India Vs Pakistan: ಮಾಂಸಾಹಾರ ಸೇವನೆಯಲ್ಲಿ ಯಾರು ನಂಬರ್ ಒನ್? ದಿನದ ಬಳಕೆ ಎಷ್ಟು?
ಭಾರತ ಮತ್ತು ಪಾಕಿಸ್ತಾನದ ಮಾಂಸಾಹಾರ ಸೇವನೆಯಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಭಾರತದಲ್ಲಿ ಮಾಂಸ ಸೇವಿಸುವವರ ಸಂಖ್ಯೆ ಹೆಚ್ಚುತ್ತಿದೆ. ಈ ಲೇಖನವು ಎರಡೂ ದೇಶಗಳ ಮಾಂಸ ಬಳಕೆಯ ಪ್ರಮಾಣ ಮತ್ತು ಸಂಬಂಧಿತ ಅಂಕಿಅಂಶಗಳನ್ನು ವಿವರಿಸುತ್ತದೆ.

ಯಾವ ದೇಶದಲ್ಲಿ ಹೆಚ್ಚು ಮಾಂಸಾಹಾರ ಸೇವನೆ?
ಭಾರತ ಮತ್ತು ಪಾಕಿಸ್ತಾನ ದಕ್ಷಿಣ ಏಷ್ಯಾದ ಪ್ರಮುಖ ಮಾಂಸಾಹಾರಿ ಸೇವನೆ ಮಾಡುವ ದೇಶಗಳಾಗಿವೆ. ಎರಡೂ ದೇಶಗಳ ಸಂಸ್ಕೃತಿ, ಆಹಾರ ಸೇವನೆ ಸಂಪೂರ್ಣವಾಗಿ ಭಿನ್ನವಾಗಿದೆ. ಭಾರತದಲ್ಲಿ ನಿಮಗೆ ಮಾಂಸಾಹಾರಿಗಳ ಜೊತೆ ಸಸ್ಯಹಾರಿಗಳು ನೋಡಲು ಸಿಗುತ್ತಾರೆ. ಈ ಎರಡೂ ದೇಶಗಳಲ್ಲಿ ಯಾರು ಅತ್ಯಧಿಕವಾಗಿ ಮಾಂಸ ಸೇವನೆ ಮಾಡ್ತಾರೆ? ದಿನದ ಬಳಕೆ ಎಷ್ಟು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಮಾಂಸಾಹಾರಿಗಳು ಎಷ್ಟು?
ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಮಾಂಸಾಹಾರ ಸೇವಿಸುವ ಜನರ ಸಂಖ್ಯೆ ಏರಿಕೆಯಾಗುತ್ತಿದೆ. ರಾಷ್ಟ್ರೀಯ ಪರಿವಾರ ಸ್ವಾಸ್ಥ್ಯ ಸರ್ವೇಕ್ಷಣ (National Family Health Survey) ಪ್ರಕಾರ, 15 ರಿಂದ, 49 ವರ್ಷದೊಳಗಿನ ಭಾರತದ ಸುಮಾರು ಶೇ.80ರಷ್ಟು ಜನರು ಪಶು ಆಧಾರಿತ ಪ್ರೋಟಿನ್ ಸೇವಿಸುತ್ತಾರೆ. ಈ ಪ್ರೋಟಿನ್ ಅಹಾರವು ಮೀನು, ಚಿಕನ್, ಮೊಟ್ಟೆ ಸೇರಿದಂತೆ ಇನ್ನಿತರ ಮಾಂಸವೂ ಸೇರಿಕೊಂಡಿದೆ.
ಮಾಂಸಾಹಾರ ಸೇವನೆ ಪ್ರಮಾಣ ಏರಿಕೆ
2006ರಲ್ಲಿ ಶೇ.74ರಷ್ಟಿದ್ದ ಸಂಖ್ಯೆ, 2021ರಲ್ಲಿ ಶೇ.80ಕ್ಕೆ ಏರಿಕೆಯಾಗಿದೆ. ಸಮೀಕ್ಷೆಯ ಪ್ರಕಾರ, 10 ಜನರಲ್ಲಿ ಒಬ್ಬರು ಪ್ರತಿದಿನ ಮಾಂಸಾಹಾರ ಸೇವನೆ ಮಾಡ್ತಾರೆ. ಇನ್ನು ಶೇ.60ರಷ್ಟು ಜನರು ವಾರದಲ್ಲಿ ಒಮ್ಮೆ ಅಥವಾ ಹೆಚ್ಚು ಬಾರಿ ಮಾಂಸಾಹಾರ ಸೇವನೆ ಮಾಡ್ತಾರೆ.
ಒಂದು ದಿನಕ್ಕೆ ಭಾರತೀಯರು ಎಷ್ಟು ಮಾಂಸ ಸೇವಿಸುತ್ತಾರೆ?
ಭಾರತದ ಜನಸಂಖ್ಯೆ 140 ಕೋಟಿಗೂ ಅಧಿಕವಾಗಿರುವ ಕಾರಣ ಮಾಂಸದ ಬಳಕೆ ಪ್ರಮಾಣ ಹೆಚ್ಚಾಗಿದೆ. ಭಾರತದ ಪ್ರತಿದಿನದ ಬಳಕೆ ಪಾಕಿಸ್ತಾನಕ್ಕಿಂತ ಅಧಿಕವಾಗಿದೆ. ಪಾಕಿಸ್ತಾನದಲ್ಲಿ ದಿನಕ್ಕೆ ಪ್ರತಿ ವ್ಯಕ್ತಿಯ ಮಾಂಸ ಸೇವನೆ ಪ್ರಮಾಣ ಅಂದಾಜು 15 ರಿಂದ 25 ಕೆಜಿ ಆಗುತ್ತದೆ. ಆದ್ರೆ ಜನಸಂಖ್ಯೆ ಹೆಚ್ಚಾಗಿರುವ ಕಾರಣ ಭಾರತದ ಪ್ರಮಾಣ ಸುಮಾರು 4 ರಿಂದ 6 ಕೆಜಿ ಆಗುತ್ತದೆ.
3 ಕೆಜಿ ಮಾಂಸ
ಐಸಿಡಿ ಅಂಕಿಅಂಶಗಳ ಪ್ರಕಾರ, ಭಾರತೀಯರ ಒಂದು ದಿನದ ಮಾಂಸಾಹಾರ ಸೇವನೆ ಅಂದಾಜು 3 ಕೆಜಿ ಆಗುತ್ತದೆ. ಇದರರ್ಥ ಓರ್ವ ಭಾರತೀಯ ದಿನಕ್ಕೆ 8 ಗ್ರಾಂ ಮಾಂಸ ಸೇವನೆ ಮಾಡ್ತಾರೆ. ಈ 8 ಗ್ರಾಂ ಕೇವಲ ಮಾಂಸವನ್ನು ಮಾತ್ರವಲ್ಲ, ಮೊಟ್ಟೆ ಸೇರಿದಂತೆ ಇತರೆ ಪ್ರಾಣಿಗಳ ಮಾಂಸವನ್ನು ಸಹ ಒಳಗೊಂಡಿದೆ
ಪಾಕಿಸ್ತಾನದಲ್ಲಿನ ಮಾಂಸ ಬಳಕೆ ಎಷ್ಟು?
ಕೆಲ ವರದಿಗಳ ಪ್ರಕಾರ, ಪಾಕಿಸ್ತಾನದ ಶೇ.38ರಷ್ಟು ಜನರು ಬೀಫ್, ಶೇ.34ರಷ್ಟು ಚಿಕನ್ ಮತ್ತು ಶೇ.25ರಷ್ಟು ಜನರು ಮಟನ್ ಸೇವನೆಗೆ ಮೊದಲ ಆದ್ಯತೆಯನ್ನು ನೀಡುತ್ತಾರೆ. 2000ರ ಅಂಕಿಅಂಶಗಳ ಪ್ರಕಾರ, ಪ್ರತಿ ವ್ಯಕ್ತಿ ಶೇ.11.7 ಕೆಜಿ ಮಾಂಸಾಹಾರ ಸೇವಿಸ್ತಾರೆ. ಆದ್ರೆ ಈ ಅಂಕಿಅಂಶ ಸದ್ಯ ಏರಿಕೆಯಾಗಿದೆ. ಇದು ವರ್ಷಕ್ಕೆ 32 ಕೆಜಿ ಆಗುತ್ತದೆ. ಅಂತರಾಷ್ಟ್ರೀಯಮಟ್ಟದಲ್ಲಿ ಲಭ್ಯವಿರೋ ಅಂಕಿ ಅಂಶಗಳ ಪ್ರಕಾರ, ಪ್ರತಿ ವ್ಯಕ್ತಿಯ ಮಾಂಸ ಸೇವನೆ ಪ್ರಮಾಣ ಶೇ.12.7 ಆಗಿದೆ.
ಇದನ್ನೂ ಓದಿ: ಪಾಕಿಸ್ತಾನದ ಅತಿದೊಡ್ಡ ಹಿಂದೂ ನಗರ? ಇಲ್ಲಿಯ ಜನಸಂಖ್ಯೆ ಎಷ್ಟಿದೆ? ಇಲ್ಲಿಯ ಆಚರಣೆ ಹೇಗೆ?
ಭಾರತ ವರ್ಸಸ್ ಪಾಕಿಸ್ತಾನ
ಅಂಕಿಅಂಶಗಳ ಪ್ರಕಾರ, ಓರ್ವ ವ್ಯಕ್ತಿ ಮಾಂಸ ಸೇವನೆಯಲ್ಲಿ ಪಾಕಿಸ್ತಾನ ಭಾರತಕ್ಕಿಂತ ಮುಂದಿದೆ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ಸಂಪ್ರದಾಯಗಳು ಮತ್ತು ಪ್ರಾದೇಶಿಕ ಆಹಾರ ವೈವಿಧ್ಯತೆಯಿಂದಾಗಿ ಭಾರತದ ದೊಡ್ಡ ಸಸ್ಯಾಹಾರಿ ಜನಸಂಖ್ಯೆಯನ್ನು ಹೊಂದಿದೆ. ಪಾಕಿಸ್ತಾನದಲ್ಲಿ ಬಹುತೇಕರು ಮಾಂಸಾಹಾರ ಸೇವನೆಗೆ ಮೊದಲ ಆದ್ಯತೆ ನೀಡುತ್ತಾರೆ. ಗೋಮಾಂಸ, ಕುರಿಮರಿ ಮತ್ತು ಕೋಳಿ ಮಾಂಸವು ಸಾಮಾನ್ಯವಾಗಿ ಸೇವಿಸುವ ಮಾಂಸಗಳಾಗಿವೆ.
ಇದನ್ನೂ ಓದಿ: ಯಾರಿದು ಪಾಕಿಸ್ತಾನದ ಬೆಡಗಿ? 73 ವರ್ಷಗಳ ನಂತ್ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

