ನೀಟ್ ಪ್ರತಿಭಟನೆ ಬಳಿಕ ತೆಗೆದುಕೊಂಡ ಕ್ರಮಗಳ ಕುರಿತು ಪ್ರಧಾನಿ ಮೋದಿ ಜೆನ್‌ಝಿ ಉದ್ದೇಶಿಸಿ ಸೆಲ್ಫಿ ವಿಡಿಯೋ ಮಾಡಿದ್ದರು. ಇದು ಮಿಲಿಯನ್ ವೀವ್ಸ್ ಪಡೆದಿತ್ತು, ಆದರೆ ದಿಢೀರ್ ಫೇಸ್‌ಬುಕ್ ಈ ವಿಡಿಯೋ ಡಿಲೀಟ್ ಮಾಡಿ ಇದೀಗ ಸ್ಪಷ್ಟನೆ ನೀಡಿದೆ.
ನವದೆಹಲಿ (ಜು.28) ನೀಟ್ ಪ್ರತಿಭಟನೆಯಿಂದ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತಿದೆ. ಕಾಕ್ರೋಚ್ ಜನತಾ ಪಾರ್ಟಿ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸೆಲ್ಫಿ ವಿಡಿಯೋ ಮೂಲಕ ಜೆನ್‌ಝಿ ಉದ್ದೇಶಿಸಿ ಮಾತನಾಡಿದ್ದರು. ಮೂರು ವಿಡಿಯೋಗಳ ಮೂಲಕ ಮೋದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದರು. ಎಲ್ಲಾ ವ್ಲಾಗರ್, ಬ್ಲಾಗರ್, ಇನ್‌ಫ್ಲುಯೆನ್ಸರ್‌ಗಳ ವೀಕ್ಷಣೆ ದಾಖಲೆ ಪುಡಿ ಮಾಡಿದ್ದ ಈ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿತ್ತು. ಮೋದಿ ವಿಡಿಯೋಗೆ ಮೆಚ್ಚುಗೆಯ ಸುರಿಮಳೆ ವ್ಯಕ್ತವಾಗಿತ್ತು. ನೇರವಾಗಿ ಜೆನ್‌ಝಿ ಜೊತೆ ಕನೆಕ್ಟ್ ಆಗಿ ಮಾತನಾಡಿದ್ದರು. ಆದರೆ ಈ ವಿಡಿಯೋವನ್ನು ಫೇಸ್‌ಬುಕ್ ದಿಢೀರ್ ಡಿಲೀಟ್ ಮಾಡಿ ಭಾರಿ ವಿವಾದ ಸೃಷ್ಟಿಸಿತ್ತು. ಇದೀಗ ಫೇಸ್‌ಬುಕ್ ಸ್ಪಷ್ಟನೆ ನೀಡಿದೆ.
ಕ್ಷಮೆ ಕೇಳಿದ ಫೇಸ್‌ಬುಕ್
ಪ್ರಧಾನಿ ನರೇಂದ್ರ ಮೋದಿ ಸೆಲ್ಫಿ ವಿಡಿಯೋ ಡಿಲೀಟ್ ಮಾಡಿದ ಬೆನ್ನಲ್ಲೇ ಭಾರಿ ವಿವಾದ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಫೇಸ್‌ಬುಕ್ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಬಳಿ ಕ್ಷಮೆ ಕೇಳಿದೆ. ಸರ್ಕಾರ ಹಾಗೂ ಪೊಲೀಸ್ ಸೂಚನೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಮೋದಿ ವಿರುದ್ಧ ಇರುವ ಡೀಫ್‌ಫೇಕ್, ಎಐ ಜನರೇಟೆಡ್ ಸೇರಿದಂತೆ ಹಲವು ವಿಡಿಯೋಗಳನ್ನು ಡಿಲೀಟ್ ಮಾಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿ ನರೇಂದ್ರ ಮೋದಿಯ ಸೆಲ್ಫಿ ವಿಡಿಯೋ ಡಿಲೀಟ್ ಆಗಿದೆ ಎಂದು ಫೇಸ್‌ಬುಕ್ ಹೇಳಿದೆ. ಮೋದಿ ವಿಡಿಯೋ ಡಿಲೀಟ್ ತಾಂತ್ರಿಕ ಕಾರಣಗಳಿಂದ ಆಗಿದೆ. ಇದು ಯಾವುದೇ ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯವಲ್ಲ. ಇದಕ್ಕಾಗಿ ಫೇಸ್‌ಬುಕ್ ಭಾರತ ಸರ್ಕಾರದ ಬಳಿ ಭೇಷರತ್ ಕ್ಷಮೆ ಕೇಳುತ್ತಿದೆ ಎಂದಿದೆ.
ಮೆಟಾ ಅಧಿಕಾರಿಗಳಿಗೆ ಸಮನ್ಸ್
ಫೇಸ್‌ಬುಕ್ ಏಕಾಏಕಿ ಪ್ರಧಾನಿ ಮೋದಿಯ ಸೆಲ್ಫಿ ವಿಡಿಯೋ ಡಿಲೀಟ್ ಮಾಡಿ ವಿವಾದ ಸೃಷ್ಟಿಯಾಗುತ್ತಿದ್ದಂತೆ ಕೇಂದ್ರ ಐಟಿ ಸಚಿವಾಲಯ ಫೇಸ್‌ಬುಕ್ ಅದಿಕಾರಿಗಳಿಗೆ ಸಮನ್ಸ್ ನೀಡಿದೆ. ಈ ಕುರಿತು ಅಧಿಕೃತ ಸ್ಪಷ್ಟನೆ ಕೇಳಿದೆ. ಈ ತಾಂತ್ರಿಕ ಗ್ಲಿಚ್ ಫೇಸ್‌ಬುಕ್‌ಗೆ ಮುಳುವಾಗುವ ಸಾಧ್ಯತೆ ಇದೆ. ದೇಶವೇ ಜೆನ್‌ಝಿ ಪ್ರತಿಭಟನೆ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆಗಳಿಂದ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ಜೆನ್‌ಝಿ ಉದ್ದೇಶಿಸಿ ಮಾತನಾಡಿದ ವಿಡಿಯೋ ಡಿಲೀಟ್ ಗಂಭೀರವಾಗಲಿದೆ. ಫೇಸ್ಬಬುಕ್ ಈ ಘಟನೆಯಿಂದ ತೀವ್ರ ಹಿನ್ನಡೆ ಅನುಭವಿಸಲಿದೆ.
ಫೇಸ್‌ಬುಕ್ ಸದ್ಯ ತಾಂತ್ರಿಕ ಕಾರಣಗಳನ್ನು ಹೇಳಿದರೂ ಹಲವು ಅನುಮಾನಗಳು ವ್ಯಕ್ತವಾಗಿದೆ. ವಿಡಿಯೋ ಕ್ಲಿಕ್ ಮಾಡಿದ ವಿಡಿಯೋ ರಿಸ್ಟ್ರಿಕ್ಟೆಡ್ ಎಂಬ ಸಂದೇಶ ತೋರಿಸಿದೆ. ಆದರೆ ಇದಕ್ಕೆ ಯಾವುದೇ ಕಾರಣಗಳನ್ನು ಫೇಸ್‌ಬುಕ್ ನೀಡಿಲ್ಲ ಅನ್ನೋ ಆರೋಪಗಳು ಕೇಳಿಬಂದಿದೆ. ಹೀಗಾಗಿ ಭಾರತದಲ್ಲಿ ಫೇಸ್‌ಬುಕ್ ತೀವ್ರ ಸಂಕಷ್ಟ ಎದುರಿಸಲಿದೆ.


