- Home
- News
- India News
- Indian Railways Free Travel: ನವೆಂಬರ್ 1ರಿಂದ ರೈಲ್ವೆ ಹೊಸ ರೂಲ್; ಇವರಿಗೆಲ್ಲಾ ಎಸಿ ಪ್ರಯಾಣ ಫ್ರೀ! ಮಹತ್ವದ ಘೋಷಣೆ
Indian Railways Free Travel: ನವೆಂಬರ್ 1ರಿಂದ ರೈಲ್ವೆ ಹೊಸ ರೂಲ್; ಇವರಿಗೆಲ್ಲಾ ಎಸಿ ಪ್ರಯಾಣ ಫ್ರೀ! ಮಹತ್ವದ ಘೋಷಣೆ
ಭಾರತೀಯ ಯೋಧರಿಗೆ ರಕ್ಷಣಾ ಸಚಿವಾಲಯ ಭರ್ಜರಿ ಗಿಫ್ಟ್ ಕೊಟ್ಟಿದೆ. ನವೆಂಬರ್ 1ರಿಂದ ಶೌರ್ಯ ಪ್ರಶಸ್ತಿ ವಿಜೇತರಿಗೆ ರೈಲುಗಳಲ್ಲಿ 1ನೇ ಮತ್ತು 2ನೇ ಎಸಿ ಕ್ಲಾಸ್‌ನಲ್ಲಿ ಉಚಿತ ಪ್ರಯಾಣದ ಸೌಲಭ್ಯ ಸಿಗಲಿದೆ. ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಯೋಧರಿಗೆ ಗೌರವ ನೀಡಲು ಕೇಂದ್ರ ಸರ್ಕಾರದಿಂದ ಮಹತ್ವದ ಯೋಜನೆ
ಗಡಿ ಕಾಯುವ ಯೋಧರು ಹಾಗೂ ಅವರ ಕುಟುಂಬವನ್ನು ಗೌರವಿಸಲು ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸೇನಾ ಪದಕ, ನೌಕಾ ಸೇನಾ ಪದಕ ಹಾಗೂ ವಾಯು ಸೇನಾ ಪದಕ ವಿಜೇತರಿಗೆ ಭಾರತೀಯ ರೈಲ್ವೆಯಲ್ಲಿ ಲೈಫ್‌ಟೈಮ್ ಫ್ರೀ ಟ್ರಾವೆಲ್ ಸೌಲಭ್ಯ ಸಿಗಲಿದೆ. ನವೆಂಬರ್ 1ರಿಂದ ಈ ಪ್ರಕ್ರಿಯೆ ಸಂಪೂರ್ಣ ಡಿಜಿಟಲ್ ಆಗಿ ಬದಲಾಗಲಿದೆ.
ಅರ್ಹ ಯೋಧರಿಗೆ, ಕುಟುಂಬಸ್ಥರಿಗೆ ಉಚಿತ ಫ್ರೀ ಪಾಸ್
ಅರ್ಹರು ಭಾರತೀಯ ರೈಲ್ವೆಯ ಫಸ್ಟ್ ಕ್ಲಾಸ್ ಎಸಿ, ಸೆಕೆಂಡ್ ಎಸಿ ಮತ್ತು ಎಸಿ ಚೇರ್ ಕಾರ್‌ಗಳಲ್ಲಿ ಉಚಿತವಾಗಿ ಓಡಾಡಬಹುದು. ಪ್ರಶಸ್ತಿ ವಿಜೇತರು ಮಾತ್ರವಲ್ಲದೆ ಅವರ ಪತ್ನಿ ಅಥವಾ ಪತಿಗೂ ಈ ಸೌಲಭ್ಯ ಅನ್ವಯಿಸುತ್ತದೆ. ಯೋಧರು ಹುತಾತ್ಮರಾಗಿದ್ದರೆ, ಅವರ ಸಂಗಾತಿ ಮರುಮದುವೆ ಆಗುವವರೆಗೂ ಈ ಫ್ರೀ ಪಾಸ್ ಬಳಸಬಹುದು. ಮದುವೆಗೂ ಮುನ್ನವೇ ಹುತಾತ್ಮರಾದ ಯೋಧರ ಪೋಷಕರಿಗೂ ಈ ಸೌಲಭ್ಯ ಸಿಗಲಿದೆ.
ರೈಲ್ವೆಯ ಕನ್ಸೆಷನ್ ಕಾರ್ಡ್ ಪೋರ್ಟಲ್‌ನಲ್ಲಿ ಉಚಿತವಾಗಿ ರಿಜಿಸ್ಟರ್ ಮಾಡಿಕೊಳ್ಳಿ
ಈ ಸೌಲಭ್ಯ ಪಡೆಯಲು ಯೋಧರು ಯಾವುದೇ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಿಲ್ಲ. ಅರ್ಹರು ಭಾರತೀಯ ರೈಲ್ವೆಯ ಕನ್ಸೆಷನ್ ಕಾರ್ಡ್ ಪೋರ್ಟಲ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಉಚಿತವಾಗಿ ರಿಜಿಸ್ಟರ್ ಮಾಡಿಕೊಳ್ಳಬೇಕು. ದಾಖಲೆಗಳ ಪರಿಶೀಲನೆ ಮುಗಿದ ತಕ್ಷಣ ಆನ್‌ಲೈನ್ ಎಲೆಕ್ಟ್ರಾನಿಕ್ ಟ್ರಾವೆಲ್ ಪಾಸ್ ಸಿಗುತ್ತದೆ. ಇದರಿಂದ ಸಮಯ ಉಳಿಯುವುದರ ಜೊತೆಗೆ ಪೇಪರ್ ವರ್ಕ್ ಕೂಡ ಇರುವುದಿಲ್ಲ.
ನವೆಂಬರ್ 1ರಿಂದ ಜಾರಿ
ಡಿಜಿಟಲ್ ಟ್ರಾವೆಲ್ ಪಾಸ್ ಕೈಸೇರಿದ ಮೇಲೆ ಟಿಕೆಟ್ ಬುಕ್ ಮಾಡುವುದು ತುಂಬಾನೇ ಈಸಿ. ನವೆಂಬರ್ 1ರಿಂದ ಭಾರತೀಯ ರೈಲ್ವೆಯ ಐಆರ್‌ಸಿಸಿಪಿ (IRCCP) ವೆಬ್ ಪೋರ್ಟಲ್‌ನಲ್ಲಿ ಎಲೆಕ್ಟ್ರಾನಿಕ್ ಪಾಸ್ ಬಳಸಿ ಟಿಕೆಟ್ ಬುಕ್ ಮಾಡಬಹುದು. ಈ ಪೇಪರ್‌ಲೆಸ್ ಸಿಸ್ಟಮ್‌ನಿಂದಾಗಿ ಯೋಧರು ಮನೆಯಲ್ಲೇ ಕುಳಿತು ಕ್ಷಣಾರ್ಧದಲ್ಲಿ ಉಚಿತ ರೈಲು ಟಿಕೆಟ್ ಪಡೆಯಬಹುದು.
ಸೇನೆ ಸೇರಲು ಪ್ರೇರಣೆ
ಪ್ರಾಣದ ಹಂಗು ತೊರೆದು ಗಡಿ ಕಾಯುವ ಯೋಧರ ತ್ಯಾಗವನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಸರ್ಕಾರದ ಈ ಐತಿಹಾಸಿಕ ನಿರ್ಧಾರವು ಹಾಲಿ ಹಾಗೂ ನಿವೃತ್ತ ಯೋಧರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲಿದೆ. ಜೊತೆಗೆ ಇಂದಿನ ಯುವಜನತೆಯಲ್ಲಿ ದೇಶಭಕ್ತಿ ಮೂಡಿಸಿ, ಸೇನೆ ಸೇರಲು ಇದೊಂದು ದೊಡ್ಡ ಪ್ರೇರಣೆಯಾಗಲಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

