ತೇಜಸ್ ಯುದ್ಧ ವಿಮಾನ ಪತನದಲ್ಲಿ ಪೈಲೈಟ್ ಸಾವು, ಕೆಲೆವೇ ಸೆಕೆಂಡ್‌ಗಳಲ್ಲಿ ನಡೆಯಿತು ದುರಂತ, ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. ವಿಶ್ವದ ಅತ್ಯುತ್ತಮ ಯುದ್ಧ ವಿಮಾನ ಪೈಕಿ ತೇಜಸ್ ಕೂಡ ಸ್ಥಾನ ಪಡೆದಿದೆ. ಆದರೂ ದುರಂತ ಹೇಗಾಯ್ತು

ದುಬೈ (ನ.21) ದುಬೈನಲ್ಲಿ ನಡೆಯುತ್ತಿರುವ ಏರ್ ಶೋನಲ್ಲಿ ಹಲವು ದೇಶಗಳು ಪಾಲ್ಗೊಂಡಿದೆ. ಭಾರತ ಕೂಡ ತನ್ನ ಸ್ವದೇಶಿ ನಿರ್ಮಿತ ಅತ್ಯಾಧುನಿಕ ತೇಜಸ್ ಯುದ್ಧ ವಿಮಾನದೊಂದಿಗೆ ಏರ್ ಶೋನಲ್ಲಿ ಮೆರೆದಾಡಿದೆ. ಆದರೆ ಇಂದು ತೇಜಸ್ ತನ್ನ ಪ್ರದರ್ಶನ ನಡೆಸುತ್ತಿರುವಾಗಲೇ ಪತನಗೊಂಡು ದುರಂತ ಸಂಭವಿಸಿದೆ. ಈ ದುರಂತದಲ್ಲಿ ಪೈಲೆಟ್ ಮೃತಪಟ್ಟಿರುವುದು ಖಚಿತಗೊಂಡಿದೆ. ಬಾನಂಗಳದಲ್ಲಿ ಚಿತ್ತಾರ ಬರೆಯುತ್ತಿದ್ದಂತೆ ತೇಜಸ್ ಫೈಟರ್ ಜೆಟ್ ಪತನಗೊಂಡಿದೆ.

ನೋಸ್ ಡೈವಿಂಗ್ ವೇಳೆ ನಿಯಂತ್ರಣ ತಪ್ಪಿದ ತೇಜಸ್

ದುಬೈ ಏರ್ ಶೋನಲ್ಲಿ ತೇಜಸ್ ಯುದ್ಧ ವಿಮಾನ ಅದ್ಭುತ ಪ್ರದರ್ಶನ ನೀಡಿತ್ತು. ಇದರ ನಡುವೆ ನೋಸ್ ಡೈವಿಂಗ್ ಮಾಡುತ್ತಿದ್ದ ವೇಳೆ ತೇಜಸ್ ಯುದ್ಧ ವಿಮಾನ ನಿಯಂತ್ರಣ ಕಳೆದುಕೊಂಡಿದೆ. ನೋಸ್ ಡೈವಿಂಗ್ ಕೊನೆ ಕ್ಷಣವರೆಗೂ ಪೈಲೆಟ್ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಎಮರ್ಜೆನ್ಸಿ ತಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿದೆ. ಅಷ್ಟರಲ್ಲೇ ತೇಜಸ್ ವಿಮಾನ ಹೊತ್ತಿ ಉರಿದಿದೆ.

ಸೆಕೆಂಡ್ ಅಂತರದಲ್ಲಿ ದುರಂತ

ನೋಸ್ ಡೈವಿಂಗ್ ಅತ್ಯಂತ ಅಪಾಯಕಾರಿ ಕಾರಣ, ಯುದ್ದ ವಿಮಾನ ಮುಂಭಾಗ ನೇರವಾಗಿ ಭೂಮಿಗೆ ಮುಖಮಾಗಿ ಹಾರಾಟ ನಡೆಸುತ್ತದೆ. ಕೆಳಮುಖವಾಗಿ ಚಲಿಸುವಾಗ ನಿಯಂತ್ರಣ ಅತ್ಯಂತ ಮುಖ್ಯ. ಈ ವೇಳೆ ವಿಮಾನದ ವೇಗ ದುಪ್ಪಟ್ಟಾಗಲಿದೆ. ಜೊತೆಗೆ ವಿಮಾನದ ಹಾರಾಟದ ಉತ್ತರ ಹಾಗೂ ಭೂಮಿಯ ಅಂತರ ಕಡಿಮೆ ಇರಲಿದೆ. ಇದೇ ರೀತಿಯ ಸಾಹಸ ಮಾಡುವಾಗ ತೇಜಸ್ ಯುದ್ದವ ವಿಮಾನ ಪತನಗೊಂಡಿದೆ. ಕೆಲವೇ ಸೆಕೆಂಡ್ ಅಂತರದಲ್ಲಿ ತೇಜಸ್ ಯುದ್ದ ವಿಮಾನ ಪತನಗೊಡಿದೆ.

ಪೈಲೆಟ್ ಸ್ವಯಂ ರಕ್ಷಣೆಗೂ ಮೊದಲೇ ಪತನ

ತೇಜಸ್ ಯುದ್ದ ವಿಮಾನ ಕೆಳಮುಖವಾಗಿ ಚಲಿಸುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡಿದೆ. ಆಗಲೇ ಈಜೆಕ್ಟ್ ಆಗುವ ಅವಕಾಶವಿತ್ತು. ಆದರೆ ಪೈಲೆಟ್ ಕೊನೆಯ ಕ್ಷಣದವರೆಗೂ ತೇಜಸ್ ಯುದ್ದ ವಿಮಾನ ನಿಯಂತ್ರಣ ತೆಗೆದುಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಆದರ ಸಾಧ್ಯವಾಗಿಲ್ಲ.

ಪೈಲೆಟ್ ಸಾವಿಗೆ ರಾಹುಲ್ ಗಾಂದಿ ಸೇರಿ ಹಲವರ ಸಂತಾಪ

ದುಬೈ ಏರ್ ಶೋನಲ್ಲಿ ನಡೆದ ತೇಜಸ್ ಯುದ್ದ ವಿಮಾನ ದುರಂತದಲ್ಲಿ ಪೈಲೆಟ್ ದುರಂತ ಅಂತ್ಯಕಂಡಿದ್ದಾರೆ. ದುರಂತಕ್ಕೆ ಹಲವರು ಆಘಾತ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತೀವ್ರ ಸಂತಾಪ ಸೂಚಿಸಿದ್ದಾರೆ.

ತೇಜಸ್ ದುರಂತ ತನಿಖೆಗೆ ಆದೇಶ

ತೇಜಸ್ ಯುುದ್ದ ವಿಮಾನದಲ್ಲಿ ನಡದ ದುರಂತ ಕುರಿತು ತನಿಖೆಗೆ ಆದೇಶಿಸಲಾಗಿದೆ. ಇದೇ ವೇಳೆ ತೇಜಸ್ ಯುದ್ಧ ವಿಮಾನದಲ್ಲಿ ಇಂಧನ ಲೀಕ್ ಆಗುತ್ತಿತ್ತು ಅನ್ನೋ ಆರೋಪವನ್ನು ಭಾರತೀಯ ಅಲ್ಲಗೆಳೆದಿದೆ.