Published : Sep 17, 2026, 07:14 AM ISTUpdated : Sep 17, 2026, 10:34 PM IST

India Latest News Live: ಇಂಡಿಗೋ ವಿಮಾನ ಸೇವೆ ಇನ್ನಷ್ಟು ದುಬಾರಿ - ಹೆಚ್ಚುವರಿ ಲಗೇಜ್, ಶಿಶು ಪ್ರಯಾಣ, ಆದ್ಯತಾ ಸೇವೆ ದರ ಭಾರೀ ಏರಿಕೆ

ಸಾರಾಂಶ

ನವದೆಹಲಿ: ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತರನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಬಾರದು ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ವಿಚಾರಣಾ ಆಯೋಗ ಕೇಂದ್ರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ.

ಹಿಂದು, ಸಿಖ್, ಬೌದ್ಧ ಧರ್ಮಕ್ಕೆ ಸೇರಿದವರಷ್ಟೇ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಬಹುದು ಎಂದು 1950ರ ರಾಷ್ಟ್ರಪತಿ ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗೆ ಸೇರಿದ 'ಮತಾಂತರಿತ ದಲಿತರು' ತಮಗೂ ಈ ಪಟ್ಟಿಯಲ್ಲಿ ಸ್ಥಾನ ನೀಡಬೇಕು ಎಂಬ ಬೇಡಿಕೆ ಸಲ್ಲಿಸಿದ್ದರು.

ಇದರ ಪರಿಶೀಲನೆಗೆ ಈ ಹಿಂದೆ ಕಾಕಾ ಕಲೇಲ್ಕರ್, ಸಚಾರ್ ಹಾಗೂ ರಂಗನಾಥ್ ಮಿಶ್ರಾ ಸಮಿತಿಗಳನ್ನು ರಚಿಸಲಾಗಿತ್ತು. 2022ರಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಬಾಲಕೃಷ್ಣನ್ ನೇತೃತ್ವದಲ್ಲಿ ಸಮಿತಿ ರಚಿಸಿತು. ಇದು ಸಲ್ಲಿಸಲಿರುವ ವರದಿಯಲ್ಲಿ, 1950ರ ರಾಷ್ಟ್ರಪತಿ ಆದೇಶವನ್ನು ಯಥಾಸ್ಥಿತಿ ಮುಂದುವರಿಸಬೇಕು ಮತ್ತು ಮತಾಂತರಿತ ದಲಿತರಿಗೆ ಪರಿಶಿಷ್ಟ ಸ್ಥಾನಮಾನ ನೀಡಬಾರದು ಎಂದು ಶಿಫಾರಸು ಮಾಡುವ ಸಾಧ್ಯತೆಯಿದೆ.

10:34 PM (IST) Sep 17

ಇಂಡಿಗೋ ವಿಮಾನ ಸೇವೆ ಇನ್ನಷ್ಟು ದುಬಾರಿ - ಹೆಚ್ಚುವರಿ ಲಗೇಜ್, ಶಿಶು ಪ್ರಯಾಣ, ಆದ್ಯತಾ ಸೇವೆ ದರ ಭಾರೀ ಏರಿಕೆ

ಪ್ರಮುಖ ಖಾಸಗಿ ವಿಮಾನಯಾನ ಸಂಸ್ಥೆ ಇಂಡಿಗೋ ತನ್ನ ಐಚ್ಛಿಕ ಮತ್ತು ವಿಶೇಷ ಸೇವೆಗಳ ದರಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಹೆಚ್ಚುವರಿ ಲಗೇಜ್, ಶಿಶುಗಳ ಪ್ರಯಾಣ ದರ, ಒಂಟಿಯಾಗಿ ಪ್ರಯಾಣಿಸುವ ಮಕ್ಕಳು ಹಾಗೂ ಫಾಸ್ಟ್ ಫಾರ್ವರ್ಡ್ ಸೇವೆಗಳು ಇನ್ಮುಂದೆ ಮತ್ತಷ್ಟು ದುಬಾರಿಯಾಗಲಿವೆ.

Read Full Story

10:19 PM (IST) Sep 17

'11 ರೂಪಾಯಿಗೆ ಸಿಗೋ ಐವಿ ಸೆಟ್‌ 325 ರೂಪಾಯಿಗೆ ಆಸ್ಪತ್ರೆಯಲ್ಲಿ ಮಾರಾಟ' ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ತುಕಾರಾಮ್‌ ಮುಂಧೆ ಆಗ್ರಹ

ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಉಪಕರಣಗಳ ಮೇಲೆ ಶೇ. 2,800ರಷ್ಟು ಹೆಚ್ಚಿನ ಎಂಆರ್‌ಪಿ ವಿಧಿಸಿ ರೋಗಿಗಳನ್ನು ಸುಲಿಗೆ ಮಾಡುತ್ತಿವೆ ಎಂದು ಮಹಾರಾಷ್ಟ್ರ ಎಫ್‌ಡಿಎ ಆಯುಕ್ತ ತುಕಾರಾಮ್ ಮುಂಧೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

09:24 PM (IST) Sep 17

'ಮಹಿಳೆಯರಿಗೆ ಸಿಲಿಂಡರ್ ಹೊರಲು ಆಗಲ್ಲ ಅಂದ್ಕೊಂಡ್ರಾ? - ಕೆಲಸ ಕೊಡಲ್ಲ ಎಂದಿದ್ದ Indian Oil ಸಂಸ್ಥೆಗೆ ಸುಪ್ರೀಂ ತಪರಾಕಿ

ಮಹಿಳೆಯರೊಬ್ಬರಿಗೆ ಕೆಲಸ ನೀಡಲು ನಿರಾಕರಿಸಿದ್ದ ಇಂಡಿಯನ್ ಆಯಿಲ್ ಸಂಸ್ಥೆ ಸುಪ್ರೀಂ ಕೋರ್ಟ್‌ ಭಾರೀ ದಂಡ ವಿಧಿಸಿದೆ.. ಅಲ್ಲದೇ ಉದ್ಯೋಗ ವಿಚಾರದಲ್ಲಿ ಮಹಿಳೆಯರನ್ನ ಕಡೆಗಣಿಸಿದ್ದಕ್ಕೆ ತಪರಾಕಿಗೆ ಬಾರಿಸಿದೆ.

Read Full Story

09:10 PM (IST) Sep 17

₹10 ಸಾವಿರದೊಳಗೆ ಬೆಸ್ಟ್‌ ಸ್ಮಾರ್ಟ್‌ಫೋನ್‌ ಬೇಕಾ? 120Hz, 5G, 50MP ಕ್ಯಾಮೆರಾ ಇರುವ Top 10 ಫೋನ್‌ಗಳಿವು

10 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ಹುಡುಕುತ್ತಿದ್ದೀರಾ? ನಿಮಗಾಗಿ ಮಾರುಕಟ್ಟೆಯಲ್ಲಿ ಭರ್ಜರಿ ಆಪ್ಷನ್‌ಗಳಿವೆ. ಬಜೆಟ್ ಬೆಲೆಯಲ್ಲಿ 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇ, 50MP ಕ್ಯಾಮೆರಾ ಹಾಗೂ ಫಾಸ್ಟ್ 5G ಕನೆಕ್ಟಿವಿಟಿ ನೀಡುವ ಬೆಸ್ಟ್ ಸ್ಮಾರ್ಟ್‌ಫೋನ್‌ಗಳ ಲಿಸ್ಟ್ ಇಲ್ಲಿದೆ.

Read Full Story

09:10 PM (IST) Sep 17

25 ವರ್ಷಗಳ ಕನಸು ನನಸಾಗುತ್ತಾ.. ಮೆಗಾಸ್ಟಾರ್ ಚಿರಂಜೀವಿಗೆ ಜೋಡಿಯಾಗ್ತಾರಾ ನಟಿ ಸ್ನೇಹಾ?

ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಕಾಕಾ' ಸಿನಿಮಾದಲ್ಲಿ ಸೀನಿಯರ್ ನಟಿ ಸ್ನೇಹಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಸಂಕ್ರಾಂತಿ ರಿಲೀಸ್ ಬಗ್ಗೆಯೂ ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ.

Read Full Story

08:43 PM (IST) Sep 17

Asian Games Cricket - ಪಾಕಿಸ್ತಾನದ ಬೆವರಿಳಿಸಿದ ಥಾಯ್ಲೆಂಡ್, ಒಂದು ಬಾಲ್ ಎಸೆಯದೆ ಚೀನಾ ಹೊರಬಿದ್ದಿದ್ದೇಕೆ?

ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್‌ನಲ್ಲಿ ಮಳೆಯಿಂದಾಗಿ ಚೀನಾ ಒಂದು ಎಸೆತವನ್ನೂ ಕಾಣದೆ ಟೂರ್ನಿಯಿಂದ ಹೊರಬಿದ್ದಿದ್ದು, ಪಾಕಿಸ್ತಾನ ರೋಚಕ ಜಯ ಸಾಧಿಸಿದೆ. ಮುಂಬರುವ ಭಾರತ-ಜಪಾನ್ ಪಂದ್ಯಕ್ಕಾಗಿ ಶ್ರೀಲಂಕಾದ ಮಣ್ಣು ಬಳಸಿ ವಿಶೇಷ ಪಿಚ್ ನಿರ್ಮಿಸಲಾಗುತ್ತಿದೆ.
Read Full Story

08:28 PM (IST) Sep 17

ಜಸ್ಟ್‌ 30 ಎಸೆತದಲ್ಲಿ ಸೆಂಚುರಿ - ಟಿ20 ಕ್ರಿಕೆಟ್‌ನಲ್ಲಿ ಅಭಿಷೇಕ್ ಶರ್ಮ ರೌದ್ರಾವತಾರ, ರೋಹಿತ್ ಶರ್ಮಾ ದಾಖಲೆ ಧೂಳೀಪಟ

ಭಾರತದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಅವರು 2017ರಲ್ಲಿ ರೋಹಿತ್ ಶರ್ಮಾ ನಿರ್ಮಿಸಿದ್ದ ಅತ್ಯಂತ ವೇಗದ ಟಿ20 ಶತಕದ ದಾಖಲೆಯನ್ನು ಮುರಿದಿದ್ದಾರೆ.

Read Full Story

08:17 PM (IST) Sep 17

ಗಣೇಶ ವಿಸರ್ಜನೆ ವೇಳೆ ಪುಟ್ಟ ಮಗುವಿನಂತೆ ಕಣ್ಣೀರಿಟ್ಟ ಯಜುವೇಂದ್ರ ಚಾಹಲ್‌ ಮಾಜಿ ಪತ್ನಿ ಧನಶ್ರೀ ವರ್ಮಾ

ಟೀಮ್ ಇಂಡಿಯಾ ಕ್ರಿಕೆಟರ್ ಯಜುವೇಂದ್ರ ಚಹಾಲ್ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ಗಣಪತಿ ವಿಸರ್ಜನೆ ವೇಳೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಇತ್ತೀಚೆಗಷ್ಟೇ ಇವರಿಬ್ಬರು ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದರು.

Read Full Story

07:50 PM (IST) Sep 17

ನಟಿ ಶ್ರೀದೇವಿ ಚೆನ್ನೈ ಆಸ್ತಿ ವಿವಾದಕ್ಕೆ ಹೊಸ ತಿರುವು - ಸುಪ್ರೀಂ ಕೋರ್ಟ್‌ನಿಂದ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ

ದಿವಂಗತ ನಟಿ ಶ್ರೀದೇವಿ ಕುಟುಂಬಕ್ಕೆ ಸೇರಿದ ಚೆನ್ನೈನ 4.7 ಎಕರೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.

Read Full Story

07:30 PM (IST) Sep 17

ಪನ್ನಾ ಗಣಿಯಲ್ಲಿ ಸಿಕ್ತು ಅಪರೂಪದ ವಜ್ರ - 27.29 ಕ್ಯಾರೆಟ್ ಡೈಮಂಡ್ ಬೆಲೆ ಎಷ್ಟಿರಬಹುದು?

ಮಧ್ಯಪ್ರದೇಶದ ಪನ್ನಾ ವಜ್ರದ ಗಣಿಯಲ್ಲಿ 27.29 ಕ್ಯಾರೆಟ್‌ನ ಅಪರೂಪದ ಜೆಮ್ ಕ್ವಾಲಿಟಿ ವಜ್ರ ಪತ್ತೆಯಾಗಿದೆ. ಎನ್‌ಎಂಡಿಸಿ ಸಿಬ್ಬಂದಿ ಹೊರತೆಗೆದ ಈ ವಜ್ರದ ಹರಾಜು ಬೆಲೆ ₹2 ಕೋಟಿಯಿಂದ ₹2.5 ಕೋಟಿವರೆಗೆ ತಲುಪುವ ನಿರೀಕ್ಷೆಯಿದೆ.

Read Full Story

06:44 PM (IST) Sep 17

ಅರೆರೆ.. ಇಂಟಿಮೇಟ್ ಸೀನ್‌ಗಳನ್ನು ಹೀಗೆ ಶೂಟ್ ಮಾಡ್ತಾರಾ? ಹಾಲಿವುಡ್ ನಟಿ ಹೇಳಿದ್ರು ಆ ಸೀಕ್ರೆಟ್!

ಹಾಲಿವುಡ್ ನಟಿ ಸಾರಾ ಶಾಹಿ ಇಂಟಿಮೇಟ್ ಸೀನ್‌ಗಳ ಶೂಟಿಂಗ್ ವೇಳೆ ಬಳಸುವ ಯೋಗಾ ಬಾಲ್ ಟ್ರಿಕ್ ಬಗ್ಗೆ ಹೇಳಿದ್ದಾರೆ. ಇಂಥಾ ಸೀನ್‌ಗಳಲ್ಲಿ ಕಲಾವಿದರ ಕಂಫರ್ಟ್ ಮತ್ತು ಭದ್ರತೆಗೆ ನೀಡುವ ಆದ್ಯತೆ ಬಗ್ಗೆ ಇಲ್ಲಿದೆ ಮಾಹಿತಿ.

Read Full Story

06:17 PM (IST) Sep 17

ಭಾರತದ ಕಾಡಿನಲ್ಲಿ 7 ದಶಕಗಳ ಬಳಿಕ ನಡೆದ ವಿಸ್ಮಯಕ್ಕೆ ಯಶಸ್ವಿ 4 ವರ್ಷ, 52ಕ್ಕೆ ಏರಿಕೆಯಾದ ಚೀತಾಗಳ ಸಂಖ್ಯೆ!

ಭಾರತದಲ್ಲಿ 'ಪ್ರಾಜೆಕ್ಟ್ ಚೀತಾ' ಯೋಜನೆ ಯಶಸ್ವಿಯಾಗಿ 4 ವರ್ಷ ಪೂರೈಸಿದ್ದು, ದೇಶದಲ್ಲಿ ಚೀತಾಗಳ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. 1952ರಲ್ಲಿ ಅಳಿದುಹೋಗಿದ್ದ ಈ ಪ್ರಾಣಿಗಳನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿತ್ತು. ಇದೀಗ ಭಾರತದ ಮಣ್ಣಿನಲ್ಲಿ ಜನಿಸಿದ 32 ಮರಿಗಳೊಂದಿಗೆ ಈ ಯೋಜನೆಯು ವನ್ಯಜೀವಿ ಸಂರಕ್ಷಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.
Read Full Story

05:43 PM (IST) Sep 17

ಲವ್ ಮಾಡಲಿಲ್ಲ, ಬ್ರೇಕಪ್ ಕೂಡ ಆಗಲಿಲ್ಲ.. ಆದರೂ ಮರೆಯೋಕೆ ಆಗ್ತಿಲ್ವಾ? ಯಾಕೆ ಹೀಗೆ?

ಕೆಲವು ಸಂಬಂಧಗಳೇ ಹಾಗೆ.. ಅವರು ಪ್ರೀತಿಸುತ್ತಿರಲಿಲ್ಲ.. ಆದರೆ ಸ್ನೇಹಿತರಗಿಂತ ಹೆಚ್ಚಾಗಿದ್ದರು. ಇವತ್ತು ಜೊತೆಗಿಲ್ಲ. ಮನಸ್ಸಿಗೆ ಆಗುತ್ತಿರುವ ಗಾಯ ಮಾತ್ರ ಅಷ್ಟಿಷ್ಟಲ್ಲ, ಮರೆಯಲು ಸಾಧ್ಯವೇ ಆಗುತ್ತಿಲ್ಲ.. ಹೌದು, ಈ ಲವ್ ಬ್ರೇಕ್‌ ಅಪ್ ಆದವರಿಗಿಂತ ಅರ್ಧಂಬರ್ಧ ಸಂಬಂಧದಲ್ಲಿದ್ದವರು ಕೊರಗುವುದೇ ಹೆಚ್ಚು. ಹಾಗಿದ್ದರೆ ಯಾಕಿರಬಹುದು?

Read Full Story

05:20 PM (IST) Sep 17

ಟಾಟಾ ಸನ್ಸ್‌ಗೆ ಚಂದ್ರಶೇಖರನ್‌ ಮರುನೇಮಕ ಕಾನೂನುಬಾಹಿರ, ಎಜಿಎಂನಲ್ಲಿ ವಜಾ ಮಾಡ್ತೇನೆ ಎಂದು ಅಬ್ಬರಿಸಿದ ನೋಯೆಲ್‌ ಟಾಟಾ

ಟಾಟಾ ಸನ್ಸ್ ಆಡಳಿತ ಮಂಡಳಿಯು ಎನ್. ಚಂದ್ರಶೇಖರನ್ ಅವರನ್ನು ಅಧ್ಯಕ್ಷರಾಗಿ ಮುಂದುವರಿಸಲು ನಿರ್ಧರಿಸಿದೆ. ಆದರೆ, ಈ ನಿರ್ಧಾರವನ್ನು ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಕಾನೂನುಬಾಹಿರ ಎಂದು ಕರೆದಿದ್ದು, ಮುಂಬರುವ ವಾರ್ಷಿಕ ಮಹಾಸಭೆಯಲ್ಲಿ ಅವರನ್ನು ವಜಾಗೊಳಿಸಲು ಸಿದ್ಧತೆ ನಡೆಸಿದ್ದಾರೆ.

Read Full Story

05:13 PM (IST) Sep 17

ಸೌರವ್ಯೂಹದಲ್ಲೇ ಅಪರೂಪದ ಘಟನೆ - ಚಂದ್ರನಿಗೆ ಆರು ಅಂತಸ್ತಿನ ಬೃಹತ್ ಕ್ಷುದ್ರಗ್ರಹ ಡಿಕ್ಕಿಯಾಗಿ ದೈತ್ಯ ಕುಳಿ ಪತ್ತೆ!

2024ರಲ್ಲಿ ಚಂದ್ರನಿಗೆ ಬೃಹತ್ ಬಾಹ್ಯಾಕಾಶ ಬಂಡೆಯೊಂದು ಡಿಕ್ಕಿ ಹೊಡೆದ ಪರಿಣಾಮ ಸೃಷ್ಟಿಯಾದ ದೈತ್ಯ ಕುಳಿಯನ್ನು ನಾಸಾದ 'ಲೂನಾರ್ ರಿಕಾನಿಸನ್ಸ್ ಆರ್ಬಿಟರ್' ಪತ್ತೆಹಚ್ಚಿದೆ. 'ಮೆಕ್‌ಗೆಚಿನ್' ಎಂದು ಹೆಸರಿಸಲಾದ ಈ ಕುಳಿಯು ಎರಡು ಫುಟ್‌ಬಾಲ್ ಮೈದಾನಗಳಷ್ಟು ಅಗಲವಿದ್ದು, ಇದರ ಸುತ್ತಲಿನ ಉಷ್ಣಾಂಶ ತೀವ್ರವಾಗಿ ಕುಸಿದಿದೆ. ಈ ಸಂಶೋಧನೆಯು ಭವಿಷ್ಯದ ಚಂದ್ರಯಾನಗಳ ಸುರಕ್ಷತೆಗೆ ಪ್ರಮುಖ ಮಾಹಿತಿಯಾಗಿದೆ.
Read Full Story

05:07 PM (IST) Sep 17

ಕಯಾದು ಲೋಹರ್ ಕೈಯಲ್ಲಿ ಸಿಗರೇಟ್, ನಾನಿ ಜೊತೆ ವಿಲನ್ ಲುಕ್ - 'ದಿ ಪ್ಯಾರಡೈಸ್'ನಲ್ಲಿ ಹೊಸ ಟ್ವಿಸ್ಟ್?

‘ದಿ ಪ್ಯಾರಡೈಸ್’ ಹೊಸ ಪೋಸ್ಟರ್‌ನಲ್ಲಿ ನಾನಿ ಜೊತೆ ಕಯಾದು ಲೋಹರ್ ಕಾಣಿಸಿಕೊಂಡಿದ್ದಾರೆ. ಸಿಗರೇಟ್ ಸೇದುತ್ತಿರುವ ಅವರ ಲುಕ್ ವಿಲನ್ ಪಾತ್ರದ ಸುಳಿವು ನೀಡಿದೆಯಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ.

Read Full Story

04:56 PM (IST) Sep 17

ಅಜಿತ್ ಅಗರ್ಕರ್ ಸ್ಥಾನಕ್ಕೆ ಆರ್‌ಸಿಬಿ ಮಾಜಿ ಕ್ರಿಕೆಟಿಗ ಸೇರಿ ಇಬ್ಬರ ಹೆಸರು ಶಾರ್ಟ್‌ಲಿಸ್ಟ್‌..! ಯಾರಾಗ್ತಾರೆ ಮುಂದಿನ ಬಿಸಿಸಿಐ ಚೀಫ್ ಸೆಲೆಕ್ಟರ್?

ರೋಹಿತ್ ಶರ್ಮಾ ಕುರಿತ ನಿರ್ಧಾರದಿಂದಾಗಿ ಬಿಸಿಸಿಐ ಮತ್ತು ಅಜಿತ್ ಅಗರ್ಕರ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಅಕ್ಟೋಬರ್‌ನಲ್ಲಿ ಅಗರ್ಕರ್ ಒಪ್ಪಂದ ಮುಕ್ತಾಯವಾಗಲಿದ್ದು, ಅವರನ್ನು ಕೈಬಿಡುವ ಸಾಧ್ಯತೆ ಇದೆ. ನೂತನ ಆಯ್ಕೆ ಸಮಿತಿ ಮುಖ್ಯಸ್ಥರ ರೇಸ್‌ನಲ್ಲಿ ಪಾರ್ಥಿವ್ ಪಟೇಲ್ ಮತ್ತು ಪ್ರಗ್ಯಾನ್ ಓಜಾ ಹೆಸರು ಮುಂಚೂಣಿಯಲ್ಲಿವೆ.
Read Full Story

04:44 PM (IST) Sep 17

ನಿಮ್ಮನ್ನು ನೋಡಿ ಅಸೂಯೆಪಡುತ್ತಿಲ್ಲ, ನಾನಾದ್ರೆ ನಡುಗುತ್ತಿದ್ದೆ - ರಶ್ಮಿಕಾಗೆ ಕಮಲ್ ಹಾಸನ್ ಏನ್ ಹೇಳಿದ್ರು?

ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್ ಮುಹೂರ್ತ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಕಮಲ್ ಹಾಸನ್ ವಿಶೇಷ ಸಲಹೆ ನೀಡಿದ್ದಾರೆ. ಈ ಪಾತ್ರವನ್ನು ತಾನು ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ ಕಮಲ್ ಹಾಸನ್, ರಶ್ಮಿಕಾಗೆ ಧೈರ್ಯವಾಗಿ ಪಾತ್ರ ನಿರ್ವಹಿಸುವಂತೆ ಹೇಳಿದ್ದಾರೆ.

Read Full Story

04:24 PM (IST) Sep 17

ಚಾಣಕ್ಯ ನೀತಿ - ನಿಮ್ಮ ಯಶಸ್ಸು ನೋಡಿ ಹೊಟ್ಟೆಕಿಚ್ಚು ಪಡೋರನ್ನು ಗುರುತಿಸೋದು ಹೇಗೆ? ಈ 3 ಲಕ್ಷಣ ನೋಡಿ

ನಮ್ಮ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುವವರು ಮೇಲ್ನೋಟಕ್ಕೆ ಒಳ್ಳೆಯವರಂತೆ ನಟಿಸುತ್ತಾರೆ. ಇಂತಹವರು ಕಷ್ಟದಲ್ಲಿ ಸಹಾಯ ಮಾಡದೆ, ಬೆನ್ನ ಹಿಂದೆ ಕೆಟ್ಟದಾಗಿ ಮಾತನಾಡುತ್ತಾ ನಮ್ಮ ಸಾಧನೆಯನ್ನು ಕಡೆಗಣಿಸುತ್ತಾರೆ. ಚಾಣಕ್ಯ ನೀತಿಯ ಪ್ರಕಾರ ಇಂಥವರಿಂದ ದೂರವಿದ್ದು ನಮ್ಮ ಗುರಿಯತ್ತ ಗಮನಹರಿಸುವುದು ಜಾಣತನ.
Read Full Story

04:18 PM (IST) Sep 17

ಬಜೆಟ್ ಸ್ನೇಹಿ ಸೆಕೆಂಡ್ ಹ್ಯಾಂಡ್ ಕಾರುಗಳು, 5 ಲಕ್ಷದೊಳಗೆ ಐದು ಬೆಸ್ಟ್ ಕಾರುಗಳು

ಕಾರು ಖರೀದಿಸುವ ಕನಸು ನನಸು ಮಾಡಿಕೊಳ್ಳಬೇಕೆ? ಐದು ಲಕ್ಷದ ಒಳಗೆ ಬಜೆಟ್ ಸ್ನೇಹಿಯುಳ್ಳ ಒಳ್ಳೊಳ್ಳೆ ಕಾರುಗಳ ಲಿಸ್ಟ್ ಇಲ್ಲಿದೆ.

Read Full Story

04:01 PM (IST) Sep 17

ಅಲ್ಲು ಅರ್ಜುನ್ 'ರಾಕಾ'ದ '37' ಪೋಸ್ಟರ್ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್ - ಅಸಲಿ ಸೀಕ್ರೆಟ್ ಇದೇನಾ!

ಅಲ್ಲು ಅರ್ಜುನ್ ಮತ್ತು ಅಟ್ಲೀ ಕಾಂಬಿನೇಷನ್‌ನ ‘ರಾಕಾ’ ಸಿನಿಮಾದ ‘37’ ಮಿಸ್ಟರಿ ಪೋಸ್ಟರ್ ಕುತೂಹಲ ಮೂಡಿಸಿದೆ. ಅಟ್ಲೀ ಹುಟ್ಟುಹಬ್ಬದಂದು ಈ ರಹಸ್ಯ ರಿವೀಲ್ ಆಗುತ್ತಾ ಎಂಬ ಚರ್ಚೆ ಜೋರಾಗಿದೆ.

Read Full Story

03:53 PM (IST) Sep 17

3 ಗಂಟೆಗಳ ಸುದೀರ್ಘ ಸಭೆ, ನೋಯೆಲ್ ಟಾಟಾ ವಿರೋಧದ ನಡುವೆಯೇ ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಮರುನೇಮಕ!

ಟಾಟಾ ಸನ್ಸ್ ಮಂಡಳಿಯು ಎನ್. ಚಂದ್ರಶೇಖರನ್ ಅವರನ್ನು ಮುಂದಿನ 5 ವರ್ಷಗಳ ಅವಧಿಗೆ ಕಾರ್ಯಾಚರಣಕಾರಿ ಅಧ್ಯಕ್ಷರನ್ನಾಗಿ ಮರುನೇಮಕ ಮಾಡಿದೆ. ಐಪಿಒ ಪಟ್ಟಿ ಮಾಡುವ ವಿಚಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೂ ಹೂಡಿಕೆದಾರರ ನಂಬಿಕೆ ಉಳಿಸಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಈ ನಿರ್ಧಾರದ ವೇಳೆ ಮತ ಚಲಾಯಿಸದೆ ಹೊರಗುಳಿದಿದ್ದಾರೆ.
Read Full Story

03:04 PM (IST) Sep 17

ಮುಂದುವರೆದ ವಜಾ ಪರ್ವ - ಶೇಕಡಾ 50ರಷ್ಟು ಟೆಕ್ಕಿಗಳ ಮನೆಗೆ ಕಳಿಸ್ತಿದೆ ಅಡಿದಾಸ್​! ಎಲ್ಲಿದು

ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಗುರುಗ್ರಾಮದ ಅಡಿದಾಸ್ ಟೆಕ್ ಹಬ್‌ನಲ್ಲಿ ಉದ್ಯೋಗ ಕಡಿತಗೊಳಿಸಲಾಗುತ್ತಿದೆ. ಸಾಫ್ಟ್‌ವೇರ್ ಎಂಜಿನಿಯರ್‌ಗಳು ಸೇರಿದಂತೆ ಶೇ. 20ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಕಂಪೆನಿ ದೃಢಪಡಿಸಿದೆ. ಬದಲಾಗುತ್ತಿರುವ ವ್ಯಾಪಾರ ಅಗತ್ಯಗಳಿಗೆ ಅನುಗುಣವಾಗಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ.
Read Full Story

02:44 PM (IST) Sep 17

ಬೀದಿನಾಯಿಗಳ ಕಾಟಕ್ಕೆ ಬೇಸತ್ತು ಅಧಿಕಾರಿಯ ಟೇಬಲ್‌ ಮೇಲೆ ಗೋಣಿಯಲ್ಲಿ ತಂದು ಸುರಿದ ಪ್ರತಿಭಟನಾಕಾರರು!

ನಾಸಿಕ್‌ನ ನಿಫಡ್ ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ವಿಫಲವಾದ ಅಧಿಕಾರಿಗಳ ವಿರುದ್ಧ ಯುವಸೇನಾ ಕಾರ್ಯಕರ್ತರು ವಿಶಿಷ್ಟ ಪ್ರತಿಭಟನೆ ನಡೆಸಿದ್ದಾರೆ. ಮುಖ್ಯ ಅಧಿಕಾರಿ ಧೀರಜ್ ಭಮ್ರೆ ಅವರ ಕಚೇರಿಗೆ ನುಗ್ಗಿ, ಅವರ ಟೇಬಲ್ ಮೇಲೆಯೇ ಬೀದಿ ನಾಯಿಗಳನ್ನು ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಟು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
Read Full Story

02:32 PM (IST) Sep 17

ಬಿಡುಗಡೆಯಾಗಿ 6 ವರ್ಷದ ನಂತ್ರ ಸದ್ದು ಮಾಡ್ತಿದೆ ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾ

ಒಟಿಟಿಯಲ್ಲಿ ಮಲಯಾಳಂ ಸಿನಿಮಾಗಳಿಗೆ ಸಿಗ್ತಿರೋ ರೆಸ್ಪಾನ್ಸ್ ದಿನೇ ದಿನೇ ಹೆಚ್ಚಾಗ್ತಿದೆ. ಡಿಫರೆಂಟ್ ಕಥೆ, ಗಟ್ಟಿಯಾದ ಚಿತ್ರಕಥೆ ಇರೋ ಸಿನಿಮಾಗಳಿಗೆ ಬೇರೆ ಭಾಷೆಯ ಪ್ರೇಕ್ಷಕರು ಕೂಡ ಫಿದಾ ಆಗ್ತಿದ್ದಾರೆ. ಇದೇ ಕಾರಣಕ್ಕೆ ಸಾಕಷ್ಟು ಮಲಯಾಳಂ ಸಿನಿಮಾಗಳು ಡಬ್ ಆಗಿ ಒಟಿಟಿಗೆ ಬರ್ತಿವೆ.

Read Full Story

01:36 PM (IST) Sep 17

NCRTC ನೇಮಕಾತಿ 2026 - 90 ಹುದ್ದೆಗಳಿಗೆ ಅರ್ಜಿ ಆಹ್ವಾನ, 1.5 ಲಕ್ಷವರೆಗೆ ವೇತನ! ಆಸಕ್ತರು ಅರ್ಜಿ ಸಲ್ಲಿಸಿ

ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮವು (NCRTC) 2026ನೇ ಸಾಲಿನ 90 ಸೂಪರ್‌ವೈಸರ್ ಮತ್ತು ಜೂನಿಯರ್ ಮೆಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಡಿಪ್ಲೊಮಾ, ಪದವಿ ಅಥವಾ ಐಟಿಐ ಮುಗಿಸಿದ ಅಭ್ಯರ್ಥಿಗಳು ಅಕ್ಟೋಬರ್ 9, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ.
Read Full Story

01:36 PM (IST) Sep 17

Chicken Cooking Tips - ಚಿಕನ್ ಸಾರು ರುಚಿ ಬರ್ತಿಲ್ವಾ? ಬಾಯಿ ಚಪ್ಪರಿಸುವಂತೆ ಸಾರು ಮಾಡುವ ಮುನ್ನ ಈ ತಪ್ಪುಗಳನ್ನು ಮಾಡೋದು ನಿಲ್ಲಿಸಿ

ಚಿಕನ್ ಸಾರು ಮಾಡಿದಾಗಲೆಲ್ಲಾ ಒಂದೇ ರುಚಿ ಬರ್ತಿಲ್ವಾ? ಎಷ್ಟೇ ಮಸಾಲೆ ಹಾಕಿದರೂ, ಚೆನ್ನಾಗಿ ಮಾಡಿದರೂ ಟೇಸ್ಟ್ ಸಿಗ್ತಿಲ್ವಾ? ಹಾಗಾದರೆ, ನೀವು ಮಾಡುವ ಈ ಸಣ್ಣ ತಪ್ಪುಗಳೇ ಇದಕ್ಕೆ ಕಾರಣ.

Read Full Story

01:23 PM (IST) Sep 17

ಯಾವ ದೇಶದ ಪ್ರಧಾನಿಗೆ ಹೆಚ್ಚು ಸಂಬಳ? ಭಾರತಕ್ಕೆ ಎಷ್ಟನೇ ಸ್ಥಾನ? ಇಲ್ಲಿ ಸಿಗೋದೆಷ್ಟು? ಫುಲ್​ ಡಿಟೇಲ್ಸ್​ ಇಲ್ಲಿದೆ

ಪ್ರಪಂಚದ ವಿವಿಧ ದೇಶಗಳ ಪ್ರಧಾನಿಗಳು ಮತ್ತು ಅಧ್ಯಕ್ಷರ ವಾರ್ಷಿಕ ವೇತನದಲ್ಲಿ ಭಾರಿ ವ್ಯತ್ಯಾಸಗಳಿವೆ. ಸಿಂಗಪುರದ ಪ್ರಧಾನಿ ವಾರ್ಷಿಕ 27 ಕೋಟಿ ರೂ. ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಭಾರತದ ಪ್ರಧಾನಿ ಕೇವಲ 20 ಲಕ್ಷ ರೂ. ವೇತನದೊಂದಿಗೆ 82ನೇ ಸ್ಥಾನದಲ್ಲಿದ್ದಾರೆ.
Read Full Story

12:58 PM (IST) Sep 17

Samsung Galaxy A08 - ಸ್ಯಾಮ್‌ಸಂಗ್‌ನಿಂದ ಹೊಸ ಬಜೆಟ್ ಫ್ರೆಂಡ್ಲಿ ಫೋನ್ ರಿಲೀಸ್; ಫೀಚರ್ಸ್ ಹೇಗಿದೆ ಗೊತ್ತಾ?

ಸ್ಯಾಮ್‌ಸಂಗ್ ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಗ್ಯಾಲಕ್ಸಿ A08 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ 6000mAh ಬ್ಯಾಟರಿ, 50MP ಕ್ಯಾಮೆರಾ ಮತ್ತು 120Hz ಡಿಸ್‌ಪ್ಲೇಯಂತಹ ಅತ್ಯುತ್ತಮ ಫೀಚರ್ಸ್ ಹೊಂದಿದೆ. ಸದ್ಯ ಉಕ್ರೇನ್‌ನಲ್ಲಿ ಲಭ್ಯವಿರುವ ಇದರ ಭಾರತದ ಬಿಡುಗಡೆ ದಿನಾಂಕ ಇನ್ನೂ ಬಹಿರಂಗವಾಗಿಲ್ಲ.
Read Full Story

12:43 PM (IST) Sep 17

₹9000 ಕೋಟಿ ಪರಮಾಣು ರಿಯಾಕ್ಟರ್ ಯೋಜನೆಗೆ ಅದಾನಿ, ರಿಲಯನ್ಸ್, ಎನ್‌ಟಿಪಿಸಿ ಜತೆ ಭಾಭಾ ರಿಸರ್ಚ್ ಸೆಂಟರ್ ಬೃಹತ್ ಡೀಲ್!

ಭಾರತವು ಶುದ್ಧ ಇಂಧನ ಯೋಜನೆಗಾಗಿ 'ಭಾರತ್ ಸಣ್ಣ ಮಾಡ್ಯುಲರ್ ರಿಯಾಕ್ಟರ್' (BSMR-300) ತಂತ್ರಜ್ಞಾನವನ್ನು ವಾಣಿಜ್ಯೀಕರಣಗೊಳಿಸಲು ಮುಂದಾಗಿದೆ. ಇದಕ್ಕಾಗಿ ರಿಲಯನ್ಸ್, ಅದಾನಿ ಮತ್ತು ಎಲ್&ಟಿ ಯಂತಹ ಖಾಸಗಿ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. 2047ರ ವೇಳೆಗೆ 100 ಗಿಗಾವ್ಯಾಟ್ ಪರಮಾಣು ವಿದ್ಯುತ್ ಉತ್ಪಾದಿಸುವ ಗುರಿಯನ್ನು ಸರ್ಕಾರ ಹೊಂದಿದೆ.
Read Full Story

12:41 PM (IST) Sep 17

ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ರಾಹುಲ್​, ಖರ್ಗೆ ಏನೆಂದು ವಿಷ್​ ಮಾಡಿದ್ರು? ಜೋಸೆಫ್​ ವಿಜಯ್​ ಹೇಳಿದ್ದೇನು

ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ಪ್ರಯುಕ್ತ ದೇಶ-ವಿದೇಶಗಳ ಗಣ್ಯರು ಶುಭಾಶಯ ಕೋರಿದ್ದಾರೆ. ಪಕ್ಷಭೇದ ಮರೆತು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಹಾರೈಸಿದ್ದಾರೆ. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳು ಮೋದಿಯವರ 25 ವರ್ಷಗಳ ಸಾರ್ವಜನಿಕ ಸೇವೆ ಹಾಗೂ ಆಡಳಿತವನ್ನು ಶ್ಲಾಘಿಸಿದ್ದಾರೆ.
Read Full Story

12:39 PM (IST) Sep 17

Lucky Plants - ಹಣ, ನೆಮ್ಮದಿ, ಆರೋಗ್ಯ ನೀಡುವ 7 ಲಕ್ಕಿ ಗಿಡಗಳು! ಇವು ಮನೆಯಲ್ಲಿದ್ದರೆ ಫುಲ್‌ ಪಾಸಿಟಿವ್‌ ಎನರ್ಜಿ

Lucky Plants: ನೀವು ಮನೆಯಲ್ಲಿ ಗಿಡ ಬೆಳೆಸುವ ಆಸಕ್ತಿ ಹೊಂದಿದ್ದರೆ, ಕೇವಲ ಅಂದಕ್ಕಾಗಿ ಮಾತ್ರವಲ್ಲದೆ ಅದೃಷ್ಟ ತರುವ ಗಿಡಗಳನ್ನು ಆಯ್ಕೆ ಮಾಡಬಹುದು. ಈ ಗಿಡಗಳು ಮನೆಯಲ್ಲಿ ಪಾಸಿಟಿವ್ ಎನರ್ಜಿ ತುಂಬುತ್ತವೆ. ಜೊತೆಗೆ ಇವು ಕುಟುಂಬದ ಸಂತೋಷ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತವೆ.

Read Full Story

12:25 PM (IST) Sep 17

Indian Railways Free Travel - ನವೆಂಬರ್ 1ರಿಂದ ರೈಲ್ವೆ ಹೊಸ ರೂಲ್; ಇವರಿಗೆಲ್ಲಾ ಎಸಿ ಪ್ರಯಾಣ ಫ್ರೀ! ಮಹತ್ವದ ಘೋಷಣೆ

ಭಾರತೀಯ ಯೋಧರಿಗೆ ರಕ್ಷಣಾ ಸಚಿವಾಲಯ ಭರ್ಜರಿ ಗಿಫ್ಟ್ ಕೊಟ್ಟಿದೆ. ನವೆಂಬರ್ 1ರಿಂದ ಶೌರ್ಯ ಪ್ರಶಸ್ತಿ ವಿಜೇತರಿಗೆ ರೈಲುಗಳಲ್ಲಿ 1ನೇ ಮತ್ತು 2ನೇ ಎಸಿ ಕ್ಲಾಸ್‌ನಲ್ಲಿ ಉಚಿತ ಪ್ರಯಾಣದ ಸೌಲಭ್ಯ ಸಿಗಲಿದೆ. ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

Read Full Story

11:44 AM (IST) Sep 17

ಅತ್ಯುತ್ತಮ ಗೇಮಿಂಗ್ ಫೀಲ್, ಅತ್ಯಾಧುನಿಕ ಡಿಸ್ಪ್ಲೇ ತಂತ್ರಜ್ಞಾನ ಬರುತ್ತಿದೆ iQOO 16 ಸ್ಮಾರ್ಟ್‌ಫೋನ್, ಫೀಚರ್ಸ್ ನೋಡಿ

iQOO 16 ಸ್ಮಾರ್ಟ್‌ಫೋನ್ 2K ರೆಸಲ್ಯೂಶನ್ ಮತ್ತು 165Hz ರಿಫ್ರೆಶ್ ರೇಟ್ ಹೊಂದಿರುವ ವಿಶ್ವದ ಮೊದಲ ಫೋನ್ ಆಗಿ ಬಿಡುಗಡೆಯಾಗಲಿದೆ. ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಜಿನ್ 6 ಪ್ರೊ ಪ್ರೊಸೆಸರ್, 50MP ಕ್ಯಾಮೆರಾ ಮತ್ತು 8,500mAh ಬ್ಯಾಟರಿಯನ್ನು ಒಳಗೊಂಡಿದೆ. ಭಾರತದಲ್ಲಿ ಇದರ ಬೆಲೆ ಅಂದಾಜು ₹85,000 ದಿಂದ ₹90,000 ಇರಬಹುದು ಎಂದು ನಿರೀಕ್ಷಿಸಲಾಗಿದೆ.
Read Full Story

11:16 AM (IST) Sep 17

ವೈಭವ್ ಸೂರ್ಯವಂಶಿ ಇನ್, ಈ ಆಟಗಾರ ಔಟ್; ಆಫ್ಘಾನಿಸ್ತಾನ ಎದುರಿನ 3 ಪಂದ್ಯಕ್ಕೆ 3 ಬದಲಾವಣೆ ಫಿಕ್ಸ್; ಸಂಭಾವ್ಯ ತಂಡ ಪ್ರಕಟ

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ 3ನೇ ಹಾಗೂ ಕೊನೆ ಟಿ20 ಪಂದ್ಯ ಗುರುವಾರ ನಡೆಯಲಿದೆ. ಮೊದಲೆರಡು ಪಂದ್ಯದಲ್ಲಿ ಗೆದ್ದಿದ್ದ ಭಾರತ, ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ 3 ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

Read Full Story

10:55 AM (IST) Sep 17

ದೀಪಾವಳಿಗೆ ಮೊದಲೇ ಮುಕೇಶ್ ಅಂಬಾನಿ ಭರ್ಜರಿ ಗಿಫ್ಟ್ - ಜಿಯೋ ಗ್ರಾಹಕರು ₹4,000 ಮೌಲ್ಯದ ಉಚಿತ ಗಿಫ್ಟ್ ಪಡೆಯೋದು ಹೇಗೆ?

ರಿಲಯನ್ಸ್ ಜಿಯೋ(Reliance Jio) ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ. ಕೇವಲ ₹399 ರೀಚಾರ್ಜ್ ಮಾಡಿದರೆ ಸುಮಾರು ₹4,000 ಮೌಲ್ಯದ Canva Pro ಚಂದಾದಾರಿಕೆ(Canva Pro subscription)ಯನ್ನು 12 ತಿಂಗಳ ಕಾಲ ಉಚಿತವಾಗಿ ಪಡೆಯಬಹುದು. ಈ ಪ್ರಯೋಜನ ಪಡೆಯಲು ಯಾರು ಅರ್ಹರು? ವಿವರವಾಗಿ ತಿಳಿಯಿರಿ.

Read Full Story

10:14 AM (IST) Sep 17

ಭಾರತ ಏಕದಿನ ತಂಡದಿಂದ ಔಟ್, ಆದ್ರೆ ನಾಯಕನಾಗಿ ಎಂಟ್ರಿಕೊಟ್ಟ ರಿಷಭ್ ಪಂತ್..! ಸರ್ಫರಾಜ್ ಖಾನ್‌ಗೂ ಜಾಕ್‌ಪಾಟ್

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಕೈಬಿಡಲಾಗಿದ್ದ ರಿಷಭ್ ಪಂತ್ ಅವರನ್ನು ಇರಾನಿ ಕಪ್‌ಗಾಗಿ ರೆಸ್ಟ್ ಆಫ್ ಇಂಡಿಯಾ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಸರ್ಫರಾಜ್ ಖಾನ್ ಉಪನಾಯಕರಾಗಿದ್ದು, ಅಕ್ಟೋಬರ್ 1 ರಿಂದ 5 ರವರೆಗೆ ಶ್ರೀನಗರದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಪಂದ್ಯ ನಡೆಯಲಿದೆ. ರಣಜಿಯಲ್ಲಿ ಮಿಂಚಿದ ಯುವ ಆಟಗಾರರಿಗೂ ತಂಡದಲ್ಲಿ ಅವಕಾಶ ನೀಡಲಾಗಿದೆ.
Read Full Story

08:53 AM (IST) Sep 17

IPL Auction ಕುರಿತಂತೆ ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟ ಬಿಸಿಸಿಐ! ಐಪಿಎಲ್ ಹರಾಜು ಸ್ಥಳ ಬದಲು..!

ಕಳೆದ ಮೂರು ವರ್ಷಗಳಿಂದ ವಿದೇಶದಲ್ಲಿ ನಡೆಯುತ್ತಿದ್ದ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ಈ ಬಾರಿ ಭಾರತದಲ್ಲೇ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಇದರ ಜೊತೆಗೆ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಅಲ್ಲದೆ, 5ನೇ ಆವೃತ್ತಿಯ ಡಬ್ಲ್ಯುಪಿಎಲ್ ಹರಾಜು ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ನಡೆಯಲಿದೆ.
Read Full Story

07:44 AM (IST) Sep 17

UPI Payment - ಯಾರೇ ವಿರೋಧಿಸಿದ್ರೂ ಯುಪಿಐ ಮೇಲಿನ ಶುಲ್ಕ ವಾಪಸ್ ಇಲ್ಲ - ಹೊರಬಿತ್ತು ಅಚ್ಚರಿಯ ಸತ್ಯ! ಯಾವಾಗ ಜಾರಿ?

UPI transaction charges update ಯುಪಿಐ ಮೇಲಿನ ಪ್ರಸ್ತಾವಿತ ಶುಲ್ಕವನ್ನು ಹಿಂಪಡೆಯುವ ಯಾವುದೇ ಉದ್ದೇಶವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇದು ವಿದೇಶಿ ಒತ್ತಡದ ನಿರ್ಧಾರವಲ್ಲ ಮತ್ತು ಆರ್ಥಿಕ ಸುಸ್ಥಿರತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

Read Full Story

07:22 AM (IST) Sep 17

ಭಾರತದ ಫಲವತ್ತತೆ ದರ ಕುಸಿತ, ಜನಸಂಖ್ಯೆ ನಿಯಂತ್ರಣ ಕ್ರಮ ಸಾಕು - ಪಿಎಂ ಸಲಹಾ ಮಂಡಳಿ!

ಭಾರತದ ಒಟ್ಟು ಫಲವತ್ತತೆ ದರ 1.9ಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ, ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಹಿಂಪಡೆಯುವಂತೆ ಪಿಎಂ ಆರ್ಥಿಕ ಸಲಹಾ ಮಂಡಳಿ ಶಿಫಾರಸು ಮಾಡಿದೆ. ಎರಡು ಮಕ್ಕಳ ನೀತಿ, ನಗದು ವರ್ಗಾವಣೆ ಮತ್ತು ಜನಸಂಖ್ಯೆ ನಿಯಂತ್ರಣ ಉತ್ತೇಜಿಸುವ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ವರದಿಯಲ್ಲಿ ತಿಳಿಸಲಾಗಿದೆ.
Read Full Story

More Trending News