ಸೂರ್ಯವಂಶಿಗೆ ಬ್ಯಾಟಿಂಗ್ ಇಲ್ಲ, ಸೂಪರ್ ಓವರ್‌ನಲ್ಲಿ ರನ್‌ಗಳಿಸದೇ ಹೊರಬಿದ್ದ ಭಾರತ ವಿರುದ್ಧ ಭಾರಿ ಟೀಕೆ ಎದುರಾಗಿದೆ. ಉತ್ತಮ ಸ್ಟ್ರೈಕ್ ರೇಟ್ ಇರುವ ಸೂರ್ಯವಂಶಿಗೆ ಬ್ಯಾಟಿಂಗ್ ಕೊಡಲಿಲ್ಲ, ಇತರರು ಒಂದು ರನ್ ಕೂಡ ಮಾಡಲಿಲ್ಲ, ಮ್ಯಾನೇಜ್ಮೆಂಟ್ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ದೋಹಾ (ನ.21) ಏಷ್ಯಾಕಪ್ ರೈಸಿಂಗ್ ಸ್ಟಾರ್ ಟೂರ್ನಿಯಿಂದ ಭಾರತ ಎ ತಂಡ ಹೊರಬಿದ್ದಿದೆ. ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಹೋರಾಡಿದ ಭಾರತ ಮುಗ್ಗರಿಸಿದೆ. ಆದರೆ ಭಾರತದ ಸೋಲು ಭಾರಿ ಎಡವಟ್ಟಿನಿಂದ ಆಗಿದೆ ಎಂದು ಅಭಿಮಾನಿಗಳು ಟೀಕಿಸಿದ್ದಾರೆ. ತಂಡದಲ್ಲಿರುವ ಅತ್ಯುತ್ತಮ ಬ್ಯಾಟರ್ ವೈಭವ್ ಸೂರ್ಯವಂಶಿ, ಸ್ಟ್ರೈಕ್ ರೇಟ್ 253.33, ಇಷ್ಟಿದ್ದರೂ ಸೂಪರ್ ಓವರ್‌ನಲ್ಲಿ ಸೂರ್ಯವಂಶಿಗೆ ಬ್ಯಾಟಿಂಗ್ ನೀಡಿಲ್ಲ, ಇತ್ತರ ಬ್ಯಾಟಿಂಗ್ ಹೋದವರು ಒಂದು ರನ್ ಕೂಡ ಮಾಡಿಲ್ಲ. ಸೂಪರ್ ಓವರ್‌ನಲ್ಲಿ ಭಾರತ ಶೂನ್ಯ. ಇತ್ತ ಬೌಲಿಂಗ್ ಮಾಡಿದ ಭಾರತ ವೈಡ್ ಮೂಲಕ ರನ್ ನೀಡಿದೆ. ಇದರೊಂದಿಗೆ ಬಾಂಗ್ಲಾದೇಶ ಗೆಲುವು ಸಾಧಿಸಿದರೆ, ಭಾರತ ಟೂರ್ನಯಿಂದ ಹೊರಬಿದ್ದಿದೆ. ಇದನ್ನೆಲ್ಲಾ ನೋಡಿದರೆ ಭಾರತ ತಂಡ ಮ್ಯಾನೇಜ್ಮೆಂಟ್ ಎಡವಟ್ಟೋ, ಅಥವಾ ಟೂರ್ನಿಯೇ ಫಿಕ್ಸ್ ಅಗಿದೆಯಾ ಎಂದು ಪ್ರಶ್ನಿಸಿದ್ದಾರೆ.
194 ರನ್ ಸಿಡಿಸಿ ಪಂದ್ಯ ಟೈ
ಬಾಂಗ್ಲಾದೇಶ ಎ ತಂಡ 20 ಓವರ್‌ನಲ್ಲಿ 194 ರನ್ ಸಿಡಿಸಿತ್ತು. 195 ರನ್ ಟಾರ್ಗೆಟ್ ಪಡೆದ ಭಾರತ ಎ ತಂಡ ಚೇಸಿಂಗ್ ವೇಳೆ ಉತ್ತಮ ಆರಂಭ ಪಡೆದಿತ್ತು. ತಂಡದ ಸ್ಟಾರ್ ಬ್ಯಾಟರ್ ವೈಬವ್ ಸೂರ್ಯವಂಶಿ ಕೇವಲ 15 ಎಸೆತದಲ್ಲಿ 38 ರನ್ ಸಿಡಿಸಿದ್ದರು.ಇತ್ತ ಪ್ರಿಯಾಂಶ್ ಆರ್ಯ 44 ರನ್ ಸಿಡಿಸಿದರು. ಹೋರಾಟ ನೀಡಿದ ಭಾರತ 6 ವಿಕೆಟ್ ನಷ್ಟಕ್ಕೆ 194 ರನ್ ಸಿಡಿಸಿ ಪಂದ್ಯ ಟೈ ಮಾಡಿಕೊಂಡಿತು. ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಗಿತ್ತು.
ಸೂಪರ್ ಓವರ್‌ನಲ್ಲಿ ಭಾರತ ಆಲೌಟ್
ಭಾರತ ಎ ತಂಡ ಸೆಕೆಂಡ್ ಬ್ಯಾಟಿಂಗ್ ಮಾಡಿದ ಕಾರಣ ಸೂಪರ್ ಓವರ್ ನಿಮಯದ ಪ್ರಕಾರ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿಯಿತು. ಎಲ್ಲರೂ ವೈಭವ್ ಸೂರ್ಯವಂಶಿ ನಿರೀಕ್ಷೆ ಮಾಡಿದ್ದರು. ಕಾರಣ ಟ್ವಿಂಟ್, ಸೂಪರ್ ಓವರ್‌ಗೆ ಸೂರ್ಯವಂಶಿ ಪಕ್ಕಾ ಮ್ಯಾಚ್ ಆಗುತ್ತಾರೆ. ಜೊತೆಗೆ ಬಾಂಗ್ಲಾ ವಿರುದ್ದ ಚೇಸಿಂಗ್ ವೇಳೆ 38 ರನ್ ಸಿಡಿಸಿದ್ದರು. ಆದರೆ ವೈಭವ್ ಸೂರ್ಯವಂಶಿ ಬದಲು ಜಿತೇಶ್ ವರ್ಮಾ ಹೀಗೂ ರಮಣದೀಪ್ ಸಿಂಗ್ ಆರಂಭಿಕರಾಗಿ ಬ್ಯಾಟಿಂಗ್ ಇಳಿದಿದ್ದರು. ಆರಂಭದಲ್ಲೇ ಅಭಿಮಾನಿಗಳ ಆಕ್ರೋಶ ಹೆಚ್ಚಾಗಿತ್ತು. ಸೂರ್ಯವಂಶಿಗಿಂತ ಉತ್ತಮ ಎಂದು ಎಲ್ಲರು ಆಕ್ರೋಶ ಹೊರಹಾಕಿದ್ದರು.
ಮೊದಲ ಎಸೆತದಲ್ಲಿ ಜಿತೇಶ್ ಶರ್ಮಾ ಔಟ್. ಸರಿ ಈಗಲಾದರೂ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಇಳಿಯುತ್ತಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಇಲ್ಲ, ಅಶುತೋಶ್ ಕ್ರೀಸ್‌ಗೆ ಇಳಿದಿದ್ದರು. ಬಂದ ಬೆನ್ನಲ್ಲೇ ಅಶುತೋಶ್ ಕೂಡ ವಿಕೆಟ್ ಕೈಚೆಲ್ಲಿದ್ದರು. ಈ ಮೂಲಕ ಭಾರತ ಒಂದು ರನ್ ಗಳಿಸದೆ ಶೂನ್ಯಕ್ಕೆ ಆಲೌಟ್ ಆಯಿತು. ಅತ್ಯಂತ ಉತ್ತಮ ಬ್ಯಾಟಿಂಗ್ ತಂಡ ಸೂವರ್ ಓವರ್‌ನಲ್ಲಿ ಒಂದು ರನ್ ಗಳಿಸದೆ ಶೂನ್ಯಕ್ಕೆ ಆಲೌಟ್ ಆಗಿತ್ತು.
ಭಾರತದ ವೈಡ್, ಬಾಂಗ್ಲಾದೇಶಕ್ಕೆ ಗೆಲುವು
ಬಾಂಗ್ಲಾದೇಶ ಗೆಲುವಿಗೆ 1 ರನ್ ಮಾತ್ರ ಬೇಕು. ಮೊದಲ ಎಸೆತದಲಲಿ ಯಾಸಿರ್ ಆಲಿ ವಿಕೆಟ್ ಪತನಗೊಂಡಿತು. ಆದರೆ ಸೂಯಾಶ್ ಎಸೆದ ಎರಡನೇ ಎಸೆತ ವೈಡ್. ಅಷ್ಟರಲ್ಲೇ ಬಾಂಗ್ಲಾದೇಶ ಗೆಲುವು ಸಾಧಿಸಿತ್ತು. ಸಂಭ್ರಮ ಮನೆ ಮಾಡಿತ್ತು. ಇತ್ತ ಸೆಮಿಫೈನಲ್ ಸೋಲಿನೊಂದಿಗೆ ಭಾರತ ಟೂರ್ನಿಯಿಂದ ಹೊರಬಿತ್ತು. ಅಭಿಮಾನಿಗಳು ಭಾರಿ ಆಕ್ರೋಶ ಹೊರಹಾಕಿದ್ದಾರೆ. ಭಾರತ ಎ ತಂಡ ಏನು ಯೋಚನೆ ಮಾಡುತ್ತಿದೆ, ಯಾರನ್ನು ಬ್ಯಾಟಿಂಗ್ ಕಳುಹಿಸಬೇಕು ಅನ್ನೋ ಕನಿಷ್ಠ ಜ್ಞಾನವಿಲ್ಲವೇ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.


