ನವದೆಹಲಿ: ಭಾರತ-ಪಾಕ್ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದು ತಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಂತರವಾಗಿ ಸುಳ್ಳು ಹೇಳುತ್ತಿರುವ ನಡುವೆಯೇ, ಏ.22ರಂದು ನಡೆದ ಪಹಲ್ಲಾ೦ ದಾಳಿ ಭಾರತದೊಳಗಿನ ಬಂಡಾಯದಿಂದ ನಡೆದದ್ದು ಮತ್ತು ಬಳಿಕ ಉಭಯ ದೇಶಗಳ ನಡುವೆ ಯುದ್ಧದಲ್ಲಿ ಪಾಕಿಸ್ತಾನವೇ ಮೇಲುಗೈ ಸಾಧಿಸಿತ್ತು ಎಂದು ಅಮೆರಿಕ ಆಘಾತಕಾರಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಆ ಬೆನ್ನಲ್ಲೇ ವರದಿ ಕುರಿತು ಕಳವಳ ವ್ಯಕ್ತಪಡಿಸಿ ರುವ ಕಾಂಗ್ರೆಸ್, ಇದು ಪ್ರಧಾನಿ ಮೋದಿ ಅವರ ರಾಜತಾಂತ್ರಿಕತೆ ವೈಫಲ್ಯ ಎಂದು ಕಿಡಿಕಾರಿದೆ. ಅಮೆರಿಕ-ಚೀನಾ ಆರ್ಥಿಕ, ಭದ್ರತಾ ಪರಿಶೀಲನಾ ಆಯೋಗದಿಂದ ಸಂಸತ್ತಿಗೆ ವಾರ್ಷಿಕ ವರದಿ ಸಲ್ಲಿಕೆಯಾಗಿದೆ. ಪಹಲ್ಲಾಂನಲ್ಲಿ ಆಗಿದ್ದು ಬಂಡಾಯ ದಾಳಿ ಅದಕ್ಕೆ ಭಾರತ ಪ್ರತಿಕ್ರಿಯಿಸಿದ್ದರಿಂದ ಪಾಕಿಸ್ತಾನದ ಜೊತೆಗೆ ಯುದ್ಧ, ಈ ಯುದ್ಧದಲ್ಲಿ ಚೀನಾದ ಪಾತ್ರ ಜಾಗತಿಕವಾಗಿ ಗಮನ ಸೆಳೆದಿದೆ. ಚೀನಾದ ಅಸ್ತ್ರ ಗಳನ್ನು ಪಾಕಿಸ್ತಾನ ಬಳಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
10:31 PM (IST) Nov 21
ತೇಜಸ್ ಪತನ, ಕೊನೇ ಕ್ಷಣದವರೆಗೆ ನಿಯಂತ್ರಣಕ್ಕೆ ಪ್ರಯತ್ನಿಸಿದ ವಿಂಗ್ ಕಮಾಂಡರ್ ನಮಾಂಶ್ ಮೃತ, ವೃತ್ತಿಪರತೆ, ತಾಳ್ಮೆಗೆ ಹೆಸರುವಾಸಿಯಾಗಿರುವ ಯುವ ಪೈಲೆಟ್ ದುರಂತದಲ್ಲಿ ಅಂತ್ಯಕಂಡಿದ್ದಾರೆ.
09:40 PM (IST) Nov 21
ಸೂರ್ಯವಂಶಿಗೆ ಬ್ಯಾಟಿಂಗ್ ಇಲ್ಲ, ಸೂಪರ್ ಓವರ್‌ನಲ್ಲಿ ರನ್‌ಗಳಿಸದೇ ಹೊರಬಿದ್ದ ಭಾರತ ವಿರುದ್ಧ ಭಾರಿ ಟೀಕೆ ಎದುರಾಗಿದೆ. ಉತ್ತಮ ಸ್ಟ್ರೈಕ್ ರೇಟ್ ಇರುವ ಸೂರ್ಯವಂಶಿಗೆ ಬ್ಯಾಟಿಂಗ್ ಕೊಡಲಿಲ್ಲ, ಇತರರು ಒಂದು ರನ್ ಕೂಡ ಮಾಡಲಿಲ್ಲ, ಮ್ಯಾನೇಜ್ಮೆಂಟ್ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.
09:39 PM (IST) Nov 21
ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್, ಸಂಸ್ಕೃತವನ್ನು 'ಸತ್ತ ಭಾಷೆ' ಎಂದು ಕರೆದು, ಭಾಷಾ ಅನುದಾನದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಸಂಸ್ಕೃತಕ್ಕೆ ₹2,400 ಕೋಟಿ ನೀಡಲಾಗಿದ್ದು, ತಮಿಳಿಗೆ ಕೇವಲ ₹150 ಕೋಟಿ ನೀಡಲಾಗಿದೆ ಎಂದು ಆರೋಪಿಸಿದರು.
08:27 PM (IST) Nov 21
100 ಕೋಟಿ ರೂಪಾಯಿ ಅನುದಾನ, ಗೌತಮ್ ಅದಾನಿ ಹಾಡಿ ಹೊಗಳಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ, ಗೌತಮ್ ಅಧಾನಿ ನಿರ್ಧಾರ ಘೋಷಿಸುತ್ತಿದ್ದಂತೆ ಧಾನೀಶ್ ಕನೇರಿಯಾ ಪುಳಕಿತರಾಗಿದ್ದಾರೆ. ಅಷ್ಟಕ್ಕೂ ಪಾಕ್ ಮಾಜಿ ಕ್ರಿಕೆಟಿಗ ಅದಾನಿಗೆ ಮೆಚ್ಚುಗೆ ಸೂಚಿಸಿದ್ದೇಕೆ?
08:03 PM (IST) Nov 21
ಮೀಟೂ ಅಭಿಯಾನವು ನಟಿಯರಷ್ಟೇ ಅಲ್ಲ, ನಟರ ಮೇಲೂ ಆದ ಲೈಂ*ಗಿಕ ದೌರ್ಜನ್ಯವನ್ನು ಬೆಳಕಿಗೆ ತಂದಿದೆ. ಹಿಂದಿ ಕಿರುತೆರೆ ನಟ ಹಾಗೂ ಬಿಗ್ ಬಾಸ್ ಖ್ಯಾತಿಯ ಅಂಕಿತ್ ಗುಪ್ತಾ, ಎದುರಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ನಟನಾಗಲು 'ರಾಜಿ' ಮಾಡಿಕೊಳ್ಳಲು ಕೇಳಿ, ಅದಕ್ಕೆ ಒಪ್ಪದಿದ್ದಾಗ ಆಗಿದ್ದೇನು?
07:36 PM (IST) Nov 21
ತೇಜಸ್ ಯುದ್ಧ ವಿಮಾನ ಪತನದಲ್ಲಿ ಪೈಲೈಟ್ ಸಾವು, ಕೆಲೆವೇ ಸೆಕೆಂಡ್‌ಗಳಲ್ಲಿ ನಡೆಯಿತು ದುರಂತ, ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. ವಿಶ್ವದ ಅತ್ಯುತ್ತಮ ಯುದ್ಧ ವಿಮಾನ ಪೈಕಿ ತೇಜಸ್ ಕೂಡ ಸ್ಥಾನ ಪಡೆದಿದೆ. ಆದರೂ ದುರಂತ ಹೇಗಾಯ್ತು
07:11 PM (IST) Nov 21
ಏರ್ ಇಂಡಿಯಾ ತನ್ನ ಬಳಿ ಇದ್ದ ಬೋಯಿಂಗ್ 737 ವಿಮಾನವನ್ನು 13 ವರ್ಷಗಳ ಬಳಿಕ ಮಾರಾಟ ಮಾಡಿದೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಈ ವಿಮಾನದ ಮಾಲೀಕತ್ವದ ಬಗ್ಗೆ ಏರ್ ಇಂಡಿಯಾಗೆ ಇತ್ತೀಚಿನವರೆಗೂ ತಿಳಿದಿರಲಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.
06:48 PM (IST) Nov 21
ನಿಮ್ಮ ಸ್ಮಾರ್ಟ್‌ಫೋನ್ ನಿಮ್ಮ ಸಂಭಾಷಣೆಗಳನ್ನು ಆಲಿಸಿ, ವೈಯಕ್ತಿಕ ಜಾಹೀರಾತುಗಳನ್ನು ತೋರಿಸುತ್ತದೆ. ಇದು ಖಾಸಗಿ ಮಾಹಿತಿಗೆ ಅಪಾಯವನ್ನುಂಟುಮಾಡಬಹುದು. ಈ ಲೇಖನದಲ್ಲಿ, ನಿಮ್ಮ ಡೇಟಾವನ್ನು ರಕ್ಷಿಸಲು ಮತ್ತು ಜಾಹೀರಾತುಗಳನ್ನು ನಿಲ್ಲಿಸಲು ಬೇಕಾದ ಪ್ರಮುಖ ಸೆಟ್ಟಿಂಗ್ಸ್‌ಗಳನ್ನು ಬದಲಾಯಿಸುವ ವಿಧಾನ ಇಲ್ಲಿದೆ.
06:32 PM (IST) Nov 21
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?, ಗ್ರೂಪ್ ಚಾಟ್‌ನಿಂದ ವೈಯುಕ್ತಿಕ ಚಾಟ್‍ಗೆ ಯಾವುದೇ ಅಡ್ಡಿಯಾಗಲ್ಲ. ವ್ಯಾಟ್ಸಾಪ್‌ನಲ್ಲಿರುವ ಗ್ರೂಪ್‌ನಂತೆ ಚಾಟ್‌ಜಿಪಿಟಿ ಕೂಡ ಹೊಸ ಫೀಚರ್ ನೀಡುತ್ತಿದೆ.
06:19 PM (IST) Nov 21
06:03 PM (IST) Nov 21
05:35 PM (IST) Nov 21
husband kills wife: ಬಿಹಾರದ ಕಾತಿಹಾರ್ ಜಿಲ್ಲೆಯಲ್ಲಿ, ತಾನು ಕಪ್ಪಗಿದ್ದು ಮಗು ಕೆಂಪಾಗಿ ಜನಿಸಿದ್ದಕ್ಕೆ ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನೆರೆಹೊರೆಯವರ ಅಪಹಾಸ್ಯದಿಂದ ಮನನೊಂದು ಪತಿ ಈ ಕೃತ್ಯವೆಸಗಿದ್ದಾನೆ.
05:30 PM (IST) Nov 21
ಶಂಕಿತ ಉಗ್ರರ ತಾಣವಾಗಿದ್ದ ಮಧ್ಯಪ್ರದೇಶದ ಅಲ್ ಫಲಾಹ್ ವಿವಿ ಅಧ್ಯಕ್ಷ ಮೊಹಮ್ಮದ್ ಜವಾದ್ ಸಿದ್ದಿಕಿ ಅವರ ನಾಲ್ಕಂತಸ್ತಿನ ಮನೆಗೆ ಮಹೌ ಕಂಟೋನ್ಮೆಂಟ್ ಮಂಡಳಿ ನೆಲಸಮ ನೋಟಿಸ್ ನೀಡಿದೆ. ಅಕ್ರಮ ನಿರ್ಮಾಣದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಇದೇ ವೇಳೆ ವಂಚನೆ ಪ್ರಕರಣದಲ್ಲಿ ಸಹೋದರನನ್ನೂ ಬಂಧಿಸಲಾಗಿದೆ.
05:23 PM (IST) Nov 21
Tejas Mk1 Aircraft: ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋದ ಸತ್ಯ-ಪರಿಶೀಲನಾ ಘಟಕದ ಪ್ರಕಾರ, ಯಾವುದೇ ಹಂತದಲ್ಲೂ ಫೈಟರ್ ಜೆಟ್‌ನಿಂದ ತೈಲ ಸೋರಿಕೆಯಾಗಿಲ್ಲ ಎಂದು ತಿಳಿಸಿತ್ತು. ಆದರೆ, ಈ ಸ್ಪಷ್ಟನೆಯ ಬೆನ್ನಲ್ಲೇ ವಿಮಾನ ಪತನಗೊಂಡು ಪೈಲಟ್ ಸಾವನ್ನಪ್ಪಿದ್ದಾರೆ.
05:13 PM (IST) Nov 21
ಕೇಂದ್ರ ಸರ್ಕಾರವು 29 ಹಳೆಯ ಕಾರ್ಮಿಕ ಕಾನೂನುಗಳನ್ನು ಬದಲಿಸಿ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುತ್ತಿದೆ. ಈ ಸುಧಾರಣೆಗಳು ಕಾರ್ಮಿಕರ ವೇತನ, ಸಾಮಾಜಿಕ ಭದ್ರತೆ, ಮತ್ತು ಸುರಕ್ಷತೆಯನ್ನು ಬಲಪಡಿಸುವ ಗುರಿ ಹೊಂದಿದ್ದು, ಗಿಗ್ ಕೆಲಸಗಾರರನ್ನು ಮೊದಲ ಬಾರಿಗೆ ಕಾನೂನಿನ ವ್ಯಾಪ್ತಿಗೆ ತರಲಿದೆ.
04:56 PM (IST) Nov 21
ರ‍್ಯಾಪಿಡೋ ಚಾಲಕನ ತಿಂಗಳ ಆದಾಯ 1 ಲಕ್ಷ ರೂ, ಇದು ಹೇಗೆ ಸಾಧ್ಯ? ಇಲ್ಲಿದೆ ಸ್ಪೂರ್ತಿಯ ಘಟನೆ ಇದೀಗ ಭಾರಿ ಸದ್ದು ಮಾಡುತ್ತಿದೆ. ರ‍್ಯಾಪಿಡೋ ಚಾಲಕನ ಆದಾಯ, ಆತನ ಜೀವನ ನಿರ್ವಹಣೆ, ಖುಷಿ ಖುಷಿಯಾಗಿ ಬದುಕು ಸಾಗಿಸುವ ದಾರಿ ಇದೀಗ ಹಲವರಿಗೆ ಸ್ಪೂರ್ತಿಯಾಗಿದೆ.
04:26 PM (IST) Nov 21
ಅಜ್ಜ ಅಜ್ಜಿಯ ಲವ್ ಸ್ಟೋರಿಯೊಂದು ಕೋರ್ಟ್ ಮೆಟ್ಟಿಲೇರಿದೆ. ಅಜ್ಜ ಅಜ್ಜಿಯ ಪ್ರೇಮ ಪ್ರಕರಣದ ವಿಚಾರ ಅಜ್ಜಿಯ ಗಂಡನಿಗೆ ಗೊತ್ತಾಗುತ್ತಿದ್ದಂತೆ ಅಜ್ಜಿಯ ಪ್ರೇಮಿಯ ವಿರುದ್ಧ ಅತ್ಯಾ*ಚಾರದ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಈಗ ಕೋರ್ಟ್ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದೆ.
04:21 PM (IST) Nov 21
ಭಾರತ ವಿರುದ್ಧದ ಎರಡನೇ ಟೆಸ್ಟ್‌ಗೂ ಮುನ್ನ, ಸ್ಟಾರ್ ವೇಗಿ ಕಗಿಸೊ ರಬಾಡ ಗಾಯದ ಕಾರಣದಿಂದ ಹೊರಗುಳಿದಿರುವುದು ದಕ್ಷಿಣ ಆಫ್ರಿಕಾಗೆ ಹಿನ್ನಡೆಯಾಗಿದೆ. ಗಾಯಗೊಂಡಿರುವ ನಾಯಕ ಶುಭಮನ್ ಗಿಲ್ ಬದಲಿಗೆ ರಿಷಭ್ ಪಂತ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
04:14 PM (IST) Nov 21
ಚಿಕಿತ್ಸೆಗೆ ಟೈಮೇ ಇಲ್ಲ, ಸರ್ಕಾರಿ ಆಸ್ಪತ್ರೆಯಲ್ಲೇ ಗರ್ಲ್‌ಫ್ರೆಂಡ್ ಜೊತೆ ವೈದ್ಯ ಸಿದ್ದಿಕಿ ಮಸ್ತ ಡ್ಯಾನ್ಸ್ , ಕರ್ತವ್ಯದಲ್ಲೇ ವಕಾರ್ ಸಿದ್ದಿಕಿ ಗೆಳತಿ ಜೊತೆ ಡ್ಯಾನ್ಸ್ ಆಡುತ್ತಾ, ಬಾಲಿವುಡ್ ರೇಂಜ್‌ಗೆ ಸಮಯ ಕಳೆಯುತ್ತಿದ್ದಾನೆ. ಈತನ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.
04:12 PM (IST) Nov 21
ಯುದ್ಧವಿಮಾನದಿಂದ ಪೈಲಟ್ ಹೊರಬಂದಿದ್ದಾರೋ ಇಲ್ಲವೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತೀಯ ವಾಯುಪಡೆಯಿಂದ ಈ ಬಗ್ಗೆ ಅಧಿಕೃತ ಹೇಳಿಕೆಗಾಗಿ ಕಾಯಲಾಗುತ್ತಿದೆ.
03:49 PM (IST) Nov 21
ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹ ಖಚಿತವಾಗಿದೆ. ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನ ಪಿಚ್‌ನಲ್ಲಿ ಪಲಾಶ್ ಮಂಡಿಯೂರಿ ಸ್ಮೃತಿಗೆ ಪ್ರೇಮ ನಿವೇದನೆ ಮಾಡಿದ್ದು, ಈ ರೊಮ್ಯಾಂಟಿಕ್ ವಿಡಿಯೋ ವೈರಲ್ ಆಗಿದೆ.
03:29 PM (IST) Nov 21
ಫುಡ್ ಡೆಲಿವರಿ ದೈತ್ಯ ಜೊಮಾಟೊ, ತನ್ನ ಗ್ರಾಹಕರ ಡೇಟಾವನ್ನು ರೆಸ್ಟೋರೆಂಟ್‌ಗಳೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದ್ದು, ಇದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಕ್ರಮವು ಡೇಟಾ ಸುರಕ್ಷತೆ ಮತ್ತು ಗೌಪ್ಯತೆಯ ಉಲ್ಲಂಘನೆಗೆ ಕಾರಣವಾಗಬಹುದು ಎಂದು ರಾಜಕಾರಣಿಗಳು ಮತ್ತು ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
03:04 PM (IST) Nov 21
ತಂದೆ ಜೊತೆಗಿರಲು ಬಂದ ಇಬ್ಬರು ಮಕ್ಕಳು, ಪತ್ನಿಯನ್ನೇ ಹತ್ಯೆಗೈದ ಅರಣ್ಯಾಧಿಕಾರಿ, ಕಾರಣ ಕುಚ್ ಕುಚ್ , ಟ್ರಾನ್ಸ್‌ಫರ್ ಆಗಿರುವ ಪತಿಯೊಂದಿಗೆ ಕಳಯಲು ಬಂದ ಪತ್ನಿ ಮಕ್ಕಳು ಬಾರದ ಲೋಕಕ್ಕೆ ಕಳುಹಿಸಲಾಗಿದೆ. ಇದರ ಹಿಂದೆ ಪತಿಯ ಕುತಂತ್ರ ಊಹಿಸಲು ಅಸಾಧ್ಯ.
02:13 PM (IST) Nov 21
ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು, ಮುಂಬರುವ ಡಿಸೆಂಬರ್ 16ರಂದು ಆಟಗಾರರ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ 10 ಆಟಗಾರರಿಗೆ ಜಾಕ್‌ಪಾಟ್ ಆಗುವ ಸಾಧ್ಯತೆಯಿದೆ. ಈ ಕುರಿತಾದ ಅಪ್‌ಡೇಟ್ ಇಲ್ಲಿದೆ ನೋಡಿ.
01:10 PM (IST) Nov 21
ಭೋಪಾಲ್‌ನಲ್ಲಿ ಮ್ಯಾಜಿಕ್ ಸ್ಪಾಟ್ ಕೆಫೆಗೆ ನುಗ್ಗಿ ದಾಂಧಲೆ ನಡೆಸಿದ ದುರುಳರಿಗೆ ಮಧ್ಯಪ್ರದೇಶದ ಪೊಲೀಸರು ತಾಲಿಬಾನ್ ಸ್ಟೈಲಲ್ಲಿ ಶಿಕ್ಷೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಐವರು ಆರೋಪಿಗಳ ಶರ್ಟ್ ಬಿಚ್ಚಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ.
12:43 PM (IST) Nov 21
11:37 AM (IST) Nov 21
ಸಂಘಟಕರೊಬ್ಬರಿಂದ ಡಮ್ಮಿ' ಎಂದು ಅವಮಾನಕ್ಕೊಳಗಾಗಿದ್ದ ಮೆಕ್ಸಿಕೋದ ಫಾತಿಮಾ ಬಾಷ್, ಅದೇ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಅವಮಾನಕ್ಕೊಳಗಾದ ಸ್ಥಳದಲ್ಲೇ ಅವರಿಗೆ ಸನ್ಮಾನವಾಗಿದೆ.
11:36 AM (IST) Nov 21
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸೋತಿರುವ ಭಾರತ, ಸರಣಿ ಉಳಿಸಿಕೊಳ್ಳಲು ಗುವಾಹಟಿಯಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ನಾಯಕ ಶುಭಮನ್ ಗಿಲ್ ಗಾಯಗೊಂಡಿರುವ ಕಾರಣ, ರಿಷಭ್ ಪಂತ್ ತಂಡವನ್ನು ಮುನ್ನಡೆಸಲಿದ್ದಾರೆ.
09:37 AM (IST) Nov 21
ಗುವಾಹಟಿಯಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯವು ಹೊಸ ವೇಳಾಪಟ್ಟಿಯನ್ನು ಹೊಂದಿದೆ. ಇಲ್ಲಿನ ಶೀಘ್ರ ಸೂರ್ಯೋದಯ ಮತ್ತು ಸೂರ್ಯಾಸ್ತದಿಂದಾಗಿ, ಪಂದ್ಯವು ಬೆಳಿಗ್ಗೆ 9 ಗಂಟೆಗೆ ಆರಂಭವಾಗಿ ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ.
09:25 AM (IST) Nov 21
ಉತ್ತರ ಪ್ರದೇಶದಲ್ಲಿ, ಮದುವೆಯ ಎಲ್ಲಾ ಸಂಪ್ರದಾಯಗಳನ್ನು ಮುಗಿಸಿದ ವಧುವೊಬ್ಬಳು ವರನೊಂದಿಗೆ ವೇದಿಕೆಯಲ್ಲೇ ಸೊಗಸಾಗಿ ಡಾನ್ಸ್ ಮಾಡಿ ಇದಾದ ನಂತರ ಮದುವೆ ಮನೆಯವರು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾಗಲೇ ರಾತ್ರೋರಾತ್ರಿ ಎಸ್ಕೇಪ್ ಆದಂತಹ ಸಿನಿಮೀಯ ಶೈಲಿಯ ಘಟನೆ ನಡೆದಿದೆ.
09:23 AM (IST) Nov 21
07:09 AM (IST) Nov 21
Doctor uses Fevikwik on child: ಮೀರತ್‌ನ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಮಗುವಿನ ತಲೆಯ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಚ್ಚಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಘಟನೆಗೆ ಸಬಂಧಿಸಿದಂತೆ ದೂರು ದಾಖಲಾಗಿದ್ದು, ಇಲ್ಲಿದೆ ಡಿಟೇಲ್ ಸ್ಟೋರಿ…