ಚಿಕಿತ್ಸೆಗೆ ಟೈಮೇ ಇಲ್ಲ, ಸರ್ಕಾರಿ ಆಸ್ಪತ್ರೆಯಲ್ಲೇ ಗರ್ಲ್‌ಫ್ರೆಂಡ್ ಜೊತೆ ವೈದ್ಯ ಸಿದ್ದಿಕಿ ಮಸ್ತ ಡ್ಯಾನ್ಸ್ , ಕರ್ತವ್ಯದಲ್ಲೇ ವಕಾರ್ ಸಿದ್ದಿಕಿ ಗೆಳತಿ ಜೊತೆ ಡ್ಯಾನ್ಸ್ ಆಡುತ್ತಾ, ಬಾಲಿವುಡ್ ರೇಂಜ್‌ಗೆ ಸಮಯ ಕಳೆಯುತ್ತಿದ್ದಾನೆ. ಈತನ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.
ಲಖನೌ (ನ.21) ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯವಿದೆ, ವೈದ್ಯರು, ನರ್ಸ್ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಇರುತ್ತಾರೆ. ಆದರೂ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಅನ್ನೋ ಆರೋಪಗಳು ಇಂದು ನಿನ್ನೆಯದಲ್ಲ. ಇದಕ್ಕೆ ಪುಷ್ಠಿ ನೀಡುವಂತೆ ಸರ್ಕಾರಿ ಆಸ್ಪತ್ರೆಯ ಪ್ರಮುಖ ವೈದ್ಯನ ವಿಡಿಯೋ ಒಂದು ಹೊರಬಂದಿದೆ. ತನ್ನ ಡ್ಯೂಟಿ ಸಮಯದಲ್ಲಿ ವೈದ್ಯ, ರೋಗಿಗಳ ಆರೈಕೆ, ಚಿಕಿತ್ಸೆ ಮಾಡಬೇಕಿತ್ತು. ಆದರೆ ಇದಕ್ಕೆ ಟೈಮೇ ಸಿಗುತ್ತಿಲ್ಲ. ರೋಗಿಗಳು ಕಾದು ಕಾದು ಸುಸ್ತಾಗಿ, ಕೊನೆಗೆ ಸಮಸ್ಯೆ ತೀವ್ರಗೊಂಡು ಬೇರೆಡೆ ಹೋದರೂ ಈ ವೈದ್ಯನಿಗೆ ಟೈಮೇ ಇಲ್ಲ. ಆಸ್ಪತ್ರೆಯಲ್ಲೇ ತನ್ನ ಗರ್ಲ್‌ಫ್ರೆಂಡ್ ಜೊತೆ ಬಾಲಿವುಡ್ ರೇಂಜ್‌ಗೆ ಡ್ಯಾನ್ಸ್ ಮಾಡುತ್ತಾ ಸಮಯ ಕಳೆಯುತ್ತಿದ್ದಾನೆ. ಹೀಗೆ ಚಿಕಿತ್ಸೆ ನೀಡದೆ ತನ್ನ ಡ್ಯಾನ್ಸ್ ಮೂಲಕ ಜನಪ್ರಿಯನಾದ ವೈದ್ಯ ಉತ್ತರ ಪ್ರದೇಶದ ಶಾಮ್ಲಿಯ ವಲಯದ ಡಾ.ವಕಾರ್ ಸಿದ್ದಿಕಿ. ಈತನ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಮಾನತುಗೊಂಡಿದ್ದಾನೆ.
ಎಮರ್ಜೆನ್ಸಿ ವಾರ್ಡ್‌ನಲ್ಲಿ ಡ್ಯೂಟಿ
ಎಮರ್ಜೆನ್ಸಿ ವಾರ್ಡ್‌ನಲ್ಲ ಡ್ಯೂಟಿ ಮಾಡುವ ವೈದ್ಯರು ಅತೀವ ಎಚ್ಚರಿಕಯಿಂದ ಇರಬೇಕು. ಪ್ರತಿ ನಿಮಿಷವೂ ಅಷ್ಟೇ ಮುತುವರ್ಜಿಯಿಂದ ಸೇವೆ ಸಲ್ಲಿಸಬೇಕಾಗುತ್ತದೆ. ಕಾರಣ ತುರ್ತು ಚಿಕಿತ್ಸೆಯಲ್ಲಿ ಒಂದು ನಿಮಿಷ ವಿಳಂಬವಾದರೂ, ತಪ್ಪಾದರೂ ಪ್ರಾಣಕ್ಕೆ ಅಪಾಯ. ಆದರೆ ಈ ವಕಾರ್ ಸಿದ್ದಿಕಿ ಮಾತ್ರ ಫುಲ್ ಫ್ರಿ. ಶಾಮ್ಲಿ ಸರ್ಕಾರಿ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ನಲ್ಲಿ ಸೇವೆಗೆ ನಿಯೋಜನೆಗೊಂಡರೂ ಸಿದ್ದಿಕಿ ಮಾತ್ರ ತನ್ನ ಭಾವಿ ಪತ್ನಿ, ಗರ್ಲ್‌ಫ್ರೆಂಡ್ ಜೊತೆ ಭರ್ಜರಿ ಡ್ಯಾನ್ಸ್ ಮಾಡುತ್ತಾ ಸಮಯ ಕಳಯುತ್ತಿದ್ದಾನೆ. ಗೆಳತಿ ಜೊತೆ ಡ್ಯಾನ್ಸ್ ಮಾಡುತ್ತಿರುವ ಈತನ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಆಸ್ಪತ್ರೆ ಮಹಡಿ ಮೇಲಿನ ಕೊಠಡಿ ಈ ಜೋಡಿಗೆ ಮೀಸಲು
ಎಮರ್ಜೆನ್ಸಿ ವಾರ್ಡ್ ಮೇಲಿನ ಮಹಡಿಯಲ್ಲಿರುವ ಕೊಠಡಿಯನ್ನು ವೈದ್ಯ ಸಿದ್ದಿಕಿ ಹಾಗೂ ಆತನ ಗೆಳತಿ ತಮ್ಮ ಖಾಸಗಿ ರೂಂ ಮಾಡಿಕೊಂಡಿದ್ದಾರೆ. ಇಲ್ಲೇ ಈ ಜೋಡಿ ಹಲವು ಹಾಡಿಗೆ ಹೆಚ್ಚೆ ಹಾಕುತ್ತಾರೆ. ಪಾರ್ಕ್, ಪಬ್ಸ ಬಾರ್‌ನಲ್ಲಿ ಸಮಯ ಕಳೆಯುವಂತೆ ಕಳೆಯುತ್ತಾರೆ. ಡ್ಯೂಟಿ ಸಮಯದಲ್ಲೂ ಗೆಳತಿ ಜೊತೆಗೆ ಕಳೆಯುತ್ತಾರೆ. ಹೆಸರಿಗೆ ಮಾತ್ರ ಎಮರ್ಜೆನ್ಸಿ ವಾರ್ಡ್‌ನಲ್ಲಿ ಡ್ಯೂಟಿ, ಕೆಲಸ ಮಾತ್ರ ನಿಜಕ್ಕೂ ಸ್ವಂತ ಎಮರ್ಜೆನ್ಸಿಗೆ ಮಾತ್ರ.
ಸಿದ್ದಿಕಿ ಅಮಾನತು ಮಾಡಿದ ಆರೋಗ್ಯಾಧಿಕಾರಿ
ಸಿದ್ದಿಕಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವು ರೋಗಿಗಳು ಸೇರಿದಂತೆ ಆಕ್ರೋಶ ಹೊರಹಾಕಿದ್ದಾರೆ. ಯಾವಾಗ ನೋಡಿದರೂ ವೈದ್ಯರು ಲಭ್ಯವಿರುವುದಿಲ್ಲ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ಇತ್ತ ಗರಂ ಆದ ಆರೋಗ್ಯಾಧಿಕಾರಿ ವೀರೇಂದ್ರ ಸಿಂಗ್, ಘಟನೆ ಕುರಿತು ವಿವರಣೆ ನೀಡುವಂತೆ ನೋಟಿಸ್ ನೀಡಿದ್ದರು. ಆದರೆ ಸಮರ್ಪಕ ಉತ್ತರ ನೀಡಲು ವಕಾರ್ ಸಿದ್ದಿಕಿ ವಿಫಲರಾಗಿದ್ದಾರೆ. ಇದರ ಬೆನ್ನಲ್ಲೇ ವಕಾರ್ ಸಿದ್ದಿಕಿಯನ್ನು ಅಮಾನತುಗೊಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ. ಸದ್ಯ ಅಮಾನತು ಶಿಕ್ಷೆ ನೀಡಲಾಗಿದೆ. ಇದೇ ವೇಳ ರೋಗಿಗೆಳಿಗೆ ಆಗಿರುವ ಅನಾನೂಕೂಲ, ಸಮಸ್ಯೆಗಳ ಕುರಿತು ತನಿಖೆ ನಡೆಯುತ್ತಿದೆ . ಇದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವೀರೇಂದ್ರ ಸಿಂಗ್ ಹೇಳಿದ್ದಾರೆ.


