ಉತ್ತರ ಪ್ರದೇಶದಲ್ಲಿ, ಮದುವೆಯ ಎಲ್ಲಾ ಸಂಪ್ರದಾಯಗಳನ್ನು ಮುಗಿಸಿದ ವಧುವೊಬ್ಬಳು ವರನೊಂದಿಗೆ ವೇದಿಕೆಯಲ್ಲೇ ಸೊಗಸಾಗಿ ಡಾನ್ಸ್ ಮಾಡಿ ಇದಾದ ನಂತರ ಮದುವೆ ಮನೆಯವರು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾಗಲೇ ರಾತ್ರೋರಾತ್ರಿ ಎಸ್ಕೇಪ್ ಆದಂತಹ ಸಿನಿಮೀಯ ಶೈಲಿಯ ಘಟನೆ ನಡೆದಿದೆ.
ಉತ್ತರ ಪ್ರದೇಶದಲ್ಲಿ ಸಿನಿಮೀಯ ಶೈಲಿಯ ಘಟನೆ:
ಮದುವೆಯ ಎಲ್ಲಾ ಸಂಪ್ರದಾಯಗಳನ್ನು ಮುಗಿಸಿ ಮದುವೆಯಲ್ಲಿ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದ ವಧು ಇದಾದ ಕೆಲ ಕ್ಷಣದಲ್ಲಿಯೇ ನಾಪತ್ತೆಯಾದಂತಹ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಯಿಂದ ಆಕ್ರೋಶಗೊಂಡ ವರನ ಕಡೆಯವರು ವಧುವಿನ ಕುಟುಂಬದವರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ವಧು ಮದುವೆಯ ಎಲ್ಲಾ ಸಂಪ್ರದಾಯಗಳನ್ನು ಪಾಲಿಸಿದ್ದಾಳೆ ವರನೊಂದಿಗೆ ಬಿಂದಾಸ್ ಆಗಿ ನೃತ್ಯವನ್ನು ಮಾಡಿದ್ದಾಳೆ ಇದಾದ ಸ್ವಲ್ಪ ಹೊತ್ತಿನಲ್ಲಿ ಆಕೆ ನಾಪತ್ತೆಯಾಗಿದ್ದು, ಮದುವೆಗೆ ಬಂದಿದ್ದ ನೆಂಟರಿಷ್ಟರು ಬಂಧುಗಳು ಹಾಗೂ ಊರವರು ಆಘಾತಗೊಂಡಿದ್ದಾರೆ. ಉತ್ತರ ಪ್ರದೇಶದ ಬಾರಬಂಕಿಯಲ್ಲಿ ಈ ಘಟನೆ ನಡೆದಿದೆ. ಘಟನೆಯ ನಂತರ ಆಕ್ರೋಶಗೊಂಡ ವರನ ಕಡೆಯವರು ವಧುವಿನ ಕಡೆಯವರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಮದುವೆಯ ಸಂಪ್ರದಾಯಗಳನ್ನೆಲ್ಲಾ ಪಾಲಿಸಿ ರಾತ್ರೋರಾತ್ರಿ ಎಸ್ಕೇಪ್ ಆದ ವಧು:
ಮೂರು ತಿಂಗಳ ಹಿಂದಷ್ಟೇ ವರ ಪಲ್ಲವಿ ಹಾಗೂ ವಧು ಸುನೀಲ್ ಕುಮಾರ್ ಗೌತಮ್ ಮಧ್ಯೆ ಮದುವೆ ನಿಶ್ಚಯಗೊಂಡಿತ್ತು. ಮಂಗಳವಾರ ರಾತ್ರಿ ವರ ಅಂದಾಜು 90ರಷ್ಟು ಜನರಿದ್ದ ತನ್ನ ದಿಬ್ಬಣದೊಂದಿಗೆ ವಧುವಿನ ಮನೆಯಾದ ಬಾರಬಂಕಿಗೆ ಆಗಮಿಸಿದ್ದಾನೆ. ಅಲ್ಲಿ ಮದುವೆ ನಡೆದಿದೆ. ವಧು ಹಾಗೂ ವರ ಇಬ್ಬರೂ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ. ಹಾಗೂ ರಾತ್ರಿಯೇ ಮದುವೆಯೆಲ್ಲಾ ಪೂರ್ಣಗೊಂಡಿದೆ. ವಧು ಹಾಗೂ ವರ ಇಬ್ಬರು ಸೇರಿ ಮದುವೆಯ ನಂತರ ವೇದಿಕೆಯಲ್ಲೇ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾರೆ.
ಮುಂಜಾನೆ ಹುಡುಕಾಟ ಆರಂಭಿಸಿದ ಕುಟುಂಬದವರಿಗೆ ಆಘಾತ:
ಆದರೆ ಮದುವೆ ಎಲ್ಲಾ ಮುಗಿದು ಬುಧವಾರ ಬೆಳಗ್ಗೆ ವಧುವನ್ನು ವರನ ಮನೆಗೆ ಕಳುಹಿಸಿಕೊಡುವ ವೇಳೆ ವಧು ಪಲ್ಲವಿ ಮನೆಯಿಂದ ಎಸ್ಕೇಪ್ ಆಗಿರುವುದು ಬೆಳಕಿಗೆ ಬಂದಿದೆ. ಮೊದಲಿಗೆ ಅವರು ಆಕೆ ಮನೆಯ ಸಮೀಪವೇ ಅತ್ತಿತ ಎಲ್ಲಾದರು ಇರಬಹುದು ಎಂದು ಭಾವಿಸಿದ್ದಾರೆ. ಆದರೆ ಒಂದು ಗಂಟೆಯಾದರು ತೀವ್ರವಾಗಿ ಹುಡುಕಾಟ ನಡೆಸಿದ ನಂತರ ವೂ ಆಕೆ ಸಿಗದೇ ಹೋದಾಗ ಎರಡು ಕುಟುಂಬಗಳು ಆತಂಕಗೊಂಡಿವೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಹುಡುಕಿದರು ವಧು ಮಾತ್ರ ಸಿಕ್ಕಿಲ್ಲ. ಇದರಿಂದ ಆತಂಕಗೊಂಡ ಕುಟುಂಬದವರು ಸೇರಿದಂತೆ ಎಲ್ಲರೂ ಭಯಗೊಂಡಿದ್ದಾರೆ.
ಗೆಳೆಯನ ಜೊತೆ ಎಸ್ಕೇಪ್ ಆಗಿರುವ ಶಂಕೆ
ಕೆಲ ಆರಂಭಿಕ ವರದಿಗಳ ಪ್ರಕಾರ, ವಧು ತನ್ನ ಗೆಳೆಯನ ಜೊತೆ ಓಡಿ ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಎಲ್ಲಾ ವಿವಾಹ ಕಾರ್ಯಕ್ರಮಗಳು ಮುಗಿದ ನಂತರ ಮದುವೆ ಮನೆಯಲ್ಲಿ ಸೇರಿದ್ದ ಜನರು ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ಸಂದರ್ಭವನ್ನು ನೋಡಿಕೊಂಡು ವಧು ಎಸ್ಕೇಪ್ ಆಗಿದ್ದಾಳೆ. ವಧು ನಾಪತ್ತೆಯಾದ ನಂತರ ವರನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ವಧುವಿನ ಕುಟುಂಬದವರ ವಿರುದ್ಧ ಅವರು ಕೇಸ್ ದಾಖಲಿಸಿದ್ದಾರೆ. ಘಟನೆಯ ಬಳಿಕ ಪೊಲೀಸರು ವಧುವಿನ ಹುಡುಕಾಟಕ್ಕೆ ಇಳಿದಿದ್ದು, ಆಕೆಯ ಮೊಬೈಲ್ ಫೋನ್ ಲೊಕೇಶನ್ ಹಾಗೂ ಸುತ್ತಮುತ್ತಲ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ಪಹಲ್ಗಾಂ ದಾಳಿ ನಡೆಸಿದ್ದು ಉಗ್ರರಲ್ಲ ಅದು ಭಾರತದೊಳಗಿನ ಬಂಡಾಯದಿಂದ ಆದದ್ದು ಅಮೆರಿಕಾ ಹೊಸ ಆಟ
ಇದನ್ನೂ ಓದಿ: ಗಾಯಕ್ಕೆ ಸ್ಟಿಚ್ ಹಾಕುವ ಬದಲು ಫೆವಿಕ್ವಿಕ್ ಹಾಕಿದ ಡಾಕ್ಟರ್


