100 ಕೋಟಿ ರೂಪಾಯಿ ಅನುದಾನ, ಗೌತಮ್ ಅದಾನಿ ಹಾಡಿ ಹೊಗಳಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ, ಗೌತಮ್ ಅಧಾನಿ ನಿರ್ಧಾರ ಘೋಷಿಸುತ್ತಿದ್ದಂತೆ ಧಾನೀಶ್ ಕನೇರಿಯಾ ಪುಳಕಿತರಾಗಿದ್ದಾರೆ. ಅಷ್ಟಕ್ಕೂ ಪಾಕ್ ಮಾಜಿ ಕ್ರಿಕೆಟಿಗ ಅದಾನಿಗೆ ಮೆಚ್ಚುಗೆ ಸೂಚಿಸಿದ್ದೇಕೆ?
ನವದೆಹಲಿ (ನ.21) ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ದೇಶ ವಿದೇಶದಲ್ಲಿ ಉದ್ಯಮ ಹೊಂದಿದ್ದಾರೆ. ಅದಾನಿ ಪವರ್ ಪ್ರಾಜೆಕ್ಟ್, ಗ್ರೀನ್ ಎನರ್ಜಿ ವ್ಯಾಪ್ತಿ ವಿಸ್ತರಿಸುತ್ತಿದೆ. ಹಲವು ದೇಶಗಳು ಅದಾನಿ ಎನರ್ಜಿ ಮೇಲೆ ಅವಲಂಬಿತವಾಗಿದೆ. ಇದರ ನಡುವೆ ಗೌತಮ್ ಅದಾನಿ ಗ್ರೂಪ್ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಇದೀಗ ಗೌತಮ್ ಅದಾನಿ ಭಾರತೀಯ ಸಂಸ್ಕೃತಿ, ಇಲ್ಲಿನ ದೇವಸ್ಥಾನ, ಈ ಮಣ್ಣಿನ ಪರಂಪರೆ ರಕ್ಷಿಸಲು ಬರೋಬ್ಬರಿ 100 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಈ ನಿರ್ಧಾರ ಹೊರಬೀಳತ್ತಿದ್ದಂತೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಧಾನೀಶ್ ಕನೇರಿಯಾ ಭಾರಿ ಮೆಚ್ಚುಗೆ ಸೂಚಿಸಿದ್ದಾರೆ.
ಗೌತಮ್ ಅದಾನಿ ನಿರ್ಧಾರಕ್ಕೆ ಭಾರಿ ಮೆಚ್ಚುಗೆ
ಗೌತಮ್ ಅದಾನಿ ಬರೋಬ್ಬರಿ 100 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಇದು ಭಾರತೀಯ ನಾಗರಿಕತೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಲು ತೆಗೆದುಕೊಂಡಿರುವ ಮಹತ್ ನಿರ್ಧಾರ. ಪ್ರಮುಖವಾಗಿ ನಿರ್ಲಕ್ಷ್ಯ ಒಳಗಾಗಿರುವ ಹಲವು ಪುರಾತನ ದೇವಾಲಗಳ ಪುನರ್ ನಿರ್ಮಾಣ ಸೇರಿದಂತೆ ಕಾರ್ಯಗಳಿಗೆ ಈ ಹಣ ವಿನಿಯೋಗವಾಗಲಿದೆ.
ದಾನೀಶ್ ಕನೇರಿಯಾ ಹೇಳಿದ್ದೇನು?
ಪಾಕಿಸ್ತಾನದ ಹಿಂದೂವಾಗಿ ಗೌತಮ್ ಅದಾನಿ ಘೋಷಣೆ ಅತೀವ ಹೆಮ್ಮೆ ಎನಿಸಿದೆ. ಪಾಕಿಸ್ತಾನದಲ್ಲಿ ನೂರಾರು ಹಿಂದೂ ದೇವಲಾಯಗಳು ಶಿಥಿಲಗೊಂಡಿದೆ. ಹಲವು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲ್ಲಿನ ದೇವಸ್ಥಾನಗಳ ಪರಿಸ್ಥಿತಿ ಶೋಚನೀಯವಾಗಿದೆ. ಇದರ ನಡುವೆ ಗೌತಮ್ ಅದಾನಿ 100 ಕೋಟಿ ರೂಪಾಯಿ ಮೀಸಲಿಟ್ಟಿರುವುದು ಅತ್ಯಂತ ಮಹತ್ವದ ಹಾಗೂ ಗಮನಾರ್ಹ ನಿರ್ಧಾರ ಎಂದು ದಾನೀಶ್ ಕನೇರಿಯಾ ಹೇಳಿದ್ದಾರೆ.
ಗ್ಲೋಬಲ್ ಇಂಡೋಲಜಿ ಕಾನ್‌ಕ್ಲೇವ್‌ನಲ್ಲಿ ಅದಾನಿ ಘೋಷಣೆ
ಗ್ಲೋಬಲ್ ಇಂಡೋಲಜಿ ಕಾನ್‌ಕ್ಲೇವ್‌ನಲ್ಲಿ ಗೌತಮ್ ಅದಾನಿ ಈ ಘೋಷಣೆ ಮಾಡಿದ್ದಾರೆ. ಪುರಾತನ ಭಾರತ ಎಲ್ಲರ ಕೇಂದ್ರವಾಗಿತ್ತು. ಇಲ್ಲಿ ವಿದ್ಯೆ ಸಂಪತ್ತು ಅಗಾಧವಾಗಿತ್ತು. ಜ್ಞಾನ ಸಂಪತ್ತು, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರದಲ್ಲಿ ಭಾರತ ಮುನ್ನಡೆಯುತ್ತಿದೆ. ಅಧ್ಯಯನ, ಪರಂಪರೆ ಉಳಿಸುವಿಕೆ, ರಕ್ಷಣ ಮಾಡುವ ಜವಾಬ್ದಾರಿಯೂ ನಮ್ಮ ಮೇಲಿದೆ. ಭಾರತೀಯತೆ ಉಳಿಸುವುದು, ಬೆಳೆಸುವದು ಅತೀ ಮುಖ್ಯ ಎಂದು ಅದಾನಿ ಹೇಳಿದ್ದಾರೆ.
ಗೌತಮ್ ಅದಾನಿಯನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗ ದಾನೀಶ್ ಕನೇರಿಯಾ ಹೊಗಳುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಮಹಾ ಕುಂಭ ಮೇಳದಲ್ಲಿ ಗೌತಮ್ ಅದಾನಿ ಕುಟುಂಬ ಸಮೇತ ಪಾಲ್ಗೊಂಡಿದ್ದರು. ಇಷ್ಟೇ ಅಲ್ಲ ಇಲ್ಲಿ ಅನ್ನದಾನ ಸೇರಿದಂತೆ ಹಲವು ಸೇವೆ ನೀಡಿದ್ದರು. ಈ ವೇಳೆ ದಾನೀಶ್ ಕನೇರಿಯಾ, ಉದ್ಯಮಿ ಅದಾನಿಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸನಾತನ ಧರ್ಮವನ್ನು ಹೆಮ್ಮೆಯಿಂದ ಪಾಲಿಸುತ್ತಿರುವ ಹಾಗೂ ಇತರರಿಗೆ ಮಾದರಿಯಾಗಿರುವ ಅದಾನಿ ನಿಲುವು ಶ್ಲಾಘನೀಯ ಎಂದು ದಾನೀಶ್ ಕನೇರಿಯಾ ಹೇಳಿದ್ದರು.


