ರ‍್ಯಾಪಿಡೋ ಚಾಲಕನ ತಿಂಗಳ ಆದಾಯ 1 ಲಕ್ಷ ರೂ, ಇದು ಹೇಗೆ ಸಾಧ್ಯ? ಇಲ್ಲಿದೆ ಸ್ಪೂರ್ತಿಯ ಘಟನೆ ಇದೀಗ ಭಾರಿ ಸದ್ದು ಮಾಡುತ್ತಿದೆ. ರ‍್ಯಾಪಿಡೋ ಚಾಲಕನ ಆದಾಯ, ಆತನ ಜೀವನ ನಿರ್ವಹಣೆ, ಖುಷಿ ಖುಷಿಯಾಗಿ ಬದುಕು ಸಾಗಿಸುವ ದಾರಿ ಇದೀಗ ಹಲವರಿಗೆ ಸ್ಪೂರ್ತಿಯಾಗಿದೆ.

ಬದುಕಿನ ಸವಾಲುಗಳನ್ನು ಮೆಟ್ಟಿ ನಿಲ್ಲಲು ನಾವೇ ದಾರಿ ಕಂಡುಕೊಳ್ಳಬೇಕು ಅನ್ನೋ ಮಾತು ನಿಜ. ಇಲ್ಲೊಬ್ಬ ರ‍್ಯಾಪಿಡೋ ಚಾಲಕನ ಬದುಕು ನೋಡಿದರೆ ಈ ಮಾತು ಅಕ್ಷರಶಃ ಸರಿ ಎನಿಸುತ್ತದೆ. ರ‍್ಯಾಪಿಡೋ ಚಾಲಕ ಹೆಚ್ಚವರಿ ಡ್ಯೂಟಿ ಮಾಡಿದರೂ ತಿಂಗಳಿಗೆ ಎಷ್ಟು ಸಂಪಾದಿಸಬಹುದು? ಹೆಚ್ಚುವರಿ ಕೆಲಸದಿಂದ ಸುಖ ಸಂತೋಷ, ಆರೋಗ್ಯ ಎಲ್ಲವೂ ಹಾಳಾಗುವ ಸಾಧ್ಯತೆಯೂ ಇದೆ. ಆದರೆ ಈ ರ‍್ಯಾಪಿಡೋ ಚಾಲಕ ಕೆಲ ಗಂಟೆ ಹೆಚ್ಚುವರಿಯಾಗಿ ದುಡಿಯುತ್ತಾನೆ. ಹಾಗಂತ ವಿಶ್ರಾಂತಿ ಇಲ್ಲದ ಕಲೆಸವಲ್ಲ. ಆದರೆ ತಿಂಗಳ ಆದಾಯ ನೋಡಿದರೆ ಸರಿಸುಮಾರು 1 ಲಕ್ಷ ರೂಪಾಯಿ. ಇದೀಗ ಈ ರ‍್ಯಾಪಿಡೋ ಚಾಲಕನ ಸ್ಪೂರ್ತಿಯ ಕತೆ ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗವಾಗಿದೆ.

ರ‍್ಯಾಪಿಡೋ ಚಾಲಕನ ಬ್ಯಾಲೆನ್ಸ್ ಲೈಫ್

ರ‍್ಯಾಪಿಡೋ ಚಾಲಕನ ರೋಚಕ ಕತೆಯನ್ನು ಲಿಂಕ್ಡ್ಇನ್ ಯೂಸರ್ ಕೋಮಲ್ ಪೊರ್ವಾಲ್ ಪೋಸ್ಟ್ ಮಾಡಿದ್ದಾರೆ. ಈಕೆ ರಾತ್ರಿ 9 ಗಂಟೆಗೆ ರ‍್ಯಾಪಿಡೋ ಬುಕ್ ಮಾಡಿದ್ದಾಳೆ. ಕೆಲ ಹೊತ್ತಲ್ಲಿ ರ‍್ಯಾಪಿಡೋ ಆಗಮಿಸಿದೆ. ಆಗಮಿಸಿದ ರ‍್ಯಾಪಿಡೋ ಚಾಲಕನ ನೋಡಿ ಅಚ್ಚರಿಗೊಂಡಿದ್ದಾಳೆ. ಕಾರಣ ರಾತ್ರಿ ವೇಳೆಗೆ ರ‍್ಯಾಪಿಡೋ ಅಥವಾ ಇತರ ಚಾಲಕರು ಬೆಳಗ್ಗೆಯಿಂದ ದುಡಿದು ಸುಸ್ತಾಗಿರುತ್ತಾರೆ. ಆದರೆ ಈತನ ಮುಖದಲ್ಲಿ ಆ ರೀತಿಯ ಯಾವ ಲಕ್ಷಣವೂ ಇರಲಿಲ್ಲ. ಆ್ಯಕ್ಟೀವ್ ಆಗಿದ್ದ. ಮಾತು ಕೂಡ ಅಷ್ಟೆ, ನಾನ್ ಸ್ಟಾಪ್. ಸರಿ ಎಂದುಕೊಂಡು ಬೈಕ್ ಹತ್ತಿ ಕುಳಿತ ಈಕೆ, ರ‍್ಯಾಪಿಡೋ ಚಾಲನೆ ಫುಲ್ ಟೈಮ್ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾಳೆ.

ಮೂರು ಕೆಲಸ, ಲೈಫ್ ಜಿಂಗಾಲಾಲ

ಪ್ರಶ್ನೆಗೆ ಉತ್ತರಿಸಲು ಆರಂಭಿಸಿದ ರ‍್ಯಾಪಿಡೋ ಚಾಲಕನ ಮಾತು ಕೇಳಿ ಈಕೆ ಮತ್ತಷ್ಟು ಅಚ್ಚರಿಗೊಂಡಿದ್ದಾಳೆ. ಕಾರಣ ನಾನು ಫುಲ್ ಟೈಮ್ ಈ ಕೆಲಸ ಮಾಡುತ್ತಿಲ್ಲ ಎಂದಿದ್ದಾನೆ. ಬೆಳಗ್ಗೆ ಸ್ವಿಗ್ಗಿ ಡೆಲಿವರಿ ಮಾಡುತ್ತೇನೆ. ಸಂಜೆಯಾದ ಬಳಿಕ ರ‍್ಯಾಪಿಡೋ ಚಾಲನೆ ಮಾಡುತ್ತೇನೆ. ಇನ್ನು ವಾರಾಂತ್ಯದಲ್ಲಿ ಪಾನಿ ಪೂರಿ ಸ್ಟಾಲ್ ಇಡುತ್ತೇನೆ. ಸ್ವಲ್ಪ ಕೆಲಸ ಜಾಸ್ತಿ ಇದೆ. ಆದರೆ ಮನೆ ಖುಷಿ ಖುಷಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿದೆ. ಸಂತೋಷವಿದೆ. ನೆಮ್ಮದೆ ಇದೆ ಎಂದಿದ್ದಾನೆ.

ಈತನ ಮಾತು ಕೇಳಿಸಿಕೊಂಡು ಈಕೆ ಅಚ್ಚರಿಗೊಂಡಿದ್ದಾಳೆ. ಮೂರು ಕೆಲಸ ಮಾಡುತ್ತಿದ್ದಾನೆ, ಜೊತೆಗೆ ಖುಷಿಯಾಗಿದ್ದಾನೆ. ಸರಿ ಮೂರರಿಂದ ಎಷ್ಟು ಆದಾಯ ಬರುತ್ತೆ ಎಂದು ಪ್ರಶ್ನಿಸಿದ್ದಾಳೆ. ಆತ ಸರಳವಾಗಿ ಸರಿಸುಮಾರು 1 ಲಕ್ಷ ರೂಪಾಯಿಯಂತೆ ಆದಾರ ಬರುತ್ತಿದೆ ಎಂದಿದ್ದಾನೆ. ಈತನ ಆದಾಯ ಕೇಳಿ ಆಕೆ ಮತ್ತಷ್ಟು ಅಚ್ಚರಿಗೊಂಡಿದ್ದಾಳೆ.

ದುಡಿಯಲು ಮನಸ್ಸು ಮಾಡಬೇಕು

ಈಗ ಜನರು ಹೆಚ್ಚು ಕೆಲಸ ಮಾಡಲು ಬಯಸುವುದಿಲ್ಲ ಎಂದು ಹೇಳುತ್ತೇನೆ. ಆದರೆ ನಾವು ಸರಿಯಾದ ಜಾಗ ನೋಡುತ್ತಿಲ್ಲ. ರ‍್ಯಾಪಿಡೋ ಚಾಲಕನ ನೋಡಿದಾಗ ನಮ್ಮ ಆಯ್ಕೆ, ದಾರಿಗಳ ಕುರಿತು ಅವಲೋಕಿಸಬೇಕು ಎಂದು ಈಕೆ ಪೋಸ್ಟ್‌ನಲ್ಲಿ ಹೇಳಿದ್ದಾಳೆ. ಮೂರು ಕೆಲಸವನ್ನು ಅತೀಯಾಗಿ ಮಾಡುತ್ತಿಲ್ಲ. ಎಲ್ಲದಕ್ಕೂ ಒಂದೊಂದು ಸಮಯ ನೀಡಿದ್ದಾನೆ. ಮೂರು ಕೆಲಸಗಳನ್ನು ಕೈಹಿಡಿಯುವಂತೆ ಮಾಡಿದ್ದಾನೆ. ಉತ್ತಮ ಆದಾಯಗಳಿಸುವ ರೀತಿ ಮಾಡಿದ್ದಾನೆ. ದುಡಿಯಲು ಸಾವಿರ ದಾರಿಗಳಿವೆ, ಆದರೆ ಮನಸ್ಸು ಮಾಡಬೇಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಸಿಇಒ ಮಟ್ಟಕ್ಕೆ ದುಡಿಯುತ್ತಿದ್ದಾನೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.