.
ಆಗಸ್ಟ್ 2026ರ ರಜಾದಿನಗಳ ಪಟ್ಟಿ
ಆಗಸ್ಟ್ 2 ಭಾನುವಾರ – ವಾರದ ರಜೆ, ಆಗಸ್ಟ್ 8 ಎರಡನೇ ಶನಿವಾರ, ಆಗಸ್ಟ್ 9 ಭಾನುವಾರ ವಾರದ ರಜೆ, ಆಗಸ್ಟ್ 13 - ಮಣಿಪುರದಲ್ಲಿ ದೇಶಪ್ರೇಮಿಗಳ ದಿನ
ಆಗಸ್ಟ್ 15 ಸ್ವಾತಂತ್ರ್ಯ ದಿನ, ಆಗಸ್ಟ್ 16 ಭಾನುವಾರ, ಆಗಸ್ಟ್ 22 ನಾಲ್ಕನೇ ಶನಿವಾರ, ಆಗಸ್ಟ್ 23 ಭಾನುವಾರ, ಆಗಸ್ಟ್ 25 – ಈದ್-ಎ-ಮಿಲಾದ್ , ಆಗಸ್ಟ್ 28 – ರಕ್ಷಾ ಬಂಧನ , ಆಗಸ್ಟ್ 30 ಭಾನುವಾರ
ಡಿಜಿಟಲ್ ಬ್ಯಾಂಕಿಂಗ್ ಸೇವೆ
ಈ ಮೇಲಿನ ದಿನಗಳಲ್ಲಿ ಬ್ಯಾಂಕ್‌ಗಳು ರಜೆಯಿದ್ದರೂ UPI, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಟಿಎಂ, IMPS ಸೇರಿದಂತೆ ಪ್ರಮುಖ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಗ್ರಾಹಕರು ತಮ್ಮ ಬ್ಯಾಂಕ್‌ನ ಆಪ್ ಗಳ ಮೂಲಕ ಹಲವು ಸೇವೆಗಳನ್ನು ಪಡೆದುಕೊಳ್ಳಬಹುದು.
ರಜಾ ಪಟ್ಟಿ ಪರಿಶೀಲಿಸಿಕೊಳ್ಳಿ
ಚೆಕ್ ಠೇವಣಿ ಇಡಬೇಕಾದರೆ, ಡ್ರಾಫ್ಟ್ ನೀಡಬೇಕಾದರೆ, ನಿಮ್ಮ KYC ನವೀಕರಿಸಬೇಕಾದರೆ ಅಥವಾ ಶಾಖೆಯಲ್ಲಿ ಯಾವುದೇ ಪ್ರಮುಖ ಕೆಲಸವನ್ನು ನಿರ್ವಹಿಸಬೇಕಿದ್ರೆ ನೇರವಾಗಿ ಬ್ಯಾಂಕ್‌ಗೆ ಭೇಟಿ ನೀಡಬೇಕಾಗುತ್ತದೆ. ಹಾಗಾಗಿ ಬ್ಯಾಂಕ್‌ಗೆ ಭೇಟಿ ನೀಡುವ ಮೊದಲು ನಿಮ್ಮ ರಾಜ್ಯದ ರಜಾ ಪಟ್ಟಿಯನ್ನು ಪರಿಶೀಲಿಸಿಕೊಳ್ಳಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

