- Home
- Entertainment
- TV Talk
- ಮುಟ್ಟಲು ಬಿಡು ಸಾಕು, ಹೀರೋ ಮಾಡುವೆ: Bigg Boss ಸ್ಪರ್ಧಿಯ ಕಾಸ್ಟಿಂಗ್ ಕೌಚ್ನ ಬೆಚ್ಚಿಬೀಳೋ ಸ್ಟೋರಿ!
ಮುಟ್ಟಲು ಬಿಡು ಸಾಕು, ಹೀರೋ ಮಾಡುವೆ: Bigg Boss ಸ್ಪರ್ಧಿಯ ಕಾಸ್ಟಿಂಗ್ ಕೌಚ್ನ ಬೆಚ್ಚಿಬೀಳೋ ಸ್ಟೋರಿ!
ಮೀಟೂ ಅಭಿಯಾನವು ನಟಿಯರಷ್ಟೇ ಅಲ್ಲ, ನಟರ ಮೇಲೂ ಆದ ಲೈಂ*ಗಿಕ ದೌರ್ಜನ್ಯವನ್ನು ಬೆಳಕಿಗೆ ತಂದಿದೆ. ಹಿಂದಿ ಕಿರುತೆರೆ ನಟ ಹಾಗೂ ಬಿಗ್ ಬಾಸ್ ಖ್ಯಾತಿಯ ಅಂಕಿತ್ ಗುಪ್ತಾ, ಎದುರಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ನಟನಾಗಲು 'ರಾಜಿ' ಮಾಡಿಕೊಳ್ಳಲು ಕೇಳಿ, ಅದಕ್ಕೆ ಒಪ್ಪದಿದ್ದಾಗ ಆಗಿದ್ದೇನು?

ಮೀಟೂ ಅಭಿಯಾನ
ಮಂಚಕ್ಕೆ ಬಂದರೆ ನಾಯಕಿ ಮಾಡುವೆ, ಸಿನಿಮಾದಲ್ಲಿ ಛಾನ್ಸ್ ಕೊಡುವೆ... ಇವೆಲ್ಲವುಗಳ ಬಗ್ಗೆ ಇದಾಗಲೇ ಹಲವಾರು ನಟಿಯರು ತಮ್ಮ ಕರಾಳ ಅನುಭವ ಹಂಚಿಕೊಂಡಿದ್ದಾರೆ. ಕಿರುತೆರೆಯಲ್ಲಿಯೂ ಇಂಥ ಕಾಸ್ಟಿಂಗ್ ಕೌಚ್ (cast couching) ಬಗ್ಗೆ ಸಾಕಷ್ಟು ಮಂದಿ ಮಾತನಾಡಿದ್ದಾರೆ. ಅಷ್ಟಕ್ಕೂ ಸ್ಯಾಂಡಲ್ವುಡ್ ನಟಿ ಶ್ರುತಿ ಹರಿಹರನ್ ಅವರು 2018ರಲ್ಲಿ ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟ್ ಕೌಚಿಂಗ್ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು.
ಪುರುಷರನ್ನೂ ಬಿಟ್ಟಿಲ್ಲ
ಆದರೆ ಸಿನಿಮಾ ಇಂಡಸ್ಟ್ರಿ ಪುರುಷರನ್ನೂಬಿಟ್ಟಿಲ್ಲ! ಇದಾಗಲೇ ಕೆಲವು ನಟರು ಕೂಡ ತಮ್ಮ ಮೇಲಾಗಿರುವ ಲೈಂ*ಗಿಕ ದೌರ್ಜನ್ಯದ ಕುರಿತು ಮಾತನಾಡಿದ್ದಾರೆ. ಇದೀಗ ಖ್ಯಾತ ಕಿರುತೆರೆ ನಟ, ಹಿಂದಿ ಬಿಗ್ಬಾಸ್ನ ಮಾಜಿ ಸ್ಪರ್ಧಿ ಅಂಕಿತ್ ಗುಪ್ತಾ ಅವರು ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.
ಬಿಗ್ಬಾಸ್ 16ರ ಸ್ಪರ್ಧಿ
'ಉದರಿಯಾನ್' ಹಿಂದಿ ಧಾರಾವಾಹಿ ಮೂಲಕ, ಸೂಪರ್ ಹೀರೋ ಎನಿಸಿಕೊಂಡಿರುವ ನಟ ಅಂಕಿತ್ ಗುಪ್ತಾ ಈಗ ತಮಗಾಗಿರುವ ಕಹಿ ಅನುಭವಗಳನ್ನು ತೆರೆದಿಟ್ಟಿದ್ದಾರೆ. ಹಿಂದಿಯ 'ಬಿಗ್ ಬಾಸ್ 16' (Bigg Boss 16) ರ ಸ್ಪರ್ಧಿಯಾಗಿದ್ದ ಅಂಕಿತ್ ಅವರು ಜನರ ಸದ್ಯ 'ಜುನೂನಿಯತ್' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಂದರ್ಭದಲ್ಲಿ ತಮ್ಮ ಹಿಂದಿನ ಘಟನೆಗೆ ಸಂಬಂಧಿಸಿದ ಆಘಾತಕಾರಿ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
ನಂಬೇ ಇರಲಿಲ್ಲ!
ಇದು ತಮ್ಮ ಜೀವನದ ಭಯಾನಕ ಕ್ಷಣವಾಗಿದೆ ಎಂದಿರುವ ಅಂಕಿತ್ (Ankith Guptha) ಅವರು, ಯಾರೊಬ್ಬರ ಹೆಸರನ್ನೂ ಹೇಳದೆ ಕಹಿ ಘಟನೆ ವಿವರಿಸಿದ್ದಾರೆ. 'ನಾನು ನಟನಾ ವೃತ್ತಿಯನ್ನು ಆರಿಸಿಕೊಂಡಾಗ ಹಲವರು ನನಗೆ ವಿಚಿತ್ರವಾದ ಸಲಹೆಗಳನ್ನು ನೀಡಿದರು. ಇದನ್ನು ಕೇಳಿ ನನಗೆ ಹೇಳಿದವರ ಮೇಲೆಯೇ ಸಿಟ್ಟು ಬಂದಿತ್ತು. ಸಾಮಾನ್ಯವಾಗಿ ಇಂಥ ಘಟನೆಗಳು ನಟಿಯರ ಮೇಲೆ ಆಗುತ್ತದೆ ಎಂದು ಕೇಳಿದ್ದೆ. ಆದರೆ ನಟರೂ ಇಂಥದ್ದೊಂದು ಕೆಟ್ಟದ್ದನ್ನು ಅನುಭವಿಸಬೇಕು ಎಂದು ತಿಳಿದಿರಲಿಲ್ಲ ಎಂದಿದ್ದಾರೆ.
ರಾಜಿ ಮಾಡಿಕೊಳ್ಳಲೇಬೇಕು
ನಟನಾ ಕ್ಷೇತ್ರದಲ್ಲಿ ಬದುಕಲು ರಾಜಿ ಮಾಡಿಕೊಳ್ಳಲೇ ಬೇಕು ಮತ್ತು ಉದ್ಯೋಗವನ್ನು ಪಡೆಯಲು ಪ್ರತಿಯೊಬ್ಬರೂ ಆ ಒಂದು ಘಟನೆ ಮೂಲಕ ಹೋಗಬೇಕು ಎಂದು ಕೆಲವರು ಹೇಳಿದ್ದರು. ನಾನದನ್ನು ನಂಬಿರಲಿಲ್ಲ. ಇಂದು ಸಿನಿಮಾವನ್ನು ಆಳುತ್ತಿರುವ ಬಹುತೇಕ ಎಲ್ಲಾ ದೊಡ್ಡದೊಡ್ಡ ತಾರೆಯರು ಈ ಹಂತವನ್ನು ತಲುಪಲು ಅವರು ಕೆಲವು ರಾಜಿ ಮಾಡಿಕೊಂಡಿದ್ದಾರೆ ಎಂದು ಉದ್ಯಮದಲ್ಲಿರುವ ಜನರು ಹೇಳಿಕೊಂಡಿದ್ದನ್ನೂ ಕೇಳಿದ್ದೆ ಎಂದು ಅಂಕಿತ್ ಗುಪ್ತಾ ಹೇಳಿದರು.
ಅನುಭವಕ್ಕೆ ಬಂದಿರಲಿಲ್ಲ
ನಾನು ಆರಂಭದಲ್ಲಿ ಇದನ್ನು ಕೇಳಿದ್ದೆ ಅಷ್ಟೇ. ಆದರೆ ನನ್ನ ಅನುಭವಕ್ಕೆ ಅದು ಬಂದಿರಲಿಲ್ಲ. ನಾನು ಅಂಥ ವ್ಯಕ್ತಿ ಅಲ್ಲ, ನಾನು ಹಾಗೆಲ್ಲಾ ಮಾಡಲು ಸಾಧ್ಯವೇ ಇಲ್ಲ ಎಂಬ ಅಚಲ ಭರವಸೆ ನನ್ನ ಮೇಲೆ ನನಗೆ ಇತ್ತು. ಆದರೆ ನಟನಾಗಲು ಹೋದಾಗಲೇ ತಿಳಿದದ್ದು ನನ್ನ ಭರವಸೆ ಎಲ್ಲವೂ ಟುಸ್ ಎಂದು ಎಂಬುದಾಗಿ ಅಂಕಿತ್ ಹೇಳಿದ್ದಾರೆ. "ಒಬ್ಬ ದೊಡ್ಡ ವ್ಯಕ್ತಿ ನನ್ನ ಬಳಿ ನಟನಾಗಿ ಮಿಂಚಬೇಕು ಎಂದರೆ ತಮ್ಮ ಜೊತೆ ರಾಜಿ (compramise) ಮಾಡಿಕೊಳ್ಳಲು ಹೇಳಿದರು. ಅವರು ಹೇಳುತ್ತಿರುವ ರಾಜಿ ಎಂಥದ್ದು ಎಂದು ನನಗೆ ತಿಳಿದಿತ್ತು ಎಂದಿದ್ದಾರೆ ಅಂಕಿತ್.
ಅದನ್ನಾದರೂ ಸ್ಪರ್ಶಿಸಲು...
ನಾನು ಅದಕ್ಕೆ ಸುತರಾಂ ಒಪ್ಪಲಿಲ್ಲ. ಅವರು ಪದೇ ಪದೇ ನನ್ನನ್ನು ಕೇಳುತ್ತಿದ್ದರು. ಆದರೆ ಯಾವುದಕ್ಕೂ ನಾನು ಬಗ್ಗಲಿಲ್ಲ. ಕೊನೆಗೆ ಅವರು, ಸರಿ... ನಿನಗೆ ರಾಜಿ ಮಾಡಿಕೊಳ್ಳಲು ಇಷ್ಟವಿಲ್ಲದಿದ್ದರೆ ತೊಂದರೆ ಇಲ್ಲ, ಕನಿಷ್ಠ ಪಕ್ಷ ಅದನ್ನು ಸ್ಪರ್ಶಿಸಲು ಅವಕಾಶ ನೀಡು, ಮೇಲಿನಿಂದಾದರೂ ಸ್ಪರ್ಶಿಸಲು ಅವಕಾಶ ಕೊಡು ಎಂದು ಕೇಳಿದರು. ಅದನ್ನು ಕೇಳಿ ನಾನು ಆಘಾತಕ್ಕೊಳಗಾದೆ. ನನ್ನ ಜೊತೆ ಇದೇನಾಗುತ್ತಿದೆ ಎಂದು ತಲೆ ತಿರುಗಿದಂತಾಯಿತು ಎಂದು ಅಂಕಿತ್ ಗುಪ್ತಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

