ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹ ಖಚಿತವಾಗಿದೆ. ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನ ಪಿಚ್‌ನಲ್ಲಿ ಪಲಾಶ್ ಮಂಡಿಯೂರಿ ಸ್ಮೃತಿಗೆ ಪ್ರೇಮ ನಿವೇದನೆ ಮಾಡಿದ್ದು, ಈ ರೊಮ್ಯಾಂಟಿಕ್ ವಿಡಿಯೋ ವೈರಲ್ ಆಗಿದೆ. 

ಮುಂಬೈ: ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದು, ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರೊಂದಿಗೆ ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಮದುವೆಯಾಗುವುದು ಕನ್ಫರ್ಮ್ ಆಗಿದೆ. ಇದೀಗ ಪಲಾಶ್ ಮುಚ್ಚಲ್, ಮಂಧನಾ ಅವರನ್ನು ಸ್ಟೇಡಿಯಂಗೆ ಕಣ್ಣುಕಟ್ಟಿಕೊಂಡು ಕರೆದೊಯ್ದು ಲವ್ ಪ್ರಪೋಸ್ ಮಾಡುವ ವಿಡಿಯೋವನ್ನು ಬಿಡುಗಡೆಯಾಗಿದ್ದು, ಈ ರೊಮ್ಯಾಂಟಿಕ್ ಪ್ರೇಮ ನಿವೇದನೆ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಭಾರತ ಮಹಿಳಾ ತಂಡ ಏಕದಿನ ವಿಶ್ವಕಪ್ ಗೆದ್ದ ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಪಲಾಶ್ ಮುಚ್ಚಲ್ ಅಧಿಕೃತವಾಗಿ ಸ್ಮೃತಿಗೆ ಪ್ರಪೋಸ್ ಮಾಡಿದ್ದಾರೆ. ಡಿ.ವೈ ಪಾಟೀಲ್ ಸ್ಟೇಡಿಯಂನ ಪಿಚ್‌ಗೆ ಸ್ಮೃತಿಯ ಕಣ್ಣಿಗೆ ಬಟ್ಟೆ ಕಟ್ಟಿ ಕೈ ಹಿಡಿದು ಕರೆತಂದ ನಂತರ, ಮೈದಾನದ ಮಧ್ಯದಲ್ಲಿ ಮಂಡಿಯೂರಿ ಪಲಾಶ್ ಪ್ರಪೋಸ್ ಮಾಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಅವಳು Yes ಅಂದಳು:

ಸ್ಮೃತಿ ಮಂಧನಾಗೆ ಸಪ್ರೈಸ್ ರೀತಿಯಲ್ಲಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕ್ರಿಕೆಟ್ ಪಿಚ್ ಮಧ್ಯದಲ್ಲಿ ಮಂಡಿಯೂರಿ ಲವ್ ಪ್ರಪೋಸ್ ಮಾಡಿದ್ದಾರೆ. ಜತೆಗೆ ಎಂಗೇಜ್‌ಮೆಂಟ್ ರಿಂಗ್ ತೊಡಿಸಿದ್ದಾರೆ. ಈ ವಿಡಿಯೋವನ್ನು ಪಲಾಶ್ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು. ಅವಳು ಪ್ರೇಮ ನಿವೇದನೆಗೆ ಸಮ್ಮತಿಸಿದಳು ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಜೋಡಿಯ ಮದುವೆ ಇದೇ ನವೆಂಬರ್ 23ರಂದು ನಡೆಯಲಿದೆ.

View post on Instagram

ಪಲಾಶ್ ಮುಚ್ಚಲ್ ಜೊತೆಗಿನ ನಿಶ್ಚಿತಾರ್ಥವನ್ನು ಸ್ಮೃತಿ ನಿನ್ನೆ ಸಾಮಾಜಿಕ ಮಾಧ್ಯಮದ ಮೂಲಕ ಅಧಿಕೃತವಾಗಿ ಬಹಿರಂಗಪಡಿಸಿದ್ದರು. ಭಾರತೀಯ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗ್ಸ್, ರಾಧಾ ಯಾದವ್, ಶ್ರೇಯಾಂಕ ಪಾಟೀಲ್ ಮತ್ತು ಅರುಂಧತಿ ರೆಡ್ಡಿ ಅವರೊಂದಿಗೆ ಚಿತ್ರೀಕರಿಸಿದ ವಿಡಿಯೋ ಮೂಲಕ ಸ್ಮೃತಿ ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಭಾನುವಾರ ಪಲಾಶ್ ಮುಚ್ಚಲ್ ಜೊತೆ ಸ್ಮೃತಿ ಅವರ ವಿವಾಹ ನಡೆಯಲಿದೆ.

View post on Instagram

ಸ್ಮೃತಿ-ಪಲಾಶ್ ಮದುವೆಗೆ ಶುಭ ಹಾರೈಸಿದ ಮೋದಿ

ಮದುವೆಯಾಗಲಿರುವ ಸ್ಮೃತಿ ಮಂಧನಾ ಮತ್ತು ಪಲಾಶ್ ಮುಚ್ಚಲ್‌ಗೆ ಪ್ರಧಾನಿ ನರೇಂದ್ರ ಮೋದಿ ಪತ್ರದ ಮೂಲಕ ಶುಭ ಹಾರೈಸಿದ್ದಾರೆ. ಸ್ಮೃತಿ ಮತ್ತು ಪಲಾಶ್‌ಗೆ ಸಂತೋಷದ ಜೀವನವನ್ನು ಹಾರೈಸಿ ಪ್ರಧಾನಿ ಕಚೇರಿಯಿಂದ ಪತ್ರ ಕಳುಹಿಸಲಾಗಿದೆ. ಈ ಹಿಂದೆ, ಭಾರತ ಮಹಿಳಾ ವಿಶ್ವಕಪ್ ಗೆದ್ದ ನಂತರ, ಪಲಾಶ್ ಮುಚ್ಚಲ್ ತಮ್ಮ ಎಡಗೈ ಮಣಿಕಟ್ಟಿನ ಮೇಲೆ ಸ್ಮೃತಿಯ ಜರ್ಸಿ ಸಂಖ್ಯೆಯನ್ನು ನೆನಪಿಸುವ 'SM 18' ಎಂದು ಬರೆದ ಟ್ಯಾಟೂ ಹಾಕಿಸಿಕೊಂಡ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಇಬ್ಬರೂ 2019 ರಲ್ಲಿ ಪ್ರೀತಿಸಲು ಪ್ರಾರಂಭಿಸಿದರು. 2024 ರವರೆಗೆ ಇಬ್ಬರೂ ಗೌಪ್ಯವಾಗಿಟ್ಟಿದ್ದ ಪ್ರೇಮಕಥೆ ಕಳೆದ ವರ್ಷವಷ್ಟೇ ಬಹಿರಂಗವಾಯಿತು.

ಇತ್ತೀಚೆಗಷ್ಟೇ ಭಾರತದಲ್ಲೇ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸ್ಮೃತಿ ಮಂಧನಾ 54.25 ಸರಾಸರಿಯಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕ ಸೇರಿದಂತೆ 434 ರನ್ ಗಳಿಸುವ ಮೂಲಕ ಭಾರತ ಪರ ಮೊದಲ ಹಾಗೂ ಒಟ್ಟಾರೆ ಎರಡನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದರು. ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಟ್ ನಂತರ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ್ತಿ ಎನ್ನುವ ಹಿರಿಮೆಗೆ ಸ್ಮೃತಿ ಪಾತ್ರರಾಗಿದ್ದರು. ನವಿ ಮುಂಬೈನಲ್ಲಿ ನ್ಯೂಜಿಲೆಂಡ್ ವಿರುದ್ಧ ಗಳಿಸಿದ 109 ರನ್‌ಗಳು ವಿಶ್ವಕಪ್‌ನಲ್ಲಿ ಸ್ಮೃತಿಯ ಅತ್ಯುತ್ತಮ ಪ್ರದರ್ಶನವಾಗಿತ್ತು. ಶತಕಕ್ಕೂ ಮುನ್ನ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಕ್ರಮವಾಗಿ 80 ಮತ್ತು 88 ರನ್ ಗಳಿಸಿದ್ದರು. ಭಾರತ ಚೊಚ್ಚಲ ಬಾರಿಗೆ ಐಸಿಸಿ ವಿಶ್ವಕಪ್ ಚಾಂಪಿಯನ್ ಆಗುವಲ್ಲಿ ಸ್ಮೃತಿ ಮಂಧನಾ ಪ್ರಮುಖ ಪಾತ್ರ ವಹಿಸಿದ್ದರು.