- Home
- Technology
- ನಿಮ್ಮ ಗುಟ್ಟು ರಟ್ಟಾಗಬಾರದು ಅಂತಂದ್ರೆ ಮೊದ್ಲು ಸ್ಮಾರ್ಟ್ಫೋನ್ನಲ್ಲಿ ಈ ಸೆಟ್ಟಿಂಗ್ಸ್ ಕೂಡಲೇ ಆಫ್ ಮಾಡಿ!
ನಿಮ್ಮ ಗುಟ್ಟು ರಟ್ಟಾಗಬಾರದು ಅಂತಂದ್ರೆ ಮೊದ್ಲು ಸ್ಮಾರ್ಟ್ಫೋನ್ನಲ್ಲಿ ಈ ಸೆಟ್ಟಿಂಗ್ಸ್ ಕೂಡಲೇ ಆಫ್ ಮಾಡಿ!
ನಿಮ್ಮ ಸ್ಮಾರ್ಟ್‌ಫೋನ್ ನಿಮ್ಮ ಸಂಭಾಷಣೆಗಳನ್ನು ಆಲಿಸಿ, ವೈಯಕ್ತಿಕ ಜಾಹೀರಾತುಗಳನ್ನು ತೋರಿಸುತ್ತದೆ. ಇದು ಖಾಸಗಿ ಮಾಹಿತಿಗೆ ಅಪಾಯವನ್ನುಂಟುಮಾಡಬಹುದು. ಈ ಲೇಖನದಲ್ಲಿ, ನಿಮ್ಮ ಡೇಟಾವನ್ನು ರಕ್ಷಿಸಲು ಮತ್ತು ಜಾಹೀರಾತುಗಳನ್ನು ನಿಲ್ಲಿಸಲು ಬೇಕಾದ ಪ್ರಮುಖ ಸೆಟ್ಟಿಂಗ್ಸ್‌ಗಳನ್ನು ಬದಲಾಯಿಸುವ ವಿಧಾನ ಇಲ್ಲಿದೆ.

ನಿಮ್ಮ ಗುಟ್ಟು ಸ್ಮಾರ್ಟ್‌ಫೋನ್ ಕೈಯಲ್ಲಿ!
ನಿಮ್ಮ ಗುಟ್ಟುಗಳು ನಿಮ್ಮವರಿಗೆ ತಿಳಿಯದೇ ಇದ್ದರೂ, ನಿಮ್ಮ ಸ್ಮಾರ್ಟ್ಫೋನ್ಗೆ ಎಲ್ಲವೂ ಗೊತ್ತಿರುತ್ತದೆ ಎನ್ನೋದು ನಿಮಗೆ ಗೊತ್ತಾ? ನೀವು ಇದನ್ನು ಆಬಸರ್ವ್ ಮಾಡಿರುತ್ತೀರೋ ಇಲ್ಲವೋ ಗೊತ್ತಿಲ್ಲ. ಯಾವುದೋ ಒಂದು ವಿಷಯವನ್ನು ಮಾತನಾಡಿದ್ರೆ ನಿಮ್ಮ ಗೂಗಲ್ ಓಪನ್ ಮಾಡುತ್ತಿದ್ದಂತೆಯೇ ಅದೇ ವಿಷಯದ ಬಗ್ಗೆ ತೋರಿಸುವುದನ್ನು ಎಂದಾದ್ರೂ ಗಮನಿಸಿದ್ದೀರಾ? ಉದಾಹರಣೆಗೆ ನಿಮ್ಮ ಮನೆಗೆ ಯಾವುದೋ ವಸ್ತು ಖರೀದಿ ಮಾಡಬೇಕು ಎಂದು ಮನೆಯಲ್ಲಿ ಡಿಸ್ಕಸ್ ಮಾಡುತ್ತಿದ್ದೀರಿ ಎಂದುಕೊಳ್ಳಿ. ಫ್ರಿಜ್, ವಾಷಿಂಗ್ ಮಷಿನ್ ಹೀಗೆ ಏನೋ ಒಂದು. ಸ್ವಲ್ಪ ಹೊತ್ತು ಬಿಟ್ಟು ನೀವು ಗೂಗಲ್ ಅಥವಾ ಇನ್ಸ್ಟಾಗ್ರಾಮ್ ಅಥವಾ ಯುಟ್ಯೂಬ್ ಏನೇ ಓಪನ್ ಮಾಡಿದ್ರೂ ಅದರದ್ದೇ ಜಾಹೀರಾತು ಕಾಣಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನೀವು ದೊಡ್ಡದಾಗಿ ಹೇಳುವುದೇ ಬೇಡ. ಕೆಲವೊಮ್ಮೆ ಮನಸ್ಸಿನಲ್ಲಿ ಏನೋ ವಿಷಯ ಅಂದುಕೊಂಡಿದ್ರೂ ಅದರ ಜಾಹೀರಾತು ಕಾಣಿಸುವುದು ಇದೆ!
ಹೇಗೆ ಸಾಧ್ಯ ಅಂದುಕೊಂಡ್ರಾ?
ಇದನ್ನು ನೋಡಿದ ತಕ್ಷಣ ಅರೇ, ಇದು ಹೇಗೆ ಸಾಧ್ಯ ಎಂದು ನಿಮಗೆ ಎನಿಸಿರಬಹುದು ಅಥವಾ ಒಂದೆರಡು ಬಾರಿ ಹೀಗಾಗಿದ್ದರೆ ಕಾಕತಾಳೀಯ ಎಂದೂ ಅಂದುಕೊಂಡಿರಬಹುದು. ಆದರೆ ಇದು ಕಾಕತಾಳೀಯವಲ್ಲ, ನೆನಪಿರಲಿ. ನಿಮ್ಮ ಪ್ರತಿಯೊಂದು ಮಾತನ್ನೂ ನಿಮ್ಮ ಫೋನ್ ಕೇಳಿಸಿಕೊಳ್ಳುತ್ತದೆ. ನಿಮ್ಮ ಬಗ್ಗೆ ನಿಮ್ಮವರಿಗೆ ಚೆನ್ನಾಗಿ ತಿಳಿಯದೇ ಹೋದರೂ ನಿಮ್ಮ ಫೋನ್ಗೆ ಎಲ್ಲವೂ ತಿಳಿದಿರುತ್ತದೆ. ನಿಮಗೆ ಏನು ಬೇಕು, ಏನು ಇಷ್ಟ, ನೀವು ಎಲ್ಲಿಗೆ ಹೋಗಿದ್ದೀರಿ? ನಿಮಗೆ ಯಾರ್ಯಾರು ಮೆಸೇಜ್ ಮಾಡುತ್ತಾರೆ, ನೀವು ಸೀಕ್ರೇಟ್ ಆಗಿ ಏನನ್ನು ಮಾಡುತ್ತೀರಿ... ಹೀಗೆ ಪ್ರತಿಯೊಂದು ಕೂಡ ನಿಮ್ಮ ಮೊಬೈಲ್ಗೆ ಗೊತ್ತಿರುತ್ತದೆ.
ತುಂಬಾ ಡೇಂಜರ್ ಕಣ್ರೀ...
ಇದು ತುಂಬಾ ಡೇಂಜರ್. ನಿಮ್ಮ ಜುಟ್ಟು ನಿಮ್ಮ ಮೊಬೈಲ್ ಕೈಯಲ್ಲಿ ಕೊಟ್ಟಂತೆ ಇದು. ನಿಮ್ಮ ತೀರಾ ಖಾಸಗಿ ವಿಷಯಗಳನ್ನೂ ಇದು ಸಂಗ್ರಹಿಸಿಟ್ಟುಕೊಳ್ಳುತ್ತದೆ. ನಿಮ್ಮ ವಿಷಯವನ್ನು ತಿಳಿದು ಮೋಸ ಮಾಡುವ ಛಾನ್ಸ್ಸ್ ಕೂಡ ಇರುತ್ತದೆ. ಸೈಬರ್ ಕ್ರೈಮ್ಗೆ ಬಲಿಯಾಗಲು ಇದೂ ಒಂದು ದಾರಿಯಾದರೂ ಆಗಬಹುದು. ಆದ್ದರಿಂದ ಈ ಕೂಡಲೇ ಕೆಲವೊಂದು ಸೆಟ್ಟಿಂಗ್ಸ್‌ಗಳನ್ನು ಆಫ್ ಮಾಡಿಕೊಳ್ಳಬೇಕು.
ಅಲೋ ಅಲೋದ ಎಡವಟ್ಟು ಇದು!
ಸಾಮಾನ್ಯವಾಗಿ ಯಾವುದಾದರೂ ಆ್ಯಪ್ ಇನ್ಸ್ಟಾಲ್ ಮಾಡಿದಾಗ, ಅಲ್ಲಿ ಬರುವುದನ್ನು ಯಾವುದನ್ನೂ ಓದದೇ allow ಕೊಟ್ಟಿರುತ್ತೇವೆ. ಇದು ಕೊಡದೇ ಹೋದರೆ ಆ್ಯಪ್ ಓಪನ್ ಆಗುವುದಿಲ್ಲ. ಆದರೆ ಎಲ್ಲಾ ಆ್ಯಪ್ಗಳಿಗೂ ಇದು ಬೇಡ. ಆಟೊಮ್ಯಾಟಿಕ್ ಆಗಿ ನಿಮ್ಮ ಮೊಬೈಲ್ನಲ್ಲಿ ಇರುವ ಎಲ್ಲಾ ಆ್ಯಪ್ಗಳಲ್ಲಿಯೂ ಇದು ಆನ್ ಆಗಿರುತ್ತದೆ. ನಿಮ್ಮ ಡಿಟೇಲ್ಸ್ ಸಂಗ್ರಹಿಸುವಲ್ಲಿ ಇದು ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ಇದು ಹೊರತುಪಡಿಸಿ ಇನ್ನೂ ಕೆಲವು ಸೆಟ್ಟಿಂಗ್ಗಳನ್ನು ನೀವು ಆಫ್ ಮಾಡಿಕೊಂಡರೆ, ಭವಿಷ್ಯದಲ್ಲಿ ಅದು ನಿಮಗೆ ಒಳಿತು. ಅದರ ಎಲ್ಲಾ ಡಿಟೇಲ್ಸ್ಗಳನ್ನು ಈ ಕೆಳಗೆ ನೀಡಲಾಗಿದೆ.
ನೀವೇನು ಮಾಡಬೇಕು?
ಪರ್ಸನಲೈಸ್ಡ್ ಡೇಟಾ ಶೇರಿಂಗ್ ಆಫ್ ಮಾಡುವ ವಿಧಾನ:
- ಫೋನ್ನ ಸೆಟ್ಟಿಂಗ್ಗೆ ಹೋಗಿ.
- ಗೂಗಲ್ ಮೇಲೆ ಕ್ಲಿಕ್ ಮಾಡಿ
- ಆಲ್ ಸರ್ವೀಸ್ ಕ್ಲಿಕ್ ಮಾಡಿ ಪ್ರೈವಸಿ ಆ್ಯಂಡ್ ಸೆಕ್ಯುರಿಟಿ ಮೇಲೆ ಕ್ಲಿಕ್ ಮಾಡಿ.
- ಪರ್ಸನಲೈಸ್ಡ್ ಯೂಸ್ಡ್ ಶೇರ್ಡ್ ಡೇಟಾದ ಮೇಲೆ ಕ್ಲಿಕ್ ಮಾಡಿ
- ಇದಾವುದೂ ನಿಮಗೆ ಅಗತ್ಯವಿರುವುದಿಲ್ಲ. ಆದರೆ ಎಲ್ಲವೂ ಆನ್ ಆಗಿರುತ್ತದೆ. ಅವುಗಳನ್ನು ಆಫ್ ಮಾಡಿ.
ಬೇಗ ಹೀಗೆ ಮಾಡಿ
ಯೂಸೇಜ್ ಆ್ಯಂಡ್ ಡಯೋಗ್ನಾಸ್ಟಿಕ್ ಆಫ್ ಮಾಡುವ ವಿಧಾನ: (ನಿಮ್ಮ ಮಾಹಿತಿಗಳನ್ನು ಗೂಗಲ್ಗೆ ಸೆಟ್ಟಿಂಗ್ ಇದಾಗಿದೆ. ಇದನ್ನು ಆಫ್ ಮಾಡಲು...)
- ಫೋನ್ನ ಸೆಟ್ಟಿಂಗ್ಗೆ ಹೋಗಿ.
- ಗೂಗಲ್ ಮೇಲೆ ಕ್ಲಿಕ್ ಮಾಡಿ
- ಆಲ್ ಸರ್ವೀಸ್ ಕ್ಲಿಕ್ ಮಾಡಿ ಪ್ರೈವಸಿ ಆ್ಯಂಡ್ ಸೆಕ್ಯುರಿಟಿ ಮೇಲೆ ಕ್ಲಿಕ್ ಮಾಡಿ.
- ಯೂಸೇಜ್ ಆ್ಯಂಡ್ ಡಯಾಗ್ನೆಸ್ಟಿಕ್ ಕ್ಲಿಕ್ ಮಾಡಿ
- ಯೂಸೇಜ್ ಆ್ಯಂಡ್ ಡಯಾಗ್ನೆಸ್ಟಿಕ್ ಆಫ್ ಮಾಡಿ
ಜಾಹೀರಾತು ನಿಲ್ಲಲು ಹೀಗೆ ಮಾಡಿ...
ನೀವು ಅಂದುಕೊಂಡ ಜಾಹೀರಾತು ಬರುವುದನ್ನು ನಿಲ್ಲಿಸಲು ಹಾಗೂ ನಿಮ್ಮ ಸಂಭಾಷಣೆ ಕೇಳುವುದನ್ನು ನಿಲ್ಲಿಸಲು..
- ಫೋನ್ನ ಸೆಟ್ಟಿಂಗ್ಗೆ ಹೋಗಿ.
- ಗೂಗಲ್ ಕ್ಲಿಕ್ ಮಾಡಿ
- ಆಲ್ ಸರ್ವೀಸಸ್ ಓಪನ್ ಮಾಡಿ
- ಅಲ್ಲಿ ಆ್ಯಡ್ಸ್ ಇರುವುದರ ಮೇಲೆ ಕ್ಲಿಕ್ ಮಾಡಿ
- ರಿಸೆಟ್ ಅಡ್ವೈಟಿಸಿಂಗ್ ಐಡಿ ಕ್ಲಿಕ್ ಮಾಡಿ ಕನ್ಫರ್ಮ್ ಮಾಡಿ
- ಡಿಲೀಟ್ ಅಡ್ವೈಟೈಸಿಂಗ್ ಐಡಿ ಡಿಲೀಟ್ ಮಾಡಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

